logo
ಕನ್ನಡ ಸುದ್ದಿ  /  ಮನರಂಜನೆ  /  Ott Releases: ಚಿತ್ರಮಂದಿರದಲ್ಲಿ ಹಿಟ್‌ ಆಗಿ ಒಟಿಟಿಗೆ ಬಂದ ಬಹುನಿರೀಕ್ಷಿತ ಸಿನಿಮಾಗಳಿವು

OTT Releases: ಚಿತ್ರಮಂದಿರದಲ್ಲಿ ಹಿಟ್‌ ಆಗಿ ಒಟಿಟಿಗೆ ಬಂದ ಬಹುನಿರೀಕ್ಷಿತ ಸಿನಿಮಾಗಳಿವು

Jun 07, 2023 04:50 PM IST

ಚಿತ್ರಮಂದಿರದಲ್ಲಿ ಹಿಟ್‌ ಆಗಿ ಒಟಿಟಿಗೆ ಬಂದ ಬಹುನಿರೀಕ್ಷಿತ ಸಿನಿಮಾಗಳಿವು

    • ಈ ವಾರ ಒಟಿಟಿ ವೀಕ್ಷಕರಿಗೆ ಬಂಪರ್‌ ಉಡುಗೊರೆ ಸಿಕ್ಕಿದೆ. ಅವತಾರ್‌ ಪಾರ್ಟ್‌ 2 ಚಿತ್ರ ಈಗಾಗಲೇ ಸ್ಟ್ರೀಮಿಂಗ್‌ ಆರಂಭಿಸಿದರೆ, ಮಲಯಾಳಂನ 2018 ಚಿತ್ರವೂ ಒಟಿಟಿ ಅಂಗಳಕ್ಕೆ ಆಗಮಿಸಲು ದಿನಾಂಕ ನಿಗದಿಯಾಗಿದೆ. 
ಚಿತ್ರಮಂದಿರದಲ್ಲಿ ಹಿಟ್‌ ಆಗಿ ಒಟಿಟಿಗೆ ಬಂದ ಬಹುನಿರೀಕ್ಷಿತ ಸಿನಿಮಾಗಳಿವು
ಚಿತ್ರಮಂದಿರದಲ್ಲಿ ಹಿಟ್‌ ಆಗಿ ಒಟಿಟಿಗೆ ಬಂದ ಬಹುನಿರೀಕ್ಷಿತ ಸಿನಿಮಾಗಳಿವು

OTT Releases: ಇಡೀ ವಿಶ್ವದ ಸಿನಿಮಾ ಪ್ರೇಮಿಗಳ ನಿದ್ದೆಗೆಡಿಸಿದ್ದ ಅವತಾರ್: ದಿ ವೇ ಆಫ್ ವಾಟರ್ ( Avatar the way of water) ಚಿತ್ರ ಕಳೆದ ವರ್ಷದ ಡಿಸೆಂಬರ್‌ 16ರಂದು ಬಿಡುಗಡೆ ಆಗಿತ್ತು. ಕೋಟಿ ಕೋಟಿ ಹಣವನ್ನೂ ಬಾಚಿಕೊಂಡಿದ್ದ ಈ ಚಿತ್ರ ಒಟಿಟಿ ಅಂಗಳಕ್ಕೂ ಬಂದಿದ್ದರೂ, ಉಚಿತ ಅವಕಾಶ ಸಿಕ್ಕಿರಲಿಲ್ಲ. ಇದೀಗ ಆ ಕಾಯುವಿಕೆ ತಣಿದಿದೆ. ಅಂದರೆ, ಒಟಿಟಿಯಲ್ಲಿ ಉಚಿತವಾಗಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಕೇವಲ ಇದೊಂದೇ ಸಿನಿಮಾ ಅಲ್ಲ, ಈ ಚಿತ್ರಗಳ ಜತೆಗೆ ಇನ್ನೂ ಹಲವು ಸಿನಿಮಾಗಳು ಒಟಿಟಿಗೆ

ಟ್ರೆಂಡಿಂಗ್​ ಸುದ್ದಿ

Grey Games Trailer: ‘ಗ್ರೇ ಗೇಮ್ಸ್‌’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ವಿಜಯ್‌ ರಾಘವೇಂದ್ರ ಅಕ್ಕನ ಮಗ ಜೈ ಎಂಟ್ರಿ

ಜೂನಿಯರ್ ಎನ್‌ಟಿಆರ್‌ ಬರ್ತ್‌ಡೇಗೆ ಬಿಗ್‌ ಬ್ಯಾಂಗ್‌! ಪ್ರಶಾಂತ್‌ ನೀಲ್‌ ಸಿನಿಮಾ ಘೋಷಣೆ ಸಾಧ್ಯತೆ

‘ನಮ್ಮಿಬ್ಬರ ನಡುವಿನ ಸಿನಿ ಕಾಂಪಿಟೇಷನ್‌ ಆರೋಗ್ಯಕರವಾಗಿರಲಿಲ್ಲ!’ ರಮ್ಯಾ ಜತೆಗಿನ ದುಷ್ಮನಿ ಬಗ್ಗೆ ರಕ್ಷಿತಾ ಪ್ರೇಮ್‌ ಏನಂದ್ರು?

‘ಗೀತಾಳ ಗಂಡನಾಗಿ ಕೇಳ್ತಿದ್ದೇನೆ, ಇಷ್ಟು ದಿನ ನೀವೇನು ಕಿಸಿದಿದ್ದೀರಿ ಹೇಳಿ?’ ಕುಮಾರ ಬಂಗಾರಪ್ಪಗೆ ಮಾತಲ್ಲೆ ಟಾಂಗ್‌ ಕೊಟ್ಟ ಶಿವರಾಜ್‌ಕುಮಾರ್

ಚಿತ್ರಮಂದಿರದಲ್ಲಿ 3Dಯಲ್ಲಿ ಬಿಡುಗಡೆ ಆಗಿದ್ದ ಈ ಚಿತ್ರವನ್ನು ಈಗ ಮನೆಯಲ್ಲಿಯೇ ನೋಡಬಹುದು. ಹಾಗಾದರೆ ಯಾವಾಗ ಈ ಚಿತ್ರ ಡಿಜಿಟಲ್‌ ಅಂಗಳಕ್ಕೆ ಬರಲಿದೆ? ಈಗಾಗಲೇ ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

ಜೇಮ್ಸ್‌ ಕ್ಯಾಮರಾನ್‌ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಕೇವಲ ಇಂಗ್ಲಿಷ್‌ ಮಾತ್ರವಲ್ಲದೆ ಭಾರತದ ಹಲವು ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಆಗಿತ್ತು. ಭಾರತದಲ್ಲಿಯೇ ಈ ಸಿನಿಮಾ ನೂರಾರು ಕೋಟಿ ಬಾಚಿಕೊಂಡಿತ್ತು. ಚಿತ್ರದಲ್ಲಿ ಕೇಟ್ ವಿನ್ಸ್ಲೆಟ್, ಸ್ಯಾಮ್ ವರ್ತಿಂಗ್ಟನ್, ಜೊಯ್ ಸಲ್ಡಾನಾ, ಸಿಗೌರ್ನಿ ವೀವರ್ ಮತ್ತು ಸ್ಟೀಫನ್ ಲ್ಯಾಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

2018

ಮಲಯಾಳಂನಲ್ಲಿ ಸದ್ದು ಮಾಡಿ, ಕಲೆಕ್ಷನ್‌ ವಿಚಾರದಲ್ಲಿಯೂ ದಾಖಲೆ ಬರೆದ 2018 ಸಿನಿಮಾ ಸಹ ಈ ವಾರ ಒಟಿಟಿಗೆ ಅಪ್ಪಳಿಸುತ್ತಿದೆ. ಟೊವಿನೋ ಥಾಮಸ್‌ ಸೇರಿ ಇನ್ನೂ ಹಲವು ಮಾಲಿವುಡ್‌ ಕಲಾವಿದರು ನಟಿಸಿರುವ ಈ ಸಿನಿಮಾ ಸೋನಿ ಲೀವ್‌ನಲ್ಲಿ ಜೂನ್‌ 9ರಿಂದ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಜೂಡ್‌ ಅಂಟೋನಿ ಜೋಸೆಫ್‌ ಈ ಸಿನಿಮಾ ನಿರ್ದೇಶಕರು.

ಕಸ್ಟಡಿ

ಟಾಲಿವುಡ್‌ ನಟ ನಾಗಚೈತನ್ಯ ನಾಯಕನಾಗಿ ನಟಿಸಿದ ಕಸ್ಟಡಿ ಸಿನಿಮಾ ಸಹ ಒಟಿಟಿಗೆ ಬರಲಿದೆ. ಮೇ 12ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಅಲ್ಲಿ ಹೆಚ್ಚು ಸದ್ದು ಮಾಡಿರಲಿಲ್ಲ. ಇದೀಗ ಒಟಿಟಿಯಲ್ಲಿ ಜೂನ್‌ 9ರಿಂದ ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗಲಿದೆ.

ಬ್ಲಡಿ ಡ್ಯಾಡಿ

ಈ ಸಿನಿಮಾಗಳ ಜತೆಗೆ ಇನ್ನೂ ಹಲವು ಸಿನಿಮಾಗಳೂ ಈ ವಾರ ಒಟಿಟಿ ರಿಲೀಸ್‌ ಆಗಲಿವೆ. ಅವುಗಳನ್ನು ನೋಡುವುದಾದರೆ, ಶಾಹಿದ್‌ ಕಪೂರ್‌ ಮುಖ್ಯಭೂಮಿಕೆಯ ಬ್ಲಡಿ ಡ್ಯಾಡಿ ಸಿನಿಮಾ ಜಿಯೋ ಸಿನಿಮಾದಲ್ಲಿ ಉಚಿತವಾಗಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಅಲಿ ಅಬ್ಬಾಸ್‌ ಜಾಫರ್‌ ನಿರ್ದೇಶನದ ಈ ಸಿನಿಮಾ ಜೂನ್‌ 9ರಿಂದ ಪ್ರಸಾರವಾಗಲಿದೆ.

ಸಿನಿಮಾ ಸಂಬಂಧಿ ಈ ಸುದ್ದಿಯನ್ನೂ ಓದಿ

Dare Devil Mustafa: ಪೂರ್ಣಚಂದ್ರ ತೇಜಸ್ವಿಯವರನ್ನು ಸೆಲೆಬ್ರೇಟ್‌ ಮಾಡಲು ಸಿಕ್ಕ ಅವಕಾಶವೇ ಡೇರ್‌ ಡೆವಿಲ್‌ ಮುಸ್ತಾಫಾ; ಧನಂಜಯ್‌

Dare Devil Mustafa: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಎರಡು ವಾರದ ಹಿಂದೆ ತೆರೆಕಂಡಿದ್ದ ಪೂರ್ಣ ಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ಡೇರ್‌ ಡೆವಿಲ್‌ ಮುಸ್ತಾಫಾ ಸಿನಿಮಾ, ಮೇಕಿಂಗ್‌ ಮತ್ತು ಗಟ್ಟಿ ಕಂಟೆಂಟ್‌ ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕರ್ನಾಟಕ ಮಾತ್ರವಲ್ಲದೆ, ಪಕ್ಕದ ರಾಜ್ಯ ಮತ್ತು ವಿದೇಶಗಳಲ್ಲಿಯೂ ಮೋಡಿ ಮಾಡಿತ್ತು. ಎಲ್ಲ ಕಡೆಯಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಚಿತ್ರತಂಡವೂ ಹಿರಿಹಿರಿ ಹಿಗ್ಗಿತ್ತು. ಇದೀಗ ತಮ್ಮ ಖುಷಿಯನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದೆ. ಇಡೀ ತಂಡದ ಪೈಕಿ ಮೊದಲು ಮಾತನಾಡಿದ್ದು ಡಾಲಿ ಧನಂಜಯ್.‌ ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು