Lucky Baskhar OTT: ಲಕ್ಕಿ ಬಾಸ್ಕರ್ ಆನ್‌ಲೈನ್ ಸ್ಕ್ರೀಮಿಂಗ್ ಯಾವಾಗ? ದುಲ್ಕರ್ ಸಲ್ಮಾನ್ ನಟನೆಯ ಸಿನಿಮಾದ ಓಟಿಟಿ ವಿವರ
Oct 31, 2024 04:23 PM IST
Lucky Baskhar OTT: ಲಕ್ಕಿ ಬಾಸ್ಕರ್ ಆನ್‌ಲೈನ್ ಸ್ಕ್ರೀಮಿಂಗ್ ಯಾವಾಗ?
- Lucky Baskhar OTT release: ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಥಿಯೇಟರ್ ರನ್ ಬಳಿಕ ಓಟಿಟಿಗೆ ಆಗಮಿಸಲಿದೆ. ಸದ್ಯ ಈ ಸಿನಿಮಾದ ಓಟಿಟಿ ಪಾಟ್ನರ್ ಯಾರೆಂಬ ವಿವರ ಲಭ್ಯವಾಗಿದೆ. ಈ ಸಿನಿಮಾದಲ್ಲಿ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಿದ್ದಾರೆ.
Lucky Baskhar OTT release: ತೆಲುಗಿನ ಕ್ರೈಮ್ ಜಾನರ್‌ನ ಲಕ್ಕಿ ಬಾಸ್ಕರ್ ಸಿನಿಮಾವು ಅಕ್ಟೋಬರ್ 31ರಂದು ಬಿಡುಗಡೆಯಾಗಿದೆ. ದುಲ್ಕರ್ ಸಲ್ಮಾನ್ ನಟನೆಯ ಈ ಚಿತ್ರದ ಕುರಿತು ಎಲ್ಲೆಡೆ ಮೆಚ್ಚುಗೆಯ ಮಾತು ಕೇಳಿ ಬರುತ್ತಿದೆ. ಈ ಸಿನಿಮಾಖ್ಕೆ ವೆಂಕಿ ಅಟ್ಲೂರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ವಾರಗಳ ಕಾಲ ಪ್ರೇಕ್ಷಕರನ್ನು ಸೆಳೆಯುವ ಸೂಚನೆಯಿದೆ. ಥಿಯೇಟರ್‌ಗಳಲ್ಲಿ ಜನದಟ್ಟಣೆ ಕಡಿಮೆಯಾದ ಬಳಿಕ ಈ ಸಿನಿಮಾ ಓಟಿಟಿಯತ್ತ ಮುಖ ಮಾಡಲಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ನೋಡಿ ಲಕ್ಕಿ ಬಾಸ್ಕರ್
ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ಸಿನಿಮಾವು ತನ್ನ ಥಿಯೇಟರ್ ಓಟ ಮುಗಿಸಿದ ಬಳಿಕ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಸದ್ಯ ಇದರ ಓಟಿಟಿ ಪಾಟ್ನರ್ ವಿವರ ದೊರಕಿದರೂ ಓಟಿಟಿಯಲ್ಲಿ ಬಿಡುಗಡೆಯಾಗುವ ದಿನಾಂಕ ಇನ್ನೂ ಖಚಿತವಾಗಿಲ್ಲ.
ಲಕ್ಕಿ ಬಾಸ್ಕರ್ ಸಿನಿಮಾದ ಕಥೆ
ಮೂರು ವರ್ಷ ಕಷ್ಟಪಟ್ಟು ಬ್ಯಾಂಕ್‌ನಲ್ಲಿ ಕೆಲಸ ಮಾಡಿದರೂ ಬಡ್ತಿ ದೊರಕದ ವ್ಯಕ್ತಿಯ ಕಥೆ ಇದಾಗಿದೆ. ಆತ ಬಳಿಕ ಅಡ್ಡದಾರಿ ಮೂಲಕ ಹಣ ಸಂಪಾದನೆಗೆ ಮುಂದಾಗುತ್ತಾನೆ. ಬ್ಯಾಂಕ್‌ನಿಂದ ಹಣ ಕದಿಯುತ್ತಾನೆ. ದೊಡ್ಡಮಟ್ಟದಲ್ಲಿ ಲಾಭವನ್ನೂ ಗಳಿಸುತ್ತಾನೆ. ಈ ರೀತಿ ಸುಲಭವಾಗಿ ಹಣ ಸಂಪಾದನೆ ಮಾಡಬಹುದೆಂದು ತಿಳಿದ ಬಳಿಕ ಬಾಸ್ಕರ್‌ನ ದುರಾಸೆ ಹೆಚ್ಚುತ್ತದೆ. ಹಣದ ಮೇಲಿನ ಆಸೆಯು ಅವನನ್ನು ತೀವ್ರ ತೊಂದರೆಗೆ ಸಿಲುಕಿಸುತ್ತದೆ ಎಂದು ಅವನಿಗೆ ಗೊತ್ತಿಲ್ಲ. ಈ ಸವಾಲುಗಳನ್ನು ಆತ ಹೇಗೆ ಬಗೆಹರಿಸುತ್ತಾನೆ ಎನ್ನುವುದು ಈ ಸಿನಿಮಾದ ಕಥೆಯ ಮೂಲವಾಗಿದೆ. ಆರಂಭದಲ್ಲಿ ಇದು ನೈಜ ಕಥೆ ಆಧರಿತ ಎಂದು ಹೇಳಲಾಗಿತ್ತು. ಆದರೆ, ಚಿತ್ರತಂಡವು ಇದು ಬಯೋಪಿಕ್ ಅಲ್ಲ ಎಂದು ಖಚಿತಪಡಿಸಿದೆ.
ಲಕ್ಕಿ ಬಾಸ್ಕರ್ ಸಿನಿಮಾದ ವಿಮರ್ಶೆ
ತೆಲುಗು ಚಿತ್ರರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕುರಿತಾದ ಚಲನಚಿತ್ರಗಳು ಅಪರೂಪ. ನಿರ್ದೇಶಕ ವೆಂಕಿ ಅಟ್ಲೂರಿ ಈ ವಿಷಯವನ್ನು ಕೌಟುಂಬಿಕ ನಾಟಕದ ಟ್ವಿಸ್ಟ್‌ನೊಂದಿಗೆ ತೆರೆಗೆ ತಂದಿದ್ದಾರೆ. ಮೀನಾಕ್ಷಿ ಚೌಧರಿ ಅವರು ತಮ್ಮ ಪಾತ್ರವನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಸಿಬಿಐ ಅಧಿಕಾರಿಯಾಗಿ ಸಾಯಿ ಕುಮಾರ್ ಮತ್ತು ಬ್ಯಾಂಕ್ ಎಂಡಿಯಾಗಿ ಟಿನು ಆನಂದ್ ತಮ್ಮ ಪಾತ್ರಗಳಲ್ಲಿ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಎಡಿಟಿಂಗ್ ಗರಿಗರಿಯಾಗಿದೆ. ಸಂಭಾಷಣೆಗಳನ್ನು ಅತ್ಯುತ್ತಮವಾಗಿ ಬರೆಯಲಾಗಿದೆ. ಪ್ರೊಡಕ್ಷನ್‌ಗೆ ಹೆಚ್ಚಿನ ಕಾಳಜಿ ವಹಿಸಿರುವುದು ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸುತ್ತದೆ.
ಸ್ಕ್ರಿಪ್ಟ್ ಕೇಳಿದ ಕೂಡಲೇ ಒಪ್ಪಿದ್ರಂತೆ ದುಲ್ಕರ್ ಸಲ್ಮಾನ್
ಈ ಸಿನಿಮಾಕ್ಕೆ ತಾನು ಒಪ್ಪಿಗೆ ನೀಡಿರುವ ಸಂದರ್ಭದ ವಿಚಾರಗಳನ್ನು ದುಲ್ಕರ್ ಸಲ್ಮಾನ್ ಸಂದರ್ಶನದಲ್ಲಿ ತಿಳಿಸಿದ್ದಾರೆ. "ತೆಲುಗು ಚಿತ್ರರಂಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಕುರಿತಾದ ಚಲನಚಿತ್ರಗಳು ಅಪರೂಪ. ನಿರ್ದೇಶಕ ವೆಂಕಿ ಅಟ್ಲೂರಿ ಈ ವಿಷಯವನ್ನು ಕೌಟುಂಬಿಕ ನಾಟಕದ ಟ್ವಿಸ್ಟ್‌ನೊಂದಿಗೆ ತೆರೆಗೆ ತಂದಿದ್ದಾರೆ. "ಸಿತಾರಾ ಎಂಟರ್‌ಟೈನ್‌ಮೆಂಟ್‌ನ ಮಾಲೀಕ ನಾಗ ವಂಶಿ ಅವರು ನನಗೆ ಕರೆ ಮಾಡಿ ಒಂದು ರೋಚಕ ಕಥೆಯನ್ನು ಸಿದ್ಧಪಡಿಸಿದ್ದಾರೆ ಮತ್ತು ಅದನ್ನು ಹೇಳಲು ನಿರ್ದೇಶಕ ವೆಂಕಿ ಅಟ್ಲೂರಿ ಅವರನ್ನು ಕಳುಹಿಸುವುದಾಗಿ ಹೇಳಿದರು. ಆಗ ನನ್ನ ಮನಸ್ಸಲ್ಲಿ ಇದ್ದದ್ದು ಬೇರೆ. ಇದು ಮತ್ತೊಂದು ಪ್ರೇಮಕಥೆ ಎಂದುಕೊಂಡೆ. ಪ್ರೇಮಕಥೆಯಾಗಿದ್ದರೆ ನಯವಾಗಿ ನಿರಾಕರಿಸಬೇಕೆಂದುಕೊಂಡಿದ್ದೆ" ಎಂದು ಅವರು ಹೇಳಿದ್ದಾರೆ. "ವೆಂಕಿ ಅವರು ತೆಲುಗು ಚಿತ್ರರಂಗದಲ್ಲಿ ಹೊಸ ಪ್ರಕಾರವನ್ನು ಸ್ಪರ್ಶಿಸುವ ಬ್ಯಾಂಕಿಂಗ್ ಜಗತ್ತಿನಲ್ಲಿ ಕಥೆಯನ್ನು ಹೇಳಿದಾಗ ನನಗೆ ಸಖತ್ ಅಚ್ಚರಿಯಾಯ್ತು. ಸ್ಕ್ರಿಪ್ಟ್ ಕೇಳಿದ ತಕ್ಷಣ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದೆ" ಎಂದು ದುಲ್ಕರ್ ಸಲ್ಮಾನ್ ಹೇಳಿದ್ದಾರೆ. ಪೂರ್ತಿ ಸಂದರ್ಶನ ಇಲ್ಲಿದೆ ಓದಿ.