ಬಿಗ್ ಬಾಸ್ 18ರ ಶೂಟಿಂಗ್ ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ ಸಲ್ಮಾನ್ ಖಾನ್; ಬಾಬಾ ಸಿದ್ದಿಕ್ ಸಾವಿನಿಂದ ನೊಂದ ನಟ
Oct 13, 2024 01:28 PM IST
ಮುಂಬೈನಲ್ಲಿ ನಡೆದ ಇಫ್ತಾರ್ ಪಾರ್ಟಿಯಲ್ಲಿ ನಟರಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರೊಂದಿಗೆ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್
- ನಟ ಸಲ್ಮಾನ್ ಖಾನ್ ಅವರು ಬಾಬಾ ಸಿದ್ದಿಕ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಬಾಬಾ ಸಿದ್ದಿಕ್ ಸಾವಿನ ಸುದ್ದಿ ಕೇಳಿದ ನಂತರ ಸಲ್ಮಾನ್ ಖಾನ್ ಬಿಗ್ ಬಾಸ್ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದಾರೆ. ಸಿದ್ದಿಕ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.
ಭಾರತೀಯ ರಾಜಕಾರಣಿ ಮತ್ತು ವಿಧಾನಸಭೆಯ ಸದಸ್ಯರಾಗಿದ್ದ ಬಾಬಾ ಜಿಯಾವುದ್ದೀನ್ ಸಿದ್ದಿಕ್ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ. ವರದಿಯ ಪ್ರಕಾರ, ಶನಿವಾರ ರಾತ್ರಿ 9.30 ರ ಸುಮಾರಿಗೆ ಮುಂಬೈನ ಖೇರ್ ನಗರದಲ್ಲಿ ಮೂವರು ವ್ಯಕ್ತಿಗಳು ಬಾಬಾ ಸಿದ್ದಿಕ್ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಬಾಬಾ ಸಿದ್ದಿಕ್ ಅವರಿಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದಾರೆ. ಬಾಬಾ ಸಿದ್ದಿಕ್ ಸಾವಿನ ಸುದ್ದಿ ಕೇಳಿದ ನಂತರ ಸಲ್ಮಾನ್ ಖಾನ್ ಬಿಗ್ ಬಾಸ್ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಬಂದಿದ್ಧಾರೆ. ಲ್ಮಾನ್‌ಗಿಂತ ಮೊದಲು, ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಾದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಸಂಜಯ್ ದತ್, ವೀರ್ ಪಹಾರಿಯಾ ಮತ್ತು ಇತರರು ಆಸ್ಪತ್ರೆಯ ಹೊರಗೆ ಕಾಣಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಬಾಬಾ ಸಿದ್ದಿಕ್ ಅವರ ಇಫ್ತಾರ್ ಕೂಟದ ಸದಸ್ಯರಾಗಿದ್ದರು. ದಿವಂಗತ ರಾಜಕಾರಣಿಗೆ ಭಾವನಾತ್ಮಕ ಶ್ರದ್ಧಾಂಜಲಿ ಎಂದು ಟ್ವೀಟ್ ಮಾಡಿದ ರಿತೇಶ್ ದೇಶಮುಖ್ ಸುದ್ದಿ ಕೇಳಿ ಆಘಾತಕ್ಕೊಳಗಾಗಿ ಅವರು ಬಂದಿದ್ದಾರೆ.
ವರದಿಗಳ ಪ್ರಕಾರ, ಇಬ್ಬರು ಶಂಕಿತರು - ಹರಿಯಾಣದ ಗುರ್ಮೈಲ್ ಬಲ್ಜಿತ್ ಸಿಂಗ್, 23, ಮತ್ತು ಉತ್ತರ ಪ್ರದೇಶದ ಧರ್ಮರಾಜ್ ರಾಜೇಶ್ ಕಶ್ಯಪ್, 19, ಶ್ರೀ ಸಿದ್ದಿಕ್ ಹತ್ಯೆಯಲ್ಲಿ ಬಂಧಿಸಲ್ಪಟ್ಟಿದ್ದಾರೆ. ಇಬ್ಬರು ತಾವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿದ್ದಿಕ್ ಮೇಲೆ ಕನಿಷ್ಠ ಆರು ಗುಂಡುಗಳನ್ನು ಹಾರಿಸಲಾಯಿತು, ಅದರಲ್ಲಿ ನಾಲ್ಕು ಅವರ ಎದೆ ಭಾಗಕ್ಕೆ ತಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೆಯವರು ಪರಾರಿಯಾಗಿದ್ದಾರೆ. ಈ ರೀತಿ ಗುಂಡಿನ ದಾಳಿ ಆದ ನಂತರವೂ ಅವರನ್ನು ಬದುಕಿಸುವ ಪ್ರಯತ್ನವನ್ನು ಮಾಡಲಾಯಿತು. ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಬಾಬಾ ಸಿದ್ದಿಕ್ ಸಾಹೇಬ್ ಅವರನ್ನು ರಾತ್ರಿ 9:30 ಕ್ಕೆ ಲೀಲಾವತಿ ಆಸ್ಪತ್ರೆಗೆ ಕರೆತರಲಾಗಿತ್ತು. ಲೀಲಾವತಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ ನಿತಿನ್ ಗೋಖಲೆ ತಮ್ಮ ಕೈಲಾದ ಪ್ರಯತ್ನವನ್ನು ಮಾಡಿದ್ದಾರೆ. ಅವರನ್ನು ಐಸಿಯುಗೆ ಸ್ಥಳಾಂತರಿಸಿ ಅಲ್ಲಿಯೂ ಚಿಕಿತ್ಸೆ ನೀಡಲಾಯಿತು. ರಾತ್ರಿ 11:27ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂತು.
ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ಜೊತೆಗಿನ ನಾಲ್ಕು ದಶಕಗಳ ಬಾಂಧವ್ಯವನ್ನು ಕೊನೆಗೊಳಿಸಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಸೇರುವ ಮೂಲಕ ಅವರು ತಮ್ಮನ್ನು ಗುರುತಿಸಿಕೊಂಡಿದ್ದರು. 15 ದಿನಗಳ ಹಿಂದೆ ಜೀವ ಬೆದರಿಕೆಯನ್ನು ಹೊಂದಿದ್ದರು. ಅವರ ಪುತ್ರ, ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ನಿನ್ನೆ ಸಂಜೆ ಗುಂಡಿನ ದಾಳಿ ನಡೆದಿದೆ. ಗುಂಡಿನ ದಾಳಿಯ ನಂತರ, ದಸರಾ ಆಚರಣೆಗಾಗಿ ಪೊಲೀಸರು ಆ ಸ್ಥಳದಲ್ಲಿ ನಿಯೋಜನೆಗೊಂಡಿದ್ದರು. ಆ ಕಾರಣದಿಂದಾಗಿ ಕೆಲವರನ್ನು ಬಂಧಿಸಲು ಸಾಧ್ಯವಾಗಿದೆ.