Disco Shanti: ಎಲ್ಲರೂ ಐ ಲವ್ ಯೂ ಅಂದ್ರು, ಶ್ರೀಹರಿ ಮಾತ್ರ ನನ್ನ ಮದ್ವೆ ಆಗ್ತೀಯಾ ಅಂತ ಕೇಳಿದ್ರು; ಡಿಸ್ಕೋ ಶಾಂತಿ ಲವ್ ಸ್ಟೋರಿ
ಡಿಸ್ಕೋ ಶಾಂತಿ ಸಿನಿಪ್ರಿಯರಿಗೆ ಪರಿಚಿತ ನಟಿ. ಅವರು ನಟನೆಗಿಂತ ಹೆಚ್ಚಾಗಿ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದವರು. 80ರ ದಶಕದಲ್ಲಿ ಬಹುತೇಕ ಕನ್ನಡ ಸಿನಿಮಾಗಳಲ್ಲಿ ಡಿಸ್ಕೋಶಾಂತಿ ಇದ್ದಾರೆ.
(1 / 11)
ಡಿಸ್ಕೋ ಶಾಂತಿ ನಟಿಯಾಗಿ ಕೆಲವೊಂದು ಸಿನಿಮಾಗಳಲ್ಲಿ ಕಾಣಿಸಿಕೊಂಡರೆ, ಹೆಚ್ಚಿನ ಸಿನಿಮಾಗಳಲ್ಲಿ ಐಟಂ ಡ್ಯಾನ್ಸರ್ ಆಗಿ ಮಾತ್ರ ಬಂದು ಹೋಗುತ್ತಿದ್ದರು. ಇಷ್ಟಾದರೂ ಆಗಿನ ಕಾಲದ ಹುಡುಗರಿಗೆ ಅವರೆಂದರೆ ಬಹಳ ಇಷ್ಟ.
(2 / 11)
ಸಿನಿಮಾಗಳ ಕ್ಯಾಬರೆ ಡ್ಯಾನ್ಸರ್‌ಗಳು ಎಂದರೆ ಕೆಲವರು ನೋಡುತ್ತಿದ್ದ ದೃಷ್ಟಿಯೇ ಬೇರೆ ಇರುತ್ತದೆ. ಇದೇ ವಿಚಾರವನ್ನು ಡಿಸ್ಕೋ ಶಾಂತಿ ಅನೇಕ ಇಂಟರ್‌ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಹಾಗೂ ಶ್ರೀಹರಿ ಲವ್ ಸ್ಟೋರಿಯನ್ನೂ ಹೇಳಿಕೊಂಡಿದ್ದಾರೆ.
(3 / 11)
ಶ್ರೀಹರಿ ಹಾಗೂ ಡಿಸ್ಕೋ ಶಾಂತಿ ಮೊದಲು ಭೇಟಿ ಆಗಿದ್ದು ತೆಲುಗಿನ ದಾದರ್ ಎಕ್ಸ್‌ಪ್ರೆಸ್ ಸಿನಿಮ ಶೂಟಿಂಗ್‌ನಲ್ಲಿ. ಯಾರನ್ನು ಮದುವೆ ಆದರೂ ಸಿನಿಮಾದವರನ್ನು ಮಾತ್ರ ಮದುವೆ ಆಗಬಾರದು ಎಂದು ನಾನು ನಿರ್ಧರಿಸಿದ್ದೆ. ಆದರೆ ನನಗೇ ಗೊತ್ತಿಲ್ಲದೆ ನನ್ನ ಬಾಳಿಗೆ ಶ್ರೀ ಹರಿ ಬಂದರು.
(4 / 11)
ದಾದರ್ ಎಕ್ಸ್‌ಪ್ರೆಸ್ ಚಿತ್ರದ ಐವರು ವಿಲನ್‌ಗಳಲ್ಲಿ ಶ್ರೀಹರಿ ಕೂಡಾ ಒಬ್ಬರು. ಆಗ ಸಹ ನಟ ನಟಿಯರ ಫೋನ್ ನಂಬರ್ ಎಲ್ಲರ ಬಳಿಯೂ ಇದ್ದಿದ್ದರಿಂದ ಶ್ರೀಹರಿ ಡಿಸ್ಕೋಶಾಂತಿಗೆ ಕಾಲ್ ಮಾಡಿ ಫ್ರೆಂಡ್‌ಶಿಪ್ ಬೆಳೆಸಿಕೊಂಡಿದ್ದಾರೆ.
(5 / 11)
ಅದುವರೆಗೂ ಡಿಸ್ಕೋಶಾಂತಿಗೆ ಬಹಳ ಮಂದಿ ಪ್ರಪೋಸ್ ಮಾಡಿದ್ದರು. ಆದರೆ ಎಲ್ಲರೂ ಐ ಲವ್ ಯೂ ಎಂದಿದ್ದರೇ ಹೊರತು ಯಾರೂ ಮದುವೆ ಬಗ್ಗೆ ಮಾತನಾಡಿರಲಿಲ್ಲ. ಶ್ರೀಹರಿ ಮಾತ್ರ ಡಿಸ್ಕೋಶಾಂತಿಯನ್ನು ನನ್ನನ್ನು ಮದುವೆ ಆಗುತ್ತೀಯ ಎಂದು ಪ್ರಪೋಸ್ ಮಾಡಿದ್ದಾರೆ. ಶ್ರೀಹರಿ ಅವರ ಆ ಗುಣವೇ ಶಾಂತಿಗೆ ಬಹಳ ಇಷ್ಟವಾಗಿದೆ.
(6 / 11)
ಪ್ರೀತಿ ಮಾಡಲು ಆರಂಭಿಸಿದ ನಂತರ ಯಾರಿಗೂ ತಿಳಿಯದಂತೆ ಇಬ್ಬರೂ ಗುಟ್ಟಾಗಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ. ಆದರೆ 7 ವರ್ಷಗಳ ನಂತರ ಇಬ್ಬರೂ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆ ಆಗಿದ್ದಾರೆ.
(7 / 11)
ಮದುವೆ ಆದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುತ್ತಿದ್ದ ಡಿಸ್ಕೋ ಶಾಂತಿ ಮಕ್ಕಳಾದ ನಂತರ ನಟನೆ ಹಾಗೂ ಡ್ಯಾನ್ಸ್‌ನಿಂದ ದೂರ ಉಳಿದರು. ಶ್ರೀಹರಿ, ಡಿಸ್ಕೋ ಶಾಂತಿ ದಂಪತಿಗೆ ಇಬ್ಬರು ಗಂಡು ಮಕ್ಕಳು. ಹೆಣ್ಣು ಮಗು ಜನಿಸಿತ್ತಾದರೂ 4 ತಿಂಗಳ ನಂತರ ಆ ಮಗು ಅನಾರೋಗ್ಯದಿಂದ ಸಾವನ್ನಪ್ಪಿತು. ಮಗಳು ಅಕ್ಷರಾ ಹೆಸರಿನಲ್ಲಿ ಡಿಸ್ಕೋ ಶಾಂತಿ ಫೌಂಡೇಷನ್ ಒಂದನ್ನು ಸ್ಥಾಪಿಸಿ ಸಮಾಜಸೇವೆ ಮಾಡುತ್ತಿದ್ದಾರೆ.
(8 / 11)
ಡಿಸ್ಕೋ ಶಾಂತಿ ಅವರದ್ದು ಸುಖೀ ಕುಟುಂಬ. ಆದರೆ ಅನಾರೋಗ್ಯಕ್ಕೆ ಈಡಾದ ಶ್ರೀಹರಿ 2013 ಅಕ್ಟೋಬರ್‌ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
(9 / 11)
ಶ್ರೀಹರಿ ನಿಧನರಾದ ನಂತರ ಡಿಸ್ಕೋಶಾಂತಿ ಡಿಪ್ರೆಶನ್‌ಗೆ ಜಾರಿದ್ದರು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಆಕೆಯನ್ನು ನೋಡಿದವರು ಇವರೇನಾ ಶಾಂತಿ ಎನ್ನುವಷ್ಟು ವೀಕ್ ಅಗಿದ್ದರು. ಈಗಲೂ ಆಕೆ ಪತಿ ಶ್ರೀಹರಿಯನ್ನು ನೆನಪಿಸಿಕೊಂಡು ಕಣ್ಣೀರಿಡುತ್ತಲೇ ಇರುತ್ತಾರೆ.
(10 / 11)
ಡಿಸ್ಕೋ ಶಾಂತಿ ಈಗ ಮಕ್ಕಳಾದ ಮೇಘಾಂಶ್ ಶ್ರೀಹರಿ, ಶಶಾಂಕ್ ಶ್ರೀಹರಿ ಜೊತೆ ಹೈದರಾಬಾದ್‌ನ ಜ್ಯೂಬ್ಲಿ ಹಿಲ್ಸ್‌ನಲ್ಲಿ ನೆಲೆಸಿದ್ದಾರೆ.
ಇತರ ಗ್ಯಾಲರಿಗಳು