Pushpa 3 Update: 'ಪುಷ್ಪ 3' ಸಿನಿಮಾದ ಟೈಟಲ್ ರಿವೀಲ್; ವಿಷಯ ಕೇಳಿ ಖುಷಿಯಾದ ಅಲ್ಲು ಅರ್ಜುನ್ ಅಭಿಮಾನಿಗಳು
Dec 03, 2024 03:39 PM IST
'ಪುಷ್ಪ 3' ಸಿನಿಮಾದ ಟೈಟಲ್ ರಿವೀಲ್
- ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಬಿಡುಗಡೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಲ್ಲು ಅರ್ಜುನ್ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಆ ಸಂತಸ ಇಮ್ಮಡಿಯಾಗುವ ಇನ್ನೊಂದು ವಿಚಾರ ಹೊರಬಿದ್ದಿದೆ. ಪುಷ್ಪ 3 ಸಿನಿಮಾದ ಹೆಸರು ರಿವೀಲ್ ಆಗಿದೆ.
ಅಲ್ಲು ಅರ್ಜುನ್ ಅವರ 'ಪುಷ್ಪ 2: ದಿ ರೂಲ್' ಬಿಡುಗಡೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ ಈ ಸಂದರ್ಭದಲ್ಲಿ ಪುಷ್ಟ 3 ಚಿತ್ರದ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಈ ಹಿಂದೆ ಅಲ್ಲು ಅರ್ಜುನ್ ಅವರು ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ಪುಷ್ಪ 3 ಕೂಡ ಬರಲಿದೆ ಎಂಬ ಸೂಚನೆ ನೀಡಿದ್ದರೂ ಆಗ ಸಾಕಷ್ಟು ಜನರ ಚಿತ್ತ ಆಕಡೆಯೇ ಇತ್ತು. ವರದಿಗಳ ಪ್ರಕಾರ, ಪುಷ್ಪಾ 3 ಗೆ ಪುಷ್ಪ 3: ದಿ ರಾಂಪೇಜ್ ಎಂದು ಶೀರ್ಷಿಕೆ ಇಡಲಾಗಿದೆ. ಮೂರನೇ ಭಾಗದ ನಿರ್ಮಾಣ ಪ್ರಾರಂಭವಾಗುವ ಮೊದಲು ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗಿದೆ.
ಪುಷ್ಪ 2 ಬಿಡುಗಡೆಯ ನಂತರ ನಿರ್ದೇಶಕ ಸುಕುಮಾರ್ ಆರು ತಿಂಗಳ ವಿರಾಮವನ್ನು ತೆಗೆದುಕೊಳ್ಳಲು ಯೋಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದರ ನಂತರ, ಅವರು ರಾಮ್ ಚರಣ್ ಜೊತೆಗಿನ ಪ್ರಾಜೆಕ್ಟ್‌ಗೆ ಕೆಲಸ ಮಾಡಬಹುದು ಎಂದು ಹೇಳಲಾಗುತ್ತಿದೆ.
ಮನೋಬಾಲಾ ವಿಜಯಬಾಲನ್ ಹಂಚಿಕೊಂಡ ಫೋಟೋದಲ್ಲಿ, ಧ್ವನಿ ವಿನ್ಯಾಸಕ ರೆಸುಲ್ ಪೂಕುಟ್ಟಿ ಮತ್ತು ಸಿಬ್ಬಂದಿ ಕಾಣಿಸುತ್ತಿದ್ದಾರೆ. ಮುಂದಿನ ಅಧ್ಯಾಯದ ಶೀರ್ಷಿಕೆಯನ್ನು ಪ್ರದರ್ಶಿಸುವ ಪರದೆಯ ಮುಂದೆ ಅವರು ನಿಂತುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳ ಪ್ರಕಾರ, ಪುಷ್ಪ 3 ಶೀರ್ಷಿಕೆ ಪುಷ್ಪ ದಿ ರಾಂಪೇಜ್ ಎನ್ನುವುದು ಬಹುತೇಕ ಖಚಿತವಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಮತ್ತು ಸಂಪೂರ್ಣ ಪುಷ್ಪ 2 ತಂಡ ಈ ಸಿನಿಮಾದಲ್ಲೂ ಕೆಲಸ ಮಾಡುತ್ತದೆ.
#ಪುಷ್ಪಾ3 ದೃಢೀಕರಿಸಲಾಗಿದೆ" ಎಂದು ಶೀರ್ಷಿಕೆ ಬರೆಯಲಾಗಿದೆ ಎಂದು ಈ ಪೋಸ್ಟ್‌ಗೆ ಟ್ಯಾಗ್ ಲೈನ್ ಬರೆದುಕೊಂಡಿದ್ದಾರೆ. ಈ ಎಲ್ಲಾ ವಿಚಾರವನ್ನು ಗಮನಿಸಿದ ಅಲ್ಲು ಅರ್ಜುನ್ ಅಭಿಮಾನಿಗಳು ಇನ್ನಷ್ಟು ಖುಷಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಪುಷ್ಪರಾಜ್ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗಲಿದ್ದಾರೆ ಎನ್ನುವುದು ಖಚಿತವಾಗಿದೆ.