ಆರು ತಿಂಗಳ ನಂತರ ಒಟಿಟಿಗೆ ಬರಲಿದೆ ‘ಮನಮೆ’ ಸಿನಿಮಾ; ವೀಕ್ಷಣೆ ಎಲ್ಲಿ ಮತ್ತು ಯಾವಾಗ ಎಂಬ ಪ್ರಶ್ನೆಗೆ ಇಲ್ಲೇ ಇದೆ ಉತ್ತರ
Nov 19, 2024 01:27 PM IST
ಒಟಿಟಿಗೆ ಬರಲಿದೆ ಮನವೆ ಸಿನಿಮಾ
Manamey OTT: ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಐದು ತಿಂಗಳ ನಂತರ ಮನಮೆ ಚಿತ್ರ ಒಟಿಟಿಗೆ ಬರಲಿದೆ. ಈ ಚಿತ್ರವು ಡಿಸೆಂಬರ್‌ನಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಕೃತಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಶ್ರೀರಾಮ್ ಆದಿತ್ಯ ನಿರ್ದೇಶಿಸಿದ್ದಾರೆ.
Manamey OTT: ಶ್ರೀರಾಮ್ ಆದಿತ್ಯ ನಿರ್ದೇಶನದ ಮನಮೆ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಮನಮೆ' ಜೂನ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅದಾದ ಬಳಿಕ ಈಗ ಒಟಿಟಿಗೆ ಈ ಸಿನಿಮಾ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಈ ರೀತಿ ಸಿನಿಮಾಗಳನ್ನು ನೋಡಲು ಪ್ರೇಕ್ಷಕರು ಕಾದು ಕುಳಿತಿರುತ್ತಾರೆ. ಅದರಲ್ಲೂ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಎಂದರೆ ವೀಕೆಂಡ್‌ಗೆ ಹೇಳಿ ಮಾಡಿಸಿದ ಸಿನಿಮಾ, ಮನೆಯಲ್ಲೇ ಕುಳಿತು ನೋಡಬಹುದು ಎಂದು ಹಲವರು ಒಟಿಟಿ ಬಿಡುಗಡೆ ದಿನಾಂಕ ಸರ್ಚ್ ಮಾಡುತ್ತಿದ್ದಾರೆ.
ಮನಮೆ ಆಗಸ್ಟ್‌ನಲ್ಲಿ ಒಟಿಟಿ ತೆರೆಗೆ ಬರಬೇಕಿತ್ತು, ಆದರೆ ಚಿತ್ರಮಂದಿರೇತರ ಹಕ್ಕುಗಳ ವಿವಾದದಿಂದಾಗಿ ಒಟಿಟಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ನಿರ್ಮಾಪಕ ಟಿ.ಜಿ.ವಿಶ್ವ ಪ್ರಸಾದ್ ಈ ಹಿಂದೆ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿ ವಿಷಯ ಹಂಚಿಕೊಂಡಿದ್ದರು. ಚಿತ್ರದ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದವರು ತಮಗೆ ಹಣವನ್ನು ಪಾವತಿಸಿಲ್ಲ ಎಂದು ಹೇಳಿದ್ದರು. ಈ ಕಾರಣದಿಂದಲೇ ಚಿತ್ರ ಬಿಡುಗಡೆಯಾಗಿ ಐದು ತಿಂಗಳುಗಳಾದರೂ ಇನ್ನೂ ಒಟಿಟಿಯಲ್ಲಿ ಮನಮೆ ಚಿತ್ರ ರಿಲೀಸ್ ಆಗಿರಲಿಲ್ಲ.
ಸೋನಿಲೈವ್‌ನಲ್ಲಿ ವೀಕ್ಷಿಸಬಹುದು
ಈಗ ಒಟಿಟಿ ವಿವಾದ ಕೊನೆಗೊಂಡಿದೆ ಎಂದು ವರದಿಯಾಗಿದೆ. ನಮ್ಮ ಚಿತ್ರ ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡ ತಿಳಿಸಿದೆ. ಸೋನಿಲೈವ್ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೆಡೆ ಇದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ ಎಂದು ಸಹ ವರದಿಯಾಗಿದೆ. ಒಟಿಟಿ ಬಿಡುಗಡೆಯ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.
ಏನಿದೆ ಕಥೆ?
ವಿಕ್ರಮ್ ಈ ಸಿನಿಮಾದಲ್ಲಿ ನಾಯಕ (ಶರ್ವಾನಂದ್) ಆತ ಪ್ರೀತಿ ಮತ್ತು ಮದುವೆಯಂತಹ ಸಂಬಂಧಗಳಲ್ಲಿ ಹೆಚ್ಚು ನಂಬಿಕೆ ಹೊಂದಿರದ ಮನುಷ್ಯ. ಇದೆಲ್ಲದರಿಂದ ದೂರ ಇದ್ದರೆ ಮಾತ್ರ ಬದುಕು ಚೆನ್ನಾಗಿರುತ್ತದೆ ಎಂದು ನಂಬಿದ ವ್ಯಕ್ತಿ. ಆತ ವಿದೇಶದಲ್ಲಿ ನೆಲೆಸಿರುತ್ತಾನೆ. ಆದರೆ ಅಪಘಾತ ಒಂದರಲ್ಲಿ ಸಾವನ್ನಪ್ಪಿದ ತನ್ನ ಸ್ನೇಹಿತನ ಮಗನನ್ನು ಸಾಕುವ ಜವಾಬ್ಧಾರಿ ಅವನ ಮೇಲೆ ಬೀಳುತ್ತದೆ. ಮದುವೆ ಆಗದೆ ಇದ್ದರೂ ಕುಟುಂಬ ಅವನದಾಗುತ್ತದೆ. ಈ ರೀತಿಯಾದ ಕಥೆ ಈ ಸಿನಿಮಾದಲ್ಲಿದೆ.
ಪಾತ್ರವರ್ಗ
ಮನಾಮೆ ಚಿತ್ರದಲ್ಲಿ ರಾಹುಲ್ ರವೀಂದ್ರನ್, ಸೀರತ್ ಕಪೂರ್, ಶಿವ ಕಂದುಕುರಿ ಮತ್ತು ಆಯೇಷಾ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಹೆಶಾಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರವು ಸುಮಾರು 10 ಹಾಡುಗಳೊಂದಿಗೆ ಬಿಡುಗಡೆಯಾಯಿತು. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ.ವಿಶ್ವ ಪ್ರಸಾದ್ ಮನಮೆ ನಿರ್ಮಿಸುತ್ತಿದ್ದಾರೆ.
ಶರ್ವಾನಂದ್ ಪ್ರಸ್ತುತ ತೆಲುಗಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅಭಿಲಾಷ್ ರೆಡ್ಡಿ ಅವರ ಚಿತ್ರದ ಚಿತ್ರೀಕರಣ ಅಂತಿಮ ಹಂತದಲ್ಲಿದೆ ಎಂದು ವರದಿಯಾಗಿದೆ. ಶರ್ವಾನಂದ್ ಬೈಕ್ ರೈಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ನಾಯಕನಾಗಿ ಶರ್ವಾನಂದ್ ಅವರ 36ನೇ ಚಿತ್ರವಾಗಿದೆ.