logo
ಕನ್ನಡ ಸುದ್ದಿ  /  ಮನರಂಜನೆ  /  Devi Sri Prasad Hindi Album: ‘ಓ ಪರಿ’ ಮೂಲಕ ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಟ್ಟ ದೇವಿ ಶ್ರೀ ಪ್ರಸಾದ್‌

Devi Sri Prasad Hindi Album: ‘ಓ ಪರಿ’ ಮೂಲಕ ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಟ್ಟ ದೇವಿ ಶ್ರೀ ಪ್ರಸಾದ್‌

HT Kannada Desk HT Kannada

Oct 06, 2022 04:42 PM IST

‘ಓ ಪರಿ’ ಮೂಲಕ ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಟ್ಟ ದೇವಿ ಶ್ರೀ ಪ್ರಸಾದ್‌

    • ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ.
‘ಓ ಪರಿ’ ಮೂಲಕ ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಟ್ಟ ದೇವಿ ಶ್ರೀ ಪ್ರಸಾದ್‌
‘ಓ ಪರಿ’ ಮೂಲಕ ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಟ್ಟ ದೇವಿ ಶ್ರೀ ಪ್ರಸಾದ್‌

ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಸಂಗೀತ ನಿರ್ದೇಶಕರಾದ ದೇವಿ ಶ್ರೀಪ್ರಸಾದ್ ಅಲಿಯಾಸ್ ಡಿಎಸ್ಪಿ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ತಮ್ಮ ಹಿಟ್ ಹಾಡುಗಳ ಮೂಲಕ ಲಕ್ಷಾಂತರ ಜನರನ್ನು ರಂಜಿಸಿದ್ದಾರೆ. ಈಗ ಇದೇ ಮೊದಲ ಬಾರಿಗೆ ಅವರು ಸಿನಿಮಾ ಹೊರತುಪಡಿಸಿ ಆಲ್ಬಂ ಸಿಂಗಲ್‌ವೊಂದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅದೇ ‘ಓ ಪರಿ’.

ಟ್ರೆಂಡಿಂಗ್​ ಸುದ್ದಿ

Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್‌ ವಿಡಿಯೋ ವೈರಲ್‌, ಅಸಲಿ- ನಕಲಿ ವಿಡಿಯೋ ನೋಡಿ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಟಿ-ಸೀರೀಸ್ ಮೂಲಕ ಇದುವರೆಗೂ ಹಲವಾರು ಗಾಯಕರನ್ನು ಮತ್ತು ಸಂಗೀತಗಾರರನ್ನು ಮುನ್ನೆಲೆಗೆ ತಂದಿರುವ ಭೂಷಣ್ ಕುಮಾರ್, ಇದೇ ಮೊದಲ ಬಾರಿಗೆ ‘ರಾಕ್ಸ್ಟಾರ್’ ಎಂದೇ ಜನಪ್ರಿಯವಾಗಿರುವ ಡಿಎಸ್ಪಿ ಜೊತೆಗೆ ಕೈ ಜೋಡಿಸಿದ್ದಾರೆ. ಡಿಎಸ್ಪಿ ಸಂಯೋಜಿಸಿರುವ ‘ಓ ಪರಿ’ ಎಂಬ ಸಿಂಗಲ್‌ ಆಲ್ಬಂ ಟಿ-ಸೀರೀಸ್ ಮೂಲಕ ಹೊರತಂದಿದ್ದಾರೆ. ಈ ಹಾಡನ್ನು ಡಿಎಸ್ಪಿ ಅವರೇ ಹಾಡಿದ್ದು, ಇತ್ತೀಚೆಗೆ ಮುಂಬೈನಲ್ಲಿ ನಡೆದ ವಿಶೇಷ ಇವೆಂಟ್‌ನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡು ಈಗಾಗಲೇ ಯೂಟ್ಯೂಬ್‌ನ ಟಿ-ಸೀರೀಸ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ. ಅದರಲ್ಲೂ, ಡಿಎಸ್ಪಿ ಅವರ ಹುಕ್ ಸ್ಟೆಪ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.

ಈ ಹಾಡಿನ ವಿಶೇಷತೆಯೆಂದರೆ, ಇದು ಡಿಎಸ್ಪಿ ಅವರ ಮೊದಲ ಹಿಂದಿ ಸಿಂಗಲ್ ಆದರೂ, ಇದು ಹಿಂದಿಗೆ ಮಾತ್ರ ಸೀಮಿತವಲ್ಲ. ಇದೊಂದು ಪ್ಯಾನ್ ಇಂಡಿಯಾ ಹಾಡಾಗಿದ್ದು, ಹಿಂದಿಯಲ್ಲದೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಮೂಡಿಬಂದಿದೆ. ವಿಶೇಷವೆಂದರೆ, ಐದೂ ಭಾಷೆಗಳಲ್ಲಿ ಡಿಎಸ್ಪಿ ಅವರೇ ಈ ಹಾಡನ್ನು ಹಾಡಿದ್ದಾರೆ.

ಈ ಹಾಡಿನ ಕುರಿತು ಮಾತನಾಡಿರುವ ಡಿಎಸ್ಪಿ, ‘ಹಿಂದಿ ಆಲ್ಬಂ ಕ್ಷೇತ್ರಕ್ಕೆ ಕಾಲಿಡುವುದಕ್ಕೆ ಕೆಲವು ಸಮಯದಿಂದ ಯೋಚಿಸುತ್ತಿದ್ದೆ. ಅದಕ್ಕೊಂದು ಅದ್ಭುತ ವೇದಿಕೆ ಕಲ್ಪಿಸಿದ್ದು ಭೂಷಣ್ ಕುಮಾರ್ ಅವರ ಟಿ-ಸೀರೀಸ್. ನನ್ನ ಬೇರೆ ಹಾಡುಗಳನ್ನು ಮೆಚ್ಚಿದಂತೆ ಈ ಹಾಡನ್ನು ಸಹ ಕೇಳುಗರು ಇಷ್ಟಪಡುತ್ತಾರೆ ಎಂಬ ನಂಬಿಕೆ ನನಗಿದೆ. ಮುಂದಿನ ದಿನಗಳಲ್ಲಿ ಈ ತರಹದ ಇನ್ನಷ್ಟು ಆಲ್ಬಂ ಹಾಡುಗಳನ್ನು ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು