logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ನವರಾತ್ರಿ ವಿಶೇಷ ಸಂಚಿಕೆ, ಭಾಗ್ಯಾ ಬೆಂಬಲಕ್ಕೆ ನಿಂತ ನವಶಕ್ತಿಯರು; ಭಾಗ್ಯಲಕ್ಷ್ಮೀ ಧಾರಾವಾಹಿ 298ನೇ ಎಪಿಸೋಡ್‌

Bhagyalakshmi Serial: ನವರಾತ್ರಿ ವಿಶೇಷ ಸಂಚಿಕೆ, ಭಾಗ್ಯಾ ಬೆಂಬಲಕ್ಕೆ ನಿಂತ ನವಶಕ್ತಿಯರು; ಭಾಗ್ಯಲಕ್ಷ್ಮೀ ಧಾರಾವಾಹಿ 298ನೇ ಎಪಿಸೋಡ್‌

HT Kannada Desk HT Kannada

Oct 21, 2023 07:00 AM IST

google News

ಭಾಗ್ಯಲಕ್ಷ್ಮೀ ಧಾರಾವಾಹಿ 298ನೇ ಎಪಿಸೋಡ್‌

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಅಕ್ಟೋಬರ್ 20 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. 'ಸಮವಸ್ತ್ರ ಇಲ್ಲದೆ ಶಾಲೆಗೆ ಸೇರಿಸುವುದಿಲ್ಲ ಎಂದು ಭಾಗ್ಯಳನ್ನು ಸ್ಕೂಲ್‌ನಿಂದ ಹೊರ ಕಳಿಸಲಾಗಿದೆ. ಆದರೆ ಭಾಗ್ಯಾಗೆ ನವಶಕ್ತಿಯರೇ ರಕ್ಷೆಯಾಗಿ ನಿಂತಿದ್ದಾರೆ'

ಭಾಗ್ಯಲಕ್ಷ್ಮೀ ಧಾರಾವಾಹಿ 298ನೇ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ 298ನೇ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಮೂರು ದಿನಗಳ ರಜೆ ಮುಗಿಸಿ ಸ್ಕೂಲ್‌ಗೆ ಹೋದ ಭಾಗ್ಯಾಗೆ ಶಾಕ್‌ ಕಾದಿರುತ್ತದೆ. ಯೂನಿಫಾರ್ಮ್‌ ಹಾಕದ ಕಾರಣ ಭಾಗ್ಯಾಳನ್ನು ಕನ್ನಿಕಾ ಕಾಮತ್‌ ಸ್ಕೂಲ್‌ನಿಂದ ಹೊರ ಕಳಿಸುತ್ತಾಳೆ. ಭಾಗ್ಯ ಹೇಳುವ ಯಾವ ಮಾತನ್ನೂ ಕನ್ನಿಕಾ ಕೇಳಲು ತಯಾರಿಲ್ಲ. ಅಮ್ಮನ ವಿಚಾರ ತಿಳಿದ ತನ್ವಿ ಬಹಳ ಸಂತೋಷ ಪಡುತ್ತಾಳೆ. ಅಮ್ಮನಿಗೆ ಸ್ಕೂಲ್‌ಗೆ ಎಂಟ್ರಿ ಇಲ್ಲ ಎಂದು ಖುಷಿ ಪಡುವ ತನ್ವಿ, ಫ್ರೆಂಡ್ಸ್‌ ಜೊತೆ ಐಸ್‌ಕ್ರೀಂ ಪಾರ್ಟಿ ಮಾಡಲು ಪ್ಲಾನ್‌ ಮಾಡುತ್ತಾಳೆ. ತನ್ವಿಯ ಖುಷಿ ನೋಡಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ಮಗಳಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು, ಇಲ್ಲವಾದರೆ ಈ ಸ್ಕೂಲ್‌ ಬದಲಿಸಬೇಕು ಎಂದುಕೊಳ್ಳುತ್ತಾಳೆ.

ಭಾಗ್ಯಾಗೆ ಎದುರಾಗುವ ಮಂಗಳಗೌರಿ

ಭಾಗ್ಯಾ ಕಣ್ಣೀರಿಡುತ್ತಾ ಹೊರಡುವಾಗ ಆಕೆಗೆ ಮಂಗಳಗೌರಿ ಎದುರಾಗುತ್ತಾಳೆ. ನವರಾತ್ರಿಯ ವಿಶೇಷ ದಿನದಂದಂದು ನವಶಕ್ತಿಯರೇ ಭಾಗ್ಯಾ ಬೆಂಬಲಕ್ಕೆ ನಿಲ್ಲುತ್ತಾರೆ. ಪ್ರಯತ್ನ ಪಡದೆ ನೀನು ಸೋಲು ಒಪ್ಪಿಕೊಂಡು ಏಕೆ ಹೋಗುತ್ತಿದ್ದೀಯ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳುತ್ತಾರೆ. ಕನ್ನಿಕಾ ಕಾಮತ್‌ ಚೇಂಬರ್‌ ಬಳಿ ಹೋಗುವ ನವಶಕ್ತಿಯರು ನಾವು ಮಹಿಳಾ ಸಂಘದವರು, ಭಾಗ್ಯಾಳನ್ನು ಮಾತನಾಡಿಸಲು ಬಂದಿದ್ದೇವೆ ಎಂದು ಹೇಳಿದಾಗ ಆಕೆ ಸ್ಕೂಲ್‌ಗೆ ಬರುತ್ತಿಲ್ಲ, ಮೊದಲ ದಿನ ಬಂದು ವಾಪಸ್‌ ಹೊರಟು ಹೋದಳು. ಆಕೆಗೆ ಓದುವ ಆಸಕ್ತಿ ಇಲ್ಲ ಎಂದು ಸುಳ್ಳು ಹೇಳುತ್ತಾಳೆ. ಕನ್ನಿಕಾ ಮಾತನ್ನು ಕೇಳಿಸಿಕೊಳ್ಳುವ ಭಾಗ್ಯ, ಯಾರು ಆ ರೀತಿ ಹೇಳಿದ್ದು ಎಂದು ಕೇಳುತ್ತಾಳೆ. ಭಾಗ್ಯಾಳನ್ನು ನೋಡಿ ಕನ್ನಿಕಾ ಶಾಕ್‌ ಆಗುತ್ತಾಳೆ.

ಊರಿನಲ್ಲಿ ಹೆತ್ತವರಿಗೆ ಅವಮಾನ ಮಾಡುವ ಶ್ರೇಷ್ಠಾ

ಇತ್ತ ಊರಿನಲ್ಲಿ ರಘು ಜೊತೆಗೆ ಶ್ರೇಷ್ಠಾ ಎಂಗೇಜ್‌ಮೆಂಟ್‌ಗೆ ಎಲ್ಲಾ ತಯಾರಿ ನಡೆಯುತ್ತದೆ. ಆದರೆ ದೇವಸ್ಥಾನಕ್ಕೆ ಬರುವ ಶ್ರೇಷ್ಠಾ ಅಲ್ಲಿ ತನ್ನ ವರಸೆ ತೆಗೆಯುತ್ತಾಳೆ. ನನ್ನ ಎಂಗೇಜ್‌ಮೆಂಟ್‌ ಇಷ್ಟು ಸಿಂಪಲ್‌ ಆಗಿ ಮಾಡ್ತಿದ್ದೀರಾ? ಈ ರೀತಿ ನಿಶ್ಚಿತಾರ್ಥ ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ನಮ್ಮ ಸಂಬಂಧಿಕರನ್ನು ಕರೆಯಿರಿ ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳಿಂದ ಶ್ರೀವರ, ಯಶೋಧಾ ಗಾಬರಿ ಆಗುತ್ತಾರೆ. ನೀವು ಕರೆಯದಿದ್ದರೆ ನಾನೇ ಕರೆಯುತ್ತೇನೆ ಎಂದು ದೇವಸ್ಥಾನಕ್ಕೆ ಬಂದಿರುವವರನ್ನೆಲ್ಲಾ ಕರೆಯುವ ಶ್ರೇಷ್ಠಾ ನನ್ನ ತಂದೆ ತಾಯಿ ಬಲವಂತವಾಗಿ ನನ್ನ ಮದುವೆ ಮಾಡುತ್ತಿದ್ದಾರೆ. ವಿಷ ಕುಡಿಯುವುದಾಗಿ ಬ್ಲಾಕ್‌ ಮೇಲ್‌ ಮಾಡುತ್ತಿದ್ದಾರೆ ಎನ್ನುತ್ತಾಳೆ. ಮಗಳ ನಾಟಕ ನೋಡಿ ಶ್ರೀವರ ಕುಸಿದು ಬೀಳುತ್ತಾರೆ. ಆದರೆ ಶ್ರೇಷ್ಠಾಗೆ ತನ್ನ ಹಠವೇ ಹೆಚ್ಚು. ನಾನು ಮದುವೆ ಆದರೆ ನಾನು ಪ್ರೀತಿಸುವ ಹುಡುಗ ಮಾತ್ರ ಎಂದು ಮತ್ತೆ ಶಪಥ ಮಾಡುತ್ತಾಳೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ