logo
ಕನ್ನಡ ಸುದ್ದಿ  /  ಮನರಂಜನೆ  /  ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್-‌ ಧನ್ಯತಾ ಮದುವೆ ಆಮಂತ್ರಣ; ಮೈಸೂರಿನಲ್ಲಿ ಈ ದಿನದಂದು ಅದ್ಧೂರಿ ಮದುವೆ

ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್-‌ ಧನ್ಯತಾ ಮದುವೆ ಆಮಂತ್ರಣ; ಮೈಸೂರಿನಲ್ಲಿ ಈ ದಿನದಂದು ಅದ್ಧೂರಿ ಮದುವೆ

Dec 15, 2024 09:26 AM IST

google News

ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್-‌ ಧನ್ಯತಾ ಮದುವೆ ಆಮಂತ್ರಣ

    • Daali Dhananjaya Wedding Invitation: ಫೋನ್‌ ಬಳಕೆ ಕಡಿಮೆ ಇದ್ದ ಹಿಂದಿನ ಕಾಲಘಟ್ಟದಲ್ಲಿ ಪತ್ರಗಳೇ ಸಂವಹನದ ಕೇಂದ್ರಬಿಂದುವಾಗಿದ್ದವು. ಈಗ ಅದೇ ಪರಿಕಲ್ಪನೆಯಲ್ಲಿ ಮದುವೆ ಆಮಂತ್ರಣವನ್ನು ರೆಡಿ ಮಾಡಿದೆ ಧನಂಜಯ್ ಧನ್ಯತಾ ಜೋಡಿ.‌ ಆ ಪತ್ರದ ಜತೆಗೆ ಮದುವೆಯ ಸ್ಥಳ ಮತ್ತು ದಿನಾಂಕವನ್ನೂ ಪ್ರಕಟಿಸಿದ್ದಾರೆ. 
ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್-‌ ಧನ್ಯತಾ ಮದುವೆ ಆಮಂತ್ರಣ
ಕೈ ಬರಹದಲ್ಲಿಯೇ ಅಚ್ಚಾಯ್ತು ಧನಂಜಯ್-‌ ಧನ್ಯತಾ ಮದುವೆ ಆಮಂತ್ರಣ (Instagram\ Dhananjaya ka)

Daali Dhananjaya Wedding Invitation: ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಕಳೆದ ತಿಂಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾವು ಮದುವೆ ಆಗಲಿರುವ ಹುಡುಗಿಯನ್ನು ಪರಿಚಯಿಸಿದ್ದರು. ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಯಾವಾಗ ಎಂದು ಕೇಳುತ್ತಿದ್ರಲ್ಲ, ಇವಳೇನ್ನೇ ನಾನು ಮದುವೆ ಆಗೋದು ಎಂದು ಹೇಳಿಕೊಂಡಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿರುವ ಧನ್ಯತಾ ಅವರನ್ನು ಧನಂಜಯ್‌ ವರಿಸುತ್ತಿದ್ದಾರೆ. ಇವರು ಮೂಲತಃ ಚಿತ್ರದುರ್ಗದವರು. ಈಗ ಇದೇ ಜೋಡಿ ಮದುವೆ ಆಮಂತ್ರಣ ರೆಡಿಯಾಗಿದೆ ಎನ್ನುವ ಮೂಲಕ, ಶೀಘ್ರದಲ್ಲಿ ಬಾಳ ಬಂಧನಕ್ಕೆ ಕಾಲಿಡಲಿದೆ.

ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ಎಲ್ಲವೂ ಅದ್ಧೂರಿತನದಿಂದ ಕೂಡಿರುತ್ತದೆ. ಸಾವಿರಾರು ರೂಪಾಯಿ ಬೆಲೆಬಾಳುವ ಲಗ್ನಪತ್ರಿಕೆಯಿಂದ ಹಿಡಿದು, ಎಲ್ಲವೂ ಗ್ರ್ಯಾಂಡ್‌ ಗ್ರ್ಯಾಂಡ್.‌ ಆದರೆ, ನಟ ಧನಂಜಯ್‌ ಈ ಅದ್ಧೂರಿತನದಿಂದ ಕೊಂಚ ದೂರ. ಈ ಹಿಂದೆ ಮನೆಯಲ್ಲಿಯೇ ಉಂಗುರ ಬದಲಿಸಿಕೊಂಡು, ಧನ್ಯತಾ ಅವರ ಜತೆ ಸರಳ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಇದೀಗ ಮದುವೆಯೂ ಹಾಗೇ ನಡೆಯಬಹುದೇ ಎಂಬ ಕುತೂಹಲ. ಅದಕ್ಕೆ ಇದೀಗ ಸಾಕ್ಷಿ ಎಂಬಂತೆ, ಮದುವೆ ಆಮಂತ್ರಣ ಪತ್ರಿಕೆಯನ್ನು ಶೇರ್‌ ಮಾಡಿಕೊಂಡಿದ್ದಾರೆ ಧನಂಜಯ್.‌

ಕೈ ಬರಹದಲ್ಲಿದೆ ಮದುವೆ ಆಮಂತ್ರಣ

ಫೋನ್‌ ಬಳಕೆ ಕಡಿಮೆ ಇದ್ದ ಹಿಂದಿನ ಕಾಲಘಟ್ಟದಲ್ಲಿ ಪತ್ರಗಳೇ ಸಂವಹನದ ಕೇಂದ್ರಬಿಂದುವಾಗಿದ್ದವು. ಈಗ ಅದೇ ಪರಿಕಲ್ಪನೆಯಲ್ಲಿ ಮದುವೆ ಆಮಂತ್ರಣವನ್ನು ರೆಡಿ ಮಾಡಿದ್ದಾರೆ ಧನಂಜಯ್.‌ ಆ ಪತ್ರದಲ್ಲಿ ಹೀಗೆ ಬರೆಯಲಾಗಿದೆ. "ಪ್ರಿಯ ಬಂಧು ಮಿತ್ರರೇ.. ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವುಸಂಭ್ರಮಿಸಿದ್ದು ನಮ್ಮ ಖುಷಿಯನ್ನ ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ, ಆಚರಿಸಬೇಕು ಎಂಬ ಮಹಾದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ" ಎಂದಿದ್ದಾರೆ.

ಮುಂದುವರಿದು, "ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸುಖಾಗಮನಕ್ಕೆ ನೀವು ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ. ಮಿಕ್ಕಂತೆ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ, ಧನಂಜಯ- ಧನ್ಯತ" ಎಂದು ಬರೆದಿದ್ದಾರೆ.

ಮದುವೆ ಯಾವಾಗ?

ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿ. ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳ ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ. ಮೈಸೂರಿನ ವಸ್ತುಪ್ರದರ್ಶನ ಮೈದಾನ, ಅಂಬಾ ವಿಲಾಸ ಅರಮನೆ ಮುಂಭಾಗದಲ್ಲಿ ಫೆಬ್ರವರಿ 15ರಂದು ಆರತಕ್ಷತೆ ನಡೆದರೆ, ಫೆ. 16ರ ಭಾನುವಾರ ಧನಂಜಯ- ಧನ್ಯತಾ ಮದುವೆ ನಡೆಯಲಿದೆ.

ತನ್ನವಳನ್ನು ಅಂದು ಹೀಗೆ ಪರಿಚಯಿಸಿದ್ದರು ಧನಂಜಯ.. 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಆಗುವ ಹುಡುಗಿಯನ್ನು ಪರಿಚಯಿಸಿದ್ದ ಧನಂಜಯ್‌, ಹೀಗೆ ಬರೆದುಕೊಂಡಿದ್ದರು. “ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.. ನಾನು ಧನ್ಯ” ಎಂದಿದ್ದರು. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ