logo
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ 2 ಪೀಲಿಂಗ್ಸ್ ಹಾಡು ರಿಪೀಟ್ ಮೋಡ್‌ನಲ್ಲಿ ಕೇಳುತ್ತಿದ್ದೀರಾ; ಇಲ್ಲಿದೆ ನೋಡಿ ಕನ್ನಡ ಲಿರಿಕ್ಸ್

ಪುಷ್ಪ 2 ಪೀಲಿಂಗ್ಸ್ ಹಾಡು ರಿಪೀಟ್ ಮೋಡ್‌ನಲ್ಲಿ ಕೇಳುತ್ತಿದ್ದೀರಾ; ಇಲ್ಲಿದೆ ನೋಡಿ ಕನ್ನಡ ಲಿರಿಕ್ಸ್

Jayaraj HT Kannada

Dec 02, 2024 12:18 PM IST

google News

ಪುಷ್ಪ 2 ಪೀಲಿಂಗ್ಸ್ ಹಾಡು ಕನ್ನಡ ಲಿರಿಕ್ಸ್

    • ಪುಷ್ಪ 2 ಸಿನಿಮಾ ಬಿಡುಗಡೆಗೂ ಮುನ್ನವೇ ಪೀಲಿಂಗ್ಸ್ ಹಾಡು ಭಾರಿ ಸದ್ದು ಮಾಡುತ್ತಿದೆ. ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಹಾಡು ಟ್ರೆಂಡ್‌ ಆಗಿದೆ. ವರದರಾಜ್‌ ಚಿಕ್ಕಬಳ್ಳಾಪುರ ಸಾಹಿತ್ಯಕ್ಕೆ ಕೇಳುಗರು ಫಿದಾ ಆಗಿದ್ದು, ಪೀಲಿಂಗ್ಸ್ ಹಾಡಿನ ಕನ್ನಡ ಲಿರಿಕ್ಸ್‌ ಇಲ್ಲಿದೆ.
ಪುಷ್ಪ 2 ಪೀಲಿಂಗ್ಸ್ ಹಾಡು ಕನ್ನಡ ಲಿರಿಕ್ಸ್
ಪುಷ್ಪ 2 ಪೀಲಿಂಗ್ಸ್ ಹಾಡು ಕನ್ನಡ ಲಿರಿಕ್ಸ್

ಬಹುನಿರೀಕ್ಷಿತ 'ಪುಷ್ಪ 2: ದಿ ರೂಲ್' ಚಿತ್ರದ ಪೀಲಿಂಗ್ಸ್ ಹಾಡು ಬಿಡುಗಡೆಯಾಗಿದೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿಯೂ ಪೀಲಿಂಗ್ಸ್ ಹಾಡು ಸದ್ದು ಮಾಡುತ್ತಿದೆ. ಎಲ್ಲಾ ಭಾಷೆಗಳಲ್ಲು 4 ನಿಮಿಷ 11 ಸೆಕೆಂಡುಗಳ ಹಾಡಿನ ವಿಡಿಯೊದಲ್ಲಿ ಆರಂಭದಲ್ಲಿ ಮಲಯಾಳಂ ಸಾಲುಗಳಿವೆ. ಆ ನಂತರ ಆಯಾ ಭಾಷೆಯ ಸಾಹಿತ್ಯವಿದೆ. ಹಾಡು ಮಲಯಾಳಂ ಸಾಹಿತ್ಯದೊಂದಿಗೆ ಆರಂಭವಾಗುತ್ತಿದ್ದು, ಸಿಜು ತುರವೂರ್ ಮಲಯಾಳಂ ಸಾಲುಗಳನ್ನು ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಹಾಡು ಒಂದೇ ದಿನದೊಳಗೆ ಈ ಭರ್ಜರಿ ವೀಕ್ಷಣೆಗಳನ್ನು ಪಡೆದಿದೆ.

ಕನ್ನಡ ಹಾಡಿನ ಸಾಹಿತ್ಯ ಆಕರ್ಷಕವಾಗಿದ್ದು, ವರದರಾಜ್‌ ಚಿಕ್ಕಬಳ್ಳಾಪುರ ಸಾಹಿತ್ಯ ರಚನೆ ಯುವಮನಸ್ಸುಗಳನ್ನು ಆಕರ್ಷಿಸಿದೆ. ಹಾಡಿನಲ್ಲಿ ತುಂಟತನದ ನವಿರು ಸಾಹಿತ್ಯವಿದ್ದು, ಮತ್ತೊಮ್ಮೆ ಕೇಳುವಂತೆ ಮಾಡುತ್ತದೆ. ಹಾಡಿಗೆ ಸಂತೋಷ್ ವೆಂಕಿ ಮತ್ತು ಅಮಲಾ ಚೇಬೋಲು ಧ್ವನಿಯಾಗಿದ್ದಾರೆ. ಕನ್ನಡ ಹಾಡಿನ‌ ಲಿರಿಕ್ಸ್ ಅನ್ನು ಜನರು ಹುಡುಕುತ್ತಿದ್ದು, ಸಂಪೂರ್ಣ ಹಾಗೂ ಸ್ಪಷ್ಟ ಲಿರಿಕ್ಸ್‌ ಇಲ್ಲಿದೆ.

ಮಲ್ಲಿಗ ವನ್ನಂಟೆ ಅಂಬುಗಳೊ

ಕಣ್ಮುನ ತುಮುಗಳೋ

ಅಂಬಿಲಿ ಪೂಣಿಲ ನಮ್ಮುಗಳೋ

ಪುಂಚಿರಿ ತುಂಬಿಗಳೊ|

ಮುಳ್ಳ ಮಲರ್ ಮಣಿ ಚಂಡುಗಳೊ

ನಿನ್ನ ಮಣಿ ಚುಂಡುಗಳೋ

ತೆನ್ ತೇರೆಂಜೆತುನ್ನ ವಂಡುಗಳೋ

ಪೂಂಕಿನ ತುಂಡುಗಳೋ|

ಹೇ ಆರಕ್ಕೆ ಒಂದ್ಸಾರಿ, ಏಳಕ್ಕೆ ಓಂದ್ಸಾರಿ

ಹತ್ತು ಗಂಟೆಗೆ ಮುಂಚೆ ಒಂದ್ಸಾರಿ

ಮಲಗಿದ್ರೆ ಓಂದ್ಸಾರಿ ಎದ್ದಿದ್ರೆ ಒಂದ್ಸಾರಿ

ಏನು ತೋಚದೆ ಕುಂತಿದ್ರೆ ಒಂದ್ಸಾರಿ

ಬೆರ್ಳು ಗಿಲ್ಲುತ್ತಿದ್ರೆ ಒಂದ್ಸಾರಿ ಒಂದ್ಸಾರಿ

ಕಾಲು ತುಳಿತಿದ್ರೆ ಒಂದ್ಸಾರಿ ಒಂದ್ಸಾರಿ

ನೀನು ಪಕ್ಕ ಇದ್ರೆ ಪ್ರತಿ ಒಂದುಸಾರಿ|

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|

ಹೇ, ಛಿ ಅಂದ್ರೆ ಒಂದ್ಸಾರಿ, ಬಾ ಅಂದ್ರೆ ಒಂದ್ಸಾರಿ‌

ಕದ್ದು ಮುಚ್ಚಿಕೊಂಡು ಹೊಡ್ದಾಗ ಒಂದ್ಸಾರಿ

ಹೂವಿಟ್ರೆ ಒಂದ್ಸಾರಿ ಬೊಟ್ಟಿಟ್ರೆ ಒಂದ್ಸಾರಿ

ಚಿನ್ನದ ಒಡವೆನ ತೊಟ್ಟಾಗ ಒಂದ್ಸಾರಿ|

ಕಸ ಹೊಡಿತಿದ್ರೆ ಒಂದ್ಸಾರಿ ಒಂದ್ಸಾರಿ

ಮೈಯ ಮುರಿತಿದ್ರೆ ಒಂದ್ಸಾರಿ ಒಂದ್ಸಾರಿ

ನೀನು ಹಿಡಿತಿದ್ರೆ ನಿಜಕ್ಕೂ ಒಂದ್ಸಾರಿ|

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss

ಬತ್ತಾವಲ್ಲ ಪೀಲಿಂಗ್ಸು, ಬತ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|

ಒಳ್ಳು ಕಲ್ಲಾಗ ನೀ ರುಬ್ಬುತ್ತಿದ್ದಾಗ

ಬೆವರ ಹನಿಯ ಸೆರಗಿನಿಂದ ಒರೆಸಿಕೊಂಡಾಗ

ಹಗ್ಗದ ಮ್ಯಾಗೆ ಅಂಗಿ ಒಣಗಿಸುವಾಗ

ನಿನ್ನ ಮೈ ವಾಸನೆಯು ನೆನಪಾದಾಗ|

ಎರಡು ಕೈಯನ್ನೆತ್ತಿ ನೀನು ಜಡೆ ಸುತ್ತುವಾಗ

ದಿಂಬನ್ನಪ್ಪಿಕೊಂಡು ನಿದ್ದೆ ಮಾಡುವಾಗ

ಸುಸ್ತಾಗೋಗಿ ನೀನು ಆಕಳಿಸುವಾಗ|

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss

ಬತ್ತಾವಲ್ಲ ಪೀಲಿಂಗ್ಸು, ಬತ್ತಾವಲ್ಲ ಪೀಲಿಂಗ್ಸು

ಬಂದು ಬಂದು ಮುಂಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|

ನೀ ಬಟ್ಟೆ ತಂದು ನನ್ನ ತಲೆ ಒರೆಸುವಾಗ

ನಡುವೆ ನಡುವೆ ನೀ ನನ್ನ ನಡುವೆ ನೀವಿದಾಗ

ನೀನು ಪ್ರೀತಿಯಿಂದ ಅನ್ನ ಬೆರೆಸಿ ತಿನ್ನಿಸುವಾಗ

ಎಂಜಲು ಮೂತಿಯಲ್ಲೇ ನೀನು ಮುತ್ತು ಕೊಡುವಾಗ|

ಸೀರೆ ನೆರಿಗೆ ನೀನು ಸಿಕ್ಸಿಕೊಳ್ಳುವಾಗ

ಸರಿ ಮಾಡೋಕಂತ ನೀ ಕೈಯಿಟಾಗ

ಸ್ವಂತ ಗಂಡನೆದುರೆ ನಾಚಿಕೆ ಪಟ್ಟಾಗ|

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದುಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss

ಬತ್ತಾವಲ್ಲ ಪೀಲಿಂಗ್ಸು, ಬರ್ತಾವಲ್ಲ ಪೀಲಿಂಗ್ಸು

ಬಂದು ಬಂದುಮುಚ್ಚಾಗ್ತಾವೆ ಪೀಲಿಂಗ್ಸ್ ಪೀಲಿಂಗ್ಸುsss|

ಕನ್ನಡ ಹಾಡಿನ ವಿಡಿಯೋ ಇಲ್ಲಿದೆ

ಹಾಡಿಗೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಡಾನ್ಸ್‌ಗೆ ವೀಕ್ಷಕರು ಫಿದಾ ಆಗಿದ್ದಾರೆ. ಡಿಎಸ್‌ಪಿ ಸಂಗೀತ ಸಂಯೋಜನೆ ಮತ್ತೊಮ್ಮೆ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಪುಷ್ಪ 2 ಚಿತ್ರ ಪೀಲಿಂಗ್ಸ್‌ ಹಾಡು ಯುವಕರ ಫೀಲಿಂಗ್ಸ್ ಹೆಚ್ಚಿಸಿದೆ. ಜೊತೆಗೆ ಹಾಡಿನಲ್ಲಿರುವುದು ಅಲ್ಲು ಅರ್ಜುನ್‌ ಅಲ್ಲ ಮಲ್ಲು ಅರ್ಜುನ್‌ ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ