logo
ಕನ್ನಡ ಸುದ್ದಿ  /  ಮನರಂಜನೆ  /  Barjari Bachelors: ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ಶೋ

Barjari Bachelors: ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ಶೋ

Jun 22, 2023 04:28 PM IST

google News

ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ

    • ಕನ್ನಡ ಕಿರುತೆರೆಗೆ ಹೊಸ ರಿಯಾಲಿಟಿ ಶೋ ಆಗಮಿಸಿದೆ. ಭರ್ಜರಿ ಬ್ಯಾಚುಲರ್ಸ್‌ ಶೋದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌, ರಚಿತಾ ರಾಮ್‌ ತೀರ್ಪುಗಾರರಾಗಿದ್ದರೆ, ಅಕುಲ್‌ ಬಾಲಾಜಿ ನಿರೂಪಕರಾಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. 
ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ
ಲವ್‌ ಗುರು ಕ್ರೇಜಿಸ್ಟಾರ್‌ಗೆ ಜತೆಯಾದ ಡ್ರೀಮ್‌ ಗರ್ಲ್‌ ರಚಿತಾ ರಾಮ್‌; ಜೀ ಕನ್ನಡದಲ್ಲಿ ಭರ್ಜರಿ ಬ್ಯಾಚುಲರ್ಸ್‌ ರಿಯಾಲಿಟಿ ಶೋ

Barjari Bachelors: ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿ ಎದುರಾಗುತ್ತಿರುವ ನಿಜ ತೊಂದರೆಗಳನ್ನು ಆಧಾರವಾಗಿಟ್ಟುಕೊಂಡು ಹಣೆದಿರುವ ಶೋ ಭರ್ಜರಿ ಬ್ಯಾಚುಲರ್ಸ್‌. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ಸ್‍ಗಳನ್ನು ಒಂದೆಡೆ ಸೇರಿಸಿ ಅವರನ್ನು ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಿಬಲ್ ಮಾಡುವ ಪ್ರಯತ್ನದ ಹೊಸ ರಿಯಾಲಿಟಿ ಶೋ ಈ ಭರ್ಜರಿ ಬ್ಯಾಚುಲರ್ಸ್.

ಹತ್ತು ಎಲಿಜಿಬಲ್ ಬ್ಯಾಚುಲರ್ಸ್‍ಗಳ ಕನಸುಗಳನ್ನು ನಿಜರೂಪಕ್ಕೆ ತರುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನು ಕರುನಾಡಿಗೆ ತೋರಿಸುವುದು ಈ ಶೋನ ಕೆಲಸ. ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನು ಈ ರಿಯಾಲಿಟಿ ಶೋ ತಿಳಿಸಲಿದೆ.

ರವಿಚಂದ್ರನ್‌ ಲವ್‌ ಗುರು, ರಚಿತಾ ಡ್ರೀಮ್‌ ಗರ್ಲ್‌

ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿಕೊಟ್ಟ, ಟೀನೇಜರ್ಸ್‍ಗಳಿಗಾಗಿಯೇ ಪ್ರೇಮಲೋಕ ಸೃಷ್ಟಿಸಿದ ಕ್ರೇಜಿಸ್ಟಾರ್ ರವಿಚಂದ್ರನ್ ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನು ತಿದ್ದಿತೀಡುವ ಕೆಲಸ ಮಾಡಲಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋನ ನಿರೂಪಣಾ ಜವಾಬ್ದಾರಿಯನ್ನು ಹೊತ್ತಿರುವುದು ಅಕುಲ್ ಬಾಲಾಜಿ. ವಿಭಿನ್ನ ಮ್ಯಾನರಿಸಂ ಜೊತೆ ಸಖತ್ ಮಾತುಗಳ ಮೂಲಕ ಮನರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ, ಬಹಳ ದಿನಗಳ ನಂತರ ಮತ್ತೆ ಜೀ ಕನ್ನಡಕ್ಕೆ ವಾಪಾಸಾಗಿದ್ದಾರೆ.

ಚಂದನ್‌ ಶೆಟ್ಟಿ ಶೀರ್ಷಿಕೆ ಗೀತೆ

ಹತ್ತು ಬ್ಯಾಚುಲರ್ಸ್‌ಗಳ ಇಷ್ಟ ಕಷ್ಟಗಳ ನಡುವೆ ಹಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಚಂದನ್ ಶೆಟ್ಟಿ. ಹಳೆಬೇವರ್ಸೀ ಸಾಂಗ್ ಖ್ಯಾತಿಯ ರಾಕೇಶ್ ಸಿ.ಏ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್ಸ್‍ಗಳ ಆಸೆ, ಕನಸು, ಇಷ್ಟ, ಕಷ್ಟ, ತುಮುಲ ಮತ್ತು ತೊಳಲಾಟ ಎಲ್ಲವೂ ಎದ್ದು ಕಾಣುತ್ತದೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ಬ್ಯಾಚುಲರ್ಸ್‍ಗಳ ಬಯೋಡೇಟಾ ಇನ್ನೇನು ಇದೇ ಜೂನ್ 24ರ ಶನಿವಾರ ರಾತ್ರಿ 9.00ಕ್ಕೆ ಜೀ ಕನ್ನಡ ವಾಹಿನಿಯ ಮುಖಾಂತರ ನಿಮ್ಮ ಮನೆಗೆ ಬರಲಿದೆ. ಸಮಾಜದಲ್ಲಿ ಬ್ಯಾಚುಲರ್ಸ್‍ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್ಸ್‍ಗಳ ಸಮಸ್ಯೆಗಳನ್ನ ನೋಡುಗರ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುಲರ್ಸ್.

Suvarna Super Star: 800 ಸಂಚಿಕೆಗಳ ಸಂಭ್ರಮದಲ್ಲಿ ಸುವರ್ಣ ಸೂಪರ್ ಸ್ಟಾರ್ ರಿಯಾಲಿಟಿ ಶೋ

Suvarna Super Star: ಕನ್ನಡದ ಮನರಂಜನಾ ವಾಹಿನಿ ಸ್ಟಾರ್ ಸುವರ್ಣದಲ್ಲಿ ಮೂಡಿ ಬರುತ್ತಿರುವ ಮಹಿಳೆಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ "ಸುವರ್ಣ ಸೂಪರ್ ಸ್ಟಾರ್" ಗೆ ಇದೀಗ 800 ಸಂಚಿಕೆಗಳ ಸಂಭ್ರಮದಲ್ಲಿದೆ. ಕರ್ನಾಟಕದ ಮೂಲೆ ಮೂಲೆಯ ಮಹಿಳೆಯರ ಬದುಕನ್ನು ಸಂಭ್ರಮಿಸಲು ಶುರುವಾದ ಮಹಾವೇದಿಕೆ ಈ ಸುವರ್ಣ ಸೂಪರ್ ಸ್ಟಾರ್. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಖ್ಯಾತ ನಟಿ, ನಿರೂಪಕಿ ಶಾಲಿನಿ. ಪೂರ್ಣ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ