logo
ಕನ್ನಡ ಸುದ್ದಿ  /  ಮನರಂಜನೆ  /  ಆಗೋದು ಆಗೇಬಿಡ್ಲಿ ಯಾರೂ ತಡೆಯೋದು ಬೇಡ, ಕುಸುಮಾ ಬೇಡವೆಂದ್ರೂ ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಆಗೋದು ಆಗೇಬಿಡ್ಲಿ ಯಾರೂ ತಡೆಯೋದು ಬೇಡ, ಕುಸುಮಾ ಬೇಡವೆಂದ್ರೂ ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Rakshitha Sowmya HT Kannada

Nov 08, 2024 10:05 AM IST

google News

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 7ರ ಎಪಿಸೋಡ್‌ನಲ್ಲಿ ಭಾಗ್ಯಾ ಹೊರಗೆ ಹೋಗುವುದನ್ನು ತಡೆಯುತ್ತಿರುವ ಕುಸುಮಾ, ಪತ್ನಿಯನ್ನು ತಡೆದು ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್.‌

  • ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 7ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ತಾಂಡವ್‌ , ಶ್ರೇಷ್ಠಾ ವಿಚಾರ ಗೊತ್ತಾಗಬಾರದು ಎಂಬ ಕಾರಣಕ್ಕೆ ಕುಸುಮಾ ಅವಳನ್ನು ಟ್ರಿಪ್‌ ಹೋಗದಂತೆ ತಡೆಯುತ್ತಾಳೆ. ಆದರೆ ಧರ್ಮರಾಜ್‌, ಕುಸುಮಾಳನ್ನು ರೂಮ್‌ನಲ್ಲಿ ಕೂಡಿಹಾಕಿ ಸೊಸೆಯನ್ನು ಕಳಿಸಿಕೊಡುತ್ತಾನೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 7ರ ಎಪಿಸೋಡ್‌ನಲ್ಲಿ ಭಾಗ್ಯಾ ಹೊರಗೆ ಹೋಗುವುದನ್ನು ತಡೆಯುತ್ತಿರುವ ಕುಸುಮಾ, ಪತ್ನಿಯನ್ನು ತಡೆದು ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್.‌
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್‌ 7ರ ಎಪಿಸೋಡ್‌ನಲ್ಲಿ ಭಾಗ್ಯಾ ಹೊರಗೆ ಹೋಗುವುದನ್ನು ತಡೆಯುತ್ತಿರುವ ಕುಸುಮಾ, ಪತ್ನಿಯನ್ನು ತಡೆದು ಸೊಸೆಯನ್ನು ಕಳಿಸಿಕೊಟ್ಟ ಧರ್ಮರಾಜ್.‌ (PC: Jio Cinema)

Bhagyalakshmi Kannada Serial: ಹೋಟೆಲ್‌ ಕೆಲಸದ ಮೇಲೆ ಭಾಗ್ಯಾ ಹೊರಗೆ ಹೋಗಲು ಕುಸುಮಾ ಸಂತೋಷದಿಂದ ಒಪ್ಪುತ್ತಾಳೆ. ಧರ್ಮರಾಜ್‌ ಕೂಡಾ ಸೊಸೆ ಬೆಳವಣಿಗೆ ನೋಡಿ ಖುಷಿಯಾಗುತ್ತಾರೆ. ತಾಂಡವ್‌, ಭಾಗ್ಯಾಗೆ ಬಂದ ಲಕ್ಕಿ ಡಿಪ್‌ ಟಿಕೆಟ್‌ ಕದ್ದು ಶ್ರೇಷ್ಠಾ ಜೊತೆ ಟ್ರಿಪ್‌ ಹೊರಟಿದ್ದಾರೆ. ಬಾಬಾ ಮನೆಗೆ ಬಂದು ನಿಜ ತಿಳಿಯುವ ಸಮಯ ಬಂದಿದೆ ಎಂದಾಗ ಕುಸುಮಾ ಗಾಬರಿ ಆಗುತ್ತಾಳೆ.

ಕಾರು ಹತ್ತಿದ ಭಾಗ್ಯಾಳನ್ನು ತಡೆದ ಕುಸುಮಾ

ಎಲ್ಲಾ ಸತ್ಯ ತಿಳಿಯುವ ಸಮಯ ಬಂದಿದೆ. ಹೋಗುವಾಗ ಇದ್ದ ಮನಸ್ಸುಗಳು, ಮನುಷ್ಯರು ಬರುವಾಗ ಬೇರೆ ರೀತಿ ಇರುತ್ತದೆ. ಆಗುವುದನ್ನು ಯಾರಿಂದರೂ ತಡೆಯಲು ಸಾಧ್ಯವಿಲ್ಲ ಎಂದು ಬಾಬಾ ಹೇಳಿದಾಗ ಕುಸುಮಾ ಗಾಬರಿ ಆಗುತ್ತಾಳೆ. ಭಾಗ್ಯಾಗೆ ಸತ್ಯ ಗೊತ್ತಾದರೆ ಅವಳ ಜೀವನವೇ ಹಾಳಾಗುತ್ತದೆ. ಅವಳಿಗೆ ಯಾವುದೇ ಕಾರಣಕ್ಕೂ ಸತ್ಯ ಗೊತ್ತಾಗಬಾರದು ಎಂದು ಕಾರಿನ ಬಳಿ ಓಡಿ ಬರುತ್ತಾಳೆ. ಕಾರು ಹತ್ತಿ ಹೊರಟ ಭಾಗ್ಯಾಳನ್ನು ತಡೆದು ನೀನು ಎಲ್ಲೂ ಹೋಗುವುದು ಬೇಡ, ಮನೆಗೆ ವಾಪಸ್‌ ಬಾ ಎನ್ನುತ್ತಾಳೆ. ಆದರೆ ಅತ್ತೆಯ ವರ್ತನೆ ಭಾಗ್ಯಾಗೆ ಆಶ್ಚರ್ಯವಾಗುತ್ತದೆ. ಏನೂ ಪ್ರಶ್ನೆ ಕೇಳಬೇಡ, ಆಗ ಹೋಗು ಅಂದಿದ್ದೆ ಹೌದು, ಆದರೆ ಈಗ ಬೇಡ ಎನ್ನುತ್ತಿದ್ದೇನೆ, ಸುಮ್ಮನೆ ಒಳಗೆ ನಡಿ ಎಂದು ಕುಸುಮಾ ಭಾಗ್ಯಾಳನ್ನು ಒಳಗೆ ಕರೆ ತರುತ್ತಾಳೆ.

ಅತ್ತೆ ವರ್ತನೆ ಕಂಡು ಆಶ್ಚರ್ಯಗೊಂಡ ಭಾಗ್ಯಾ

ಅತ್ತೆ ಅಕ್ಕನನ್ನು ಹೋಗಲು ಬಿಡಿ ಅಲ್ಲಿ ಏನೂ ಆಗುವುದಿಲ್ಲ ಎಂದು ಪೂಜಾ ಹೇಳುತ್ತಾಲೆ. ಅವಳ ಮಾತು ಕೇಳಿದ ಭಾಗ್ಯಾ, ಏನೂ ಆಗುವುದಿಲ್ಲ ಎಂದರೆ ಏನು ಅರ್ಥ ಎನ್ನುತ್ತಾಳೆ. ಮಧ್ಯ ಮಾತನಾಡುವ ಸುಂದ್ರಿ, ಏನಿಲ್ಲ ನಿನ್ನ ಅತ್ತೆ ನಿನ್ನ ಬಗ್ಗೆ ಬಹಳ ಯೋಚನೆ ಮಾಡುತ್ತಿದ್ದಾರೆ. ಒಬ್ಬಳೇ ಅಷ್ಟು ದೂರ ಹೋಗುತ್ತಿದ್ದಾಳೆ. ಅಲ್ಲಿ ಹೇಗೋ, ಯಾವ ರೀತಿ ಇರುವುದೋ ಎಂಬ ಭಯ ಅವರಿಗೆ ಶುರುವಾಗಿದೆ. ಅದೇ ಕಾರಣಕ್ಕೆ ಅವರು ನಿನ್ನನ್ನು ಅಲ್ಲಿಗೆ ಹೋಗುವುದು ಬೇಡ ಎನ್ನುತ್ತಿದ್ದಾರೆ ಎನ್ನುತ್ತಾಳೆ. ಸುಂದ್ರಿ ಮಾತಿಗೆ ಕುಸುಮಾ ಕೂಡಾ ತಲೆ ಆಡಿಸುತ್ತಾಳೆ. ಮನೆಯಲ್ಲಿ ತುಂಬಾ ಕೆಲಸ ಇದೆ. ಅಡುಗೆ ಮನೆಯಲ್ಲಿ ವಸ್ತುಗಳು ಹಾಗೇ ಬಿದ್ದಿದೆ ಎಲ್ಲವನ್ನೂ ಸರಿ ಮಾಡು ಎನ್ನುತ್ತಾಳೆ. ಭಾಗ್ಯಾ, ಅತ್ತೆ ಮಾತಿಗೆ ತಲೆ ಆಡಿಸುತ್ತಾಳೆ.

ಸೊಸೆಯನ್ನು ಟ್ರಿಪ್‌ಗೆ ಕಳಿಸಿದ ಧರ್ಮರಾಜ್

ಕುಸುಮಾ ವರ್ತನೆ ಕಂಡು ಧರ್ಮರಾಜ್‌ಗೆ ಬೇಸರವಾಗುತ್ತದೆ. ಆಕೆಗೆ ಅಪರೂಪಕ್ಕೆ ಒಂದು ಅವಕಾಶ ಸಿಕ್ಕಿದೆ ಅದನ್ನು ನೀನು ಹಾಳು ಮಾಡಬೇಡ, ಆಕೆಯನ್ನು ಹೋಗಲು ಬಿಡು ಎನ್ನುತ್ತಾನೆ. ಆದರೆ ಕುಸುಮಾ ಮಾತ್ರ ಇದಕ್ಕೆ ಒಪ್ಪುವುದಿಲ್ಲ. ಭಾಗ್ಯಾಗೆ ನಿಜ ಗೊತ್ತಾಗಲು ನಾನು ಬಿಡುವುದಿಲ್ಲ. ಆ ಬಾಬಾ ಹೇಳಿದ ಮಾತು ನಿಜವಾದರೆ ಭಾಗ್ಯಾ ಜೀವನ ಹಾಳಾಗುತ್ತದೆ ಎನ್ನುತ್ತಾಳೆ. ಧರ್ಮರಾಜ್‌, ಕುಸುಮಾಳನ್ನು ರೂಮ್‌ನಲ್ಲಿ ಕೂಡಿ ಹಾಕಿ ಭಾಗ್ಯಾ ಬಳಿ ಬಂದು, ನಿನಗೆ ಇಂಥ ಅವಕಾಶ ಎಲ್ಲೂ ಸಿಗುವುದಿಲ್ಲ. ದೊರೆತ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡ ನೀನು ಧೈರ್ಯದಿಂದ ಹೋಗು, ಎಂದು ಸೊಸೆಯನ್ನು ಕಳಿಸುತ್ತಾನೆ. ರೂಮ್‌ನಲ್ಲಿ ಲಾಕ್‌ ಆಗಿದ್ದ ಕುಸುಮಾ ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯದೆ ಗಾಬರಿ ಆಗುತ್ತಾಳೆ. ಕೊನೆಗೆ ಸುಂದ್ರಿ ಬಂದು ರೂಮ್‌ ಬಾಗಿಲು ತೆಗೆಯುತ್ತಾಳೆ. ಕುಸುಮಾ ಹೊರಗೆ ಬಂದು ನೋಡಿದಾಗ ಸೊಸೆ ಅಲ್ಲಿರುವುದಿಲ್ಲ. ನಾನೇ ಭಾಗ್ಯಾಳನ್ನು ಕಳಿಸಿಕೊಟ್ಟೆ ಎಂದು ಧರ್ಮರಾಜ್‌ ಹೇಳಿದಾಗ ಕುಸುಮಾ ಗಾಬರಿಯಾಗುತ್ತಾಳೆ.

ಭಾಗ್ಯಾ ಹೋಟೆಲ್‌ ಕಡೆಯಿಂದ ಟ್ರಿಪ್‌ ಹೋಗುತ್ತಾಳಾ? ಅಲ್ಲಿ ತಾಂಡವ್‌ ಶ್ರೇಷ್ಠಾಳನ್ನು ನೋಡುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ