logo
ಕನ್ನಡ ಸುದ್ದಿ  /  ಮನರಂಜನೆ  /  Sai Pallavi Cine Journey: ಚಿತ್ರರಂಗಕ್ಕೆ ವಿದಾಯ ಹೇಳ್ತಾರಾ ಸಾಯಿ ಪಲ್ಲವಿ..ನಿರ್ಮಾಪಕರ ಆ ಮಾತುಗಳೇ ಆಕೆಯ ನಿರ್ಧಾರಕ್ಕೆ ಕಾರಣಾನಾ.?

Sai Pallavi Cine Journey: ಚಿತ್ರರಂಗಕ್ಕೆ ವಿದಾಯ ಹೇಳ್ತಾರಾ ಸಾಯಿ ಪಲ್ಲವಿ..ನಿರ್ಮಾಪಕರ ಆ ಮಾತುಗಳೇ ಆಕೆಯ ನಿರ್ಧಾರಕ್ಕೆ ಕಾರಣಾನಾ.?

HT Kannada Desk HT Kannada

Nov 26, 2022 09:57 AM IST

google News

ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ

    • ಇತ್ತೀಚೆಗೆ ತೆರೆ ಕಂಡ ಗಾರ್ಗಿ, ವಿರಾಟಪರ್ವಂ ಚಿತ್ರಗಳಲ್ಲಿ ಸಾಯಿ ಪಲ್ಲವಿ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೂ ನಿರ್ಮಾಪಕರು ಮಾತ್ರ ತಾವು ಜೇಬು ತುಂಬಾ ಹಣ ಇಳಿಸಿಕೊಳ್ಳಲಿಲ್ಲ ಎಂಬ ನಿರಾಶೆ ಅನುಭವಿಸಿದ್ದರು.
ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ
ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ (PC: Sai Pallavi Fans page)

ಸಾಯಿ ಪಲ್ಲವಿ, ಆ ಹೆಸರೇ ಚೆಂದ, ಈ ಚೆಲುವೆಯ ನಗು, ಮಾತು, ಆಕ್ಟಿಂಗ್‌, ಡ್ಯಾನ್ಸ್‌ ಇನ್ನೂ ಚೆಂದ. ಚಿತ್ರರಂಗಕ್ಕೆ ಬಂದಾಗಿನಿಂದ ಇಲ್ಲಿವರೆಗೂ ಯಾವ ಸಿನಿಮಾದಲ್ಲೂ ಎಕ್ಸ್‌ಪೋಸ್‌ ಮಾಡದೆ, ಓವರ್‌ ಆಕ್ಟಿಂಗ್‌ ಮಾಡದೆ, ವೃತ್ತಿ ಜೀವನದಲ್ಲಿ ಯಾವುದೇ ಗಾಸಿಪ್‌ ಇಲ್ಲದೆ ಇಲ್ಲಿವರೆಗೂ ಬಂದಿರುವ ಈ ಬ್ಯೂಟಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.

2005 ರಲ್ಲಿ 'ಕಸ್ತೂರಿ ಮಾನ್‌' ಎಂಬ ತಮಿಳು ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದ ಸಾಯಿ ಪಲ್ಲವಿ, 2015 ರಲ್ಲಿ ತೆರೆ ಕಂಡ ಮಲಯಾಳಂನ 'ಪ್ರೇಮಂ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾದರು. ಆಗಲೀ ಸಾಯಿ ಪಲ್ಲವಿ ಎಂಬ ಸುಂದರಿ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಾಗಿದ್ದು. ನಟಿಸಿರುವುದು ಕೆಲವೇ ಸಿನಿಮಾಗಳಾದರೂ ಸಾಯಿ ಪಲ್ಲವಿ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಆದರೆ ಇತ್ತೀಚೆಗೆ ತೆರೆ ಕಂಡ 'ವಿರಾಟಪರ್ವಂ' ಹಾಗೂ 'ಗಾರ್ಗಿ' ಸಿನಿಮಾಗಳು ಹೇಳಿಕೊಳ್ಳುವಂತ ಹೆಸರು ಮಾಡಲಿಲ್ಲ. 'ವಿರಾಟಪರ್ವಂ' ಜೂನ್‌ 17 ಹಾಗೂ 'ಗಾರ್ಗಿ' ಜುಲೈ 15 ರಂದು ತೆರೆ ಕಂಡಿತ್ತು. ಈ ಸಿನಿಮಾಗಳ ನಂತರ ಇದುವರೆಗೂ ಆಕೆ ಹೊಸ ಚಿತ್ರಗಳನ್ನು ಅನೌನ್ಸ್‌ ಮಾಡಿಲ್ಲ. ಇದನ್ನು ನೋಡಿದ್ರೆ ಸಾಯಿ ಪಲ್ಲವಿ ಚಿತ್ರರಂಗದಿಂದ ದೂರಾಗಿ ಡಾಕ್ಟರ್‌ ವೃತ್ತಿ ಕಡೆ ಗಮನ ನೀಡಲು ಶುರು ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ.

ಒಂದು ವೇಳೆ ಸಾಯಿ ಪಲ್ಲವಿ ಆ ರೀತಿ ನಿರ್ಧಾರ ಮಾಡಿದ್ದರೂ ಅದಕ್ಕೆ ಒಂದು ಪ್ರಮುಖ ಕಾರಣವಿದೆ. ಕೋಟಿ ಕೋಟಿ ಹಣ ಸಂಪಾದನೆ ಮಾಡುವ ಯೋಚನೆ ಮಾಡದೆ ನನಗೆ ತೃಪ್ತಿ ನೀಡುವ ಪಾತ್ರಗಳನ್ನೇ ಮಾಡುತ್ತೇನೆ ಎಂದು ಸಾಯಿ ಪಲ್ಲವಿ ಅನೇಕ ಸಂದರ್ಶನಗಳಲ್ಲಿ ಹೇಳಿದ್ದರು. ಸಿನಿಮಾ ನಟಿಯರು ಎಂದರೆ ಜಾಹೀರಾತುಗಳಲ್ಲಿ ನಟಿಸುವುದು ಸಾಮಾನ್ಯ. ಆದರೆ ಸಾಯಿ ಪಲ್ಲವಿ ಮಾತ್ರ ಹಣದ ಆಸೆಗಾಗಿ ತಮಗೆ ಒಲಿದುಬಂದ ಬಹಳಷ್ಟು ಜಾಹೀರಾತು ಆಫರ್‌ಗಳನ್ನು ನಿರಾಕರಿಸಿದ್ದರು. ಹಾಗಾಗಿ ಸಾಯಿ ಪಲ್ಲವಿಗೆ ಸಿನಿಪ್ರೇಮಿಗಳು ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. ಆದರೆ ಇತ್ತೀಚಿಗೆ ಈ ನ್ಯಾಚುರಲ್ ಬ್ಯೂಟಿ ನಟಿಸಿರುವ ಎಲ್ಲಾ ಚಿತ್ರಗಳು ಬಾಕ್ಸ್ ಆಫೀಸ್​​​​​​ನಲ್ಲಿ ಸೋಲು ಕಾಣುತ್ತಿವೆ.

ಗಾರ್ಗಿ, ವಿರಾಟಪರ್ವಂ ಚಿತ್ರಗಳಲ್ಲಿ ಸಾಯಿ ಪಲ್ಲವಿ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೂ ನಿರ್ಮಾಪಕರು ಮಾತ್ರ ತಾವು ಜೇಬು ತುಂಬಾ ಹಣ ಇಳಿಸಿಕೊಳ್ಳಲಿಲ್ಲ ಎಂಬ ನಿರಾಶೆ ಅನುಭವಿಸಿದ್ದರು. ಇದರಿಂದ ನಿರ್ಮಾಪಕರು ಸಾಯಿ ಪಲ್ಲವಿಗೆ ತಮ್ಮ ನಿರ್ಧಾರ ಬದಲಿಸುವಂತೆ ಸಲಹೆ ನೀಡಿದ್ದು ಗ್ಲಾಮರ್​​​​​ಗೆ ಆದ್ಯತೆ ನೀಡುವ ಕಮರ್ಷಿಯಲ್ ಚಿತ್ರಗಳ ಕಡೆಗೆ ಹೆಚ್ಚು ಗಮನ ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಈ ಆಫರನ್ನು ಸಾಯಿ ಪಲ್ಲವಿ ತಿರಸ್ಕರಿಸಿದ್ದಾರೆ.

ಸಿನಿಮಾಗಳಲ್ಲಿ ನನಗೆ ಆಫರ್ ಬರದಿದ್ದರೆ ಸ್ವಂತ ಕ್ಲಿನಿಕ್ ತೆರೆಯುತ್ತೇನೆ ಅಥವಾ ಬೇರೆ ಕೆಲಸ ಮಾಡುತ್ತೇನೆ. ಆದರೆ ಸಿನಿಮಾ ಗೆಲ್ಲಬೇಕೆಂಬ ಉದ್ದೇಶದಿಂದ ನನ್ನ ಇಷ್ಟಕ್ಕೆ ವಿರುದ್ಧವಾಗಿ ನಾನು ಗ್ಲಾಮರಸ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಎಂದು ಸಾಯಿ ಪಲ್ಲವಿ ನಿರ್ಮಾಪಕರಿಗೆ ಖಡಕ್ ಉತ್ತರ ನೀಡಿದ್ದಾರೆ ಎಂಬ ಮಾತು ಸಿನಿಮಾ ಅಂಗಳದಲ್ಲಿ ಕೇಳಿಬಂದಿತ್ತು. ಸಾಯಿ ಪಲ್ಲವಿ ಇದುವರೆಗೂ ಯಾವುದೇ ಸಿನಿಮಾವನ್ನು ಅನೌನ್ಸ್‌ ಮಾಡದಿರುವುದು ನೋಡಿದರೆ, ಆಕೆ ಹೇಳಿದಂತೆ ವೈದ್ಯವೃತ್ತಿ ಕಡೆಗೆ ಗಮನ ನೀಡುತ್ತಿರಬಹುದು ಎಂಬ ಚರ್ಚೆ ಆರಂಭವಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಆಕೆ ಹೆಚ್ಚು ಆಕ್ಟಿವ್‌ ಇಲ್ಲ. ಒಂದು ವೇಳೆ ಸಾಯಿ ಪಲ್ಲವಿ ಹೇಳಿದಂತೆ ನಡೆದುಕೊಂಡಲ್ಲಿ, ಅಭಿಮಾನಿಗಳಿಗೆ ಹಾರ್ಟ್‌ ಬ್ರೇಕ್‌ ಆಗುವುದು ಖಂಡಿತ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ