logo
ಕನ್ನಡ ಸುದ್ದಿ  /  ಮನರಂಜನೆ  /  Leo First Review: ಲಿಯೋ ಸಿನಿಮಾ ಸೂಪರ್, ದಳಪತಿ ವಿಜಯ್ ನಟನೆ ಅದ್ಭುತ, ಉದಯನಿಧಿ ವಿಮರ್ಶೆ ಹೀಗಿದೆ ನೋಡಿ

Leo First Review: ಲಿಯೋ ಸಿನಿಮಾ ಸೂಪರ್, ದಳಪತಿ ವಿಜಯ್ ನಟನೆ ಅದ್ಭುತ, ಉದಯನಿಧಿ ವಿಮರ್ಶೆ ಹೀಗಿದೆ ನೋಡಿ

Praveen Chandra B HT Kannada

Oct 18, 2023 07:34 AM IST

google News

Leo First Review: ಲಿಯೋ ಸಿನಿಮಾ ವಿಮರ್ಶೆ

  • Vijay Leo Movie First Review: ದಳಪತಿ ವಿಜಯ್‌ ನಟನೆಯ ಲಿಯೋ ಸಿನಿಮಾವು ಅಕ್ಟೋಬರ್‌ 19ರಂದು ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನಿಮಾವನ್ನು ಕೆಲವು ಸೆಲೆಬ್ರಿಟಿಗಳು ನೋಡಿದ್ದಾರೆ. ಈ ಸಿನಿಮಾ ನೋಡಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಅವರು "ಸಿನಿಮಾ ಸೂಪರ್‌, ದಳಪತಿ ವಿಜಯ್‌ ನಟನೆ ಅದ್ಭುತ" ಎಂದಿದ್ದಾರೆ.

Leo First Review: ಲಿಯೋ ಸಿನಿಮಾ ವಿಮರ್ಶೆ
Leo First Review: ಲಿಯೋ ಸಿನಿಮಾ ವಿಮರ್ಶೆ

Leo Movie First Review: ಈ ವಾರದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಮತ್ತು ವಿಜಯ್‌ ದಳಪತಿ ನಟನೆಯ ಲಿಯೋ ಸಿನಿಮಾಗಳು ಪ್ರಮುಖವಾದವು. ವಿಜಯ್‌ ದಳಪತಿ ನಾಯಕ ನಟನಾಗಿ ನಟಿಸಿರುವ ಲಿಯೋ ಸಿನಿಮಾದಲ್ಲಿ ವಿಜಯ್‌ ನಟನೆ ಮತ್ತು ಆಕ್ಷನ್‌ ಹೇಗಿರಬಹುದು ಎಂದು ಸಚಿವ ಉದಯನಿಧಿ ಸ್ಟಾಲಿನ್‌ ತಲೆಕೆಡಸಿಕೊಂಡಿದ್ದರು. ಈ ಸಿನಿಮಾ ಅಕ್ಟೋಬರ್‌ 19ರಂದು ದಸರಾ ಉಡುಗೊರೆಯಾಗಿ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ಈಗಾಗಲೇ ಈ ಸಿನಿಮಾವನ್ನು ಕೆಲವರ ನೋಡಿದ್ದಾರೆ. ಅಂದರೆ, ಕಾಲಿವುಡ್ ಚಿತ್ರರಂಗದ ಸೆಲೆಬ್ರಿಟಿಗಳು ಈ ಚಿತ್ರ ವೀಕ್ಷಿಸಿದ್ದಾರೆ. ಇವರಿಗಾಗಿಯೇ ವಿಶೇಷ ಶೋ ನಡೆಸಲಾಗಿತ್ತು. ಇದೇ ರೀತಿ ಸಚಿವ ಉದಯನಿಧಿ ಸ್ಟಾಲಿನ್‌ ಕೂಡ ಚಿತ್ರ ವೀಕ್ಷಿಸಿದ್ದು, "ವಾಹ್"‌ ಎಂದಿದ್ದಾರೆ.

ಲಿಯೋ ಸಿನಿಮಾದ ವಿಮರ್ಶೆ (Leo Film Review)

ಲಿಯೋ ಸಿನಿಮಾ ಸೂಪರ್, ದಳಪತಿ ವಿಜಯ್ ನಟನೆ ಅದ್ಭುತ ಎಂದು ಉದಯನಿಧಿ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಲೋಕೇಶ್ ಕನಕರಾಜ್ ಚಿತ್ರನಿರ್ಮಾಣ ಅದ್ಭುತವಾಗಿದೆ . ಅನಿರುದ್ಧ್ ಅವರ ಸಂಗೀತ ಮತ್ತು ಅನ್ಭುಅರಿವು ಅವರ ಆಕ್ಷನ್ ಕೊರಿಯೋಗ್ರಫಿ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್‌ಗಳು ಎಂದು ಉದಯನಿಧಿ ಸ್ಟಾಲಿನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಲಿಯೋ ಚಿತ್ರದ ಕುರಿತು ಉದಯನಿಧಿ ಸ್ಟಾಲಿನ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಸೆಲೆಬ್ರಿಟಿ ಶೋನಲ್ಲಿ ಲಿಯೋ ಚಿತ್ರವನ್ನು ನೋಡಿದ ಬಳಿಕ ಕೆಲವರು ಮಾಡಿರುವ ಟ್ವೀಟ್‌ಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸುತ್ತಿವೆ. ಬಹುತೇಕರ ಪ್ರಕಾರ ಲಿಯೋ ಚಿತ್ರವು ಬಾಕ್ಸ್‌ ಆಫೀಸ್‌ ಧೂಳಿಪಟ ಮಾಡುವುದು ಖಚಿತ. ಲಿಯೋ ಚಿತ್ರವು ವಿಜಯ್‌ ಅಭಿಮಾನಿಗಳಿಗೆ ಆಕ್ಷನ್‌ ಟ್ರೀಟ್‌ ಆಗಲಿದ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸಿನಿಮಾದಲ್ಲಿ ದಳಪತಿ ವಿಜಯ್‌ ಅವರ ಹೀರೋಯಿಸಂ ಅನ್ನು ನೆಕ್ಸ್ಟ್‌ ಲೆವೆಲ್‌ಗೆ ನಿರ್ದೇಶಕ ಲೋಕೇಶ್‌ ಕನಕರಾಜ್‌ ಕೊಂಡೊಯ್ದಿದ್ದಾರೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಾಸ್ಟರ್‌ ಚಿತ್ರದ ಬಳಿಕ ವಿಜಯ್‌ ಮತ್ತು ಲೋಕೇಶ್‌ ಕನಕರಾಜ್‌ ಕಾಂಬಿನೇಷನ್‌ನಲ್ಲಿ ಈ ಚಿತ್ರ ತೆರೆ ಕಾಣುತ್ತಿದೆ.

ಕಾಶ್ಮೀರದ ಹಿನ್ನೆಲೆ ಇರುವ ಈ ಆ್ಯಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಸಂಜಯ್ ದತ್ ಮತ್ತು ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ತ್ರಿಷಾ ನಟಿಸಿದ್ದಾರೆ. ಅನಿರುದ್ಧ್ ಸಂಗೀತ ನಿರ್ದೇಶನವಿದೆ.

ಬೆಂಗಳೂರಲ್ಲಿ ಲಿಯೋ ಟಿಕೆಟ್‌ ದರ 1500 ರೂನಿಂದ 2500 ರೂಪಾಯಿ

ಬೆಂಗಳೂರಿನ ಬಹುತೇಕ ಎಲ್ಲ ಮಲ್ಟಿಫ್ಲೆಕ್ಸ್‌ಗಳಲ್ಲಿ ಲಿಯೋ ಸಿನಿಮಾ ಅ. 19ರಿಂದ ಪ್ರದರ್ಶನ ಕಾಣಲಿದೆ. ಈ ಸಿನಿಮಾ ವೀಕ್ಷಣೆಗೆ ಈಗಾಗಲೇ ಟಿಕೆಟ್‌ಗಳೂ ದೊಡ್ಡ ದೊಡ್ಡ ಮೊತ್ತಕ್ಕೆ ಬಿಕರಿಯಾಗಿವೆ. ರಾಜಧಾನಿಯ ಮಲ್ಟಿಫ್ಲೆಕ್ಸ್‌ಗಳಲ್ಲಿ ಒಂದೊಂದು ಟಿಕೆಟ್‌ಗೆ 1500 ರೂಪಾಯಿಂದ 2000 ವರೆಗೂ ನಿಗದಿಯಾಗಿದೆ. ಗೋಲ್ಡ್‌ ಕ್ಲಾಸ್‌ಗಳಲ್ಲಿ 2500ರವರೆಗೂ ದರ ನಿಗದಿಯಾಗಿದೆ. ವಿಪರ್ಯಾಸ ಏನೆಂದರೆ, ಇದೇ ಲಿಯೋ ಸಿನಿಮಾಕ್ಕೆ ಚೆನ್ನೈನ ಮಾಲ್‌ನಲ್ಲಿ ಕೇವಲ 200 ರೂಪಾಯಿ ದರ ನಿಗದಿಪಡಿಸಲಾಗಿದೆ. ಚೆನ್ನೈಗೆ ಹೋಲಿಕೆ ಮಾಡಿದರೆ, ಬೆಂಗಳೂರಿನಲ್ಲಿ ಲಿಯೋ ಸಿನಿಮಾದ ಟಿಕೆಟ್‌ ದರ ಬರೋಬ್ಬರಿ 10 ಪಟ್ಟು ಹೆಚ್ಚು! ಈ ಕುರಿತ ವಿಶೇಷ ವರದಿ ಇಲ್ಲಿದೆ ಓದಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ