Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಮರಳಿ ಬರ್ತಿದ್ದಾಳೆ ಶಿವು ತಾಯಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಮರಳಿ ಬರ್ತಿದ್ದಾಳೆ ಶಿವು ತಾಯಿ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಮರಳಿ ಬರ್ತಿದ್ದಾಳೆ ಶಿವು ತಾಯಿ

ಅಣ್ಣಯ್ಯ ಧಾರಾವಾಹಿಯಲ್ಲಿ ದಿನೇ ದಿನೇ ಕಥೆ ತಿರುವು ಪಡೆದುಕೊಳ್ಳುತ್ತಿದೆ. ಅಣ್ಣಯ್ಯನ ತಾಯಿ ಬದುಕಿದ್ದಾಳೆ ಎನ್ನುವ ಮಾಹಿತಿಯೇ ಇರಲಿಲ್ಲ. ಆದರೆ ಅವಳು ಈಗ ಜೈಲಿನಿಂದ ಮರಳಿ ಬರುತ್ತಿದ್ದಾಳೆ. ಕಥೆ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಮರಳಿ ಬರ್ತಿದ್ದಾಳೆ ಶಿವು ತಾಯಿ
ಮರಳಿ ಬರ್ತಿದ್ದಾಳೆ ಶಿವು ತಾಯಿ

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿಯರನ್ನು ಮಾತಾಡಿಸುತ್ತಾನೆ. ಎಲ್ಲರೂ ಅವರ ಪಾಡಿಗೆ ಅವರು ತಮ್ಮ ತಮ್ಮ ಕೆಲಸ ಮಾಡಿಕೊಳ್ಳುತ್ತಾ ಇರುತ್ತಾರೆ. ಆಗ ಅಣ್ಣಯ್ಯ ಬಂದು ತಮಾಷೆಗೆ ಏನು ಎಲ್ಲರೂ ಕೆಲಸ ಮಾಡ್ತಾ ಇದ್ದೀರಾ? ಆರಾಮಾಗಿ ಟಿವಿ ನೋಡೋದಲ್ವ? ಎಂದು ಪ್ರಶ್ನೆ ಮಾಡುತ್ತಾನೆ. ಆಗ ಎಲ್ಲರೂ ಆ! ಇದೇನಿದು ಅಣ್ಣ ಈ ರೀತಿ ಮಾತಾಡ್ತಾ ಇದಾನಲ್ಲ ಎಂದು ಆಲೋಚನೆ ಮಾಡುತ್ತಾರೆ. ಅಷ್ಟರಲ್ಲೇ ಎಲ್ಲಾ ನಂಬಿಬಿಟ್ರಾ? ಅಂತ ಪ್ರಶ್ನೆ ಮಾಡಿ. ಸುಮ್ಮನೆ ಓದ್ಕೊಳಿ ಎಂದು ಹೇಳುತ್ತಾನೆ. ಅದಾದ ನಂತರದಲ್ಲಿ ಪಾರು ಎಲ್ಲಿದ್ದಾಳೆ ಎಂದು ಹುಡುಕಿಕೊಂಡು ಹೋಗುತ್ತಾನೆ.

ಪಾರು ಕೋಣೆಯಲ್ಲಿ ಒಬ್ಬಳೇ ಕುಳಿತುಕೊಂಡಿರುತ್ತಾಳೆ. ಯಾಕೆ ಪಾರು ಹೀಗೆ ಕುಳಿತಿದ್ದಾಳೆ. ಅವಳನ್ನು ಊಟಕ್ಕೆ ಕರೆದುಕೊಂಡು ಹೋಗಬೇಕು ಎಂದು ಅಂದುಕೊಂಡು ಅವಳ ಕೈ ಹಿಡಿದು ಕರೆಯುತ್ತಾನೆ. ಆದರೆ ಪಾರು ಊಟಕ್ಕೆ ಬರಲು ರೆಡಿ ಇರೋದಿಲ್ಲ. ಯಾಕೆ ಏನಾಯ್ತು ಎಂದು ಅವನು ಪ್ರಶ್ನೆ ಮಾಡುವಷ್ಟರಲ್ಲಿ ಸಾಕಷ್ಟು ವಿಚಾರ ಅವಳ ತಲೆಯಲ್ಲಿ ಬಂದಿರುತ್ತದೆ.

ಆ ನಂತರದಲ್ಲಿ ಇತ್ತ ಶಿವು ತಾಯಿ ಜೈಲಿನಲ್ಲಿರುವವಳು ಸನ್ನಡತೆಯ ಆಧಾರದ ಮೇಲೆ ಈ ಬಾರಿ ಬಿಡುಗಡೆ ಆಗುತ್ತಾಳೆ ಎಂದು ಹೇಳಲಾಗುತ್ತದೆ. ಪೊಲೀಸರು ನೀಡಿದ ಮಾಹಿತಿ ಕೇಳಿ ಶಿವು ತಾಯಿ ತುಂಬಾ ಸಂತೋಷ ಪಡುತ್ತಾಳೆ. ಆದರೆ ಶಿವುಗೆ ಆ ಬಗ್ಗೆ ಯಾವ ಸುಳಿವೂ ಇಲ್ಲ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner