logo
ಕನ್ನಡ ಸುದ್ದಿ  /  ಮನರಂಜನೆ  /  The Teacher Movie: ಒಬ್ಬಂಟಿಯಾಗಿ ಬದುಕಲು ಧೈರ್ಯ ತುಂಬುವ 'ದ ಟೀಚರ್‌'; ಅತ್ಯಾಚಾರ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಶಿಕ್ಷಕಿಯ ಸೇಡು

The teacher Movie: ಒಬ್ಬಂಟಿಯಾಗಿ ಬದುಕಲು ಧೈರ್ಯ ತುಂಬುವ 'ದ ಟೀಚರ್‌'; ಅತ್ಯಾಚಾರ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಶಿಕ್ಷಕಿಯ ಸೇಡು

Praveen Chandra B HT Kannada

Oct 15, 2024 04:13 PM IST

google News

The teacher Movie: ಒಬ್ಬಂಟಿಯಾಗಿ ಬದುಕಲು ಧೈರ್ಯ ತುಂಬುವ ‘ದ ಟೀಚರ್‌’

    • ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿರುವ "ದಿ ಟೀಚರ್‌" ಎಂಬ ಸಿನಿಮಾದ ಕುರಿತು ಬರಹಗಾರ ಅರುಣ್ ಜೋಳದಕೂಡ್ಲಿಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಭಿಪ್ರಾಯ ಗಮನ ಸೆಳೆಯುತ್ತಿದೆ. ಒಂದಷ್ಟು ವೈರುಧ್ಯಗಳ ಮಧ್ಯೆ ಸಿನಿಮ್ಯಾಟಿಕ್ ಮಿತಿಗಳ ಮಧ್ಯೆ ನೋಡಬೇಕಾದ ಸಿನೆಮಾ ದ ಟೀಚರ್‌ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
The teacher Movie: ಒಬ್ಬಂಟಿಯಾಗಿ ಬದುಕಲು ಧೈರ್ಯ ತುಂಬುವ ‘ದ ಟೀಚರ್‌’
The teacher Movie: ಒಬ್ಬಂಟಿಯಾಗಿ ಬದುಕಲು ಧೈರ್ಯ ತುಂಬುವ ‘ದ ಟೀಚರ್‌’

The teacher Movie: ಮಹಿಳಾ ನಾಯಕತ್ವದ ಸಿನೆಮಾಗಳು ಮಲಯಾಳಿ ಭಾಷೆಯಲ್ಲಿ ಹೆಚ್ಚಿವೆ. ಈ ಸಿನೆಮಾಗಳ ಟ್ರೆಂಡ್‌ ಕೂಡ ಆಯಾ ಕಾಲದ ಬಿಕ್ಕಟ್ಟುಗಳ ಒಳಗಿಂದ ಹೆಣೆಯಲ್ಪಟ್ಟಿರುತ್ತವೆ. ಹಾಗಾಗಿ ಮಹಿಳಾ ಪ್ರಧಾನ ಸಿನೆಮಾಗಳ ಟ್ರೆಂಡ್ ಸದಾ ಬದಲಾಗುತ್ತಿರುತ್ತದೆ. ಇದಕ್ಕೆ ಉದಾಹರಣೆ 2022ರಲ್ಲಿ ಬಿಡುಗಡೆಯಾದ ವಿವೇಕ್ ನಿರ್ದೇಶಿಸಿದ, ನಟಿ ಅಮಲಾ ಪೌಲ್ ಪ್ರಧಾನ ಪಾತ್ರದಲ್ಲಿ ನಟಿಸಿದ 'the Teacher' ಸಿನೆಮಾ.

ಈ ಸಿನೆಮಾದಲ್ಲಿ ಮಹಿಳೆಯ ಅತ್ಯಾಚಾರ ಮತ್ತದರ ಪರಿಣಾಮದ ಸಮಸ್ಯೆಯನ್ನು ಬೇರೆಯದೇ ರೀತಿಯಲ್ಲಿ ನಿರ್ವಹಿಸಲಾಗಿದೆ. ಕುತಂತ್ರದಿಂದ ವಿದ್ಯಾರ್ಥಿಗಳಿಂದಲೇ ಅತ್ಯಾಚಾರಕ್ಕೆ ಒಳಗಾದ ಟೀಚರ್ ಪರಿಣಾಮವಾಗಿ ಗರ್ಭಧರಿಸುತ್ತಾಳೆ. ಇದನ್ನು ಗಂಡನಿಗೆ ತಿಳಿಸಿ, ಅತ್ಯಾಚಾರ ಮಾಡಿದ ಯುವಕರಿಗೆ ಶಿಕ್ಷೆ ಆಗಲು FIR ದಾಖಲಿಸಲು ಹೋದಾಗ ಸಮಾಜಕ್ಕೆ ಹೆದರಿ ಸಹಕರಿಸದೆ ಘಟನೆ ಮುಚ್ಚಿಡಲು ಸಲಹೆ ಕೊಡುತ್ತಾನೆ.

ಕಮ್ಯುನಿಸ್ಟ್‌ ಹೋರಾಟಗಾರ್ತಿಯಾದ ಅತ್ತೆ ಸೊಸೆಗೆ ಬೆಂಗಾವಲಾಗಿ ನಿಂತು ಇದು ಪೋಲೀಸ್ ಕೇಸಿನಿಂದ, ಕೋರ್ಟ್‌ನಿಂದ ಬಗೆಹರಿಯದ ಸಮಸ್ಯೆಯಲ್ಲ, ನೀನೇ ನಿನಗೆ ಸರಿ ಅನ್ನಿಸಿದ ಹಾಗೆ ಸೇಡು ತೀರಿಸಿಕೊ ಎಂದು ಅದಕ್ಕೆ ಬೇಕಾದ ಸಹಾಯ ಮಾಡುತ್ತಾಳೆ. ಕೊನೆಗೆ ಅತ್ಯಾಚಾರ ಮಾಡಿದ ವಿದ್ಯಾರ್ಥಿಗಳನ್ನು ಕೊಚ್ಚಿಯಲ್ಲಿ ತಂತ್ರದಿಂದ ಒಂದೆಡೆ ಬರುವಂತೆ ಮಾಡಿ ತಾನು ತನ್ನ ತಂದೆಯಿಂದ ಕಲಿತ ಸಮರ ಕಲೆಯ ಮೂಲಕ ಎಲ್ಲರನ್ನು ಬಗ್ಗು ಬಡಿಯುತ್ತಾಳೆ. ಇದು ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಿಗೆ ಒಂದು ಬಗೆಯ ಧೈರ್ಯ ತುಂಬುವಂತಿದೆ‌. ಆದರೆ ಕೊನೆಗೂ ಕೆಟ್ಟ ಗಂಡುಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಒಳ್ಳೆಯ ಗಂಡುಗಳ ಸಹಾಯಬೇಕು ಎನ್ನುವ ನೆಲೆ ಚೂರು ಸಮಸ್ಯಾತ್ಮಕವಾಗಿದೆ.

ಹೋರಾಟ ಚಳವಳಿಯಲ್ಲಿರುವ ಮಹಿಳೆಯರ ದಿಟ್ಟತನ ಮತ್ತು ಮಹಿಳೆಯರು ಒಂಟಿಯಾಗಿ ಬದುಕುವ ಧೈರ್ಯ ತುಂಬುವ ನೆಲೆಯಲ್ಲಿ ಸಿನೆಮಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ.

ಅತ್ಯಾಚಾರ ಎಸಗಿದವರಿಗೆ ಶಿಕ್ಷೆ ಕೊಟ್ಟು ಈ ಅತ್ಯಾಚಾರದ ಪರಿಣಾಮ ಕುಡಿಯೊಡೆದ ತಪ್ಪೆಸಗದ ಶಿಶುವನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡುತ್ತಲೇ, ಕಷ್ಟದ ಸಂದರ್ಭದಲ್ಲಿ ಜತೆ ನಿಲ್ಲದ ಗಂಡನನ್ನು ತೊರೆದು ಒಬ್ಬಂಟಿಯಾಗಿ ಬದುಕುವ ದೈರ್ಯ ಮಾಡುತ್ತಾಳೆ. ಒಂದಷ್ಟು ವೈರುಧ್ಯಗಳ ಮಧ್ಯೆ ಸಿನಿಮ್ಯಾಟಿಕ್ ಮಿತಿಗಳ ಮಧ್ಯೆ ನೋಡಬೇಕಾದ ಸಿನೆಮಾ. Netflix OTT ನಲ್ಲಿದೆ ಆಸಕ್ತರು ನೋಡಿ.

  • ಬರಹ: ಅರುಣ್ ಜೋಳದಕೂಡ್ಲಿಗಿ (ಫೇಸ್‌ಬುಕ್‌ ಪೋಸ್ಟ್‌)

ದ ಟೀಚರ್‌ ಸಿನಿಮಾದ ಕುರಿತು

ಈಗ ಎಲ್ಲಿ ನೋಡಬಹುದು?: ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ

ಸಿನಿಮಾದ ಅವಧಿ: 114 ನಿಮಿಷಗಳು

ಭಾಷೆ: ಮಲಯಾಳಂ

ನಿರ್ದೇಶನ, ಚಿತ್ರಕಥೆ, ಕಥೆ: ವಿವೇಕ್‌

ನಿರ್ಮಾಣ: ವರುಣ್‌ ತ್ರಿಪುರನೇನಿ, ಅಭಿಷೇಕ್‌ರಮಿಶೆಟ್ಟಿ, ಜಿ ಪೃಥ್ವಿರಾಜ್‌

ತಾರಾಗಣ: ಅಮಲಾ ಪೌಲ್‌, ಹಕೀಮ್‌ ಶಾ, ಚಾಂಬನ್‌ ವಿನೋದ್‌ಜೋಶ್‌, ಮಂಜು ಪಿಳ್ಳೈ

ಸಿನಿಮಾಟೊಗ್ರಫಿ: ಅನು ಮುಥೊಡಮ್‌

ಸಂಕಲನ: ಮನೋಜ್‌

ಸಂಗೀತ: ಡಾನ್‌ ವಿನ್ಸೆಂಟ್‌

ಥಿಯೇಟರ್‌ನಲ್ಲಿ ಬಿಡುಗಡೆ ದಿನಾಂಕ: ಡಿಸೆಂಬರ್‌ 2, 2022

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ