Dr Rajkumar: ಡಾ ರಾಜ್‌ಕುಮಾರ್‌ ಸಹ ಎಲ್ಲರಂತೆ ಮನುಷ್ಯರೇ, ಅವರಿಗೂ ಕೆಲ ವೀಕ್‌ನೆಸ್‌ಗಳಿದ್ದವು; ಮುಖ್ಯಮಂತ್ರಿ ಚಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Dr Rajkumar: ಡಾ ರಾಜ್‌ಕುಮಾರ್‌ ಸಹ ಎಲ್ಲರಂತೆ ಮನುಷ್ಯರೇ, ಅವರಿಗೂ ಕೆಲ ವೀಕ್‌ನೆಸ್‌ಗಳಿದ್ದವು; ಮುಖ್ಯಮಂತ್ರಿ ಚಂದ್ರು

Dr Rajkumar: ಡಾ ರಾಜ್‌ಕುಮಾರ್‌ ಸಹ ಎಲ್ಲರಂತೆ ಮನುಷ್ಯರೇ, ಅವರಿಗೂ ಕೆಲ ವೀಕ್‌ನೆಸ್‌ಗಳಿದ್ದವು; ಮುಖ್ಯಮಂತ್ರಿ ಚಂದ್ರು

Mukhyamantri chandru on Dr Rajkumar: ಕನ್ನಡ ಚಿತ್ರೋದ್ಯಮ ಕಂಡ ಮೇರು ನಟ ಡಾ. ರಾಜ್‌ಕುಮಾರ್‌. ಕೇವಲ ನಟನೆಯಿಂದ ಮಾತ್ರವಲ್ಲದೆ, ತಮ್ಮ ವ್ಯಕ್ತಿತ್ವದಿಂದಲೂ ದೇವಮಾನವರಾದವರು ಅಣ್ಣಾವ್ರು. ಇದೀಗ ಇದೇ ರಾಜ್‌ಕುಮಾರ್‌ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಡಾ ರಾಜ್‌ಕುಮಾರ್‌ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹತ್ತಿರದಿಂದ ಕಂಡಿದ್ದೇನು?
ಡಾ ರಾಜ್‌ಕುಮಾರ್‌ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹತ್ತಿರದಿಂದ ಕಂಡಿದ್ದೇನು?

Dr Rajkumar: ಡಾ. ರಾಜ್‌ಕುಮಾರ್‌ ಎಂದರೆ ಅದೊಂದು ಹೆಸರು ಮಾತ್ರವಲ್ಲ, ಕನ್ನಡಿಗರ ಪಾಲಿಗೆ ಅದೊಂದು ಮೇರು ಪರ್ವತ. ನಟನೆಯಲ್ಲಿ ಮಾತ್ರವಲ್ಲದೆ, ತೆರೆಹಿಂದೆಯೂ ದೇವಮಾನವನಂತೆ ಬದುಕಿದವರು ಡಾ. ರಾಜ್‌ಕುಮಾರ್‌. ಬದುಕಿದ ಅಷ್ಟೂ ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯನ್ನು ಮೈಗಂಟಿಸಿಕೊಳ್ಳದೆ, ಇತರರಿಗೆ ಮಾದರಿಯಾಗುವಂತೆ ಬಾಳಿದವರು ಈ ನಟಸಾರ್ವಭೌಮ. ಆದರೆ, ತೆರೆಮೇಲೆ ರಾಜ್‌ಕುಮಾರ್‌ ಅವರನ್ನು ನೋಡಿದವರಿಗಿಂತ, ತೆರೆಹಿಂದಿನ ರಾಜ್‌ಕುಮಾರ್‌ ಜತೆಗೆ ಸಮಯ ಕಳೆದ ಒಡನಾಡಿಗಳಿಗೆ ಆ ಅಣ್ಣಾವ್ರೇ ಹೆಚ್ಚು ಇಷ್ಟ. ಈಗ ಡಾ. ರಾಜ್‌ಕುಮಾರ್‌ ತೆರೆ ಹಿಂದೆ ಹೇಗಿರುತ್ತಿದ್ದರು ಎಂಬ ಬಗ್ಗೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಈ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಹೀಗಿವೆ ಆ ಮಾತುಗಳು.

"ಆ ಕಾಲದಲ್ಲಿ ನಮ್ಮ ಕಣ್ಣ ಮುಂದಿನ ಒಂದಷ್ಟು ಉದಾಹರಣೆಗಳಿದ್ದವು. ಆವಾಗ ಕಲ್ಯಾಣ್‌ ಕುಮಾರ್‌, ಉದಯ್‌ ಕುಮಾರ್, ರಾಜ್‌ಕುಮಾರ್‌ ಇದ್ದರು. ಈ ಮೂವರೂ ಸರಿಸಾಟಿಯಾಗುವಂಥ ನಟರು. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ನಟಿಸುವ ಕಲಾವಿದರು. ಆದರೆ, ಎಲ್ಲೋ ಒಂದು ಕಡೆ ರಾಜ್‌ಕುಮಾರ್‌ ಅವರನ್ನು ಹೊರತುಪಡಿಸಿ ಇನ್ನುಳಿದವರು ಬೇಗ ಬೇಗ ಕಳೆದು ಹೋದರು. ಆ ಕಾಲಘಟ್ಟದಲ್ಲಿ ಅವರ ಸರಿ ಸಮಾನ ನಾಯಕ ನಟರೆಲ್ಲರೂ ಕಳೆದು ಹೋದರು. ರಾಜ್‌ಕುಮಾರ್‌ ಯಾಕೆ ಉಳಿದುಕೊಂಡರು ಎಂದು ನಾನು ಅವಲೋಕಿಸಿದಾಗ ಅಲ್ಲಿ ಸಾಕಷ್ಟು ಅಂಶಗಳು ಸಿಕ್ಕವು."

"ರಾಜ್‌ಕುಮಾರ್‌ ನಟಿಸುತ್ತಿದ್ದ ಕಾಲಘಟ್ಟದಲ್ಲಿ ಅವರ ಜತೆಗೆ ಉದಯ್‌ ಕುಮಾರ್, ಕಲ್ಯಾಣ್‌ ಕುಮಾರ್‌ ಸಹ ಇದ್ದರು. ಒಬ್ಬರಿಗಿಂತ ಒಬ್ಬರು ಭಿನ್ನ ವಿಭಿನ್ನ. ನಟನೆಯಲ್ಲಿಯೂ ಎಲ್ಲರೂ ಮೇಲ್ಪಂಕ್ತಿಯಲ್ಲಿದ್ದವರು. ಆದರೆ, ರಾಜ್‌ಕುಮಾರ್‌ ಅವರನ್ನು ಹೊರತಪಡಿಸಿ ಅವರೆಲ್ಲ ಬೇಗ ಕಳೆದು ಹೋದರು. ಆಗ ಅಲ್ಲಿ ಉಳಿದುಕೊಂಡಿದ್ದು ರಾಜ್‌ಕುಮಾರ್‌ ಮಾತ್ರ. ಅವರೇ ಯಾಕೆ ಗಟ್ಟಿಯಾಗಿ ನಿಂತರು ಎಂದು ನೋಡಿದರೆ, ಅಲ್ಲಿ ಹತ್ತಾರು ವಿಚಾರಗಳು ಸಿಗುತ್ತವೆ"

ಅಭಿನಯ ಎಂಬುದಿಲ್ಲಿ ವೃತ್ತಿ. ಅದನ್ನು ಮಾಡಲೇಬೇಕು. ಎಲ್ಲವೂ ನಮ್ಮ ಅದೃಷ್ಟದ ಮೇಲೆ ನಿರ್ಧರಿತವಲ್ಲ. ಅದನ್ನು ರಾಜ್‌ಕುಮಾರ್‌ ಚೆನ್ನಾಗಿಯೇ ನಿಭಾಯಿಸಿದರು. ನಟನೆಯಲ್ಲಿಯೂ ಮುಂದಿದ್ದರು. ವ್ಯಕ್ತಿತ್ವದಲ್ಲಿಯೂ ಅಷ್ಟೇ. ಹಾಗೆಂದ ಮಾತ್ರಕ್ಕೆ ಉಳಿದವರ ನಡವಳಿಕೆ ಚೆನ್ನಾಗಿಲ್ವಾ ಎಂದಲ್ಲ. ಎಲ್ಲರೂ ಒಳ್ಳೆಯವರೇ. ಆದರೆ, ಕೆಲವೊಮ್ಮೆ ನಮ್ಮತನವನ್ನು ಬಿಟ್ಟು, ನಮ್ಮನ್ನು ಪ್ರೀತಿಸುವವರಿಗಾಗಿ ಬದಲಾಗಬೇಕಾಗುತ್ತದೆ. ಜನರಿಗಾಗಿ ಬದುಕಿದವರು ಅಣ್ಣಾವ್ರು" ಎಂದಿದ್ದಾರೆ ಮುಖ್ಯಮಂತ್ರಿ ಚಂದ್ರು.

ಎಲ್ಲರಿಗಿಂತ ರಾಜ್‌ಕುಮಾರ್‌ ಏಕೆ ವಿಭಿನ್ನ ಗೊತ್ತಾ?

"ರಾಜ್‌ಕುಮಾರ್‌ ಬದುಕಿದ ರೀತಿಯೇ ವಿಭಿನ್ನ. ಕಲ್ಯಾಣ್‌ ಕುಮಾರ್‌ ಅವರು ತಮ್ಮ ಚಟ ಚಪಲಗಳನ್ನು ಬಹಿರಂಗವಾಗಿಯೇ ಇಟ್ಟುಕೊಂಡಿದ್ದರು. ಎದುರಿನವರ ಜತೆ ಮಾತನಾಡುವಾಗ, ಕಲ್ಯಾಣ್‌ ಕುಮಾರ್‌, ಉದಯ್‌ ಕುಮಾರ್‌ ಸಿಗರೇಟ್‌ ಸೇದುತ್ತಲೇ ಇರುತ್ತಿದ್ದರು. ಅದು ಗೌರವ ಅಲ್ಲ. ಧಿಮಾಕು, ಶೋಕಿ ಇವೂ ಕಾಣಿಸುತ್ತಿದ್ದವು. ಅಣ್ಣಾವ್ರು ಇತರರಿಗೆ ನೀಡುವ ಗೌರವ ಹೇಗಿರುತ್ತಿತ್ತು, ಇನ್ನುಳಿದ ಹೀರೋಗಳು ಕೊಡುವ ಗೌರವ ಹೇಗಿರುತ್ತಿತ್ತು ಎಂಬುದು ಎಲ್ಲರಿಗೂ ಕಾಣುತ್ತಿತ್ತು. ಮಾತನಾಡುತ್ತಿದ್ದರು. ಮತ್ತೊಂದು ಕಡೆ ಅಣ್ಣಾವ್ರು ಮಾತ್ರ ಶುಭ್ರ ದಿರಿಸಿನಂತೆ ಸ್ವಚ್ಛವಾಗಿಯೇ ಉಳಿಯುತ್ತ ಹೋದರು"

ರಾಜ್‌ಕುಮಾರ್‌ಗೂ ವೀಕ್‌ನೆಸ್‌ಗಳಿದ್ದವು..

"ಮನುಷ್ಯ ಅಂದ ಮೇಲೆ ಅಲ್ಲಿ ಸಣ್ಣ ಪುಟ್ಟ ವೀಕ್‌ನೆಸ್‌ಗಳು ಇರುವುದು ಸಾಮಾನ್ಯ ಸಂಗತಿ. ನಾವ್ಯಾರೂ ದೇವರಲ್ಲ. ಒಂದು ವೇಳೆ ಹಾಗೇನಾದ್ರೂ ಆಗಿದ್ದರೆ, ನಾವೂ ದೇವರಾಗಿಬಿಡುತಿದ್ವಿ. ಅದೇ ರೀತಿ ಅಣ್ಣಾವ್ರಿಗೂ ಒಂದಷ್ಟು ವೀಕ್‌ನೆಸ್‌ಗಳಿದ್ದವು. ಊಟದ ವಿಚಾರದಲ್ಲಿ ಅವರಿಗೂ ಚಟ ಚಪಲಗಳಿದ್ದವು. ಹೇಳಿಕೇಳಿ ಅವ್ರು ಅಪಾರ ಮಾಂಸಪ್ರಿಯರು. ಆದರೆ, ವೃತ್ತಿ ಜೀವನದಲ್ಲಿ ಪೌರಾಣಿಕ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದಂತೆ, ಎಲ್ಲರ ಕಣ್ಣಿಗೆ ರಾಜ್‌ಕುಮಾರ್‌ ದೇವರಂತೆ ಕಂಡರು. ಆಗ, ಒಂದು ನಿರ್ಧಾರಕ್ಕೆ ಬಂದರು. ಯಾರಿಗೂ ಗೊತ್ತಿಲ್ಲದಂತೆ ತಮ್ಮ ಬಾಯಿ ರುಚಿಯ ಚಟ ನೀಗಿಸಿಕೊಳ್ಳುತ್ತಿದ್ದರು.

ಒಂದೊಂದನ್ನೆ ತ್ಯಜಿಸುತ್ತ ಹೋದರು..

ಆವತ್ತು ಅವರು ನಾನ್ಯಾಕೆ ಕದ್ದು ಚಟ ಮಾಡಬೇಕು ಎಂದು ಹೇಳಿದ್ದರೆ, ಆ ಸ್ಥಾನದಲ್ಲಿ ಇರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಲಕ್ಷಾಂತರ ಜನ ಮೆಚ್ಚೋವಾಗ, ಈ ಒಂದು ಚಟ ಅವರಿಗಾಗಿ ಬಲಿ ಕೊಟ್ಟರೆ ಏನೂ ಆಗಲ್ಲ ಎಂದು, ನಿಧಾನಕ್ಕೆ ಒಂದೊಂದನ್ನೇ ತ್ಯಜಿಸುತ್ತ ಬಂದರು. ಯೋಗದತ್ತ ಮುಖ ಮಾಡಿದರು. ಶುಭ್ರ ದಿರಿಸನ್ನೇ ಬ್ರಾಂಡ್ ಆಗಿ ಮಾಡಿಕೊಂಡರು" ಎಂದು ಹೇಳಿಕೊಂಡಿದ್ದಾರೆ ಮುಖ್ಯಮಂತ್ರಿ ಚಂದ್ರು.

Whats_app_banner