ದುಲ್ಕರ್ ಸಲ್ಮಾನ್ ಸಂದರ್ಶನ: ಲಕ್ಕಿ ಬಾಸ್ಕರ್ ಸಿನಿಮಾದಲ್ಲಿ ಹಲವು ತಿರುವುಗಳಿವೆ, ಪ್ರೇಕ್ಷಕರಿಗೆ ಅಚ್ಚರಿಯ ಸರಮಾಲೆ ಖಚಿತವೆಂದ್ರು ಡಿಕ್ಯೂ
Oct 30, 2024 05:50 PM IST
ದುಲ್ಕರ್ ಸಲ್ಮಾನ್ ಸಂದರ್ಶನ: ಲಕ್ಕಿ ಬಾಸ್ಕರ್ ಸಿನಿಮಾದ ಕುರಿತು ಮಾತುಕತೆ
- ದುಲ್ಕರ್ ಸಲ್ಮಾನ್ ಮುಖ್ಯಪಾತ್ರದಲ್ಲಿ ನಟಿಸಿರುವ ಲಕ್ಕಿ ಬಾಸ್ಕರ್ ಸಿನಿಮಾವು ಅಕ್ಟೋಬರ್ 31, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೀನಾಕ್ಷಿ ಚೌಧರಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಕುರಿತ ಪ್ರಶ್ನೆಗೆ ದುಲ್ಕರ್ ಸಲ್ಮಾನ್ ಉತ್ತರಿಸಿದ್ದಾರೆ.
ಲಕ್ಕಿ ಬಾಸ್ಕರ್ ನಾಳೆ ಅಂದರೆ ದೀಪಾವಳಿ ವಾರದಲ್ಲಿ( ಅಕ್ಟೋಬರ್ 31, 2024) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಲಕ್ಕಿ ಭಾಸ್ಕರ್ ಹೆಸರನ್ನು ಈ ಚಿತ್ರದಲ್ಲಿ ಲಕ್ಕಿ ಬಾಸ್ಕರ್ ಎಂದು ಉಚ್ಚರಿಸಲಾಗುತ್ತದೆ. ಲಕ್ಕಿ ಬಾ*ಸ್ಟ*ರ್ಡ್ ಸಂವಾದಿಯಾಗಿ ಈ ಪದವನ್ನು ಬಳಸಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಕನ್ನಡದ ಸಹೋದರಿ ತಾಣ "ಓಟಿಟಿಪ್ಲೇ"ಗೆ ನೀಡಿದ ಸಂದರ್ಶನದಲ್ಲಿ ನಟ ದುಲ್ಕರ್ ಸಲ್ಮಾನ್ ಸಿನಿಮಾದ ಕುರಿತು ಸಾಕಷ್ಟು ಮಾತನಾಡಿದ್ದಾರೆ.
ಲಕ್ಕಿ ಬಾಸ್ಕರ್ ಎಂಬ ಈ ಯೋಜನೆ ಹೇಗೆ ಆರಂಭವಾಯಿತು?
ಸಿತಾರಾ ಎಂಟರ್‌ಟೈನ್‌ಮೆಂಟ್‌ನ ಮಾಲೀಕ ನಾಗ ವಂಶಿ ಅವರು ನನಗೆ ಕರೆ ಮಾಡಿ ಒಂದು ರೋಚಕ ಕಥೆಯನ್ನು ಸಿದ್ಧಪಡಿಸಿದ್ದಾರೆ ಮತ್ತು ಅದನ್ನು ಹೇಳಲು ನಿರ್ದೇಶಕ ವೆಂಕಿ ಅಟ್ಲೂರಿ ಅವರನ್ನು ಕಳುಹಿಸುವುದಾಗಿ ಹೇಳಿದರು. ಆಗ ನನ್ನ ಮನಸ್ಸಲ್ಲಿ ಇದ್ದದ್ದು ಬೇರೆ. ಇದು ಮತ್ತೊಂದು ಪ್ರೇಮಕಥೆ ಎಂದುಕೊಂಡೆ. ಪ್ರೇಮಕಥೆಯಾಗಿದ್ದರೆ ನಯವಾಗಿ ನಿರಾಕರಿಸಬೇಕೆಂದುಕೊಂಡಿದ್ದೆ. ಆದರೆ ವೆಂಕಿ ಅವರು ತೆಲುಗು ಚಿತ್ರರಂಗದಲ್ಲಿ ಹೊಸ ಪ್ರಕಾರವನ್ನು ಸ್ಪರ್ಶಿಸುವ ಬ್ಯಾಂಕಿಂಗ್ ಜಗತ್ತಿನಲ್ಲಿ ಕಥೆಯನ್ನು ಹೇಳಿದಾಗ ನನಗೆ ಸಖತ್ ಅಚ್ಚರಿಯಾಯ್ತು. ಸ್ಕ್ರಿಪ್ಟ್ ಕೇಳಿದ ತಕ್ಷಣ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದೆ.
ಈ ಸಿನಿಮಾ ಹಲವು ಬಾರಿ ಪೋಸ್ಟ್ ಪೋನ್ ಆಯ್ತು, ಮುಂದೂಡಿದ್ದಕ್ಕೆ ಬೇಜಾರಾಯ್ತ?
ಹೌದು. ನನ್ನ ಸಿನಿಮಾ ಶೆಡ್ಯೂಲ್‌ಗಳ ಕಾರಣದಿಂದ ಸಾಕಷ್ಟು ಮುಂದೂಡಲಾಯಿತು. ನನ್ನ ಸಿನಿಮಾದ ದಿನಾಂಕಗಳ ತೊಂದರೆಯಾಯ್ತು. ಕೆಲವು ತೊಂದರೆಗಳು ಉಂಟಾದವು. ಇದರಿಂದ ಮುಂದೂಡಬೇಕಾಯಿತು. ಆದರೆ, ಈ ಸಿನಿಮಾ ಕಾಯಲು ಯೋಗ್ಯವಾಗಿದೆ. ಖಂಡಿತವಾಗಿಯೂ ತನ್ನ ಆಕರ್ಷಕ ನಿರೂಪಣೆಯಿಂದ ಎಲ್ಲರನ್ನೂ ಆಕರ್ಷಿಸಲಿದೆ. ಸೆಟ್‌ಗಳು, ಕಾಸ್ಟಿಂಗ್, ಪ್ರದರ್ಶನ, ಕಥೆ ಹೇಳುವ ರೀತಿ ಎಲ್ಲವೂ ನಿಮ್ಮನ್ನೂ ಹಣವೇ ಸರ್ವಸ್ವ ಎಂಬ ಯುಗಕ್ಕೆ ಕೊಂಡೊಯ್ಯುತ್ತದೆ.
ಚಿತ್ರದ ಯಾವ ಅಂಶಗಳು ನಿಮ್ಮನ್ನು ಹೆಚ್ಚು ಪ್ರಭಾವಿಸಿದವು?
ಲಕ್ಕಿ ಬಾಸ್ಕರ್ ಮೂಲಭೂತವಾಗಿ ಹಣದೊಂದಿಗಿನ ಮನುಷ್ಯನ ಪ್ರೇಮ ಸಂಬಂಧದ ಕಥೆಯಾಗಿದೆ. ಇದು ಪಿರೆಯಿಡಿಕಲ್ ಡ್ರಾಮಾ. ನನ್ನ ಸಾಮರ್ಥ್ಯವನ್ನು ಅನ್ವೇಷಿಸಲು ನೆರವಾಯಿತು. ಬಾಸ್ಕರನ ಪಾತ್ರ, ಅವನ ಹಣಕಾಸಿನ ತೊಂದರೆಗಳು, ಅವನ ಶ್ರೀಮಂತನಾದ ಬಳಿಕ ಹೇಗೆ ಬದಲಾಗುತ್ತಾನೆ ಇತ್ಯಾದಿಗಳನ್ನು ಬಹಳ ರೋಮಾಂಚಕವಾಗಿ ಚಿತ್ರಿಸಲಾಗಿದೆ. ಈ ಸಿನಿಮಾದಲ್ಲಿ ಪ್ರೇಕ್ಷಕರು ಹೊಸ ದುಲ್ಕರ್ ಸಲ್ಮಾನ್‌ನನ್ನು ನೋಡಲಿದ್ದಾರೆ.
ಲಕ್ಕಿ ಬಾಸ್ಕರ್ ಚಿತ್ರಕ್ಕೆ ನೀವು ಹೇಗೆ ತಯಾರಿ ನಡೆಸಿದ್ದೀರಿ?
ಈ ಸಿನಿಮಾವನ್ನು ವಿಶೇಷ ಸೆಟ್‌ನಲ್ಲಿ ಚಿತ್ರೀಕರಿಸಲಾಗಿದೆ. ನಿಜವಾದ ಶೂಟಿಂಗ್ ಪ್ರಾರಂಭವಾಗುವ ಮೊದಲು ತಯಾರಿ ಮಾಡಲು ನಮಗೆ ಸಾಕಷ್ಟು ಸಮಯವನ್ನು ನೀಡುತ್ತದೆ. ವೆಂಕಿ, ಮೀನಾಕ್ಷಿ ಮತ್ತು ನಾನು ಪಾತ್ರಗಳನ್ನು ಮಾಡಲು ಹಲವಾರು ಕಾರ್ಯಾಗಾರಗಳಲ್ಲಿ ಪಾಲ್ಗೊಂಡೆವು.ನಾನು 80 ರ ದಶಕದ ಉತ್ತರಾರ್ಧದಿಂದ ಬ್ಯಾಂಕರ್ ಆಗಿ ನಟಿಸಿದ್ದೆ. ಹಳೆ ಶಾಲಾ ವಿದ್ಯಾರ್ಥಿಗಳ ದೇಹ ಭಾಷೆ, ಶಾಂತ ಮನೋಭಾವ ಹೊಂದಿರಬೇಕಿತ್ತು. ವೆಂಕಿ ಅವರ ಮಾರ್ಗದರ್ಶನ ಅನುಸರಿಸಿ ನಟಿಸಿದೆ, ಎಲ್ಲವೂ ಸುಗಮವಾಯ್ತು.
ವೆಂಕಿ ಅಟ್ಲೂರಿ ಜೊತೆ ಕೆಲಸ ಮಾಡಿದ ಅನುಭವ ಹೇಗಿತ್ತು?
ವೆಂಕಿ ತುಂಬಾ ಮೃದು ಸ್ವಭಾವದ ನಿರ್ದೇಶಕರು. ಸ್ಪಷ್ಟ ದೃಷ್ಟಿಯುಳ್ಳವರು. ಸ್ಟಾಕ್ ಎಕ್ಸ್ಚೇಂಜ್ ಅಂಶಗಳೊಂದಿಗೆ ಬ್ಯಾಂಕಿಂಗ್ ಹಿನ್ನೆಲೆಯಲ್ಲಿ ಕಥೆಯನ್ನು ಅವರು ರೂಪಿಸಿದ ರೀತಿ ಚಿತ್ರಕ್ಕೆ ರಿಫ್ರೆಶ್ ಟಚ್ ನೀಡುತ್ತದೆ. ಈ ಎಲ್ಲದರ ಜತೆಗೆ ಗಂಡ ಮತ್ತು ಹೆಂಡತಿಯ ನಡುವಿನ ಆಳವಾದ ಭಾವನಾತ್ಮಕ ಕಥೆಯಿದೆ. ವೆಂಕಿ ಅವರು ತುಂಬಾ ಸ್ಪಷ್ಟ ಆಲೋಚನೆ ಹೊಂದಿದ್ದಾರೆ. ಕೆಲಸದ ರೀತಿಯಲ್ಲಿ ಯಾವುದೇ ಸವಾಲು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ.
ಮೀನಾಕ್ಷಿ ಚೌಧರಿ ಅವರೊಂದಿಗಿನ ನಂಟಿನ ಬಗ್ಗೆ ತಿಳಿಸಿ
ನಮ್ಮ ಸಿನಿಮಾಕ್ಕೆ ಕೊನೆಯದಾಗಿ ಮೀನಾಕ್ಷಿ ಚೌಧರಿಯನ್ನು ಆಯ್ಕೆ ಮಾಡಿಕೊಂಡೆವು. ಮೀನಾಕ್ಷಿ ಚೌಧರಿಯನ್ನು ಫೈನಲ್ ಮಾಡುವ ಮೊದಲು ನಾಯಕಿಯ ಹಲವು ಮುಖಗಳನ್ನು, ನಟನೆಗಳನ್ನು ಪರೀಕ್ಷಿಸಿದರು. ಲಕ್ಕಿ ಬಾಸ್ಕರ್‌ನಲ್ಲಿ ಮೀನಾಕ್ಷಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಇಲ್ಲಿ ಮೆಲೋಡ್ರಾಮಾ ಇಲ್ಲ. ವೆಂಕಿ ಅವರು ಅತ್ಯಂತ ನೈಜವಾಗಿ ಚಿತ್ರೀಕರಿಸಿದ್ದಾರೆ.
ಲಕ್ಕಿ ಬಾಸ್ಕರ್ ಸಿನಿಮಾದ ಪ್ರಮುಖ ಹೈಲೈಟ್‌ಗಳು ಯಾವುವು?
ಚಿತ್ರವು ಹಲವಾರು ತಿರುವುಗಳನ್ನು ಹೊಂದಿದ್ದು ಅದು ಪ್ರೇಕ್ಷಕರನ್ನು ಆಶ್ಚರ್ಯಗೊಳಿಸುತ್ತದೆ. ಹಣದ ಮೇಲಿನ ಪ್ರೇಮ, ಅದು ಬಾಸ್ಕರ್‌ಗೆ ಸೃಷ್ಟಿಸುವ ಸಮಸ್ಯೆಗಳ ಕುರಿತು ಮಾತನಾಡುತ್ತದೆ. ಇದೇ ಸಮಯದಲ್ಲಿ ಇಂತಹ ಕಾಡುವ ಸಮಸ್ಯೆಗಳನ್ನು ಅವನು ಹೇಗೆ ನಿಭಾಯಿಸುತ್ತಾನೆ ಎನ್ನುವುದನ್ನು ಆಕರ್ಷಕವಾಗಿ ಚಿತ್ರೀಕರಿಸಲಾಗಿದೆ. ಪ್ರೇಕ್ಷಕರು ಖಂಡಿತವಾಗಿಯೂ ಬಾಸ್ಕರ್‌ನ ಪಾತ್ರದಲ್ಲಿ ಲೀನವಾಗಿ ತಲ್ಲೀನವಾಗಿ ಹೋಗುತ್ತಾರೆ. ಹಣದ ಬಗೆಗಿನ ಒಂದು ಸುಂದರವಾದ ಆಧುನಿಕ ಸಿನಿಮಾ ಇದು ಎಂದು ಹೇಳುವೆ.
ಸಂದರ್ಶನ ಕೃಪೆ: ಓಟಿಟಿಪ್ಲೇ