logo
ಕನ್ನಡ ಸುದ್ದಿ  /  ಮನರಂಜನೆ  /  4ನೇ ದಿನ ಇಳಿಕೆ ಆಯ್ತು ಮಾರ್ಟಿನ್‌ ಕಲೆಕ್ಷನ್‌; ಬಿಡುಗಡೆ ಆದಾಗಿನಿಂದ ಧ್ರುವ ಸರ್ಜಾ ಸಿನಿಮಾ ಒಟ್ಟು ಗಳಿಸಿದ್ದು ಎಷ್ಟು?

4ನೇ ದಿನ ಇಳಿಕೆ ಆಯ್ತು ಮಾರ್ಟಿನ್‌ ಕಲೆಕ್ಷನ್‌; ಬಿಡುಗಡೆ ಆದಾಗಿನಿಂದ ಧ್ರುವ ಸರ್ಜಾ ಸಿನಿಮಾ ಒಟ್ಟು ಗಳಿಸಿದ್ದು ಎಷ್ಟು?

Rakshitha Sowmya HT Kannada

Oct 15, 2024 01:33 PM IST

google News

ಅಕ್ಟೋಬರ್‌ 11 ರಂದು ತೆರೆ ಕಂಡ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ನಾಲ್ಕು ದಿನಗಳಲ್ಲಿ ಒಟ್ಟು 16.90 ರೂ. ಕಲೆಕ್ಷನ್‌ ಮಾಡಿದೆ

  • ಕಳೆದ ಶುಕ್ರವಾರ ತೆರೆ ಕಂಡ ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ  ನಾಲ್ಕು ದಿನಗಳಲ್ಲಿ ಒಟ್ಟು 16.90 ರೂ. ಕಲೆಕ್ಷನ್‌ ಮಾಡಿದೆ. ಮೊದಲ ಮೂರು ದಿನ ಸಿನಿಮಾ ತಕ್ಕ ಮಟ್ಟಿಗೆ ಕಲೆಕ್ಷನ್‌ ಮಾಡಿದರೂ 4ನೇ ದಿನ ಗಳಿಕೆಯಲ್ಲಿ ಇಳಿಮುಖ ಕಂಡಿದೆ. 

ಅಕ್ಟೋಬರ್‌ 11 ರಂದು ತೆರೆ ಕಂಡ  ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ  ನಾಲ್ಕು ದಿನಗಳಲ್ಲಿ ಒಟ್ಟು 16.90 ರೂ. ಕಲೆಕ್ಷನ್‌ ಮಾಡಿದೆ
ಅಕ್ಟೋಬರ್‌ 11 ರಂದು ತೆರೆ ಕಂಡ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ನಾಲ್ಕು ದಿನಗಳಲ್ಲಿ ಒಟ್ಟು 16.90 ರೂ. ಕಲೆಕ್ಷನ್‌ ಮಾಡಿದೆ

ಅಕ್ಟೋಬರ್‌ 11 ರಂದು ತೆರೆ ಕಂಡ ಮಾರ್ಟಿನ್‌ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾವನ್ನು ಕಳೆದ ಶುಕ್ರವಾರ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದರು. ಆಂಧ್ರ ಹಾಗೂ ತೆಲಂಗಾಣದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸಿನಿಮಾ ರಿಲೀಸ್‌ ಆಗಿ 4 ದಿನಗಳು ಕಳೆದದ್ದು ಈ ನಾಲ್ಕು ದಿನಗಳಲ್ಲಿ ಚಿತ್ರ ಎಷ್ಟು ಕಲೆಕ್ಷನ್‌ ಮಾಡಿದೆ ಎಂಬ ಲೆಕ್ಕಾಚಾರ ಅಭಿಮಾನಿ ವಲಯದಲ್ಲಿ ನಡೆಯುತ್ತಿದೆ.

ಸೋಮವಾರ ಡಲ್‌ ಆಯ್ತು ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಪ್ರಮುಖ ವೆಬ್‌ಸೈಟ್‌ sacnilk ಮೊದಲ ದಿನದಿಂದಲೂ ಮಾರ್ಟಿನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಮೊದಲ ದಿನ 6.2 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಅದರಲ್ಲಿ ಕನ್ನಡ ಭಾಷೆಯಿಂದ 5.5 ಕೋಟಿ ರೂ. ಹಿಂದಿಯಿಂದ 25 ಲಕ್ಷ ರೂ. ತಮಿಳಿನಿಂದ 5 ಲಕ್ಷ ರೂ. ತೆಲುಗು ಭಾಷೆಯಿಂದ 4 ಲಕ್ಷ ರೂ. ಬಂದಿದೆ. ಎರಡನೇ ದಿನ ಒಟ್ಟು 5.5 ಕೋಟಿ ರೂ. ಬಂದಿದೆ. ಅದರಲ್ಲಿ ಕನ್ನಡದಿಂದ 4.72 ಕೋಟಿ ರೂ. ಹಿಂದಿಯಿಂದ 3 ಲಕ್ಷ , ತಮಿಳಿನಿಂದ 5 ಲಕ್ಷ ರೂ, ತೆಲುಗಿನಿಂದ 4 ಲಕ್ಷ ರೂ. ಹಾಗೂ ಮಲಯಾಳಂನಿಂದ 3 ಲಕ್ಷ ರೂ ಬಂದಿದೆ. ಮೂರನೇ ದಿನ ಒಟ್ಟು 3.35 ಕೋಟಿ ರೂ. ಕಲೆಕ್ಷನ್‌ ಆಗಿದೆ. ಕನ್ನಡದಿಂದ 2.68 ಕೋಟಿ ರೂ. ಹಿಂದಿಯಿಂದ 24 ಲಕ್ಷ , ತಮಿಳಿನಿಂದ 4 ಲಕ್ಷ ರೂ, ತೆಲುಗಿನಿಂದ 35 ಲಕ್ಷ ರೂ. ಹಾಗೂ ಮಲಯಾಳಂನಿಂದ 4 ಲಕ್ಷ ರೂ ಕಲೆಕ್ಷನ್‌ ಆಗಿದೆ.

4ನೇ ದಿನದ ಕಲೆಕ್ಷನ್‌ ಎಷ್ಟು?

ಮೊದಲ ಮೂರು ದಿನಗಳು ಸಿನಿಮಾ ತಕ್ಕ ಮಟ್ಟಿಗೆ ಕಲೆಕ್ಷನ್‌ ಮಾಡಿದ್ದರೂ, ನಾಲ್ಕನೇ ದಿನ ಕಲೆಕ್ಷನ್‌ ಬಹಳ ಡಲ್‌ ಆಗಿದೆ. ಆಯಾ ಭಾಷೆಗಳಲ್ಲಿ ಎಷ್ಟು ಲಾಭ ಮಾಡಿದೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ. ಈ ಮೂಲಕ ಸಿನಿಮಾ ಇದುವರೆಗೂ 16.90 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಮಾರ್ಟಿನ್‌ ಸಿನಿಮಾಗೆ ಸೋಮವಾರ ಶೇಕಡಾ 19.96 ಆಕ್ಯುಪೆನ್ಸಿ ಇತ್ತು. ಅದರಲ್ಲಿ ಹೆಚ್ಚಿನ ಜನರು ಮಧ್ಯಾಹ್ನದ ಶೋ ನೋಡಿದ್ದಾರೆ. ಸೋಮವಾರ, ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಕುಂದಾಪುರ, ತುಮಕೂರಿನಲ್ಲಿ ಒಳ್ಳೆ ಪ್ರತಿಕ್ರಿಯೆ ದೊರೆತಿದೆ. ಹಿಂದಿಯಲ್ಲಿ ಶೇಕಡಾ 9.63 , ತೆಲುಗಿನಲ್ಲಿ ಶೇಕಡಾ 13.15 ಆಕ್ಯುಪೆನ್ಸಿ ವರದಿಯಾಗಿದೆ.

ಇತರ ಭಾಷೆಗಳಲ್ಲೂ ರಿಲೀಸ್‌ ಆಗಲು ರೆಡಿಯಾದ ಮಾರ್ಟಿನ್‌

ಶುಕ್ರವಾರ ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್‌ ಆಗಿತ್ತು ಶೀಘ್ರವೇ ಸಿನಿಮಾ ಶೀಘ್ರದಲ್ಲೇ ಬೆಂಗಾಳಿ, ಕೊರಿಯನ್‌ , ಅರೆಬಿಕ್‌, ಚೈನೀಸ್‌, ಸ್ಪಾನಿಷ್‌, ರಷ್ಯನ್‌, ಜಪಾನೀಸ್‌ ಭಾಷೆಗಳಲ್ಲಿ ತೆರೆ ಕಾಣಲಿದೆ. ಮಾರ್ಟಿನ್‌ ಚಿತ್ರವನ್ನು ವಾಸವಿ ಎಂಟರ್‌ಪ್ರೈಸಸ್‌, ಉದಯ್‌ ಕೆ ಮೆಹ್ತಾ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಉದಯ್‌ ಕೆ ಮೆಹ್ತಾ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದ್ದು, ರವಿ ಬಸ್ರೂರ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಧ್ರುವ ಸರ್ಜಾಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಅನ್ಷೇಷಿ ಜೈನ್‌ ಹಾಡೊಂದರಲ್ಲಿ ಕುಣಿದಿದ್ದಾರೆ. ಸುಕ್ರುತಾ ವಾಘ್ಲೆ , ಚಿಕ್ಕಣ್ಣ, ಸಾಧು ಕೋಕಿಲ , ಮಾಳವಿಕಾ ಅವಿನಾಶ್‌, ಅಚ್ಯುತ್‌ ಕುಮಾರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. 150 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ