logo
ಕನ್ನಡ ಸುದ್ದಿ  /  ಮನರಂಜನೆ  /  Rishab Shetty: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸುವ ಮೂಲಕ ತಮ್ಮ ಸಿನಿಮಾವನ್ನು ನೆನಪಿಸಿದ ರಿಷಬ್‌ ಶೆಟ್ಟಿ

Rishab Shetty: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸುವ ಮೂಲಕ ತಮ್ಮ ಸಿನಿಮಾವನ್ನು ನೆನಪಿಸಿದ ರಿಷಬ್‌ ಶೆಟ್ಟಿ

HT Kannada Desk HT Kannada

Mar 20, 2023 06:18 AM IST

google News

ಬೆಂಗಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿದ ರಿಷಬ್‌ ಶೆಟ್ಟಿ

    • ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಾತ್ಸಾರವಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಸಾಕಷ್ಟು ಬಾರಿ ಸಾಬೀತಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಿಸಬೇಕು. ನಮ್ಮ ಹಳ್ಳಿಗಳಲ್ಲೂ ಈ ರೀತಿಯ ಶಾಲೆಗಳು ಸಿಗಬೇಕು'' ಎಂದು ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿದ  ರಿಷಬ್‌ ಶೆಟ್ಟಿ
ಬೆಂಗಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉದ್ಘಾಟಿಸಿದ ರಿಷಬ್‌ ಶೆಟ್ಟಿ (PC: Dr. Ashwath Narayan)

ವಿಶ್ವಸಂಸ್ಥೆಗೆ ಭಾರತದ ಪ್ರತಿನಿಧಿಯಾಗಿ ತೆರಳಿದ್ದ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ, ನಿರ್ಮಾಪಕ ರಿಷಬ್‌ ಶೆಟ್ಟಿ ಭಾರತಕ್ಕೆ ವಾಪಸಾಗಿದ್ದಾರೆ. ಅಲ್ಲಿಂದ ಬರುತ್ತಿದ್ದಂತೆ ಡಿವೈನ್‌ ಸ್ಟಾರ್‌, ಬೆಂಗಳೂರಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಉದ್ಘಾಟನೆ ಮಾಡುವ ಮೂಲಕ ತಾವು ನಿರ್ಮಿಸಿ, ನಿರ್ದೇಶಿಸಿದ ಸಿನಿಮಾವೊಂದನ್ನು ನೆನಪು ಮಾಡಿದ್ದಾರೆ.

ಮಲ್ಲೇಶ್ವರಂ ಕ್ಷೇತ್ರದ ಸುಬ್ರಮಣ್ಯನಗರದಲ್ಲಿ ರಿಷಬ್‌ ಶೆಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಭಾನುವಾರ ಉದ್ಘಾಟಿಸಿದ್ದಾರೆ. ಇದು ಮಲ್ಲೇಶ್ವರಂನ 24ನೇ ಮಾದರಿ ಶಾಲೆ ಆಗಿದೆ. ಈ ಕಾರ್ಯಕ್ರಮದಲ್ಲಿ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ, ಶ್ರೀ ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ, ಶಿಕ್ಷಣ ಫೌಂಡೇಶನ್ ಸಂಸ್ಥಾಪಕ ಪ್ರಸನ್ನ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಿಷಬ್‌ ಶೆಟ್ಟಿ, ''ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ತಾತ್ಸಾರವಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಪ್ರತಿಭಾವಂತರು ಎನ್ನುವುದು ಸಾಕಷ್ಟು ಬಾರಿ ಸಾಬೀತಾಗಿದೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಹೆಚ್ಚು ಹೆಚ್ಚು ಅಭಿವೃದ್ಧಿಗೊಳಿಸಬೇಕು. ನಮ್ಮ ಹಳ್ಳಿಗಳಲ್ಲೂ ಈ ರೀತಿಯ ಶಾಲೆಗಳು ಸಿಗಬೇಕು'' ಎಂದು ಪ್ರತಿಕ್ರಿಯಿಸಿದರು.

2018ರಲ್ಲಿ ರಿಷಬ್‌ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿದ್ದರು. ಈ ಚಿತ್ರದ ಮೂಲಕ ಅವರು ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದರು. 3 ಕೋಟಿ ಬಜೆಟ್‌ನಿಂದ ತಯಾರಾದ ಸಿನಿಮಾ 20 ಕೋಟಿ ರೂಪಾಯಿ ಲಾಭ ಮಾಡಿತ್ತು. ರಿಷಬ್‌ ಶೆಟ್ಟಿ ಜೊತೆಗೆ ಅನಂತ್‌ ನಾಗ್‌, ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡು ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದರು. ಈ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿತ್ತು. 2018ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ 2019ರಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಕೂಡಾ ದೊರೆತಿತ್ತು. ರಿಷಬ್‌ ಶೆಟ್ಟಿ ಸದ್ಯದ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅವರು ಕಾಂತಾರ ಪ್ರೀಕ್ವೆಲ್‌ ಪ್ರೀ ಪ್ರೊಡಕ್ಷನ್‌ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ರಿಷಬ್‌ ಶೆಟ್ಟಿ ಕುರಿತಾದ ಮತ್ತಷ್ಟು ಸುದ್ದಿಗಳು

ವಿಶ್ವಸಂಸ್ಥೆಯಲ್ಲಿ ಕನ್ನಡ ಮಾತನಾಡಿದ ರಿಷಬ್‌ ಶೆಟ್ಟಿ... ವೈರಲ್‌ ಆಗ್ತಿದೆ ವಿಡಿಯೋ

ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸದ್ಯಕ್ಕೆ ಸ್ವಿಟ್ಜರ್ಲೆಂಡ್‌ಲ್ಲಿದ್ದಾರೆ. ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ರಿಷಬ್‌ ಶೆಟ್ಟಿ ಕೂಡಾ ಭಾಗವಹಿಸಿದ್ದು, ಪರಿಸರ ಸಂರಕ್ಷಣೆ ಕುರಿತಾಗಿ ಕನ್ನಡದಲ್ಲೇ ಮಾತಾಡಿದ್ದಾರೆ. ಈ 18 ಸೆಕೆಂಡ್‌ಗಳ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಕನ್ನಡಿಗರು ರಿಷಬ್‌ ಶೆಟ್ಟಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ.

'ಕಾಂತಾರ' ಚಿತ್ರದಿಂದ ಮತ್ತೊಂದು ಸಾಹಸ; ವಿದೇಶದ ಈ ಎರಡು ಭಾಷೆಗಳಿಗೂ ಡಬ್‌.. ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ರಿಲೀಸ್

ಕಳೆದ ವರ್ಷ ಸೆಪ್ಟೆಂಬರ್‌ 30 ರಂದು 'ಕಾಂತಾರ' ಕನ್ನಡ ಭಾಷೆಯಲ್ಲಿ ಮಾತ್ರ ತೆರೆ ಕಂಡಿತ್ತು. ಈ ಸಿನಿಮಾ ತೆರೆ ಕಾಣುವ ಮುನ್ನ ಅದೊಂದು ಪ್ಯಾನ್‌ ಇಂಡಿಯಾ ಸಿನಿಮಾವಾಗಬಹುದು ಎಂದು ಸ್ವತ: ಚಿತ್ರತಂಡ ಕೂಡಾ ಊಹಿಸಿರಲಿಲ್ಲ. ನಂತರ ಆ ಚಿತ್ರಕ್ಕೆ ದೊರೆತ ಉತ್ತಮ ಪ್ರತಿಕ್ರಿಯೆ ನಂತರ ತೆಲುಗು, ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ ಡಬ್‌ ಆಗಿ ಬಿಡುಗಡೆ ಆಯ್ತು. ಇಂಗ್ಲಿಷ್‌ಗೂ ಡಬ್‌ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಿತ್ತು. ಇದೀಗ ಮತ್ತಷ್ಟು ವಿದೇಶಿ ಭಾಷೆಗಳಿಗೆ ಡಬ್‌ ಆಗುತ್ತಿದೆ ಈ ಸಿನಿಮಾ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ