logo
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ವೈಷ್ಣವ್ ಎದುರೇ ಬಯಲಾಯ್ತು ಸತ್ಯ; ಕಾವೇರಿ ಮಾಡಿದ ಕೆಟ್ಟ ಕೆಲಸದ ಬಗ್ಗೆ ಎಲ್ಲರ ಮುಂದೆ ಸಾಕ್ಷಿ ಸಮೇತ ಮಾತನಾಡಿದ ಕೀರ್ತಿ

Lakshmi Baramma: ವೈಷ್ಣವ್ ಎದುರೇ ಬಯಲಾಯ್ತು ಸತ್ಯ; ಕಾವೇರಿ ಮಾಡಿದ ಕೆಟ್ಟ ಕೆಲಸದ ಬಗ್ಗೆ ಎಲ್ಲರ ಮುಂದೆ ಸಾಕ್ಷಿ ಸಮೇತ ಮಾತನಾಡಿದ ಕೀರ್ತಿ

Suma Gaonkar HT Kannada

Nov 21, 2024 11:38 AM IST

google News

ವೈಷ್ಣವ್ ಎದುರೇ ಬಯಲಾಯ್ತು ಸತ್ಯ

    • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಎಲ್ಲರೂ ಕೀರ್ತಿ ಸತ್ತಿದ್ದಾಳೆ ಎಂದೇ ಅಂದುಕೊಂಡಿದ್ದರು. ಆದರೆ ಕೀರ್ತಿ ಬದುಕಿದ್ದಾಳೆ ಎನ್ನುವ ಸತ್ಯ ಈಗ ಎಲ್ಲರಿಗೂ ಗೊತ್ತಾಗಿದೆ. ಕಾವೇರಿ ಮಾಡಿದ ಕೆಟ್ಟ ಕೆಲಸಗಳ ಬಗ್ಗೆ ಈಗ ಕೀರ್ತಿ ಸಾಕ್ಷಿಯನ್ನೂ ತಂದಿದ್ದಾಳೆ. 
ವೈಷ್ಣವ್ ಎದುರೇ ಬಯಲಾಯ್ತು ಸತ್ಯ
ವೈಷ್ಣವ್ ಎದುರೇ ಬಯಲಾಯ್ತು ಸತ್ಯ

ಕಾವೇರಿ ಒಂದಷ್ಟು ಕೆಟ್ಟ ಕೆಲಸಗಳನ್ನು ಮಾಡಿ ಸುಮ್ಮನಿದ್ದರೆ ಅದೊಂದು ಮಾತಾಗಿತ್ತು. ಆದರೆ ಅವಳು ಕೊಲೆ ಮಾಡುವ ಮಟ್ಟಕ್ಕೆ ಇಳಿದಿದ್ದಾಳೆ. ಒಂದು ಕೊಲೆಯಲ್ಲ ಎರಡೆರಡು ಕೊಲೆ. ಇಷ್ಟೊಂದು ಕೆಟ್ಟವಳನ್ನು ವೈಷ್ಣವ್ ತನ್ನ ತಾಯಿ ಎಂಬ ಕಾರಣಕ್ಕೆ ಕಣ್ಣು ಮುಚ್ಚಿ ನಂಬುತ್ತಿದ್ದಾನೆ. ಆದರೆ ಅವಳ ಬಗ್ಗೆ ಅನುಮಾನ ಮೂಡಿದ್ದರೆ ಲಕ್ಷ್ಮೀ ಇಂದು ಈ ಸ್ಥಿತಿಗೆ ತಲುಪುತ್ತಿರಲಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ವೈಷ್ಣವ್‌ಗೆ ಎಲ್ಲ ಸತ್ಯ ಹೇಳಬೇಕು ಎಂದು ಕೀರ್ತಿ ತುಂಬಾ ಪ್ರಯತ್ನ ಮಾಡುತ್ತಿದ್ದಾಳೆ. ಆದರೆ ಇಷ್ಟು ದಿನ ಆ ಕೆಲಸ ಆಗಿರಲಿಲ್ಲ.

ಈಗ ಮತ್ತೆ ಬದುಕಿಬಂದ ರೀತಿಯಲ್ಲಿ ಸಾವನ್ನು ಗೆದ್ದು ಕೀರ್ತ ವೈಷ್ಣವ್ ಮನೆಗೆ ಬಂದಿದ್ದಾಳೆ. ಅವಳನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ವೈಷ್ಣವ್ ಕೂಡ ತುಂಬಾ ಶಾಕ್ ಆಗಿದ್ದಾನೆ. “ವೈಷ್ಣವ್ ನೀನು ನಿನ್ನ ತಾಯಿ ಎಂದು ಎಲ್ಲವನ್ನೂ ಕಣ್ಣು ಮುಚ್ಚಿ ನಂಬಬೇಡ” ಎಂದು ಕೀರ್ತಿ ಹೇಳುತ್ತಾಳೆ. ನಂತರ ಅಂದು ಯಾರು ಕೀರ್ತಿಯನ್ನು ಕಿಡ್ನಾಪ್ ಮಾಡಿದ್ದರೋ ಆ ಎಲ್ಲಾ ರೌಡಿಗಳನ್ನು ಕರೆಸುತ್ತಾಳೆ. ಕರೆಸಿ ಅವರ ಹತ್ತಿರವೇ ಸಾಕ್ಷಿ ಹೇಳಿಸಿದ್ದಾಳೆ. ಹೌದು ಅಂದು ನಮಗೆ ಸುಪಾರಿ ಕೊಟ್ಟಿರೋದು ಇದೇ ಕಾವೇರಿ. ಅವರಿಗೆ ಕೀರ್ತಿ ಸಾಯಬೇಕಿತ್ತು, ಲಕ್ಷ್ಮೀ ಜೈಲಿಗೆ ಹೋಗಬೇಕಿತ್ತು ಎಂದು ಹೇಳಿದ್ದಾರೆ.

ವೀಕ್ಷಕರಿಗೆ ಬೇಸರ

ಇನ್ನು ಕಾವೇರಿ ಆಯ್ತು ನನ್ನ ಕಥೆ ಇಲ್ಲಿಗೆ ಮುಗಿದು ಹೋಯ್ತು ಎಂದು ಮನಸಿನಲ್ಲೇ ಅಂದುಕೊಂಡು ಒಂದೂ ಮಾತನಾಡದೆ ನಿಂತಿದ್ದಾಳೆ. ಈ ಹಿಂದೆ ಲಕ್ಷ್ಮೀ ಹಾಗೂ ಕೀರ್ತಿ ಇಬ್ಬರನ್ನೂ ಕಾವೇರಿಯೇ ಕಿಡ್ನಾಪ್ ಮಾಡಿಸಿದ್ದರು. ಈಗ ಕೀರ್ತಿ ಬಂದಿದ್ದಾಳೆ. ಆದರೆ ಲಕ್ಷ್ಮೀ ಮಾಯ ಆಗಿದ್ದಾಳೆ. ಈ ರೀತಿಯಾಗಿ ವೀಕ್ಷಕರಿಗೆ ಒಂದಲ್ಲ ಒಂದು ರೀತಿಯ ತೊಂದರೆಯನ್ನೇ ನಿರ್ದೇಶಕರು ತಂದಿಡುತ್ತಿದ್ದಾರೆ ಎಂದು ಬೇಸರ ಇದೆ. ಈ ಕುರಿತು ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಇಂತಹ ಪಾತ್ರಕ್ಕೆ ನಮ್ಮೆಲ್ಲರ ಜೀವನದಿ ಕಾವೇರಿ ಹೆಸರು ಅಂತಾ ಎನಕ್ಕೆ ಇಟ್ಟಿದ್ದರೋ ಎನೋ ಎಂದು ಭುವನ್ ಎನ್ನುವವರು ಕಾಮೆಂಟ್ ಮಾಡುತ್ತಿದ್ದಾರೆ. ಒಂದಾದ ಮೇಲೆ ಒಂದು ಒಟ್ಟಿನಲ್ಲಿ ಸತ್ಯ ಮಾತ್ರ ಬಯಲಾಗುವುದಿಲ್ಲ ಎಂದು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಆದರೂ ಧಾರಾವಾಹಿಯಲ್ಲಿ ಕೀರ್ತಿ ಪಾತ್ರ ಮತ್ತೆ ಬಂದಾಗಿನಿಂದ ನೋಡುಗರ ಗಮನ ಮತ್ತೆ ಸೆಳೆದಂತಾಗಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ