logo
ಕನ್ನಡ ಸುದ್ದಿ  /  ಮನರಂಜನೆ  /  ‘ರಾನಿ’ ಬಳಿಕ ಈಗ ‘ಮೇಘ’ದ ಸರದಿ; ಕನ್ನಡತಿ ಕಿರಣ್‌ ರಾಜ್‌ ಹೊಸ ಸಿನಿಮಾ ಇದೇ ಮಾಸಾಂತ್ಯಕ್ಕೆ ತೆರೆಗೆ

‘ರಾನಿ’ ಬಳಿಕ ಈಗ ‘ಮೇಘ’ದ ಸರದಿ; ಕನ್ನಡತಿ ಕಿರಣ್‌ ರಾಜ್‌ ಹೊಸ ಸಿನಿಮಾ ಇದೇ ಮಾಸಾಂತ್ಯಕ್ಕೆ ತೆರೆಗೆ

Nov 24, 2024 01:26 PM IST

google News

ಮೇಘ ಚಿತ್ರದ ಟ್ರೇಲರ್‌ ಬಿಡುಗಡೆ

    • Megha Movie Trailer: ಕೆಲ ತಿಂಗಳ ಹಿಂದಷ್ಟೇ ಕಿರಣ್‌ ರಾಜ್‌ ಅವರ  ಮಾಸ್‌ ಆಕ್ಷನ್‌ ಜಾನರ್‌ನ ರಾನಿ ಸಿನಿಮಾ ತೆರೆಗೆ ಬಂದಿತ್ತು. ಈಗ ಇನ್ನೊಂದು ಸಿನಿಮಾ ಜತೆಗೆ ಅವರ ಆಗಮನವಾಗುತ್ತಿದೆ. ಈ ಸಲ ಲವ್‌ಸ್ಟೋರಿಯನ್ನು ಹಿಡಿದು ಬಂದಿದ್ದಾರೆ. ಅದುವೇ ಮೇಘ. 
ಮೇಘ ಚಿತ್ರದ ಟ್ರೇಲರ್‌ ಬಿಡುಗಡೆ
ಮೇಘ ಚಿತ್ರದ ಟ್ರೇಲರ್‌ ಬಿಡುಗಡೆ

Megha Movie Trailer: ಕನ್ನಡತಿ ಸೀರಿಯಲ್‌ ಮುಗಿದ ಬಳಿಕ ನಟ ಕಿರಣ್‌ ರಾಜ್‌ ಸೀರಿಯಲ್‌ಗಳಿಂದ ದೂರವೇ ಉಳಿದಿದ್ದಾರೆ. ಆದರೆ, ನಟನೆಯಿಂದಲ್ಲ. ಕಿರುತೆರೆ ಬಿಟ್ಟು ಬೆಳ್ಳಿತೆರೆ ಮೇಲೆಯೇ ಗುರುತಿಸಿಕೊಳ್ಳಬೇಕು ಎಂದು ಹಠತೊಟ್ಟು, ಕೆಲ ತಿಂಗಳ ಹಿಂದಷ್ಟೇ ಅವರ ಮಾಸ್‌ ಆಕ್ಷನ್‌ ಜಾನರ್‌ನ ರಾನಿ ಸಿನಿಮಾ ತೆರೆಗೆ ಬಂದಿತ್ತು. ಈಗ ಇನ್ನೊಂದು ಸಿನಿಮಾ ಜತೆಗೆ ಅವರ ಆಗಮನವಾಗುತ್ತಿದೆ. ಈ ಸಲ ಲವ್‌ಸ್ಟೋರಿಯನ್ನು ಹಿಡಿದು ಬಂದಿದ್ದಾರೆ.

ಚರಣ್ ನಿರ್ದೇಶನದ, ಕಿರಣ್ ರಾಜ್ - ಕಾಜಲ್ ಕುಂದರ್ ನಾಯಕ - ನಾಯಕಿಯಾಗಿ ನಟಿಸಿರುವ ಸಿನಿಮಾ ಮೇಘ. ಕೃಷಿ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಸಿನಿಮಾವನ್ನು ಯತೀಶ್ ಹೆಚ್ ಆರ್ ನಿರ್ಮಿಸಿದ್ದು, ಇತ್ತೀಚೆಗಷ್ಟೇ 'ಮೇಘ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ತ್ರಿವಿಕ್ರಮ ಸಾಫಲ್ಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಹಾರೈಸಿದರು. ಜತೆಗೆ ಈ ಸಿನಿಮಾ ಇದೇ ನವೆಂಬರ್‌ 29ರಂದು ಬಿಡುಗಡೆ ಆಗಲಿದೆ ಎಂಬುದಾಗಿಯೂ ಹೇಳಿಕೊಂಡಿದೆ.

ನಮ್ಮ ಕೃಷಿ ಪ್ರೊಡಕ್ಷನ್ಸ್‌ನ ಚೊಚ್ಚಲ ನಿರ್ಮಾಣದ ಚಿತ್ರ ಮೇಘ. ಈ ಚಿತ್ರವನ್ನು ನೋಡಿದ‌ ಕೆಲವರ ಜೀವನದಲ್ಲಿ ಕೆಲವು ಬದಲಾವಣೆ ‌ಆಗಬಹುದು‌. ಪ್ರೀತಿಸುತ್ತಿಲ್ಲದವರು ಪ್ರೀತಿಸಲು ಆರಂಭಿಸಬಹುದು. ಸ್ನೇಹಿತರೊಂದಿಗೆ ಮಾತು ಬಿಟ್ಟವರು ಮಾತಾಡಲು‌ ಶುರು ಮಾಡಬಹುದು. ಹೀಗೆ ಸ್ನೇಹ, ಪ್ರೀತಿ ಹಾಗೂ ಬಾಂಧವ್ಯಗಳ ಸಮ್ಮಿಲನದ ನಮ್ಮ ಚಿತ್ರ ಇದೇ ನವೆಂಬರ್ 29ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಯತೀಶ್ ಹೆಚ್ ಆರ್.

ಇದೇ 29ಕ್ಕೆ ಸಿನಿಮಾ ತೆರೆಗೆ

ಮೇಘ ಚಿತ್ರ ಉತ್ತ‌ಮ ಮನರಂಜನೆಯೊಂದಿಗೆ ಕೂಡಿದ ಕೌಟುಂಬಿಕ ಚಿತ್ರ. ಈ ಪರಿಶುದ್ಧ ಪ್ರೇಮ‌ ಕಥಾನಕದ ವಿಶೇಷವೆಂದರೆ ನಾಯಕನ ಹೆಸರು ಮೇಘ.‌ ನಾಯಕಿಯ ಹೆಸರು ಮೇಘ. ಇಬ್ಬರ ಹೆಸರು ಮೇಘ ಏಕೆ? ಅದು ಚಿತ್ರ ನೋಡಿದಾಗ ತಿಳಿಯುವುದು. ನನ್ನ‌ ಸ್ನೇಹಿತನ ಜೀವನದಲ್ಲಿ ನಡೆದ ಘಟನೆ ಈ ಕಥೆಗೆ ಸ್ಪೂರ್ತಿ. ‌ಟೀಸರ್ ಹಾಗೂ ಹಾಡುಗಳ ಮೂಲಕ ಈಗಾಗಲೇ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರ ನವೆಂಬರ್ 29ರಂದು ತೆರೆಗೆ ಬರಲಿದೆ ಎಂದರು ನಿರ್ದೇಶಕ ಚರಣ್.

ಎಂಟು ಸಲ ಇದೇ ಕಥೆ ಕೇಳಿದ್ದೇನೆ..

"ನಾನು ಈ ಚಿತ್ರದ ಕಥೆಯನ್ನು ಒಟ್ಟು ಎಂಟು ಸರಿ ಕೇಳಿದ್ದೆ. ಆನಂತರ ನಟಿಸಲು ಒಪ್ಪಿಕೊಂಡಿದ್ದು ಎಂದು ಮಾತು ಆರಂಭಿಸಿದ ನಾಯಕ ಕಿರಣ್ ರಾಜ್, ಪ್ರೀತಿಯಲ್ಲಿ ಜೋಶ್ ಗಿಂತ ಅನುಭವ ಮುಖ್ಯ. ತಂದೆ ತಾಯಿ ಹಾಗೂ‌ ಮಕ್ಕಳಲ್ಲಿ ಉತ್ತಮ ಬಾಂಧವ್ಯ ಇದ್ದರೆ ಎಷ್ಟೋ ಅನಾಹುತಗಳನ್ನು ತಡೆಯಬಹುದು. ಈ ರೀತಿ ಹಲವು ವಿಷಯಗಳನ್ನು ಮೇಘ ಚಿತ್ರದಲ್ಲಿ ನಿರ್ದೇಶಕರು ಸುಂದರವಾಗಿ ನಿರೂಪಿಸಿದ್ದಾರೆ ಎಂದರು.

ಕಾಜಲ್‌ ಕುಂದರ್‌ ನಾಯಕಿ

ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ನನ್ನ ಹೆಸರು ಮೇಘ ಎಂದರು ನಾಯಕಿ ಕಾಜಲ್ ಕುಂದರ್. ಚಿತ್ರದ ಸಂಕಲನಕಾರ ಹಾಗೂ ಛಾಯಾಗ್ರಾಹಕರಾಗಿದ್ದಾರೆ ಗೌತಮ್ ನಾಯಕ್. ಬಾಲು ಅವರ ನೃತ್ಯ ನಿರ್ದೇಶನ, ಫ್ಲಾಂಕಿನ್ ರಾಕಿ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ವಿತರಕ ಮನೋಜ್ ಈ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ