Adipurush: ಅರೆ ರಶ್ಮಿಕಾ ಅನುಷ್ಕಾ ಸಮಂತಾ ಯಾವಾಗ ಸೀತೆ ಆದ್ರು; ಇದು ಅಭಿಮಾನಿಯ ಕಲ್ಪನೆ ಅಷ್ಟೇ, ಯಾರಿಗೆ ಚೆನ್ನಾಗಿ ಹೊಂದುತ್ತೆ ನೀವೇ ಹೇಳಿ
Jun 21, 2023 12:50 PM IST
ಅನುಷ್ಕಾ ಶೆಟ್ಟಿ, ಕೃತಿ ಸನೊನ್, ರಶ್ಮಿಕಾ ಮಂದಣ್ಣ
ಈ ಮೂವರಿಗಿಂತ ಸಾಯಿ ಪಲ್ಲವಿಗೆ ಜಾನಕಿಯ ಪಾತ್ರ ಚೆನ್ನಾಗಿ ಹೊಂದುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು ನಿತ್ಯಾ ಮೆನನ್ ಹೆಸರು ಹೇಳಿದ್ದಾರೆ. ಕೆಲವರು ಕೃತಿ ಸನೊನ್ ಮಾತ್ರ ಆ ಪಾತ್ರಕ್ಕೆ ಒಪ್ಪುತ್ತಾರೆ ಎಂದಿದ್ದಾರೆ.
'ಆದಿಪುರುಷ್' ಸಿನಿಮಾ ದೇಶಾದ್ಯಂತ ಸದ್ದು ಮಾಡುತ್ತಿದೆ. ಸಿನಿಮಾಗೆ ಪಾಸಿಟಿವ್‌ಗಿಂತ ನೆಗೆಟಿವ್ ಪ್ರತಿಕ್ರಿಯೆಗಳು ಹೆಚ್ಚಾಗಿ ಕೇಳಿಬರುತ್ತಿದೆ. ಚಿತ್ರದಲ್ಲಿ ಎಲ್ಲಾ ಪಾತ್ರಗಳನ್ನು ರಾಮಾಯಣದ ಪಾತ್ರಗಳಿಗಿಂತ ವಿಭಿನ್ನವಾಗಿ ತೋರಿಸಲಾಗಿದೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.
'ಆದಿಪುರುಷ್' ಚಿತ್ರದಲ್ಲಿ ಬಾಲಿವುಡ್ ನಟಿ ಕೃತಿ ಸನೊನ್ ಸೀತಾಮಾತೆ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿ ನಟನೆ ಚೆನ್ನಾಗಿದ್ದರೂ ಆಕೆಯನ್ನು ಚಿತ್ರದಲ್ಲಿ ತೋರಿಸಿರುವ ರೀತಿಗೆ ವಿರೋಧ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರದ ಕೆಲವೊಂದು ಫೋಟೋ, ವಿಡಿಯೋಗಳಲ್ಲಿ ಕೃತಿ ಸನೊನ್ ಆಫ್ ಬ್ಲೌಸ್ ಧರಿಸಿದ್ದು, ರಾಮಾಯಣದ ಸೀತೆ ಪಾತ್ರಕ್ಕೆ ಹಾಟ್‌ನೆಟ್ ಅವಶ್ಯಕತೆ ಏನಿತ್ತು. ಸೀತೆಯನ್ನು ಸೀತೆಯನ್ನಾಗಿ ತೋರಿಸದೆ ಅಲ್ಲೂ ಕಮರ್ಷಿಯಲ್ ದೃಷ್ಟಿಯಿಂದ ಹಾಟ್ ಆಗಿ ತೋರಿಸಲಾಗಿದೆ ಎಂದು ಸಿನಿ ಪ್ರಿಯರು ಬೇಸರ ವ್ಯಕ್ತಪಡಿಸಿದ್ದರು. ಈ ನಡುವೆ ಸಮಂತಾ, ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ ಸೀತೆಯ ವೇಷದಲ್ಲಿ ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅರೆ? ಸಮಂತಾ, ಅನುಷ್ಕಾ ಶೆಟ್ಟಿ, ರಶ್ಮಿಕಾ ಮಂದಣ್ಣ ಕೂಡಾ ಆದಿಪುರುಷ್ ಸಿನಿಮಾದಲ್ಲಿದ್ದಾರಾ? ಅವರೆಲ್ಲಾ ಸೀತೆಯ ಕಾಸ್ಟ್ಯೂಮ್ ಧರಿಸಿದ್ದು ಏಕೆ ಅಂತ ಕನ್ಫ್ಯೂಸ್ ಆಗಬೇಡಿ. ಇದೆಲ್ಲಾ ಅಭಿಮಾನಿಯೊಬ್ಬರ ಕಲ್ಪನೆ. ತರುಣ್ ಪ್ರಭಾಸ್ ಹೆಸರಿನ ಯೂಸರ್ ಒಬ್ಬರು ಈ ಫೋಟೋಗಳನ್ನು ಮಾರ್ಪಿಂಗ್ ಮಾಡಿ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂವರಲ್ಲಿ ಸೀತೆಯ ಪಾತ್ರದಲ್ಲಿ ಯಾರು ನಟಿಸಿದರೆ ಚೆಂದ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ಗೆ ನೆಟಿಜನ್ಸ್ ತಮ್ಮ ಮೆಚ್ಚಿನ ನಟಿಯರ ಹೆಸರನ್ನು ಕಾಮೆಂಟ್ ಮಾಡುತ್ತಿದ್ದಾರೆ. ಈ ಮೂವರಿಗಿಂತ ಸಾಯಿ ಪಲ್ಲವಿಗೆ ಜಾನಕಿಯ ಪಾತ್ರ ಚೆನ್ನಾಗಿ ಹೊಂದುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಇನ್ನೊಬ್ಬರು ನಿತ್ಯಾ ಮೆನನ್ ಹೆಸರು ಹೇಳಿದ್ದಾರೆ. ಕೆಲವರು ಕೃತಿ ಸನೊನ್ ಮಾತ್ರ ಆ ಪಾತ್ರಕ್ಕೆ ಒಪ್ಪುತ್ತಾರೆ ಎಂದಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ಕನ್ನಡದ ಕುರುಕ್ಷೇತ್ರ ಚಿತ್ರವನ್ನು ಬಾಹುಬಲಿಗೆ ಹೋಲಿಸಿದ್ದ ಪ್ರಭಾಸ್ ಅಭಿಮಾನಿಗಳು; ಕರ್ಮ ರಿಟರ್ನ್ಸ್ ಎಂದ ದರ್ಶನ್ ಫ್ಯಾನ್ಸ್
ದರ್ಶನ್ ನಟನೆಯ 'ಕುರುಕ್ಷೇತ್ರ' ಸಿನಿಮಾ 2019ರಲ್ಲಿ ತೆರೆ ಕಂಡಿತ್ತು. ಈ ಚಿತ್ರವನ್ನು ತೆಲುಗು, ಬಾಲಿವುಡ್ ಜನರು ಬಾಹುಬಲಿಗೆ ಹೋಲಿಸಿದ್ದರು. 'ಬಾಹುಬಲಿ' ಚಿತ್ರದ ಮುಂದೆ ಕುರುಕ್ಷೇತ್ರ ಏನೂ ಇಲ್ಲವೆಂಬಂತೆ ಅಣಕಿಸಿದ್ದರು. ಆದರೆ ಈಗ ಅದೇ ತೆಲುಗು ನಟ, ಹಿಂದಿ ನಿರ್ದೇಶಕನ 'ಆದಿಪುರುಷ್' ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿದೆ. ಇದನ್ನೇ ಅಲ್ಲವೇ ಕರ್ಮ ರಿಟರ್ನ್ಸ್ ಅನ್ನೋದು ಎಂದು ದರ್ಶನ್ ಅಭಿಮಾನಿಗಳು ತಕ್ಕ ಉತ್ತರ ಕೊಟ್ಟಿದ್ದಾರೆ. ಆದಿಪುರುಷ್ ಚಿತ್ರಕ್ಕಿಂತ ನಮ್ಮ ಕುರುಕ್ಷೇತ್ರ ಸಿನಿಮಾ ನೂರು ಪಾಲು ಉತ್ತಮವಾಗಿದೆ ಎನ್ನುತ್ತಿದ್ದಾರೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಒತ್ತಿ.
ಪ್ರಭಾಸ್ ಈ ಸಿನಿಮಾದಲ್ಲಿ ನಟಿಸಬಾರದಿತ್ತು; ಆದಿಪುರುಷ್ ಸಿನಿಮಾ ಬ್ಯಾನ್ ಮಾಡುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದ AICWA
ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾದ ಪಾತ್ರಗಳು, ಡೈಲಾಗ್‌ಗಳು ಶ್ರೀರಾಮ, ಹನುಮಂತ, ಸೀತಾಮಾತೆ ಸೇರಿದಂತೆ ರಾಮಯಣದ ಪಾತ್ರಧಾರಿಗಳ ಇಮೇಜ್ ಹಾಳು ಮಾಡುತ್ತಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬಂದಿದೆ. ಈ ಸಿನಿಮಾ ನೋಡಿದರೆ ಯಾವುದೋ ವಿಡಿಯೋ ಗೇಮ್ ನೋಡಿದಂತೆ ಆಗುತ್ತಿದೆ. ಪ್ರಭಾಸ್‌ನಂತಹ ಜವಾಬ್ದಾರಿಯುತ ಸ್ಟಾರ್ ನಟ ಈ ಸಿನಿಮಾದ ಭಾಗವಾಗಿರುವುದಕ್ಕೆ ನಮಗೆ ಬೇಸರವಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.