logo
ಕನ್ನಡ ಸುದ್ದಿ  /  ಮನರಂಜನೆ  /  Dulquer Salmaan: ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ; ಟ್ವಿಟ್ಟರ್‌ನಲ್ಲಿ ವಿಡಿಯೋ ಡಿಲೀಟ್‌ ಮಾಡಿದ್ದೇಕೆ

Dulquer Salmaan: ಮಲಯಾಳಂ ನಟ ದುಲ್ಕರ್‌ ಸಲ್ಮಾನ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರಾ; ಟ್ವಿಟ್ಟರ್‌ನಲ್ಲಿ ವಿಡಿಯೋ ಡಿಲೀಟ್‌ ಮಾಡಿದ್ದೇಕೆ

Rakshitha Sowmya HT Kannada

Jul 04, 2023 05:16 PM IST

google News

ಮಾಲಿವುಡ್‌ ನಟ ದುಲ್ಕರ್‌ ಸಲ್ಮಾನ್

  • ನನಗೆ ನಿದ್ರೆ ಬರುತ್ತಿಲ್ಲ, ಇದಕ್ಕೆ ನಾನು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ. ಬಹಳ ಗೊಂದಲದಲ್ಲಿದ್ದೇನೆ. ನಾನು ಇನ್ನೂ ನಿಮ್ಮ ಬಳಿ ಹೇಳಬೇಕು. ಆದರೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಮಾಲಿವುಡ್‌ ನಟ ದುಲ್ಕರ್‌ ಸಲ್ಮಾನ್
ಮಾಲಿವುಡ್‌ ನಟ ದುಲ್ಕರ್‌ ಸಲ್ಮಾನ್

ಮಾಲಿವುಡ್‌ ನಟ ದುಲ್ಕರ್‌ ಸಲ್ಮಾನ್‌ಗೆ ಕೇರಳದಲ್ಲಿ ಮಾತ್ರವಲ್ಲ ತಮಿಳುನಾಡು, ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಕೂಡಾ ಅಭಿಮಾನಿಗಳಿದ್ದಾರೆ. ಕಳೆದ ವರ್ಷ ದುಲ್ಕರ್‌ ಅಭಿನಯದ 'ಚುಪ್‌' ಸಿನಿಮಾ ತೆರೆ ಕಂಡಿತ್ತು. ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದುಲ್ಕರ್‌ ಅಭಿನಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಭಿಮಾನಿಗಳು ಬಹಳ ಇಷ್ಟಪಡುವ ಈ ನಟ ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅಭಿಮಾನಿಗಳು ಗಾಬರಿ ಆಗಿದ್ದಾರೆ.‌

ಇದೇ ಮೊದಲ ಬಾರಿಗೆ ನಾನು ಈ ರೀತಿಯ ಅನುಭವ ಎದುರಿಸುತ್ತಿದ್ದೇನೆ. ಸಮಯ ಸಂದರ್ಭ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಬಹಳ ಗೊಂದಲದಲ್ಲಿದ್ದೇನೆ. ನನಗೆ ನಿದ್ರೆ ಬರುತ್ತಿಲ್ಲ, ಇದಕ್ಕೆ ನಾನು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ. ಬಹಳ ಗೊಂದಲದಲ್ಲಿದ್ದೇನೆ. ನಾನು ಇನ್ನೂ ನಿಮ್ಮ ಬಳಿ ಹೇಳಬೇಕು. ಆದರೆ ಅದನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ನೂರಾರು ಪ್ರಶ್ನೆ ಕೇಳಲು ಆರಂಭಿಸಿದ್ದಾರೆ. ವಿಡಿಯೋ ಪೋಸ್ಟ್‌ ಮಾಡಿ ಕೆಲವೇ ಗಂಟೆಗಳಲ್ಲಿ ದುಲ್ಕರ್‌ ಸಲ್ಮಾನ್‌ ಈ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ. ಆದರೆ ಅಭಿಮಾನಿಯೊಬ್ಬರು ಈ ವಿಡಿಯೋವನ್ನು ಡೌನ್‌ಲೋಡ್‌ ಮಾಡಿ ತಮ್ಮ ಟ್ವಿಟ್ಟರ್‌ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಅಭಿಮಾನಿಗಳು ತಮಗೆ ಅನಿಸಿದಂತೆ ಕಾಮೆಂಟ್‌ ಮಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಗಮನ ಕೊಡಿ, ಕೆಲಸ ಇದ್ದದ್ದೇ ಕಣ್ತುಂಬ ನಿದ್ರೆ ಮಾಡಿ, ನಿಮ್ಮಂಥ ಸ್ಟಾರ್‌ ನಟನಿಗೆ ಕೂಡಾ ಸಮಸ್ಯೆ ಇದೆ ಎಂದರೆ ನಂಬಲಾಗುತ್ತಿಲ್ಲ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಮತ್ತೊಬ್ಬ ಅಭಿಮಾನಿ ಕಾಮೆಂಟ್‌ ಮಾಡಿ, ದುಲ್ಕರ್‌ ಸಲ್ಮಾನ್‌ಗೆ ಏನೂ ಆಗಿಲ್ಲ, ಇದು ಬಹುಶ: ಅವರ ಮುಂದಿನ ಸಿನಿಮಾ ಪಾತ್ರ ಇರಬಹುದು, ಅದರ ಪ್ರಮೋಷನ್‌ಗಾಗಿ ಇಷ್ಟೆಲ್ಲಾ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ದುಲ್ಕರ್‌, ಈ ವಿಡಿಯೋ ಮಾಡಿರುವ ಉದ್ಧೇಶ ಏನು ಎಂದು ಸ್ಪಷ್ಟವಾಗಿ ತಿಳಿಯದೆ ಅಭಿಮಾನಿಗಳು ಕಂಗಾಲಾಗಿದ್ದಾರೆ.

ದುಲ್ಕರ್‌ ಸಲ್ಮಾನ್‌ ಸೆಕೆಂಡ್‌ ಶೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಈ ಸಿನಿಮಾ 2012ರಲ್ಲಿ ತೆರೆ ಕಂಡಿತ್ತು. ಕೆರಿಯರ್‌ ವಿಚಾರಕ್ಕೆ ಬರುವುದಾದರೆ ಕಿಂಗ್‌ ಆಫ್‌ ಕೋತಾ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಇದರೊಂದಿಗೆ ಗನ್ಸ್‌ & ಗುಲಾಬ್ಸ್‌ ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ದುಲ್ಕರ್‌ ಸಲ್ಮಾನ್‌ ನಟನಾಗಿ ಮಾತ್ರವಲ್ಲದೆ ಗಾಯಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ದುಲ್ಕರ್‌ ಸಲ್ಮಾನ್‌ ಮಲಯಾಳಂ ಸೂಪರ್‌ ಸ್ಟಾರ್‌ ಮುಮ್ಮುಟಿ ಅವರ ಮಗ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ