logo
ಕನ್ನಡ ಸುದ್ದಿ  /  ಮನರಂಜನೆ  /  ನನ್ನಮ್ಮ ಈಗಲೂ ಹೂವು ಮಾರ್ತಾಳೆ; ಕಷ್ಟದ ಬುಕ್‌ ಓಪನ್‌ ಮಾಡಿದ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಪಡೆದ ಅಂತರಪಟ ನಟಿ ತನ್ವಿ

ನನ್ನಮ್ಮ ಈಗಲೂ ಹೂವು ಮಾರ್ತಾಳೆ; ಕಷ್ಟದ ಬುಕ್‌ ಓಪನ್‌ ಮಾಡಿದ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಪಡೆದ ಅಂತರಪಟ ನಟಿ ತನ್ವಿ

Sep 24, 2023 10:02 AM IST

google News

ನನ್ನಮ್ಮ ಈಗಲೂ ಹೂವು ಮಾರ್ತಾಳೆ; ಕಷ್ಟದ ಬುಕ್‌ ಓಪನ್‌ ಮಾಡಿದ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಪಡೆದ ಅಂತರಪಟ ನಟಿ ತನ್ವಿ

    • ಅಂತರಪಟ ಸೀರಿಯಲ್‌ ಮೂಲಕ ನಟನೆ ಆರಂಭಿಸಿರುವ ನಟಿ ತನ್ವಿ ಬಾಲರಾಜ್‌, ಈ ಮೊದಲು ಇದೇ ವೇದಿಕೆ ಮೇಲೆ ಬ್ಯಾಕ್‌ ಸ್ಟೇಜ್‌ ಡಾನ್ಸರ್‌ ಆಗಿದ್ದವರು. ಇಂದಿಗೂ ಇವರ ತಾಯಿ ಹೂವು ಮಾರುತ್ತಾರೆ. ಇದೀಗ ಈ ನಟಿಗೆ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಲಭಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಷ್ಟದ ಬುಕ್‌ ಓಪನ್‌ ಮಾಡಿದ್ದಾರೆ. 
ನನ್ನಮ್ಮ ಈಗಲೂ ಹೂವು ಮಾರ್ತಾಳೆ; ಕಷ್ಟದ ಬುಕ್‌ ಓಪನ್‌ ಮಾಡಿದ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಪಡೆದ ಅಂತರಪಟ ನಟಿ ತನ್ವಿ
ನನ್ನಮ್ಮ ಈಗಲೂ ಹೂವು ಮಾರ್ತಾಳೆ; ಕಷ್ಟದ ಬುಕ್‌ ಓಪನ್‌ ಮಾಡಿದ ಜನ ಮೆಚ್ಚಿದ ಹೊಸ ಪರಿಚಯ ಅನುಬಂಧ ಅವಾರ್ಡ್‌ ಪಡೆದ ಅಂತರಪಟ ನಟಿ ತನ್ವಿ

Antarapata serial actress Thanvi Balraj: ಕಲರ್ಸ್‌ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್‌ 2023 ಆರಂಭವಾಗಿದೆ. ಒಟ್ಟು ಮೂರು ದಿನಗಳ ಈ ತಾರಾ ಜಾತ್ರೆಯ ಪೈಕಿ ಎರಡು ದಿನ ಕಳೆದಿದೆ. ಭಾನುವಾರವಾದ ಇಂದು (ಸೆ. 24) ಮತ್ತಷ್ಟು ಮನರಂಜನೆಯ ಹೂರಣವನ್ನೇ ವೀಕ್ಷಕರಿಗೆ ಉಣಬಡಿಸಲು ವಾಹಿನಿ ಮತ್ತು ಕಲಾವಿದರು ಸಜ್ಜಾಗಿದ್ದಾರೆ. ಆ ಪೈಕಿ ಈ ಎರಡು ದಿನಗಳ ಹೈಲೈಟ್ಸ್‌ಗಳನ್ನು ಒಮ್ಮೆ ಇಣುಕಿ ನೋಡಿದರೆ ಅಲ್ಲಿ ಹಲವು ಮನಮುಟ್ಟುವ ಕಥೆಗಳನ್ನು, ಎದುರಿಸಿದ ಕಷ್ಟಗಳನ್ನು ಪ್ರಶಸ್ತಿ ಪಡೆದವರು ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಅಂತರಪಟ ಸೀರಿಯಲ್‌ ನಟಿ ತನ್ವಿ ಬಾಲರಾಜ್‌ (Thanviya Naik) ಪಯಣ ಅಷ್ಟೇ ಭಾವುಕವಾಗಿತ್ತು.

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಅಂತರಪಟ ಸೀರಿಯಲ್‌, ಅಪಾರ ನೋಡುಗ ವರ್ಗವನ್ನು ಹೊಂದಿದೆ. ಇದೇ ಸೀರಿಯಲ್‌ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದವರು ತನ್ವಿ ಬಾಲರಾಜ್. ಈ ಮೊದಲು ಬ್ಯಾಕ್‌‌ ಸ್ಟೇಜ್‌ ಡಾನ್ಸರ್‌ ಆಗಿಯೇ ಗುರುತಿಸಿಕೊಂಡಿದ್ದ ತನ್ವಿ, ಅಂತರಪಟ ಧಾರಾವಾಹಿಯಲ್ಲಿ ಆರಾಧನಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಪಾತ್ರಕ್ಕೇ ಇದೀಗ ಅನುಬಂಧ ಅವಾರ್ಡ್ಸ್‌ 2023ರಲ್ಲಿ ಜನ ಮೆಚ್ಚಿದ ಹೊಸ ಪರಿಚಯ ಅವಾರ್ಡ್‌ ಲಭಿಸಿದೆ.

ಇದೇ ವೇದಿಕೆ ಮೇಲೆ ಬ್ಯಾಕ್‌ ಸ್ಟೇಜ್‌ ಡಾನ್ಸರ್‌ ಆಗಿದ್ದೆ..

ನಟಿ ತನ್ವಿಗೆ ಸಿಕ್ಕ ಮೊದಲ ಪ್ರಶಸ್ತಿ ಇದು. ನಟಿ ಸೋನಲ್‌ ಮೊಂತೆರಿಯೋ ಕಡೆಯಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆ ಕೊಂಚ ಭಾವುಕರಾದ ತನ್ವಿ ಹಳೇ ನೋವುಗಳನ್ನು ತೆರೆದಿಟ್ಟರು. "ಇದೇ ವೇದಿಕೆಯಲ್ಲಿ, ಇದೇ ಅನುಬಂಧ ವೇದಿಕೆಯಲ್ಲಿ ಕಳೆದ ಏಳೆಂಟು ವರ್ಷದಿಂದ ಬ್ಯಾಕ್‌ ಸ್ಟೇಜ್‌ ಡಾನ್ಸರ್‌ ಆಗಿ ಡಾನ್ಸ್‌ ಮಾಡ್ತಿದ್ದೆ. ಆರ್ಟಿಸ್ಟ್‌ಗಳಿಗೆ ಇಲ್ಲಿ ನಿಂತುಕೊಂಡು ಪ್ಯಾಕ್‌ ಅಪ್ ಮಾಡ್ತಿದ್ದೆ.‌ ಕುಳ್ಳಿ ಅನ್ಕೊಂಡು ನನ್ನನ್ನು ಮುಂದೆ ಹಾಕಿಬಿಡ್ತಿದ್ರು. ಆದರೆ, ಇಲ್ಲಿಗೆ ಬರಬೇಕು ಅಂತ ತುಂಬ ಆಸೆ ಇತ್ತು. ನಾನು ಗಿಣಿರಾಮ ಸೀರಿಯಲ್‌ ಸಂತೆಯಲ್ಲಿ ಸೆಲೆಕ್ಟ್‌ ಆಗಿದ್ದು. ನನ್ನ ಪ್ರೊಪೈಲ್‌ ಮೂವ್‌ ಮಾಡಿಸಿದ್ದು ಶ್ರವಣ್‌ ಮತ್ತು ಜೆಡಿ ಸರ್. RRR ಕ್ರಿಯೇಷನ್ಸ್‌ ಇದೀಗ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ" ಎಂದರು.

ಪ್ರಶಸ್ತಿ ನಿರೀಕ್ಷೆ ಇರಲೇ ಇಲ್ಲ..

ನನಗೆ ಗೊತ್ತಿಲ್ಲ. ನಿರೀಕ್ಷೆಯನ್ನೂ ಮಾಡಿರಲಿಲ್ಲ. ನಾವು ಈಗಷ್ಟೇ ಇಲ್ಲಿಗೆ ಬಂದಿದ್ದೇವೆ. ಕಲಿಯುವುದಕ್ಕೆ ಬಂದಿದ್ದೇವೆ. ಕಲಿಯೋಣ. ಎಂಜಾಯ್‌ ಮಾಡೋಣ ಎಂದುಕೊಂಡೇ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದೆ. ಆದರೆ, ಜನ ಮೆಚ್ಚಿದ ಹೊಸ ಪರಿಚಯ ಅವಾರ್ಡ್‌ ಸಿಗುತ್ತೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಥ್ಯಾಂಕ್ಸ್‌ ಎಲ್ಲರಿಗೂ. ಅದೇ ರೀತಿ ನಟನೆಯಲ್ಲಿ ನನಗೆ ಏನೂ ನಾಲೆಡ್ಜ್‌ ಇಲ್ಲ. ಒಂದು ರೀತಿ ಖಾಲಿ ಬುಕ್. ಸ್ವಪ್ನಾ ಮೇಡಂ ನನಗೆ ಬಣ್ಣ ಹಾಕಿ ತಿದ್ದಿ, ತೀಡಿದ್ದಾರೆ. ಆರಾಧನಾ ಪಾತ್ರ ಚೆನ್ನಾಗಿ ಮಾಡ್ತಾಳೆ ಅಂತ ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರ ಕೊಟ್ಟಿದ್ದಾರೆ. ಅವರಿಗೂ ಥ್ಯಾಂಕ್ಸ್" ಎಂದರು.

ಇದೇ ವೇಳೆ ನಿರೂಪಕಿ ಅನುಪಮಾ, ಕಬ್ಜ ಆಡಿಯೋ ಲಾಂಚ್‌ ಅಲ್ಲಿ ನಮ್ಮ ಆರಾಧನಾ ಬ್ಯಾಕ್‌ ಡಾನ್ಸರ್‌ ಆಗಿ ಡಾನ್ಸ್‌ ಮಾಡಿದ್ರು. ಅದಾದ ಬಳಿಕ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯಾಗಿದ್ದಾರೆ. ಆ ಜರ್ನಿ ಹೇಗಿತ್ತು? ಎಂದು ಕೇಳಿದ್ದಾರೆ. ಇದಕ್ಕೆ ಮತ್ತಷ್ಟು ಭಾವುಕರಾಗಿ ತ್ನಿ ಉತ್ತರ ನೀಡಿದ್ದಾರೆ.

ಪ್ರತಿ ಮಿಡಲ್‌ ಕ್ಲಾಸ್‌ ಜನರ ಕನಸಿದು

"ತುಂಬ ಕಷ್ಟ. ಏಕಂದ್ರೆ ನನ್ನ ಥರ ಸಾಕಷ್ಟು ಜನ ಮಿಡಲ್‌ ಕ್ಲಾಸ್‌ನಿಂದ ಇಲ್ಲಿಗೆ ಬಂದಿರ್ತಿರಾ. ಈಗಲೇ ಕಷ್ಟ ನೋವು ಅನುಭವಿಸುತ್ತೀರ್ತೀರಾ. ಅಲ್ಲಿಂದ ಇಲ್ಲಿಗೆ ಬಂದು ನಿಂತಿದ್ದೀನಿ ಎಂದು ಹಿಂತಿರುಗಿ ನೋಡಿದಾಗ, ನನಗೆ ಒಂದು ಕ್ಷಣ ಹೌದಾ ಎನಿಸುತ್ತದೆ. ತುಂಬ ಕಷ್ಟ ಇತ್ತು. ಹೆಣ್ಣಾಗಲಿ, ಗಂಡಾಗಲಿ ಕಷ್ಟ ಆಗೇ ಆಗುತ್ತೆ. ಅಕ್ಕಪಕ್ಕ ಇದ್ದವರೇ, ನೀನು ಹೆಣ್ಣು, ಹೊರಗಡೆ ಹೋಗಿ ಏನು ಮಾಡ್ತಿಯಾ? ಎಂದು ಹೇಳಿದ್ದಾರೆ. ಅದೆಲ್ಲವನ್ನು ನಾವು ಯಾವಾಗ ದಾಟಿ ಮುಂದೆ ಬಂದು ನಿಲ್ಲುತ್ತೇವೋ, ಆಗ ಈ ಥರದ ಸಣ್ಣ ಅವಾರ್ಡ್‌ ಪಡೆದು ಸಾಧನೆ ಮಾಡುವುದಕ್ಕೆ ಸಾಧ್ಯ. ಇದು ನನ್ನ ಮೊದಲ ಹೆಜ್ಜೆ" ಎಂದಿದ್ದಾರೆ ತನ್ವಿ.

ಅಮ್ಮ ಈಗಲೂ ಹೂವು ಮಾರ್ತಾರೆ..

"ಡಾನ್ಸ್‌ ಫೀಲ್ಡ್‌ನಲ್ಲಿ ಇದ್ದಾಗ, ಅಪ್ಪ ಅಮ್ಮನಿಗೆ ಇಷ್ಟವೇ ಇರುತ್ತಿರಲಿಲ್ಲ. ಲೇಟ್‌ ನೈಟ್‌ ಶೋಸ್‌ಗಳಿರುತ್ತಿದ್ದವು. ತಡವಾಗಿ ಮನೆಗೆ ಹೋಗುವುದಕ್ಕೆ ಬೈಯುತ್ತಿದ್ದರು. ಇದೀಗ ಈ ಅವಾರ್ಡ್‌ ಮೂಲಕ ಮಗಳು ಏನೋ ಸಾಧನೆ ಮಾಡಿದ್ದಾಳೆ ಎಂದು ತೋರಿಸಲು ಸಮಯ ಬಂದಿದೆ. ಅಪ್ಪ, ಅಮ್ಮನಿಗೂ ಥ್ಯಾಂಕ್ಸ್‌. ನನ್ನ ಅಮ್ಮ ಈಗಲೂ ಹೂವು ಮಾರ್ತಾರೆ. ಅಪ್ಪ ಬಿಲ್ಡಿಂಗ್‌ ಕಾಂಟ್ರಾಕ್ಟರ್‌" ಎಂದು ತನ್ವಿ ಹೇಳಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ