OTT Movies: ಒಂದೇ ಒಟಿಟಿಯಲ್ಲಿ ಮೆಕ್ಯಾನಿಕ್ ರಾಕಿ, ಜೀಬ್ರಾ ಸಿನಿಮಾ ಬಿಡುಗಡೆ, ಯಾವ ಒಟಿಟಿ, ಯಾವಾಗ ರಿಲೀಸ್? ಇಲ್ಲಿದೆ ವಿವರ
Nov 23, 2024 06:38 PM IST
OTT Movies: ಒಂದೇ ಒಟಿಟಿಯಲ್ಲಿ ಮೆಕ್ಯಾನಿಕ್ ರಾಕಿ, ಜೀಬ್ರಾ ಸಿನಿಮಾ ಬಿಡುಗಡೆ, ಯಾವ ಒಟಿಟಿ?
- OTT Release Movies Telugu: ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ತೆಲುಗು ಸಿನಿಮಾಗಳಾದ ಮೆಕ್ಯಾನಿಕ್ ರಾಕಿ ಮತ್ತು ಜೀಬ್ರಾ ಒಂದು ತಿಂಗಳಲ್ಲಿ ಒಟಿಟಿಗೆ ಆಗಮಿಸುವ ಸೂಚನೆಯಿದೆ. ಇದರ ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಸ್ಟ್ರೀಮಿಂಗ್ ವಿವರ ಈಗಾಗಲೇ ಬಹಿರಂಗವಾಗಿದೆ.
OTT Movies: ತೆಲುಗು ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಬಯಸುವವರಿಗೆ ಹೊಸ ಹೊಸ ಸಿನಿಮಾಗಳು ಲಭ್ಯ ಇವೆ. ಈ ವಾರ ಬಿಡುಗಡೆಯಾದ ಮೆಕ್ಯಾನಿಕ್ ರಾಕಿ, ಜೀಬ್ರಾ ಸಿನಿಮಾಗಳು ಶೀಘ್ರದಲ್ಲಿ ಒಟಿಟಿಯತ್ತ ಮುಖ ಮಾಡುವ ಸೂಚನೆಯಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಿನಿಮಾಗಳು ಒಟಿಟಿಗೆ ಆಗಮಿಸುತ್ತಿವೆ. ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಲವು ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತವೆ. ಆದರೆ, ಬಹುತೇಕ ಸಿನಿಮಾಗಳು 20-30 ದಿನಗಳಲ್ಲಿ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತವೆ.
ಈಗ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುವ ಅಥವಾ ಬಿಡುಗಡೆಯಾಗುವ ಮುನ್ನವೇ ರಿಲೀಸ್ ಡೇಟ್ ಗೊತ್ತಾಗುತ್ತದೆ. ನವೆಂಬರ್ 22 ಅಂದರೆ ನಿನ್ನೆ ಬಿಡುಗಡೆಯಾದ ತೆಲುಗು ಸಿನಿಮಾಗಳಾದ ಮೆಕ್ಯಾನಿಕ್ ರಾಕಿ ಮತ್ತು ಜೀಬ್ರಾದ ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಸ್ಟ್ರೀಮಿಂಗ್ ವಿವರ ಈಗಾಗಲೇ ಬಹಿರಂಗವಾಗಿದೆ.
ಮೆಕ್ಯಾನಿಕ್ ರಾಕಿ ಒಟಿಟಿ ಬಿಡುಗಡೆ ಯಾವಾಗ?
ವಿಶ್ವಕ್ ಸೇನ್ ಅವರ ಇತ್ತೀಚಿನ ಚಿತ್ರ ಮೆಕ್ಯಾನಿಕ್ ರಾಕಿ. ಮೀನಾಕ್ಷಿ ಚೌಧರಿ ಮತ್ತು ಶ್ರದ್ಧಾ ಶ್ರೀನಾಥ್ ಈ ಸಿನಿಮಾದಲ್ಲಿ ನಾಯಕಿಯರು. ರವಿತೇಜ ಮುಳ್ಳಪುಡಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದಾರೆ. ಎಸ್‌ಆರ್‌ಟಿ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ರಾಮ್ ತಲ್ಲೂರಿ ನಿರ್ಮಿಸಿರುವ ಮೆಕ್ಯಾನಿಕ್ ರಾಕಿ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಈ ಸಿನಿಮಾದ ಕುರಿತು ಒಂದಿಷ್ಟು ನೆಗೆಟಿವ್ ವಿಮರ್ಶೆಗಳು ಕೇಳಿಬರುತ್ತಿವೆ. ಮೆಕ್ಯಾನಿಕ್ ರಾಕಿಯ ಮೊದಲಾರ್ಧವು ತುಂಬಾ ನೀರಸವಾಗಿದೆ. ನಿರೂಪಣೆ ಆಮೆಗತಿಯಲ್ಲಿ ಸಾಗುತ್ತದೆ. ಆದರೆ, ದ್ವಿತೀಯಾರ್ಧ ಥ್ರಿಲ್ಲಿಂಗ್ ಅಂಶಗಳಿಂದ ತುಂಬಿದೆ. ಚಿತ್ರದ ಮೊದಲಾರ್ಧವೂ ಅದೇ ರೀತಿ ಇರುತ್ತಿದ್ದರೆ ಸೂಪರ್ ಹಿಟ್ ಆಗಿರುತ್ತಿತ್ತು ಎಂಬ ಅಭಿಪ್ರಾಯವಿದೆ.
ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿರುವ ವಿಶ್ವಕ್ ಸೇನ್ ಅವರ ಮೆಕ್ಯಾನಿಕ್ ರಾಕಿಯ ಒಟಿಟಿ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಮೆಕ್ಯಾನಿಕ್ ರಾಕಿ ಒಟಿಟಿಯಲ್ಲಿ ಡಿಸೆಂಬರ್ ಮಧ್ಯದಲ್ಲಿ ಅಥವಾ ಡಿಸೆಂಬರ್ ಕೊನೆಯ ವಾರ ಬಿಡುಗಡೆಯಾಗುವ ಸಾಧ್ಯತೆಯಿದೆ. ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಬಾಕ್ಸ್ ಆಫೀಸ್ ಕಲೆಕ್ಷನ್ ಆಧಾರದಲ್ಲಿ ಮೆಕ್ಯಾನಿಕ್ ರಾಕಿಯ ಒಟಿಟಿ ಬಿಡುಗಡೆ ದಿನಾಂಕದಲ್ಲಿ ವ್ಯತ್ಯಾಸವಾಗಬಹುದು.
ಜೀಬ್ರಾ ಒಟಿಟಿ ಬಿಡುಗಡೆ ವಿವರ
ಮೆಕ್ಯಾನಿಕ್ ರಾಕಿ ಜೊತೆಗೆ ಮತ್ತೊಂದು ತೆಲುಗು ಚಿತ್ರ ಜೀಬ್ರಾ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಜೀಬ್ರಾ ಬ್ಯಾಂಕಿಂಗ್ ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಯುವ ನಾಯಕ ಸತ್ಯದೇವ್, ಕನ್ನಡ ನಟ ಡಾಲಿ ಧನುಂಜಯ ನಟಿಸಿದ್ದಾರೆ. ಜೀಬ್ರಾ ಚಿತ್ರವನ್ನು ಈಶ್ವರ್ ಕಾರ್ತಿಕ್ ನಿರ್ದೇಶಿಸಿದ್ದಾರೆ. ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಜೀಬ್ರಾ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ಮತ್ತು ಜೆನ್ನಿಫರ್ ಪಿಸಿನಾಟೊ ನಾಯಕಿಯರಾಗಿ ನಟಿಸಿದ್ದಾರೆ. ಬ್ಯಾಂಕ್ ಉದ್ಯೋಗಿ ಬ್ಯಾಂಕಿನ ಲೋಪದೋಷಗಳನ್ನು ತಿಳಿದುಕೊಂಡು ತಪ್ಪು ಮಾಡುತ್ತಾನೆ. ಒಂದು ದಿನ ತನ್ನ ಗೆಳತಿ ಮಾಡಿದ ತಪ್ಪನ್ನು ತಿದ್ದಲು ಯತ್ನಿಸುತ್ತಿದ್ದಾಗ ದೊಡ್ಡ ದರೋಡೆಕೋರನ ಕೈಗೆ ಸಿಕ್ಕಿಬೀಳುತ್ತಾನೆ. ಹಾಗಾಗಿ ಖಳನಾಯಕನಿಗೆ ರೂ 5 ಕೋಟಿ ಬೇಕಾಗುತ್ತದೆ. ಇದರಿಂದ ಪಾರಾಗುವುದು ಹೇಗೆ? ಇದೇ ಜೀಬ್ರಾ ಸಿನಿಮಾದ ಪ್ರಮುಖ ಕಥೆ. ಜೀಬ್ರಾ ಸಿನಿಮಾದ ಕುರಿತು ಚಿತ್ರ ನೋಡಿರುವವರ ಅಭಿಪ್ರಾಯ ಸಕಾರಾತ್ಮಕವಾಗಿದೆ. ಸತ್ಯದೇವ್‌ಗೆ ಇದು ಕಮ್ ಬ್ಯಾಕ್ ಆಗಲು ನೆರವಾಗುವ ಹಿಟ್ ಸಿನಿಮಾ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಮೆಜಾನ್ ಪ್ರೈಮ್ ವಿಡಿಯೋ ಜೀಬ್ರಾ ಸಿನಿಮಾದ ಒಟಿಟಿ ಹಕ್ಕುಗಳನ್ನು ದೊಡ್ಡಮೊತ್ತಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಒಂದು ತಿಂಗಳ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.