Lakshmi Baramma: ಕೀರ್ತಿ ಬದುಕಿರುವುದು ನಿಜ; ಕಾವೇರಿ ಕಣ್ಣೆದುರೇ ನಿಂತು ವಾದ ಮಾಡಿದ ಕೀರ್ತಿ ನೋಡಿ ಶಾಕ್ ಆದ ವೈಷ್ಣವ್
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಸತ್ತಿದ್ದಾಳಾ? ಅಥವಾ ಬದುಕಿದ್ದಾಳಾ? ಅವಳು ಬಂದಿರೋದು ನಿಜವಾ? ಅಥವಾ ಭ್ರಮೆಯಾ? ಎಂದು ತಿಳಿದುಕೊಳ್ಳಲಾಗದೆ ವೀಕ್ಷಕರು ಗೊಂದಲದಲ್ಲಿದ್ದರು, ಆದರೆ ಇದೀಗ ಉತ್ತರ ಸಿಕ್ಕಿದೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಬದುಕಿರುವುದು ನಿಜ. ಅವಳು ಕಾವೇರಿ ಮುಂದೆ ಬಂದು ನಿಂತು ಮಾತಾಡುತ್ತಿರುವುದು ಕೂಡ ನಿಜ. ಕೀರ್ತಿ ಸತ್ತಿದ್ದಾಳಾ? ಅಥವಾ ಬದುಕಿದ್ದಾಳಾ? ಅವಳು ಬಂದಿರೋದು ನಿಜವಾ? ಅಥವಾ ಭ್ರಮೆಯಾ? ಎಂದು ತಿಳಿದುಕೊಳ್ಳಲಾಗದೆ ವೀಕ್ಷಕರು ಗೊಂದಲದಲ್ಲಿದ್ದರು, ಆದರೆ ಇದೀಗ ಉತ್ತರ ಸಿಕ್ಕಿದೆ. ಲಕ್ಷ್ಮೀ ರಾವಣ ದಹನ ನಾಟಕ ಮಾಡುವ ಸಂದರ್ಭದಲ್ಲಿ ಸ್ವತಃ ಅವಳೇ ಸುಟ್ಟು ಸತ್ತು ಹೋಗಿದ್ದಾಳೆ ಎಂದು ಕಾವೇರಿ ನಂಬಿಕೊಂಡಿದ್ದಾಳೆ. ಎಲ್ಲರಿಗೂ ಹಾಗೇ ನಂಬಿಕೆ ಇದೆ. ಆದರೆ ಆ ಬಗ್ಗೆ ಇನ್ನು ಯಾವುದೇ ಕ್ಲಾರಿಟಿ ಸಿಕ್ಕಿಲ್ಲ. ಆದರೆ ಈಗ ವೈಷ್ಣವ್ ಲಕ್ಷ್ಮೀ ಬದುಕಿದ್ದಾಳೆ ಎಂದೇ ಅಂದುಕೊಂಡಿದ್ದಾನೆ.
ಲಕ್ಷ್ಮೀಗಾಗಿ ಮನೆಯಲ್ಲಿ ಕಾರ್ಯಕ್ರಮ, ಆರತಿ ಎಲ್ಲ ತಯಾರಿ ನಡೆದಿದೆ. ಆದರೆ ಲಕ್ಷ್ಮೀ ಮಾತ್ರ ಮನೆಯಲ್ಲಿಲ್ಲ. ವೈಷ್ಣವ್ ತನ್ನ ಹೆಂಡತಿ ಮಹಾಲಕ್ಷ್ಮೀ ಬರುತ್ತಾಳೆ ಎಂದು ಕಾತರದಿಂದ ಕಾಯುತ್ತಿದ್ದಾನೆ. ಅವಳಿಗಾಗಿ ಸೀರೆಯನ್ನು ಕೂಡ ತಂದಿದ್ದಾನೆ. ಆದರೆ ಲಕ್ಷ್ಮೀ ಮಾತ್ರ ಎಲ್ಲೂ ಇಲ್ಲ. ಹೀಗಿರುವಾಗ ಮುಂದೇನಾಗಿದೆ ನೀವೇ ಗಮನಿಸಿ. ಕೀರ್ತಿ ಆಗಾಗ ಕಾವೇರಿಗೆ ಕಾಣಿಸಿಕೊಳ್ಳುತ್ತಾ ಇದ್ದವಳು ಈಗ ಎಲ್ಲರಿಗೂ ಕಾಣಿಸಿಕೊಂಡಿದ್ದಾಳೆ.
ಸತ್ತು ಹೋದ ಕೀರ್ತಿ ಬದುಕಿ ಬಂದದ್ದು ಹೇಗೆ?
ವೈಷ್ಣವ್ ಮನೆಯ ಎಲ್ಲರೂ ಕೀರ್ತಿಯನ್ನು ನೋಡಿ ಶಾಕ್ ಆಗಿದ್ದಾರೆ. ಸತ್ತು ಹೋದ ಕೀರ್ತಿ ಬದುಕಿ ಬಂದದ್ದು ಹೇಗೆ ಎಂದು ಎಲ್ಲರಿಗೂ ಆಶ್ಚರ್ಯ ಆಗುತ್ತಿದೆ. ಆದರೆ ಕೀರ್ತಿ ಮಾತ್ರ ತನಗೆ ಏನೂ ಆಗಿಲ್ಲ ಎನ್ನುವ ರೀತಿಯಲ್ಲಿ ಮೈಗೆ ಒಂದೂ ಗಾಯದ ಕಲೆಯೂ ಇಲ್ಲದ ರೀತಿ ಮತ್ತೆ ಮರಳಿ ಬಂದಿದ್ದಾಳೆ. ಇಂದು ಈ ಮನೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾಳೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.
ಲಕ್ಷ್ಮಿ ಕೀರ್ತಿನಾ ಹುಡುಕ್ತಿದ್ಲು, ಈವಾಗ ಕೀರ್ತಿ ಲಕ್ಷ್ಮಿ ನಾ ಹುಡುಕ್ತಾಳೆ. ಒಟ್ಟಿನಲ್ಲಿ ಒಬ್ಬರನ್ನು ಇನ್ನೊಬ್ಬರು ಹುಡುಕುವುದರಲ್ಲೇ ಧಾರಾವಾಹಿ ಕಳೆದು ಹೋಯ್ತು ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಸುಸ್ವಾಗತ ಕೀರ್ತಿ ಯವರಿಗೆ ಕಾವೇರಿಯ ಗ್ರಹಚಾರ ಬಿಡಿಸಬೇಕು ಲಕ್ಷೀ ನೀವೇ ಕಾಪಾಡಿದ್ದು ಎಂದು ನನಗನಿಸಿದೆ ಎಂದು ಜಯಸುಧಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಕೀರ್ತಿ ಅಭಿನಯ ಮೆಚ್ಚಿಕೊಂಡವರು ಕೀರ್ತಿಗೆ ಮತ್ತೆ ಸ್ವಾಗತ ಕೋರಿದ್ದಾರೆ. ನಮ್ಮ ಕನ್ನಡ ಸೀರಿಯಲ್ ಡೈರೆಕ್ಟರ್ ಗಳಿಗೆ ಆಸ್ಕರ್ ಪ್ರಶಸ್ತಿ ಕೊಡ್ಬೇಕು ಕಥೆಯನ್ನು ಯಾವೆಲ್ಲ ರೀತಿ ಬದಲಾಯಿಸುತ್ತಾರೆ ನೋಡಿ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.