logo
ಕನ್ನಡ ಸುದ್ದಿ  /  ಮನರಂಜನೆ  /  ರಾಮ ಮಾಂಸಾಹಾರಿ ಸಂಭಾಷಣೆ, ನೆಟ್‌ಫ್ಲಿಕ್ಸ್‌ಗೂ ಬೇಡವಾಯ್ತು ನಯನತಾರಾ ‘ಅನ್ನಪೂರ್ಣಿ’! ಚಿತ್ರವನ್ನೇ ಡಿಲೀಟ್‌ ಮಾಡಿದ ಒಟಿಟಿ ಸಂಸ್ಥೆ

ರಾಮ ಮಾಂಸಾಹಾರಿ ಸಂಭಾಷಣೆ, ನೆಟ್‌ಫ್ಲಿಕ್ಸ್‌ಗೂ ಬೇಡವಾಯ್ತು ನಯನತಾರಾ ‘ಅನ್ನಪೂರ್ಣಿ’! ಚಿತ್ರವನ್ನೇ ಡಿಲೀಟ್‌ ಮಾಡಿದ ಒಟಿಟಿ ಸಂಸ್ಥೆ

Jan 11, 2024 04:56 PM IST

google News

ರಾಮ ಮಾಂಸಾಹಾರಿ ಸಂಭಾಷಣೆ; ನಯನತಾರಾ ‘ಅನ್ನಪೂರ್ಣಿ’ ಚಿತ್ರವನ್ನೇ ಡಿಲೀಟ್‌ ಮಾಡಿದ ನೆಟ್‌ಫ್ಲಿಕ್ಸ್‌

    • ನಯನತಾರಾ ನಟನೆಯ ಅನ್ನಪೂರ್ಣಿ ಒಟಿಟಿಯಲ್ಲಿ ಬಿಡುಗಡೆಯಾದ ಬಳಿಕ ಚಿತ್ರದಲ್ಲಿ ಬಳಸಲಾದ ಡೈಲಾಗ್‌ ಮೂಲಕವೇ ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್‌ನಿಂದಲೇ ಚಿತ್ರವನ್ನು ಡಿಲೀಟ್‌ ಮಾಡಲಾಗಿದೆ.  
ರಾಮ ಮಾಂಸಾಹಾರಿ ಸಂಭಾಷಣೆ; ನಯನತಾರಾ ‘ಅನ್ನಪೂರ್ಣಿ’ ಚಿತ್ರವನ್ನೇ ಡಿಲೀಟ್‌ ಮಾಡಿದ ನೆಟ್‌ಫ್ಲಿಕ್ಸ್‌
ರಾಮ ಮಾಂಸಾಹಾರಿ ಸಂಭಾಷಣೆ; ನಯನತಾರಾ ‘ಅನ್ನಪೂರ್ಣಿ’ ಚಿತ್ರವನ್ನೇ ಡಿಲೀಟ್‌ ಮಾಡಿದ ನೆಟ್‌ಫ್ಲಿಕ್ಸ್‌

Annapoorani Controversy: ಸೌತ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ನಟನೆಯ ಅನ್ನಪೂರ್ಣಿ ಸಿನಿಮಾ ಇತ್ತೀಚಿನ ಕೆಲ ದಿನಗಳಿಂದ ವಿವಾದಗಳ ಮೂಲಕವೇ ಸದ್ದು ಮಾಡುತ್ತಿದೆ. ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆಯಾಗಿದ್ದೇ ತಡ, ಚಿತ್ರದಲ್ಲಿನ ಸಂಭಾಷಣೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಆ ವಿವಾದ ಮಿತಿ ಮೀರಿದ ಹಿನ್ನೆಲೆಯಲ್ಲಿ, ನಯನತಾರಾ ನಟನೆಯ ಅನ್ನಪೂರ್ಣಿ ಚಿತ್ರವನ್ನೇ ಡಿಲೀಟ್‌ ಮಾಡಿದೆ ನೆಟ್‌ಫ್ಲಿಕ್ಸ್‌.

ನೆಟ್‌ಫ್ಲಿಕ್ಸ್‌ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ಅನ್ನಪೂರ್ಣಿ ಸಿನಿಮಾ ಹೈಡ್‌ ಮಾಡಲಾಗಿದೆ. ಚಿತ್ರದಲ್ಲಿ ಶ್ರೀರಾಮನ ಬಗ್ಗೆ ಆಕ್ಷೇಪಾರ್ಹ ಸಂಭಾಷಣೆಗಳನ್ನು ಅಳವಡಿಸಲಾಗಿದೆ. ಇದು ಅನೇಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿ, ಸೋಷಿಯಲ್‌ ಮೀಡಿಯಾದಲ್ಲಿ ವಿರೋಧವ್ಯ ವ್ಯಕ್ತವಾಗಿತ್ತು. ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನನ್ನು 'ಮಾಂಸ ಭಕ್ಷಕ' ಎಂದು ಬಣ್ಣಿಸಲಾಗಿದೆ. ಈ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೆಟ್‌ಫ್ಲಿಕ್ಸ್‌ ಈ ನಿರ್ಧಾರಕ್ಕೆ ಬಂದಿದೆ.

ಸೋಷಿಯಲ್‌ ಮೀಡಿಯಾದಲ್ಲಿ ರಾಮನ ಕುರಿತ ಹೇಳಿಕೆ ನೀಡಿದ ಅನ್ನಪೂರ್ಣಿ ಸಿನಿಮಾವನ್ನು ಈ ಕೂಡಲೇ ಡಿಲಿಟ್‌ ಮಾಡಬೇಕು, ಇಲ್ಲವಾದರೆ ಕಾನೂನು ರೀತಿ ಕ್ರಮ ಎದುರಿಸಬೇಕಾಗಬಹುದು ಎಂದು ಬೆದರಿಕೆಗಳು ಬಂದಿದ್ದವು. ಅಷ್ಟೇ ಅಲ್ಲ ಬಾಯ್ಕಾಟ್‌ ನೆಟ್‌ಫ್ಲಿಕ್ಸ್ ಎಂಬ ಅಭಿಯಾನಕ್ಕೂ ಕರೆ ನೀಡಿದ್ದರು. ಇದನ್ನು ಗಮನಿಸಿದ ಒಟಿಟಿ ಸಂಸ್ಥೆ, ಹಿಂದೂಗಳ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ನಯನತಾರಾ ಅವರ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ಅಳಿಸಿದೆ.

ಅಷ್ಟಕ್ಕೂ ಆ ಸಂಭಾಷಣೆ ಏನು?

ನಿಲೇಶ್‌ ಕೃಷ್ಣ ನಿರ್ದೇಶನದಲ್ಲಿ ಕಳೆದ ವರ್ಷದ ಡಿಸೆಂಬರ್‌ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಅನ್ನಪೂರ್ಣಿ ಸಿನಿಮಾ, ಆ ಸಮಯದಲ್ಲಿ ಈ ವಿಚಾರಕ್ಕೆ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದ್ದಂತೆ, ಪರ ವಿರೋಧ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಅಷ್ಟಕ್ಕೂ ವಿರೋಧಕ್ಕೆ ಕಾರಣವಾದ ಸಂಭಾಷಣೆಯಲ್ಲೇನಿದೆ. "ವಾಲ್ಮಿಕಿಯೇ ರಾಮಯಣದಲ್ಲಿ ಹೇಳಿದಂತೆ, ವನವಾಸದಲ್ಲಿದ್ದಾಗ ಹಸಿವಾಗುತ್ತದೆ, ಆ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಪ್ರಾಣಿನ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ, ಅವರು ಮಾಂಸಾಹಾರ ಸೇವಿಸಿದ್ದಾರೆ ಎಂದು. ರಾಮ ವಿಷ್ಣುವಿನ ಅವತಾರವಲ್ಲವೇ?" ಎಂಬ ಸಂಭಾಷಣೆ ಇದೆ.

ಹಲವು ಕಡೆ ದೂರು ದಾಖಲು

ಸಿನಿಮಾದಲ್ಲಿ ಶ್ರೀರಾಮನ ಬಗ್ಗೆ ಕೆಟ್ಟದಾಗಿ ಬಿಂಬಿಸಿರುವ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲೇ, ದೇಶದ ಹಲವು ಕಡೆಗಳಲ್ಲಿ ಸಿನಿಮಾ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕರ ವಿರುದ್ಧ ದೂರು ದಾಖಲಾಗಿವೆ. ಈ ಚಿತ್ರದಲ್ಲಿ ಬ್ರಾಹ್ಮಣ ಮನೆತನದ ಹುಡುಗಿ, ಮುಸ್ಲಿಂ ಯುವಕನ ಜತೆಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಇದಕ್ಕೂ ವಿರೋಧ ವ್ಯಕ್ತವಾಗಿದೆ. ಈ ಕುರಿತೂ ನಿರ್ಮಾಣ ಸಂಸ್ಥೆ ಜೀ ವಿರುದ್ಧವೂ ದೂರು ನೀಡಿದ್ದಾರೆ. ಇತ್ತ ಇದೇ ವಿಚಾರಕ್ಕೆ ಸಂಬಂಧಿಸಿದಂತೆ, ವಿಶ್ವ ಹಿಂದೂ ಪರಿಷತ್‌ಗೆ ಪತ್ರ ಬರೆದ ಜೀ, ಶೀಘ್ರದಲ್ಲಿ ಆ ದೃಶ್ಯವನ್ನು ಎಡಿಟ್‌ ಮಾಡಲಾಗುವುದು. ಅಲ್ಲಿಯವರೆಗೂ ವೀಕ್ಷಣೆಗೆ ಸಿನಿಮಾ ಅಲಭ್ಯವಾಗಿರಲಿದೆ ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ