OTT Releases: ಒಟಿಟಿಯಲ್ಲಿ ಸಿನಿಮಾ ನೋಡ್ತಿರಾ? ವೆಬ್ ಸರಣಿ ನೋಡುವಿರಾ? ಇಲ್ಲಿದೆ ಈ ವಾರ ಬಿಡುಗಡೆಯಾಗುವ ಹೊಸ ಸಿನಿಮಾ-ಸರಣಿಗಳ ಪಟ್ಟಿ
Feb 19, 2024 07:00 PM IST
OTT Releases: ಈ ವಾರ ಬಿಡುಗಡೆಯಾಗುವ ಹೊಸ ಸಿನಿಮಾ-ಸರಣಿಗಳ ಪಟ್ಟಿ
- OTT release this week: ಈ ವಾರ ಹಲವು ಸಿನಿಮಾಗಳು, ವೆಬ್ ಸರಣಿಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಐನ್‌ಸ್ಟೈನ್ ಆಂಡ್ ಬಾಂಬ್, ದಿ ಇಂದ್ರಾಣಿ ಮುಖರ್ಜಿ ಸ್ಟೋರಿ, ಅಪಾರ್ಟ್ಮೆಂಟ್ 404, ಮಲೈಕೊಟ್ಟೈ ವಲಿಬನ್ ಸೇರಿದಂತೆ ಹಲವು ಸಿನಿಮಾ, ಸರಣಿಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
This Week OTT Releases Movies: ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಝೀ5 ಸೇರಿದಂತೆ ವಿವಿಧ ಒಟಿಟಿಗಳಲ್ಲಿ ಈ ವಾರ ಯಾವೆಲ್ಲ ಹೊಸ ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆಯಾಗುತ್ತಿವೆ ಎಂಬ ಕುತೂಹಲ ನಿಮ್ಮಲ್ಲಿರಬಹುದು. ಈ ವಾರ ಹಲವು ಕ್ರೈಮ್ ಮತ್ತು ಸಸ್ಪೆನ್ಷ್ ಥ್ರಿಲ್ಲರ್ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಕೆಲವೊಂದು ವೆಬ್ ಸರಣಿಗಳು ನಿನ್ನೆ ಅಥವಾ ಇಂದು ಬಿಡುಗಡೆಯಾಗಿರಬಹುದು. ಇನ್ನಷ್ಟು ವೆಬ್ ಸರಣಿಗಳು, ಸಿನಿಮಾಗಳು ನಾಳೆಯಿಂದ ಬಿಡುಗಡೆಯಾಗುತ್ತಿವೆ.
ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗುವ ಸಿನಿಮಾ-ವೆಬ್ ಸರಣಿಗಳು
ಐನ್‌ಸ್ಟೈನ್ ಆಂಡ್ ಬಾಂಬ್ (ಸಾಕ್ಷ್ಯಚಿತ್ರ) - ಫೆಬ್ರವರಿ 19
ರಿದಮ್ ಪ್ಲಸ್ ಫ್ಲೋ ಇಟಲಿ (ರಿಯಾಲಿಟಿ ಸರಣಿ) - ಫೆಬ್ರವರಿ 19
ಮೈಕ್ ಎಪ್ಸ್: ರೆಡಿ ಟು ಸೆಲ್ ಔಟ್ (ಕಾಮಿಡಿ ವೆಬ್ ಸರಣಿ) - ಫೆಬ್ರವರಿ 20
ಅವತಾರ್ ಆಂಡ್ ಲಾಸ್ಟ್ ಏರ್ಬೆಂಡರ್ (ವೆಬ್ ಸರಣಿ) - ಫೆಬ್ರವರಿ 22
ಸೌತ್ ಪಾ (ಇಂಗ್ಲಿಷ್ ಚಲನಚಿತ್ರ)- ಫೆಬ್ರವರಿ 22
ಮಿ ಕಲ್ಪಾ (ನೆಟ್‌ಫ್ಲಿಕ್ಸ್ ಚಲನಚಿತ್ರ) - ಫೆಬ್ರವರಿ 23
ಫಾರ್ಮುಲಾ 1: ಡ್ರೈವ್ ಟು ಸರ್ವೈವ್ ಸೀಸನ್ 6 (ಸಾಕ್ಷ್ಯಚಿತ್ರ ಸರಣಿ) - ಫೆಬ್ರವರಿ 23
ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ದಿ ಬರೀಡ್ ಟ್ರುತ್ (ಸಾಕ್ಷ್ಯಚಿತ್ರ ಸರಣಿ) - ಫೆಬ್ರವರಿ 23
ಮಾರ್ಷಲ್ ದಿ ಶೆಲ್ ವಿತ್ ಶೂಸ್ - ಫೆಬ್ರವರಿ 24 ರಂದು ಬಿಡುಗಡೆ
ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿ
ಅಪಾರ್ಟ್ಮೆಂಟ್ 404, ಕೊರಿಯನ್ (ವೆಬ್ ಸರಣಿ) - ಫೆಬ್ರವರಿ 23
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ
ವಿಲ್ ಟ್ರೆಂಟ್ ಸೀಸನ್ 2 (ಇಂಗ್ಲಿಷ್ ಚಲನಚಿತ್ರ) - ಫೆಬ್ರವರಿ 21
ಸ್ಟಾರ್ ವಾರ್ಸ್: ದಿ ಬ್ಯಾಡ್ ಬ್ಯಾಚ್ (ಇಂಗ್ಲಿಷ್ ಅನಿಮೇಟೆಡ್ ಚಲನಚಿತ್ರ) - ಫೆಬ್ರವರಿ 21
ಮಲೈಕೊಟ್ಟೈ ವಲಿಬನ್ (ಮಲಯಾಳಂ ಚಲನಚಿತ್ರ)- ಫೆಬ್ರವರಿ 23
ಈ ವಾರ 17 ಸಿನಿಮಾ, ಸರಣಿಗಳು ಒಟಿಟಿಯಲ್ಲಿ ಸ್ಟ್ರೀಮಿಂಗ್
ಈ ವಾರ, 17 ಸಿನಿಮಾಗಳು ಒಟಿಟಿಯಲ್ಲಿ ಸದ್ದು ಮಾಡಲು ಸಿದ್ಧವಾಗಿವೆ. ಅದರಲ್ಲಿ 8 ಚಿತ್ರಗಳು ಶುಕ್ರವಾರ ಫೆಬ್ರವರಿ 23 ರಂದು ಬಿಡುಗಡೆಯಾಗಲಿವೆ. ಆದರೆ, ಆ ಪೈಕಿ ಆಲಿಯಾ ಭಟ್ ಅವರ ಕ್ರೈಂ ವೆಬ್ ಸೀರೀಸ್ ಪೋಚರ್ ಬಹುನಿರೀಕ್ಷಿತವಾಗಿದೆ. ಇದೇ ರೀತಿ ದಿ ಇಂದ್ರಾಣಿ ಮುಖರ್ಜಿ ಸ್ಟೋರಿ ದಿ ಬರೀಡ್ ಟ್ರುತ್ ಸೀರೀಸ್ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಇದು ರಾಷ್ಟ್ರವ್ಯಾಪಿ ಸಂಚಲನ ಸೃಷ್ಟಿಸಿದ ಶೀನಾ ಬೋರಾ ಹತ್ಯೆ ಪ್ರಕರಣವನ್ನು ಆಧರಿಸಿದ ಸಿನಿಮಾವಾಗಿದೆ. ಇದೇ ರೀತಿ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಮಲೈಕೊಟ್ಟೈ ವಲಿಬನ್ ಸಿನಿಮಾ ಕೂಡ ನಿರೀಕ್ಷೆ ಹೆಚ್ಚಿಸಿದೆ.
ಆಸಕ್ತಿದಾಯಕವಾಗಿರುವ ಐದು ಸಿನಿಮಾ, ಸರಣಿ
ಇವುಗಳಲ್ಲದೆ, ಐನ್‌ಸ್ಟೈನ್ ಆಂಡ್ ಬಾಂಬ್, ಅವತಾರ್ ಆಂಡ್ ಲಾಸ್ಟ್ ಏರ್‌ಬೆಂಡರ್ ಸಹ ಆಸಕ್ತಿದಾಯಕ ಸರಣಿಗಳಾಗಿವೆ. ಈ ವಾರ ಬಿಡುಗಡೆಯಾಗಲಿರುವ 17 ಸಿನಿಮಾ, ಸರಣಿಗಳಲ್ಲಿ 5 ಹೆಚ್ಚು ಕುತೂಹಲಕಾರಿಯಾಗಿವೆ. ಆದರೆ, ಇಂದ್ರಾಣಿ ಮುಖರ್ಜಿ ಸ್ಟೋರಿ ದಿ ಬರೀಡ್ ಟ್ರುತ್ ಸರಣಿಯನ್ನು ನಿಲ್ಲಿಸುವಂತೆ ಸಿಬಿಐಯು ನೆಟ್‌ಫ್ಲಿಕ್ಸ್‌ಗೆ ನೋಟಿಸ್ ನೀಡಿದೆ. ಹೀಗಾಗಿ, ಈ ಸರಣಿಯ ಮೇಲೆ ತೂಗುಕತ್ತಿ ಇದೆ.