Mahesh Bhatt about his Mother: ಹೆತ್ತ ತಾಯಿ ಬಗ್ಗೆಯೇ ಈ ರೀತಿ ಮಾತಾಡಿದ್ರಾ ನಿರ್ದೇಶಕ ಮಹೇಶ್ ಭಟ್...!
Sep 20, 2022 06:07 PM IST
ಪುತ್ರಿ ಹಾಗೂ ಪತ್ನಿಯೊಂದಿಗೆ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್
- ನಾನು ಮುಸ್ಲಿಂ ತಾಯಿಯ ಅಕ್ರಮ ಸಂಬಂಧದಿಂದ ಹುಟ್ಟಿದವನು ಎಂದು ಹೇಳಿಕೊಂಡಿದ್ದರು. ತಾಯಿ ಹೆಸರು ಶಿರೀನ್ ಮೊಹಮ್ಮದ್ ಅಲಿ. ನನಗೆ ತಂದೆ ಯಾರು ಎಂದು ತಿಳಿದಿದ್ದರೂ ಅವರು ನನಗೆ ಅಪರಿಚಿತರಂತೆ ಇದ್ದರು ಎಂದು ಮಹೇಶ್ ಭಟ್ ಸಂದರ್ಶನದಲ್ಲಿ ಹೇಳಿದ್ದರು.
ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಹಿಂದಿ ಚಿತ್ರರಂಗಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅವರ ಸಿನಿಮಾಗಳು ಎಷ್ಟು ಫೇಮಸ್ ಆಗಿದ್ಯೋ, ಅವರ ಮಾತುಗಳು ಅಷ್ಟೇ ವಿವಾದದಿಂದ ಕೂಡಿರುತ್ತದೆ. ಸುಮಾರು 4 ವರ್ಷಗಳ ಹಿಂದೆ ಅವರು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಆಡಿದ ಕೆಲವೊಂದು ಮಾತುಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಸಂದರ್ಶನದಲ್ಲಿ ಮಹೇಶ್ ಭಟ್ ಹೆತ್ತವರ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರಿಸಿದ ಅವರು, ನಾನು ಮುಸ್ಲಿಂ ತಾಯಿಯ ಅಕ್ರಮ ಸಂಬಂಧದಿಂದ ಹುಟ್ಟಿದವನು ಎಂದು ಹೇಳಿಕೊಂಡಿದ್ದರು. ತಾಯಿ ಹೆಸರು ಶಿರೀನ್ ಮೊಹಮ್ಮದ್ ಅಲಿ. ನನಗೆ ತಂದೆ ಯಾರು ಎಂದು ತಿಳಿದಿದ್ದರೂ ಅವರು ನನಗೆ ಅಪರಿಚಿತರಂತೆ ಇದ್ದರು. ನನಗೆ ಮಹೇಶ್ ಭಟ್ ಎಂದು ಹೆಸರಿಟ್ಟಿದ್ದು ಯಾರು ಎಂಬುದನ್ನು ನನ್ನ ತಾಯಿಗೆ ಕೇಳಿದೆ, ಅದಕ್ಕೆ ಅವರು ತಂದೆಯನ್ನು ಕೇಳಿ ಉತ್ತರಿಸುತ್ತೇನೆ ಎಂದಿದ್ದರು. ನನಗೆ ಹೆಸರಿಟ್ಟಿದ್ದು ನನ್ನ ತಂದೆ ಎಂಬ ವಿಚಾರ ನಂತರ ತಿಳಿಯಿತು. ನನಗೆ ಈಶ್ವರನ ಹೆಸರಿಟ್ಟಿದ್ದಾರೆ. ಮಾತೆ ಪಾರ್ವತಿ ಸ್ನಾನ ಮಾಡಲು ಹೋಗುವಾಗ ತಾನು ಸೃಷ್ಟಿಸಿದ್ದ ಬಾಲಕನನ್ನು ಈಶ್ವರ ಸಂಹರಿಸಿದ್ದ. ಆ ಕಾರಣದಿಂದ ನನಗೆ ಆಗ ಆ ದೇವರೆಂದರೆ ಇಷ್ಟ ಇರಲಿಲ್ಲ. ಆದರೆ ನನಗೆ ಗಣೇಶ ಎಂದರೆ ಬಹಳ ಇಷ್ಟ ಎಂದು ಮಹೇಶ್ ಭಟ್ ಸಂದರ್ಶನದಲ್ಲಿ ಹೇಳಿದ್ದರು. ಮಹೇಶ್ ಭಟ್ ಅವರ ಮಾತುಗಳನ್ನು ಕೇಳಿದವರು ತಾಯಿ ಬಗ್ಗೆ ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದು ತಪ್ಪು ಎನ್ನುತ್ತಿದ್ದಾರೆ.
ಮಹೇಶ್ ಭಟ್ ತಂದೆ ನಾನಾಭಾಯ್ ಭಟ್, ಅವರೂ ಕೂಡಾ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ನಾನಾಭಾಯ್ ಭಟ್ ಹಾಗೂ ಶಿರಿನ್ ಮೊಹ್ಮದ್ ಅಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಧರ್ಮ ಬೇರೆ ಆದ್ದರಿಂದ ಸಮಾಜಕ್ಕೆ ಹೆದರೆ ಇಬ್ಬರೂ ಮದುವೆಯಾಗಲಿಲ್ಲ ಎನ್ನಲಾಗಿದೆ. ಮಹೇಶ್ ಭಟ್, ಆಶಿಕಿ, ಸಡಕ್, ಜುನೂನ್, ಕ್ರಿಮಿನಲ್, ದಸ್ತಕ್, ಡೂಪ್ಲಿಕೇಟ್, ಜಿಸ್ಮ್, ಮರ್ಡರ್ ಸೇರಿ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಪೂಜಾ ಭಟ್ ಹಾಗೂ ರಾಹುಲ್, ಮಹೇಶ್ ಭಟ್ ಮೊದಲ ಪತ್ನಿ ಕಿರಣ್ ಭಟ್‌ಗೆ ಜನಿಸಿದ ಮಕ್ಕಳು. ನಂತರ ಮಹೇಶ್ ಭಟ್ ಸೋನಿ ರಾಜ್ದನ್ ಅವರನ್ನು ಮದುವೆಯಾದರು. ಈ ದಂಪತಿಗೆ ಜನಿಸಿದ ಮಗಳೇ ಆಲಿಯಾ ಭಟ್. ಆಲಿಯಾಗೆ ಶಾಹಿನ್ ಎಂಬ ಅಕ್ಕ ಇದ್ದಾರೆ. ಪೂಜಾ ಭಟ್ 80-90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿದ್ದರು. ಆದರೆ ಈಗ ಆಕೆ ನಟನೆಯಿಂದ ದೂರ ಸರಿದು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಆಲಿಯಾ ಭಟ್ ಸದ್ಯಕ್ಕೆ ಬಾಲಿವುಡ್‌ನಲ್ಲಿ ಹೆಸರು ಮಾಡಿರುವ ನಟಿ. ಆಲಿಯಾ ಈಗ 5 ತಿಂಗಳ ಗರ್ಭಿಣಿ. ಇತ್ತೀಚೆಗೆ ಪತಿ ರಣಬೀರ್ ಕಪೂರ್ ಜೊತೆ ನಟಿಸಿದ್ದ ಬ್ರಹ್ಮಾಸ್ತ್ರ ಸಿನಿಮಾ ತೆರೆ ಕಂಡಿದೆ.