logo
ಕನ್ನಡ ಸುದ್ದಿ  /  ಮನರಂಜನೆ  /  ಅವಳು ನನ್ನ ಮಗಳ ವಯಸ್ಸಿನವಳು, ಅವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ವಿಜಯ್‌ ಸೇತುಪತಿ; ಯಾರು ಆ ಕರ್ನಾಟಕ ಮೂಲದ ನಟಿ?

ಅವಳು ನನ್ನ ಮಗಳ ವಯಸ್ಸಿನವಳು, ಅವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ವಿಜಯ್‌ ಸೇತುಪತಿ; ಯಾರು ಆ ಕರ್ನಾಟಕ ಮೂಲದ ನಟಿ?

Sep 24, 2023 11:19 AM IST

google News

ಅವಳು ನನ್ನ ಮಗಳ ವಯಸ್ಸಿನವಳು, ಅವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ವಿಜಯ್‌ ಸೇತುಪತಿ; ಯಾರು ಆ ಕರ್ನಾಟಕ ಮೂಲದ ನಟಿ?

  • ಮಗಳ ವಯಸ್ಸಿನವಳ ಜತೆಗೆ ಅದ್ಹೇಗೆ ರೊಮ್ಯಾನ್ಸ್‌ ಮಾಡಲು ಸಾಧ್ಯ. ಏಕೆಂದರೆ, ನನಗೂ ಆಕೆಯ ವಯಸ್ಸಿನ ಮಗನಿದ್ದಾನೆ. ಹಾಗಾಗಿ ಆಕೆ ನನ್ನ ಸಿನಿಮಾಕ್ಕೆ ಬೇಡ ಎಂದು ನಾನೇ ಹೇಳಿಕೊಂಡೆ- ವಿಜಯ್‌ ಸೇತುಪತಿ. 

ಅವಳು ನನ್ನ ಮಗಳ ವಯಸ್ಸಿನವಳು, ಅವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ವಿಜಯ್‌ ಸೇತುಪತಿ; ಯಾರು ಆ ಕರ್ನಾಟಕ ಮೂಲದ ನಟಿ?
ಅವಳು ನನ್ನ ಮಗಳ ವಯಸ್ಸಿನವಳು, ಅವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ವಿಜಯ್‌ ಸೇತುಪತಿ; ಯಾರು ಆ ಕರ್ನಾಟಕ ಮೂಲದ ನಟಿ?

Vijay Sethupathi: ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸೌತ್‌ನಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ಈ ನಟನೀಗ ಉತ್ತರ ಭಾರತದ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಹೀಗಿರುವಾಗಲೇ ಇದೇ ನಟ ತಮ್ಮ ಹೊಸ ಸಿನಿಮಾವೊಂದರ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನನ್ನ ಸಿನಿಮಾಕ್ಕೆ ಆ ನಟಿ ಬೇಡ ಎಂದಿದ್ದಾರೆ. ಹೌದು, ನಟ ವಿಜಯ್‌ ಸೇತುಪತಿ, ಕರ್ನಾಟಕ ಮೂಲದ ನಟಿಯ ಜತೆಗೆ ರೊಮ್ಯಾನ್ಸ್‌ ಮಾಡುವುದು ಅಸಾಧ್ಯ ಎಂದಿದ್ದಾರೆ. ಅದಕ್ಕೆ ಉತ್ತರವನ್ನೂ ನೀಡಿದ್ದಾರೆ.

ಯಾರು ಆ ನಟಿ? ಸೇತುಪತಿ ಹೀಗೆ ಹೇಳಲು ಕಾರಣ ಏನಿರಬಹುದು? ಟಾಲಿವುಡ್‌ಗೆ ಉಪ್ಪೇನ ಚಿತ್ರದ ಮೂಲಕ ನಟಿ ಕೃತಿ ಶೆಟ್ಟಿ ಎಂಟ್ರಿಕೊಟ್ಟಿದ್ದು ಗೊತ್ತಿರುವ ವಿಚಾರ. ಮೊದಲ ಸಿನಿಮಾದ ಮೂಲಕವೇ ದೊಡ್ಡ ಹೆಸರನ್ನೂ ಪಡೆದುಕೊಂಡಿದ್ದರು ಈ ನಟಿ. ಅದಾದ ಬಳಿಕ ಬ್ಯಾಕ್‌ ಟು ಬ್ಯಾಕ್‌ ಮೂರು ಹಿಟ್‌ ಸಿನಿಮಾಗಳನ್ನು ನೀಡಿದ್ದರು. ಆಮೇಲೆ ಕೆಲವು ಪ್ಲಾಪ್‌ ಆದರೂ, ಟಾಲಿವುಡ್‌ನಲ್ಲಿ ಕೃತಿಗೆ ಬೇಡಿಕೆ ಇದೆ. ಹೀಗಿರುವಾಗಲೇ ತಮಿಳಿಗೂ ಹೊರಟಿದ್ದ ಕೃತಿಗೆ ಇದೀಗ ಆರಂಭಿಕ ವಿಘ್ನ ಎದುರಾಗಿದೆ.

ಹೌದು, ವಿಜಯ್‌ ಸೇತುಪತಿ ಸಿನಿಮಾಕ್ಕೆ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು ಕೃತಿ. ಆ ಖುಷಿಯಲ್ಲಿಯೇ ಸಂಭ್ರಮಿಸಿದ್ದರು. ಆದರೆ, ಇದೀಗ ಅದೇ ಕೃತಿ ಜತೆ ನಾನು ನಟಿಸಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ವಿಜಯ್ ಸೇತುಪತಿ.‌ ಕಾರಣ ಇಷ್ಟೇ, ಕೃತಿಯ ಮೊದಲ ಸಿನಿಮಾ ಉಪ್ಪೇನದಲ್ಲಿ ಅಪ್ಪ ಮಗಳಾಗಿ ವಿಜಯ್‌ ಸೇತುಪತಿ ಮತ್ತು ಕೃತಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದ ಪರಿಣಾಮವೇ ಇದೀಗ ವಿಜಯ್‌ ಆಕೆ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದಿದ್ದಾರೆ.

ಉಪ್ಪೇನ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ನನ್ನನ್ನು ನಿನ್ನ ತಂದೆ ಎಂದು ಭಾವಿಸಿಕೊಂಡು ನಟಿಸು ಎಂದು ಕೃತಿಗೆ ವಿಜಯ್‌ ಸಲಹೆ ನೀಡಿದ್ದರು. ಇದೀಗ ಅದೇ ನಟಿ ಜತೆಗೆ ನಾನು ಹೇಗೆ ರೊಮ್ಯಾನ್ಸ್‌ ಮಾಡಲಿ ಎಂದು ಕೃತಿ ಜತೆ ನಟಿಸಲಾರೆ ಎಂದು ಹೇಳಿಕೊಂಡಿದ್ದಾರೆ. ನಟನ ಈ ನಿರ್ಧಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ವಿಜಯ್‌ ಹೇಳಿದ್ದೇನು?

"ನಾನು ತೆಲುಗಿನ ಉಪ್ಪೇನ ಸಿನಿಮಾದಲ್ಲಿ ಕೃತಿಯ ತಂದೆಯಾಗಿ ನಟಿಸಿದ್ದೇನೆ. ಅದಾದ ಬಳಿಕ ನಾನು ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡೆ. ಆ ಚಿತ್ರಕ್ಕೆ ಕೃತಿ ಶೆಟ್ಟಿಯೇ ಸೂಕ್ತ ಎಂದು ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿತ್ತು. ನಾಯಕಿಯ ಫೋಟೋ ನೋಡುತ್ತಿದ್ದಂತೆ, ನಾನು ತೆಲುಗು ಚಿತ್ರದಲ್ಲಿ ಕೃತಿಯ ತಂದೆಯ ಪಾತ್ರ ಮಾಡಿದ್ದೇನೆ. ಇದೀಗ ಈಕೆ ಜತೆಗೆ ನಾಯಕಿಯಾಗಿ ನಾನು ನಟಿಸಲಾರೆ. ರೊಮ್ಯಾನ್ಸ್‌ ಮಾಡಲಾರೆ. ಹಾಗಾಗಿ ಬೇರೆ ಹೀರೋಯಿನ್‌ ನೋಡಿ"

"ಉಪ್ಪೇನ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಕೊಂಚ ನರ್ವಸ್‌ ಆಗಿದ್ದಳು. ಆಗ ನಾನೇ ಆಕೆ ಬಳಿ ಬಂದು ನನಗೆ ನಿನ್ನ ವಯಸ್ಸಿನ ಮಗನಿದ್ದಾನೆ. ನೀನು ನನ್ನ ಮಗಳಿದ್ದಂತೆ. ಈ ದೃಶ್ಯವನ್ನು ಹೆದರದೇ ಮಾಡು. ಅಂದಿನಿಂದ ಅವಳು ನನಗೆ ಮಗಳಿದ್ದಂತೆ. ಅವಳು ನನ್ನ ಹೀರೋಯಿನ್‌ ಎಂದು ನಾನು ಊಹಿಸಿಕೊಳ್ಳುವುದಿಲ್ಲ" ಎಂದಿದ್ದರು ವಿಜಯ್‌ ಸೇತುಪತಿ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ