logo
ಕನ್ನಡ ಸುದ್ದಿ  /  ಮನರಂಜನೆ  /  ಕರ್ನಾಟಕದ ವಿದ್ಯಾವಂತರು ಕಾವೇರಿ ನೀರನ್ನು ಸರ್‌ಎಂ ವಿಶ್ವೇಶ್ವರಯ್ಯ ಅಗೆದು ಕಂಡುಹಿಡಿದಂತೆ ಆಡ್ತಿದ್ದಾರೆ; ನಾಲಿಗೆ ಹರಿಬಿಟ್ಟ ಕಸ್ತೂರಿ ಶಂಕರ್‌

ಕರ್ನಾಟಕದ ವಿದ್ಯಾವಂತರು ಕಾವೇರಿ ನೀರನ್ನು ಸರ್‌ಎಂ ವಿಶ್ವೇಶ್ವರಯ್ಯ ಅಗೆದು ಕಂಡುಹಿಡಿದಂತೆ ಆಡ್ತಿದ್ದಾರೆ; ನಾಲಿಗೆ ಹರಿಬಿಟ್ಟ ಕಸ್ತೂರಿ ಶಂಕರ್‌

HT Kannada Desk HT Kannada

Oct 24, 2023 09:18 AM IST

google News

ಕಾವೇರಿ ನೀರಿನ ವಿಚಾರವಾಗಿ ಮತ್ತೆ ನಾಲಿಗೆ ಹರಿಬಿಟ್ಟ ತಮಿಳು ನಟಿ ಕಸ್ತೂರಿ ಶಂಕರ್

  • Kasturi Shankar: ಕರ್ನಾಟಕದಲ್ಲಿ ವಿದ್ಯಾವಂತರು ಸರ್‌ಎಂ ವಿಶ್ವೇಶ್ವರಯ್ಯ ಅವರೇ ಭೂಮಿಯನ್ನು ಬಗೆದು ಕಾವೇರಿ ನೀರನ್ನು ಕಂಡುಹಿಡಿದಿರುವಂತೆ ನಂಬಿದ್ದಾರೆ. ಕರ್ನಾಟಕ ರಾಜಕೀಯ ಪಕ್ಷಗಳು ಕೂಡಾ ಕಾವೇರಿ ನಮ್ಮದೇ ಆಸ್ತಿ ಎನ್ನುವಂತೆ ಜನರನ್ನು ನಂಬಿಸಿದ್ದಾರೆ. ಕಾವೇರಿ ಕರ್ನಾಟಕದವರಿಗೆ ಮಗು, ನಮಗೆ ಅವಳು ತಾಯಿ ಎಂದು ಕಸ್ತೂರಿ ಶಂಕರ್‌ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಕಾವೇರಿ ನೀರಿನ ವಿಚಾರವಾಗಿ ಮತ್ತೆ ನಾಲಿಗೆ ಹರಿಬಿಟ್ಟ ತಮಿಳು ನಟಿ ಕಸ್ತೂರಿ ಶಂಕರ್
ಕಾವೇರಿ ನೀರಿನ ವಿಚಾರವಾಗಿ ಮತ್ತೆ ನಾಲಿಗೆ ಹರಿಬಿಟ್ಟ ತಮಿಳು ನಟಿ ಕಸ್ತೂರಿ ಶಂಕರ್ (PC: Twitter, Facebook)

Kasturi Shankar: ಜಾಣ ಸಿನಿಮಾ ನಟಿ ಕಸ್ತೂರಿ ಶಂಕರ್‌ ಇತ್ತೀಚೆಗೆ ಕಾವೇರಿ ನದಿ ವಿಚಾರವಾಗಿ ತಮಿಳಿನ ಗಲಾಟಾ ಮೀಡಿಯಾದೊಂದಿಗೆ ಮಾತನಾಡಿ ಕಾವೇರಿ ನೀರಿನ ಶೇ 75ರಷ್ಟು ತಮಿಳುನಾಡಿಗೆ ಸೇರಬೇಕು. ಕರ್ನಾಟಕದವರಿಗೆ ಕಾವೇರಿ ನೀರಿನ ಮೇಲೆ ಯಾವುದೇ ಹಕ್ಕಿಲ್ಲ. ನದಿ ಎಲ್ಲಿ ಹುಟ್ಟುವುದೋ ಅಲ್ಲಿನವರಿಗೆ ಆ ನದಿ ನೀರಿನ ಬಗ್ಗೆ ಯಾವುದೇ ಹಕ್ಕು ಇರುವುದಿಲ್ಲ ಎಂದಿದ್ದರು.

ನದಿ ನೀರು ಹರಿದು ಕೊನೆಗೆ ಸೇರುವ ಸ್ಥಳದವರಿಗೆ ಅದು ಸೇರಬೇಕು

ಕಸ್ತೂರಿ ಶಂಕರ್‌ ಮಾತಿಗೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಐಬಿಸಿ ತಮಿಳು ಎಂಬ ವಾಹಿನಿಯೊಂದಿಗೆ ಕಸ್ತೂರಿ ಶಂಕರ್‌ ಮಾತನಾಡಿರುವ ಮತ್ತೊಂದು ವಿಡಿಯೋ ವಿರುದ್ಧ ಕೂಡಾ ಕನ್ನಡಿಗರು ಗರಂ ಆಗಿದ್ದಾರೆ. ''ಕಾವೇರಿ ನದಿ ಬಗ್ಗೆ ಎಲ್ಲರೂ ತಿಳಿಯಬೇಕಿರುವುದು ಅತ್ಯವಶ್ಯಕ. ಕಾವೇರಿ ನೀರಿನ ಒಪ್ಪಂದದ ಬಗ್ಗೆ ಕೂಡಾ ಎಲ್ಲರೂ ತಿಳಿದುಕೊಳ್ಳಬೇಕು. ಕಾವೇರಿ ನೀರು ಹುಟ್ಟಿದ ಸ್ಥಳದವರು ಅದನ್ನು ತಮ್ಮ ಸ್ವಂತ ಎಂದು ತಿಳಿದುಕೊಂಡಿದ್ದಾರೆ. ಆದರೆ ಅದು ಎಲ್ಲಿಗೆ ಸೇರುವುದೋ ಅವರಿಗೆ ಸ್ವಂತ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಒಪ್ಪಂದದ ಪ್ರಕಾರ ಕಾವೇರಿ ನೀರು ತಮಿಳುನಾಡು, ಕರ್ನಾಟಕ, ಪಾಂಡಿಚೆರಿ, ಕೇರಳ ರಾಜ್ಯಗಳಿಗೆ ಸೇರಬೇಕು. 4 ರಾಜ್ಯಗಳಿಗೂ ಇದರಲ್ಲಿ ಹಕ್ಕಿದೆ. ಅದರಲ್ಲಿ ಶೇ 75ರಷ್ಟು ನೀರು ತಮಿಳುನಾಡಿಗೆ ಸೇರಬೇಕು.''

ಸರ್‌ಎಂ ವಿಶ್ವೇಶ್ವರಯ್ಯ ಕಾವೇರಿ ನೀರನ್ನು ಅಗೆದು ಕಂಡುಹಿಡಿದಿರುವಂತೆ ಜನರು ನಂಬಿದ್ದಾರೆ

''ಕಾವೇರಿ ನೀರಿನ ವಿಚಾರವಾಗಿ ಪದೇ ಪದೆ ಕೋರ್ಟ್‌ ಮೆಟ್ಟಿಲೇರುವಂತೆ ಆಗಿದೆ. ಹೀಗೆ ಆದರೆ ನಮ್ಮ ನಡುವೆಯೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ನ್ಯಾಯಾಲಯ ಹೇಳುತ್ತದೆ. ಕಾವೇರಿ ನದಿಗೆ ಸರ್‌ಎಂ ವಿಶ್ವೇಶ್ವರಯ್ಯ ಅಣೆಕಟ್ಟು ಕಟ್ಟಿದ್ದು, ಆದರೆ ಕರ್ನಾಟಕದಲ್ಲಿ ವಿದ್ಯಾವಂತರು ಕೂಡಾ ಸರ್‌ಎಂ ವಿಶ್ವೇಶ್ವರಯ್ಯ ಅವರೇ ಭೂಮಿಯನ್ನು ಬಗೆದು ಕಾವೇರಿ ನೀರನ್ನು ಕಂಡುಹಿಡಿದಿರುವಂತೆ ನಂಬಿದ್ದಾರೆ. ಕರ್ನಾಟಕ ರಾಜಕೀಯ ಪಕ್ಷಗಳು ಕೂಡಾ ಕಾವೇರಿ ನಮ್ಮದೇ ಆಸ್ತಿ ಎನ್ನುವಂತೆ ಜನರನ್ನು ನಂಬಿಸಿದ್ದಾರೆ. ಕಾವೇರಿ ಕರ್ನಾಟಕದವರಿಗೆ ಮಗು, ನಮಗೆ ಅವಳು ತಾಯಿ'' ಎಂದು ಕಸ್ತೂರಿ ಶಂಕರ್‌ ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ.

ಸಿದ್ದಾರ್ಥ್‌ ಕಾವೇರಿ ನೀರಿಗಾಗಿ ಪಟ್ಟು ಹಿಡಿಯಬೇಕಿತ್ತು

ಸಿದ್ದಾರ್ಥ್‌ ಘಟನೆ ಬಗ್ಗೆ ಕೂಡಾ ಪ್ರತಿಕ್ರಿಯಿಸಿರುವ ಕಸ್ತೂರಿ ಶಂಕರ್‌ ''ಅಂದು ಸಿದ್ದಾರ್ಥ್‌ ತಮ್ಮ ಸಿನಿಮಾ ಪ್ರಮೋಷನ್‌ಗೆ ಹೋದಾಗ ಒಬ್ಬರೂ ಪೊಲೀಸ್‌ ಅಲ್ಲಿ ಇರಲಿಲ್ಲ. ಅಷ್ಟು ಜನರು ಸೇರಿ ಆತನನ್ನು ಬೆದರಿಸಿ ಕಳಿಸಿದ್ದಾರೆ. ಆತ ಏಕೆ ಸುಮ್ಮನಿರಬೇಕಿತ್ತು. ಅವರೆಲ್ಲಾ ಹೇಳಿದ ಕೂಡಲೇ ಎದ್ದು ಬರುವ ಬದಲಿಗೆ ಅಲ್ಲೇ ಕುಳಿತು ಕಾವೇರಿಗಾಗಿ ಪಟ್ಟು ಹಿಡಿಯಬೇಕಿತು. ಹಾಗೆ ಮಾಡಿದಿದ್ದರೆ ನಾವೂ ಕೂಡಾ ಸಿದ್ದಾರ್ಥ ಅವರ ಸಿನಿಮಾ ನೋಡುತ್ತಿದ್ದೆವು'' ಎಂದು ಕಸ್ತೂರಿ ಶಂಕರ್ ಹೇಳಿದ್ದಾರೆ.

ಕಸ್ತೂರಿ ಶಂಕರ್‌ ಮಾತಿಗೆ ಕನ್ನಡಿಗರು ಗರಂ

ಕಸ್ತೂರಿ ಶಂಕರ್‌ ಮಾತಿಗೆ ಪ್ರತಿಕ್ರಿಯಿಸಿರುವ ಕನ್ನಡಿಗರು. ಕಾವೇರಿ ಮೇಲೆ ನಮ್ಮ ಹಕ್ಕಿಲ್ಲ ಎಂದು ಹೇಗೆ ಹೇಳುತ್ತೀರಿ? ಸರ್‌ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಹೀಗೆಲ್ಲಾ ಮಾತನಾಡುವುದಕ್ಕೆ ನಿಮಗೆ ಎಷ್ಟು ಧೈರ್ಯ? ತಮಿಳುನಾಡಿನಲ್ಲಿ ಮಾತ್ರ ರೈತರು ಇರೋದಾ? ಕರ್ನಾಟದಲ್ಲಿ ರೈತರು ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ