logo
ಕನ್ನಡ ಸುದ್ದಿ  /  Entertainment  /  Sandalwood Movie Update Rajavardhana Starrer Hiranya Film Team Released The First Look Of Heroine Rihaana Mnk

Hiranya: ಹಿರಣ್ಯ ರಾಜವರ್ಧನನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ; ಯುವನಟಿ ರಿಹಾನಾ ಫಸ್ಟ್‌ ಲುಕ್‌ ರಿಲೀಸ್‌

HT Kannada Desk HT Kannada

Jun 04, 2023 11:52 AM IST

ಹಿರಣ್ಯ ರಾಜವರ್ಧನನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ; ಯುವನಟಿ ರಿಹಾನಾ ಫಸ್ಟ್‌ ಲುಕ್‌ ರಿಲೀಸ್‌

    • ರಾಜವರ್ಧನ್‌ಗೆ ಜೋಡಿಯಾಗಿ ಯುವ ನಟಿ ರಿಹಾನಾ ಬಣ್ಣ ಹಚ್ಚಿರುವ ಬಗ್ಗೆ ಮಾಹಿತಿಯಷ್ಟೇ ಬಿಟ್ಟುಕೊಟ್ಟಿದ್ದ ಸಿನಿಬಳಗವೀಗ ನಾಯಕಿ ಪಾತ್ರ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.
ಹಿರಣ್ಯ ರಾಜವರ್ಧನನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ; ಯುವನಟಿ ರಿಹಾನಾ ಫಸ್ಟ್‌ ಲುಕ್‌ ರಿಲೀಸ್‌
ಹಿರಣ್ಯ ರಾಜವರ್ಧನನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ; ಯುವನಟಿ ರಿಹಾನಾ ಫಸ್ಟ್‌ ಲುಕ್‌ ರಿಲೀಸ್‌

Hiranya: ಬಿಚ್ಚುಗತ್ತಿ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದೀಗ ಅವರ ಬಹುನಿರೀಕ್ಷಿತ ಸಿನಿಮಾ ಹಿರಣ್ಯ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ನಾಯಕಿಯನ್ನು ಚಿತ್ರಪ್ರೇಮಿಗಳಿಗೆ ಪರಿಚಯಿಸಿದೆ.

ಟ್ರೆಂಡಿಂಗ್​ ಸುದ್ದಿ

Vidya Balan: ಪಾರ್ನ್‌ ವಿಡಿಯೋ ವೀಕ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡಿದ ನಟಿ ವಿದ್ಯಾ ಬಾಲನ್‌

Ranneeti Review: ಒಂದು ಯುದ್ಧದ ಹಿಂದಿನ ಹಲವು ಯುದ್ಧಗಳ ಕಥೆ; ದೇಶದೇಶಗಳ ರಾಜಕೀಯ ಚದುರಂಗದಲ್ಲಿ ಸುದ್ದಿಯೂ ಅಸ್ತ್ರ -ರಣ್‌ನೀತಿ ವೆಬ್‌ಸೀರೀಸ್

Seetha Rama Serial: ಮಾವಯ್ಯನ ಬಾಯಿಂದ ಬಂತು ಆ ಮಾತು; ಹಾಲು ಕುಡಿದಷ್ಟೇ ಖುಷಿಯಲ್ಲಿದ್ದಾಳೆ ಭಾರ್ಗವಿ

‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್‌ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್‌ ಲೀವ್‌ ಇನ್‌ ಲೈಫ್‌

ರಾಜವರ್ಧನ್‌ಗೆ ಜೋಡಿಯಾಗಿ ಯುವ ನಟಿ ರಿಹಾನಾ ಬಣ್ಣ ಹಚ್ಚಿರುವ ಬಗ್ಗೆ ಮಾಹಿತಿಯಷ್ಟೇ ಬಿಟ್ಟುಕೊಟ್ಟಿದ್ದ ಸಿನಿಬಳಗವೀಗ ನಾಯಕಿ ಪಾತ್ರ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ರಿಹಾನಾ ಹುಟ್ಟುಹಬ್ಬದ ಉಡುಗೊರೆಯಾಗಿ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಅನಾವರಣ ಮಾಡಿದೆ.

ಇದನ್ನೂ ಓದಿ: ಪಾಪ, ಪುಣ್ಯ, ಕರ್ಮದ ಕಥೆಯಲ್ಲಿ ರಿಷಿ; ರುದ್ರ ಗರುಡ ಪುರಾಣ ಚಿತ್ರಕ್ಕೆ ನೀನಾಸಂ ಸತೀಶ್ ಹಾರೈಕೆ

ಏನನ್ನು ಕಳೆದುಕೊಂಡಂತೆ ಭಾವುಕಳಾಗಿ ನಿಂತಿರುವ ಅಭಿನಯ ಪಾತ್ರ ಸಿನಿಮಾಗೆ ತಿರುವು ನೀಡಲಿದೆಯಂತೆ. ಅಂದಹಾಗೇ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ರಿಹಾನಾ ಅವರನ್ನು ಆಡಿಷನ್ ಮೂಲಕವೇ ಸೆಲೆಕ್ಟ್ ಮಾಡಲಾಗಿದೆ. ಹಿರಣ್ಯದಲ್ಲಿ ಇವರದ್ದು ಪವರ್ ಫುಲ್ ಪಾತ್ರ. ಸಿನಿಮಾ ಪೂರ್ತಿ ಅಭಿನಯ ಎಮೋಷನ್ ಕ್ಯಾರಿ ಮಾಡುತ್ತಾರೆ ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ಅವ್ಯುಕ್ತ.

ಈಗಾಗಲೇ ಹಲವು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್‌ ಅವ್ರ್ಯುಕ್ತ್ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಟಾಲಿವುಡ್‌ ನಟ ಚಿರಂಜೀವಿಗೆ ಕ್ಯಾನ್ಸರ್‌! ಭಯ ಏಕೆ, ನಾನು ಅದರಿಂದ ಹೊರ ಬಂದಿದ್ದೇನೆ; ಸ್ಪಷ್ಟನೆ ನೀಡಿದ ತೆಲುಗು ಮೆಗಾಸ್ಟಾರ್‌

ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಹಿರಣ್ಯ ಚಿತ್ರತಂಡ ಬಿಜಿಯಾಗಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು