Zebra Twitter Review: ಜೀಬ್ರಾ ಸಿನಿಮಾ ಬೆಂಕಿ ಗುರೂ, ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಸಿಕ್ತು ಬ್ಲಾಕ್ ಬಸ್ಟರ್ ವಿಮರ್ಶೆ
Zebra Twitter Review: ಬಹುಭಾಷೆಗಳಲ್ಲಿಂದು (ನ. 22) ತೆರೆಕಂಡಿದೆ ಜೀಬ್ರಾ ಸಿನಿಮಾ. ಮೂಲ ತೆಲುಗಿನ ಈ ಸಿನಿಮಾ ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿ ಮೂಡಿಬಂದಿದೆ. ಬ್ಯಾಂಕ್ ವಂಚನೆ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾ, ಪ್ರೇಕ್ಷಕರಿಂದ ಸೀಟ್ ಎಡ್ಜ್ ಥ್ರಿಲ್ಲರ್ ಎಂಬ ಪಟ್ಟವನ್ನು ಪಡೆದುಕೊಂಡಿದೆ.
Zebra Twitter Review: ಕನ್ನಡದ ಡಾಲಿ ಧನಂಜಯ್ ಹಾಗೂ ತೆಲುಗಿನ ಸತ್ಯದೇವ್ ನಟನೆಯ ಜೀಬ್ರಾ ಸಿನಿಮಾ ಇಂದು (ನ. 22) ಬಿಡುಗಡೆ ಆಗಿದೆ. ಕನ್ನಡ, ತೆಲುಗು ಜತೆಗೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ತೆರೆಕಂಡಿದೆ. ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕ್ರೈಂ ಮತ್ತು ಥ್ರಿಲ್ಲರ್ ಕಂಟೆಂಟ್ ಇರುವ ಚಿತ್ರಕ್ಕೆ ಈಶ್ವರ್ ಕಾರ್ತಿಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಅನಿಲ್ ಕ್ರಿಶ್ ಅವರ ಸಂಕಲನ, ಮೀರಾಖ್ ಅವರ ಸಂಭಾಷಣೆ ಚಿತ್ರಕ್ಕಿದೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣವಿದೆ. ಸತ್ಯರಾಜ್, ಸತ್ಯ ಅಕ್ಕಲಾ, ಜೆನ್ನಿಫರ್ ಪಿಕ್ಕಿನಾಟೊ, ಸುನಿಲ್, ಪ್ರಿಯಾ ಭವಾನಿ ಶಂಕರ್ ಇನ್ನೀತರರು ತಾರಾಬಗಳದಲ್ಲಿದ್ದಾರೆ. ಇದೀಗ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾಕ್ಕೆ ಪಾಸಿಟಿವ್ ವಿಮರ್ಶೆ ವ್ಯಕ್ತವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಲ್ಲಿದೆ ಹೀಗಿದೆ ಜೀಬ್ರಾ ಸಿನಿಮಾ ಟ್ವಿಟ್ಟರ್ ವಿಮರ್ಶೆ.
ಸೋಷಿಯಲ್ ಮೀಡಿಯಾ ವಿಮರ್ಶೆ ಹೇಗಿದೆ?
ಇದು ಸತ್ಯದೇವ್ ಅವರ ಸ್ಟ್ರಾಂಗ್ ಕಂಬ್ಯಾಕ್. ಜೀಬ್ರಾ ಹಾಸ್ಯದ ಸ್ಪರ್ಶದೊಂದಿಗೆ ತೆರೆಕಂಡ ಇತ್ತೀಚಿನ ದಿನಗಳಲ್ಲಿನ ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿದೆ. ಬ್ಯಾಂಕ್‌ನಲ್ಲಿ ಕಸ್ಟಮರ್ ರಿಲೇಷನ್‌ಶಿಪ್ ಮ್ಯಾನೇಜರ್ ಸೂರ್ಯ (ಸತ್ಯದೇವ್) ಮೇಲೆ ಈ ಸಿನಿಮಾ ಕೇಂದ್ರೀಕೃತವಾಗಿದೆ. ಇತ್ತ ಡೇಂಜರಸ್ ಮತ್ತು ಪ್ರಭಾವಿ ಮಾಫಿಯಾ ಹಿನ್ನೆಲೆಯ ಉದ್ಯಮಿ ಆದಿಯನ್ನು (ಧನಂಜಯ್) ಎದುರಿಸಿದಾಗ ಆತನ ಬದುಕು ನಾಟಕೀಯ ತಿರುವು ಪಡೆಯುತ್ತದೆ. ಅನಿರೀಕ್ಷಿತ ಘರ್ಷಣೆಗೂ ದಾರಿ ಮಾಡಿಕೊಡುತ್ತದೆ. ವಂಚನೆ ಜಾಲ ಮತ್ತು ಅದರಿಂದ ಹೊರ ಬರುವ ಹೋರಾಟದ ಕಥೆ ಈ ಚಿತ್ರದ್ದು ಎಂದು ಪಕ್ಕಾ ತೆಲುಗು ಮೀಡಿಯಾ ವಿಮರ್ಶೆ ಮಾಡಿದೆ.
ಚಿತ್ರದ ಪಾಸಿಟಿವ್ ಅಂಶಗಳೇನು?
- ನಿರ್ದೇಶಕ ಈಶ್ವರ ಕಾರ್ತಿಕ್ ಅವರ ತೀಕ್ಷ್ಣವಾದ ಬರವಣಿಗೆ ಮತ್ತು ಚಿತ್ರಕಥೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುತ್ತದೆ. ಧನಂಜಯ್ ಅವರ ಸ್ಕ್ರೀನ್ ಪ್ರಸೆನ್ಸ್ ಮತ್ತೊಂದು ಎತ್ತರದಲ್ಲಿದೆ.
- ವಿಶಿಷ್ಟ ಪರಿಕಲ್ಪನೆ ಮತ್ತು ಚಿತ್ರಕಥೆ: ಸಿನಿಮಾದ ಬೇಸ್ ಅದರ ಬಲವಾದ ಬರವಣಿಗೆ ಮತ್ತು ಬಿಗಿಯಾದ ಚಿತ್ರಕಥೆಯಲ್ಲಿದೆ. ಈಶ್ವರ ಕಾರ್ತಿಕ್ ನಿರ್ದೇಶನ ಅನಿರೀಕ್ಷಿತ ತಿರುವುಗಳಿಂದ ತುಂಬಿದ ಮತ್ತು ಆಕರ್ಷಕ ನಿರೂಪಣೆ ಜತೆ ಸಾಗುತ್ತದೆ.
- ಬ್ಯಾಂಕಿಂಗ್ ಸಿಸ್ಟಮ್ ಎಕ್ಸಿಕ್ಯೂಶನ್: ದರೋಡೆಯ ಚಿತ್ರಣವು ಫ್ರೇಶ್ ಮತ್ತು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು
- ಆರಂಭದಿಂದ ಶುರುವಾದ ಆ ವೇಗ, ಮತ್ತು ರೂಪಿಸಿದ ತಿರುವುಗಳು ಒಟ್ಟಾರೆಯಾಗಿ ನೋಡುಗನನ್ನು ಹಿಡಿದಿಟ್ಟುಕೊಳ್ಳುತ್ತವೆ.
ನೆಗೆಟಿವ್ ಅಂಶಗಳೇನು?
- ಚಿತ್ರದ ಬಿಜಿಎಂ ಮತ್ತು ಹಾಡುಗಳು ಗಮನ ಸೆಳೆಯುವಂತಿಲ್ಲ. ಸಿನಿಮಾ ಮೇಲಕ್ಕೆತ್ತಲು ಈ ವಿಭಾಗ ವಿಫಲವಾಗಿದೆ.
- ಸತ್ಯರಾಜ್ ಅವರ ಪಾತ್ರ ಸೃಷ್ಟಿಯಲ್ಲಿ ಇನ್ನಷ್ಟು ಗಟ್ಟಿತನ ಬೇಕಿತ್ತು.
ರೇಟಿಂಗ್: 3.25/5