Level Cross: ಓಟಿಟಿಗೆ ಬಂತು ಮಲಯಾಳಂನ ಹಿಟ್ ಥ್ರಿಲ್ಲರ್ ಚಲನಚಿತ್ರ ಲೆವೆಲ್ ಕ್ರಾಸ್; ವೀಕ್ಷಣೆ ಎಲ್ಲಿ?
Level Cross in Amazon Prime: ಆಸಿಫ್ ಅಲಿ ಮತ್ತು ಅಮಲಾ ಪೌಲ್ ನಟಿಸಿರುವ ಈ ಲೆವೆಲ್ ಕ್ರಾಸ್ ಸಿನಿಮಾವನ್ನು ನೀವು ಈಗ ಮನೆಯಲ್ಲೇ ಕೂತು ವೀಕ್ಷಿಸಬಹುದು. ಮಲಯಾಳಂನ ಹಿಟ್ ಥ್ರಿಲ್ಲರ್ ಚಲನಚಿತ್ರ ಈಗ 5 ಭಾಷೆಗಳಲ್ಲಿ ಲಭ್ಯವಿದೆ. ನೀವು ಕನ್ನಡದಲ್ಲೂ ವೀಕ್ಷಿಸಬಹುದು. ಅಮೇಜಾನ್ ಪ್ರೈಮ್ನಲ್ಲಿ ಈ ಸಿನಿಮಾ ನೋಡಬಹುದು.

ಇತ್ತೀಚಿನ ದಿನಗಳಲ್ಲಿ ಮಲಯಾಳಂನ ಸಿನಿಮಾ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಮಲಯಾಳಂನ ಹಿಟ್ ಥ್ರಿಲ್ಲರ್ ಚಲನಚಿತ್ರಗಳನ್ನು ನೋಡಲು ಜನರು ಕಾಯುತ್ತಿರುತ್ತಾರೆ. ಜನರ ಕಾತುರತೆಗೆ ತಕ್ಕಂತೆ ಮಲಯಾಳಂನ ಹಿಟ್ ಥ್ರಿಲ್ಲರ್ ಚಲನಚಿತ್ರ ಲೆವೆಲ್ ಕ್ರಾಸ್ ಓಟಿಟಿಗೆ ಬಂದಿದೆ. ಆಸಿಫ್ ಅಲಿ ಮತ್ತು ಅಮಲಾ ಪೌಲ್ ನಟಿಸಿರುವ ಈ ಲೆವೆಲ್ ಕ್ರಾಸ್ ಸಿನಿಮಾವನ್ನು ನೀವು ಅಮೆಜಾನ್ ಪ್ರೈಮ್ನಲ್ಲಿ ವೀಕ್ಷಿಸಬಹುದು. ಜುಲೈ 26, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಇಷ್ಟು ದಿನಗಳ ಬಳಿಕ ಓಟಿಟಿಗೆ ಬರುತ್ತಿದೆ. ತೆಲುಗು, ಹಿಂದಿ, ತಮಿಳು ಮತ್ತು ಕನ್ನಡದಲ್ಲಿ ಲಭ್ಯವಿದೆ.
ಈ ಸಿನಿಮಾ ಇತ್ತೀಚೆಗಷ್ಟೇ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ ಇದನ್ನು ಅಕ್ಟೋಬರ್ 13ಕ್ಕೆ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆಹಾ ಓಟಿಟಿಯಲ್ಲೂ ಇದು ಬಿಡುಗಡೆಯಾಗಿದೆ. ಮಲಯಾಳಂ ಸೈಕಲಾಜಿಕಲ್ ಥ್ರಿಲ್ಲರ್ ಮೂವೀ ಲೆವೆಲ್ ಕ್ರಾಸ್. ಜುಲೈ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಜನರಿಂದ ಮೆಚ್ಚುಗೆ ಪಡೆದಿತ್ತು. ಜನರು ಮತ್ತೊಮ್ಮೆ ಈ ಸಿನಿಮಾವನ್ನು ನೋಡಲು ಓಟಿಟಿಗಾಗಿ ಕಾಯುತ್ತಿದ್ದರು.
ಇದೀಗ ಅಕ್ಟೋಬರ್ 15 ಅಂದರೆ ಇಂದಿನಿಂದ ಆಹಾ OTT ಪ್ಲಾಟ್ಫಾರ್ಮ್ನಲ್ಲಿಯೂ ಬಿಡುಗಡೆಯಾಗಿದೆ. ಮಲಯಾಳಂ ನಟ ಆಸಿಫ್ ಅಲಿ ಮತ್ತು ಅಮಲಾ ಪೌಲ್ ಈ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅರ್ಬಾಜ್ ಅಯೂಬ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಸಿಫ್ ಅಲಿ ಅಭಿನಯದ ತಲವನ್ ಮತ್ತು ಅಡಿಯೋಸ್ ಅಮಿಗೋ ಸಿನಿಮಾಗಳು ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದ್ದರೆ, ಈಗ ಥ್ರಿಲ್ಲರ್ ಸಿನಿಮಾ ಲೆವೆಲ್ ಕ್ರಾಸ್ ಕೂಡ ಬರುತ್ತಿದೆ.
ಲೆವೆಲ್ ಕ್ರಾಸ್ ಚಲನಚಿತ್ರವು ರೈಲ್ವೇ ಗೇಟ್ ಕೀಪರ್ ರಘು ಎಂಬಾತನ ಸುತ್ತ ಕಥೆ ಹೆಣೆದುಕೊಂಡಿದೆ. ಅವನು ಆಕಸ್ಮಿಕವಾಗಿ ಒಂದು ಹುಡುಗಿಯನ್ನು ಭೇಟಿಯಾಗುತ್ತಾನೆ. ಅದೇ ಗೇಟ್ ಬಳಿ ಒಂಟಿಯಾಗಿ ವರ್ಷಗಳನ್ನು ಕಳೆದ ನಂತರ, ರಘು ರೈಲಿನಿಂದ ಇಳಿದ ಹುಡುಗಿಯನ್ನು ಪ್ರೀತಿಸಲು ಶುರುಮಾಡುತ್ತಾನೆ. ಆದರೆ ಚೈತಾಲಿ (ಅಮಲಾ ಪೌಲ್) ಎಂಬ ಹುಡುಗಿ ಈಗಾಗಲೇ ಮದುವೆಯಾಗಿರುತ್ತಾಳೆ. ಆ ವಿಷಯ ಅವನಿಗೆ ಮೊದಲು ತಿಳಿದಿರುವುದಿಲ್ಲ.
ನಂತರ ಅವಳ ಪತಿ ಅವರ ಜೀವನದಲ್ಲಿ ಬಂದಾಗ ಕಥೆಯು ತಿರುವು ಪಡೆದುಕೊಳ್ಳುತ್ತದೆ. ಅನಿರೀಕ್ಷಿತ ತಿರುವುಗಳು ಮತ್ತು ಭಯಾನಕ ಸತ್ಯಗಳು ಒಂದೊಂದಾಗಿ ಹೊರಬರುತ್ತಾ ಹೋದಂತೆಯೂ ರೋಚಕ ತಿರುವು ಪಡೆದುಕೊಳ್ಳುತ್ತಾ ಸಿನಿಮಾ ಸಾಗುತ್ತದೆ. ಈ ಲೆವೆಲ್ ಕ್ರಾಸ್ ಚಲನಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದೆ. ಸೈಕಲಾಜಿಕಲ್ ಥ್ರಿಲ್ಲರ್ ಜಾನರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಲೆವೆಲ್ ಕ್ರಾಸ್ ಸಿನಿಮಾ ಇಷ್ಟವಾಗುತ್ತದೆ. ಸಿನಿಮಾದಲ್ಲಿನ ಟ್ವಿಸ್ಟ್ಗಳು ಒಳ್ಳೆಯ ಥ್ರಿಲ್ಗಳಿದೆ.
ನಿರ್ದೇಶಕ ಅರ್ಫಾಜ್ ಅಯೂಬ್ ಈ ಸಿನಿಮಾವನ್ನು ಎಲ್ಲೂ ಬೋರ್ ಆಗದಂತೆ ಜಾಗರೂಕತೆಯಿಂದ ಕಟ್ಟಿಕೊಟ್ಟಿರುವ ರೀತಿಯನ್ನು ಸಿನಿಮಾದಲ್ಲಿ ಕಾಣಬಹುದು. ಥಿಯೇಟರ್ಗಳಲ್ಲಿ ಮಿಸ್ ಮಾಡಿಕೊಂಡವರಿಗೆ ಈಗ ಪ್ರೈಮ್ ವಿಡಿಯೋ ಹಾಗೂ ಆಹಾ ವಿಡಿಯೋದಲ್ಲಿ ಸಿನಿಮಾ ನೋಡುವ ಅವಕಾಶ ಸಿಗಲಿದೆ. ಲೆವೆಲ್ ಕ್ರಾಸ್ ಸಿನಿಮಾ ಮಲಯಾಳಂ ಜೊತೆಗೆ ನಾಲ್ಕು ಭಾಷೆಗಳಲ್ಲಿ ಬರುತ್ತಿರುವುದರಿಂದ ಆಯಾ ಭಾಷೆಗಳ ಪ್ರೇಕ್ಷಕರು ಆರಾಮವಾಗಿ ಸಿನಿಮಾ ನೋಡಬಹುದು.
ಇಲ್ಲಿದೆ ಟ್ರೈಲರ್
ವಿಭಾಗ