ಕನ್ನಡ ಸುದ್ದಿ  /  ಮನರಂಜನೆ  /  ಲಾಲ್‌ ಸಲಾಮ್‌ ಸಿನಿಮಾ ಹಾಡಿಗೆ ದಿವಂಗತ ಗಾಯಕರ ಧ್ವನಿಯ ಮರುಸೃಷ್ಟಿ; ಅನುಮತಿ ಕುರಿತು ಸ್ಪಷ್ಟನೆ ನೀಡಿದ ಎಆರ್‌ ರೆಹಮಾನ್‌

ಲಾಲ್‌ ಸಲಾಮ್‌ ಸಿನಿಮಾ ಹಾಡಿಗೆ ದಿವಂಗತ ಗಾಯಕರ ಧ್ವನಿಯ ಮರುಸೃಷ್ಟಿ; ಅನುಮತಿ ಕುರಿತು ಸ್ಪಷ್ಟನೆ ನೀಡಿದ ಎಆರ್‌ ರೆಹಮಾನ್‌

Praveen Chandra B HT Kannada

Jan 30, 2024 03:17 PM IST

ಲಾಲ್‌ ಸಲಾಮ್‌ ಸಿನಿಮಾ ಹಾಡಿಗೆ ದಿವಂಗತ ಗಾಯಕರ ಧ್ವನಿಯ ಮರುಸೃಷ್ಟಿ

    • ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾದ ಹಾಡಿಗೆ ಎಆರ್‌ ರೆಹಮಾನ್‌ ಅವರು ದಿವಂಗತ ಗಾಯಕರಾದ ಬಾಂಬಾ ಬಕ್ಯಾ (Bamba Bakya) ಮತ್ತು ಶಾಹುಲ್ ಹಮೀದ್ (Shahul Hameed) ಧ್ವನಿಯನ್ನು ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಮರುಸೃಷ್ಟಿಸಿ ಬಳಸಿದ್ದಾರೆ.
ಲಾಲ್‌ ಸಲಾಮ್‌ ಸಿನಿಮಾ ಹಾಡಿಗೆ ದಿವಂಗತ ಗಾಯಕರ ಧ್ವನಿಯ ಮರುಸೃಷ್ಟಿ
ಲಾಲ್‌ ಸಲಾಮ್‌ ಸಿನಿಮಾ ಹಾಡಿಗೆ ದಿವಂಗತ ಗಾಯಕರ ಧ್ವನಿಯ ಮರುಸೃಷ್ಟಿ

ರಜನಿಕಾಂತ್ ನಟನೆಯ ಲಾಲ್ ಸಲಾಮ್ ಚಿತ್ರದಲ್ಲಿ ತಿಮಿರಿ ಯೆಜುಡಾ ಎಂಬ ಹಾಡಿಗಾಗಿ ಇಬ್ಬರು ದಿವಂಗತ ಗಾಯಕರಾದ ಬಾಂಬಾ ಬಕ್ಯಾ ಮತ್ತು ಶಾಹುಲ್ ಹಮೀದ್ ಅವರ ಧ್ವನಿಯನ್ನು ಮರುಸೃಷ್ಟಿಸಲಾಗಿದೆ. ಆರ್ಟಿಫಿಶೀಯಲ್‌ ಇಂಟಲಿಜೆನ್ಸ್‌ (ಎಐ) ಮೂಲಕ ದಿವಂಗತ ಗಾಯಕರ ಧ್ವನಿ ಮರುಸೃಷ್ಟಿಸಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಎಆರ್‌ ರೆಹಮಾನ್‌ ಅವರು ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ. ಪ್ರಸಿದ್ಧ ಗಾಯಕರ ಕುಟುಂಬಗಳಿಂದ ಈ ರೀತಿ ಧ್ವನಿ ಬಳಸಲು ಅನುಮತಿ ಪಡೆಯಲಾಗಿದೆ ಎಂದು ಎಆರ್‌ ರೆಹಮಾನ್‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

JioCinema: ಡೆಮನ್ ಸ್ಲೇಯರ್ ಸೀಸನ್‌ 4 ಸೇರಿ ಜಿಯೋ ಸಿನಿಮಾದಲ್ಲಿ ಆನಿಮೇ ಷೋಗಳ ಹಬ್ಬ, ಮೇ 12ರಿಂದ ತರಹೇವಾರಿ ಕಂಟೆಂಟ್‌ ವೀಕ್ಷಣೆಗೆ ಲಭ್ಯ

ಅಂಜನಿಪುತ್ರ, ಪವರ್‌ ಬಳಿಕ ಉಪೇಂದ್ರ ನಟನೆಯ ಈ ಕ್ಲಾಸಿಕ್‌ ಚಿತ್ರಕ್ಕೂ ಸಿಕ್ತು ಮರು ಬಿಡುಗಡೆ ಭಾಗ್ಯ

ನೇರವಾಗಿ ಒಟಿಟಿಗೆ ಬಂದ ಎಂಥಾ ಕಥೆ ಮಾರಾಯ ಸಿನಿಮಾ; ಇದು ಕಾಡಿನ ನೆಂಟರು ಕಥಾಸಂಕಲನ ಆಧರಿತ ಚಿತ್ರ

ದರ್ಶನ್‌ ಹೀರೋ ಆಗ್ತಾನೆ ಅಂದಾಗ ನಾವ್ಯಾರೂ ನಿದ್ದೆನೇ ಮಾಡಿರಲಿಲ್ಲ, ಎಲ್ರಿಗೂ ಟೆನ್ಷನ್! ಆ ಕ್ಷಣ ನೆನೆದ ದಿನಕರ್‌ ತೂಗುದೀಪ

ದಿವಂಗತ ಗಾಯಕರ ಧ್ವನಿಯನ್ನು ಮರುಸೃಷ್ಟಿಸಲು ಎಐಯನ್ನು ಹೇಗೆ ಬಳಸಲಾಗಿದೆ ಎಂದು ಮ್ಯೂಸಿಕ್‌ ಸೌತ್‌ ಟ್ವೀಟ್‌ ಮಾಡಿತ್ತು. ಇದನ್ನು ಎಆರ್‌ ರೆಹಮಾನ್‌ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದರು.

"ನಾವು ಅವರ ಧ್ವನಿ ಬಳಸಲು ಕುಟುಂಬಗಳಿಂದ ಅನುಮತಿ ಪಡೆದಿದ್ದೇವೆ. ಅವರ ಧ್ವನಿ ಕ್ರಮಾವಳಿ ಬಳಸಿದ್ದಕ್ಕೆ ಸೂಕ್ತ ಸಂಭಾವನೆಯನ್ನು ಕಳುಹಿಸಿದ್ದೇವೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಅದು ಬೆದರಿಕೆ ಅಥವಾ ಉಪದ್ರವಲ್ಲ" ಎಂದು ಎಆರ್‌ ರೆಹಮಾನ್‌ ಟ್ವೀಟ್‌ ಮಾಡಿದ್ದಾರೆ. ರೆಸ್ಪೆಕ್ಟ್‌ ಮತ್ತು ನಾಸ್ಟಾಲ್ಜಿಯಾ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ಈ ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿವಂಗತ ಗಾಯಕ ಬಾಂಬಾ ಬಕ್ಯಾ ಅವರು ರೆಹಮಾನ್ ಅವರೊಂದಿಗೆ ಅನೇಕ ಹಾಡುಗಳಲ್ಲಿ ಸಹ ಗಾಯಕರಾಗಿದ್ದರು. ಇವರು 2022 ರಲ್ಲಿ ಹೃದಯ ಸ್ತಂಭನದಿಂದಾಗಿ ನಿಧನರಾದರು. ಶಾಹುಲ್ ಹಮೀದ್ 1997ರಲ್ಲಿ ಚೆನ್ನೈ ಬಳಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು.

ನೆಟ್ಟಿಗರ ಪ್ರತಿಕ್ರಿಯೆ

ರೆಹಮಾನ್‌ ಸ್ಪಷ್ಟೀಕರಣಕ್ಕೆ ಅಭಿಮಾನಿಗಳು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ಇಂಟರ್‌ನೆಟ್‌ನಲ್ಲಿ ಈ ವಿಷಯದ ಕುರಿತಂತೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿರಬಹುದು. ಆದರೆ, ಇದನ್ನು ಸಾಧ್ಯವಾಗಿಸಿರುವ ಎಆರ್‌ ರೆಹಮಾನ್‌ಗೆ ಅಭಿನಂದನೆ. ನಮ್ಮೊಂದಿಗಿಲ್ಲದ ಧ್ವನಿಯನ್ನು ಕೇಳುವುದು ಸ್ವತಃ ಅವರ ಕುಟುಂಬಕ್ಕೂ ಉತ್ತಮ ಉಡುಗೊರೆ. ತಂತ್ರಜ್ಞಾನಕ್ಕೆ ಧನ್ಯವಾದಗಳು. ಭವಿಷ್ಯದಲ್ಲಿ ಸ್ವರ್ಣಲತಾ ಧ್ವನಿಯನ್ನು ಕೇಳಲು ಬಯಸುವೆ" ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಲಾಲ್‌ ಸಲಾಮ್‌ ಬಿಡುಗಡೆ ದಿನಾಂಕ

ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತು ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಜನಿಕಾಂತ್‌ ಹುಟ್ಟುಹಬ್ಬದಂದು ಲಾಲ್‌ ಸಲಾಮ್‌ ಸಿನಿಮಾದಲ್ಲಿ ತಲೈವಾನ ಪಾತ್ರದ ಕುರಿತು ಮಾಹಿತಿ ನೀಡಲಾಗಿತ್ತು. ಲಾಲ್‌ ಸಲಾಮ್‌ನಲ್ಲಿ ರಜನಿಕಾಂತ್‌ ಅವರರು ಮೊಯ್ದೀನ್‌ ಭಾಯ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ತನ್ನ ವಿನೂತನ ಶೈಲಿಯ ಮೂಲಕ ರಜನಿಕಾಂತ್‌ ಎಂಟ್ರಿ ನೀಡಿ, ಸ್ಲೋ ಮೋಷನ್‌ನಲ್ಲಿ ರೌಡಿಗಳನ್ನು ಅಟ್ಟಾಡಿಸೋ ಸೀನ್‌ ಈ ಟೀಸರ್‌ನಲ್ಲಿತ್ತು. ಈ ಟೀಸರ್‌ನಲ್ಲಿ ಜಲಾಲಿ ಜಲಾಲ್‌ ಟ್ರ್ಯಾಕ್‌ ಹಾಡಿನ ಝಲಕ್‌ ಕೂಡ ಇತ್ತು. ಇದು ಎಆರ್‌ ರೆಹಮಾನ್‌ ಸಂಗೀತ ನಿರ್ದೇಶದನ ಟ್ರ್ಯಾಕ್‌ ಆಗಿದೆ.

ನವೆಂಬರ್‌ 12ರಂದು ಲಾಲ್‌ ಸಲಾಮ್‌ ಸಿನಿಮಾದ ಮೊದಲ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ತಿಂಗಳಿಗೊಮ್ಮೆ ಈ ರೀತಿ ಚಿತ್ರತಂಡ ಅಪ್‌ಡೇಟ್‌ ನೀಡುತ್ತಿತ್ತು. ಈ ಟೀಸರ್‌ನಲ್ಲಿ ರೋಚಕ ಕ್ರಿಕೆಟ್‌ ಪಂದ್ಯಾಟದ ದೃಶ್ಯ ತೋರಿಸಲಾಗಿತ್ತು. ಲಾಲ್‌ ಸಲಾಮ್‌ ಸಿನಿಮಾದಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿದದ್ದಾರೆ. ಐಶ್ವರ್ಯಾ ರಜನಿಕಾಂತ್‌ ಅವರು ಈ ಹಿಂದೆ ವೈ ರಾಜಾ ವೈ ಎಂಬ ತಮಿಳು ಸಾಹಸ ರೋಚಕ ಸಿನಿಮಾ ನಿರ್ದೇಶನ ಮಾಡಿದ್ದಾರು. ಈ ಸಿನಿಮಾದಲ್ಲಿ ಧನುಷ್‌ ನಾಯಕ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ