logo
ಕನ್ನಡ ಸುದ್ದಿ  /  ಮನರಂಜನೆ  /  ಚೆನ್ನೈ ಬಿಟ್ಟು ಮುಂಬೈೆಗೆ ಹೋಗಿ ಸೆಟಲ್‌ ಆಗಿದ್ದೇಕೆ? ಕಂಗುವ ಪ್ರಮೋಷನ್‌ನಲ್ಲಿ ನಿಜ ವಿಚಾರ ಬಾಯಿಬಿಟ್ಟ ತಮಿಳು ನಟ ಸೂರ್ಯ

ಚೆನ್ನೈ ಬಿಟ್ಟು ಮುಂಬೈೆಗೆ ಹೋಗಿ ಸೆಟಲ್‌ ಆಗಿದ್ದೇಕೆ? ಕಂಗುವ ಪ್ರಮೋಷನ್‌ನಲ್ಲಿ ನಿಜ ವಿಚಾರ ಬಾಯಿಬಿಟ್ಟ ತಮಿಳು ನಟ ಸೂರ್ಯ

Rakshitha Sowmya HT Kannada

Oct 30, 2024 03:51 PM IST

google News

ಪತ್ನಿ ಜ್ಯೋತಿಕಾ ಜೊತೆ ಚೆನ್ನೈ ಬಿಟ್ಟು ಮುಂಬೈಗೆ ತೆರಳಿದ ಕಾರಣ ತಿಳಿಸಿದ ತಮಿಳು ನಟ ಸೂರ್ಯ

  • ಸೂರ್ಯ ಅಭಿನಯದ ಕಂಗುವ ಸಿನಿಮಾ ನವೆಂಬರ್‌ 14ರಂದು ರಿಲೀಸ್‌ ಆಗುತ್ತಿದೆ. ಚಿತ್ರತಂಡ ಸಿನಿಮಾ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಈ ನಡುವೆ ಸೂರ್ಯ ಮುಂಬೈಗೆ ಶಿಫ್ಟ್‌ ಆಗಿದ್ದು ಏಕೆ ಎಂಬ ವಿಚಾರವನ್ನು ಕಂಗುವಾ ಪ್ರಮೋಷನ್‌ ಸಮಯದಲ್ಲಿ ಹೇಳಿಕೊಂಡಿದ್ದಾರೆ.

ಪತ್ನಿ ಜ್ಯೋತಿಕಾ ಜೊತೆ ಚೆನ್ನೈ ಬಿಟ್ಟು ಮುಂಬೈಗೆ ತೆರಳಿದ ಕಾರಣ ತಿಳಿಸಿದ ತಮಿಳು ನಟ ಸೂರ್ಯ
ಪತ್ನಿ ಜ್ಯೋತಿಕಾ ಜೊತೆ ಚೆನ್ನೈ ಬಿಟ್ಟು ಮುಂಬೈಗೆ ತೆರಳಿದ ಕಾರಣ ತಿಳಿಸಿದ ತಮಿಳು ನಟ ಸೂರ್ಯ

ಕಾಲಿವುಡ್‌ ಸ್ಟಾರ್‌ ಸೂರ್ಯ ನಾಯಕನಾಗಿ ನಟಿಸಿರುವ ಕಂಗುವ ಸಿನಿಮಾ ನವೆಂಬರ್‌ 14ಕ್ಕೆ ತೆರೆ ಕಾಣುತ್ತಿದೆ. ಚಿತ್ರತಂಡ ಪ್ರಮೋಷನ್‌ ಕೆಲಸಗಳಲ್ಲಿ ಬ್ಯುಸಿ ಇದೆ. ಸೂರ್ಯ ವಿವಿಧ ಮಾಧ್ಯಮಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ. ಈ ನಡುವೆ ನಟ ಸೂರ್ಯ ಕಳೆದ ಕೆಲವು ದಿನಗಳಿಂದ ತನ್ನ ಪತ್ನಿ ಜ್ಯೋತಿಕಾ ಹಾಗೂ ಮಕ್ಕಳೊಂದಿಗೆ ಚೆನ್ನೈನಿಂದ ಮುಂಬೈಗೆ ಶಿಫ್ಟ್‌ ಆಗಿದ್ದಾರೆ. ಸೂರ್ಯ, ತಂದೆ ಜೊತೆ ಜಗಳ ಮಾಡಿಕೊಂಡು ಮುಂಬೈಗೆ ಶಿಫ್ಟ್‌ ಆಗಿದ್ದಾರೆ, ಜ್ಯೋತಿಕಾ ಜೊತೆ ಮನಸ್ತಾಪ ಉಂಟಾಗಿದೆ ಎಂದೆಲ್ಲಾ ರೂಮರ್‌ ಹಬ್ಬಿತ್ತು. ಆದರೆ ಈಗ ಆ ರೂಮರ್‌ಗೆ ಸ್ವತ: ಸೂರ್ಯ ಕಂಗುವಾ ಪ್ರಮೊಷನ್‌ ಸಮಯದಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.

ಪತ್ನಿ ಜ್ಯೋತಿಕಾ ಸಲುವಾಗಿ ಮುಂಬೈಗೆ ಶಿಫ್ಟ್‌

ಜ್ಯೋತಿಕಾ ನನ್ನ ಸಿನಿ ಕೆರಿಯರ್‌ಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ಪತ್ನಿಯ ಆಸೆ ನೆರವೇರಿಸಲು ನಾವು ಮುಂಬೈಗೆ ತೆರಳಬೇಕಾಯ್ತು. ಜ್ಯೋತಿಕಾ ತನ್ನ ತಂದೆ ತಾಯಿ ಜೊತೆ ಇರಲು ಬಹಳ ಇಷ್ಟಪಟ್ಟಿದ್ದರು ಎಂದು ದಿ ಹಾಲಿವುಡ್‌ ರಿಪೋರ್ಟ್‌ ಇಂಡಿಯಾ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸೂರ್ಯ ಈ ವಿಚಾರ ತಿಳಿಸಿದ್ದಾರೆ. ಸುಮಾರು 27 ವರ್ಷಗಳ ಹಿಂದೆ ಜ್ಯೋತಿಕಾ ಚೆನ್ನೈನಿಂದ ಮುಂಬೈಗೆ ಬಂದಿದ್ದರು. ಕಳೆದ 19 ವರ್ಷಗಳಿಂದ ಜ್ಯೋತಿಕಾ ನನ್ನ ಜೊತೆ ಇದ್ದಾರೆ. ಇಷ್ಟು ದಿನಗಳ ಕಾಲ ಆಕೆ ನನ್ನ ಕುಟುಂಬದೊಂದಿಗೆ ಇದ್ದರು. ಅದಕ್ಕಾಗಿ ತಮ್ಮ ಕೆರಿಯರ್‌, ಸ್ನೇಹಿತರು, ತಾವು ಇಷ್ಟಪಟ್ಟ ಲೈಫ್ ತ್ಯಾಗ ಮಾಡಿದ್ದರು. ಕೋವಿಡ್‌ ನಂತರ ಇನ್ನು ಬದಲಾವಣೆ ಅಗತ್ಯ ಎಂದೆನಿಸಿ ನಾವು ಮುಂಬೈಗೆ ಶಿಫ್ಟ್‌ ಆದೆವು ಎಂದು ಸೂರ್ಯ ಹೇಳಿದ್ದಾರೆ.

ಮುಂಬೈಗೆ ಬಂದ ನಂತರ ತಂದೆ ತಾಯಿ ಜೊತೆ ಸಮಯ ಕಳೆಯುತ್ತಿರುವ ಜ್ಯೋತಿಕಾ ಈಗ ಬಹಳ ಸಂತೋಷವಾಗಿದ್ದಾರೆ. 27 ವರ್ಷಗಳ ನಂತರ ತಂದೆ ತಾಯಿ ಜೊತೆ ಇದ್ದಾರೆ. ಪುರುಷರಿಗೆ ಬೇಕಾಗಿರುವುದು ಮಹಿಳೆಯರಿಗೆ ಕೂಡಾ ಬಹಳ ಅವಶ್ಯಕತೆ ಇದೆ. ನನಗೆ ಇದು ಬಹಳ ತಡವಾಗಿ ಅರ್ಥವಾಗಿದೆ. ಜ್ಯೋತಿಕಾಗೆ ರಜೆಯಲ್ಲಿ ಎಂಜಾಯ್‌ ಮಾಡಲು, ಫ್ರೆಂಡ್ಸ್‌, ಆರ್ಥಿಕ ಸ್ವಾತಂತ್ಯ್ರ ಬಹಳ ಅವಶ್ಯಕತೆ ಇದೆ. ಆಕೆ ಬಹಳ ಇಷ್ಟಪಟ್ಟ ಜೀವನವನ್ನು ನಾನು ಏಕೆ ಕಿತ್ತುಕೊಳ್ಳಬೇಕು ಎನಿಸಿತು ಇದೇ ಕಾರಣಕ್ಕೆ ನಿರ್ಧಾರಕ್ಕೆ ಬಂದೆ ಎಂದು ಕಂಗುವ ನಟ ಸ್ಪಷ್ಟಪಡಿಸಿದ್ದಾರೆ.

ಜ್ಯೋತಿಕಾ ನನ್ನ ಗುರುವಿದ್ದಂತೆ, ನನಗೆ ಆಕೆ ಬಹಳ ಸ್ಪೂರ್ತಿಯಾಗಿದ್ದಾರೆ. ಜ್ಯೋತಿಕಾ ಇನ್ನೊಬ್ಬರ ಬಗ್ಗೆ ಬಹಳ ದಯೆ ಇರುವ ಮಹಿಳೆ, ನನ್ನ ಫಿಲಾಸಫರ್‌, ಆಕೆಯೊಂದಿಗೆ ಸಮಯ ಕಳೆಯಲು ನನಗೆ ಬಹಳ ಇಷ್ಟ. ನಾನು ತಿಂಗಳಲ್ಲಿ 20 ದಿನ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತೇನೆ. 10 ದಿನಗಳು ಮುಂಬೈನಲ್ಲಿ ಕಳೆಯುತ್ತೇನೆ ಎಂದು ಇಷ್ಟು ದಿನಗಳ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಹೇಳಿದ್ದಾರೆ.

ಡಿವೋರ್ಸ್‌ ರೂಮರ್‌ಗೆ ಸೂರ್ಯ ಪ್ರತಿಕ್ರಿಯೆ

ಜ್ಯೋತಿಕಾ ಹಾಗೂ ಸೂರ್ಯ ನಡುವೆ ಏನೂ ಸರಿಯಲ್ಲ. ಇಬ್ಬರೂ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ, ಇದೇ ಕಾರಣಕ್ಕೆ ಜ್ಯೋತಿಕಾ, ತಮ್ಮ ಮಕ್ಕಳೊಂದಿಗೆ ಮುಂಬೈಗೆ ತೆರಳಿ ಅಮ್ಮನ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಕೆಲವು ದಿನಗಳಿಂದ ಗಾಸಿಪ್‌ ಹರಿದಾಡುತ್ತಿದೆ. ಆದರೆ ಈಗ ಈ ಗಾಸಿಪ್‌ಗಳಿಗೆ ಸೂರ್ಯ ಉತ್ತರ ಕೊಟ್ಟಿದ್ದು ನನ್ನ ಹಾಗೂ ಜ್ಯೋತಿಕಾ ಸಂಬಂಧ ಬಹಳ ದೊಡ್ಡದು. ಆಕೆಗೆ ನಾನು ಬಹಳ ಗೌರವ ಕೊಡುತ್ತೇನೆ. ಆಕೆಯ ಬಗ್ಗೆ ನನಗೆ ಹೆಮ್ಮೆ ಇದೆ. ಆಕೆ ನನಗೆ ಸ್ಪೂರ್ತಿ, ನಮ್ಮ ನಡುವೆ ಮನಸ್ತಾಪ, ಡಿವೋರ್ಸ್‌ ವಿಚಾರವೇ ಬರುವುದಿಲ್ಲ ಎಂದಿದ್ದಾರೆ.

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ