logo
ಕನ್ನಡ ಸುದ್ದಿ  /  ಮನರಂಜನೆ  /  ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಮರಿಯಾನೆ ಬೆಲೆ 60 ಲಕ್ಷ ರೂಪಾಯಿ

ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಮರಿಯಾನೆ ಬೆಲೆ 60 ಲಕ್ಷ ರೂಪಾಯಿ

Praveen Chandra B HT Kannada

Sep 03, 2024 06:03 PM IST

google News

ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ವಿವರ

    • Chandan Shetty New Car Details: ಕನ್ನಡ ನಟ, ಗಾಯಕ ಚಂದನ್‌ ಶೆಟ್ಟಿ ಹೊಸ ಕಾರು ಖರೀದಿಸಿದ್ದಾರೆ. ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ (ಎಟಿ) ಎಂಬ ಈ ಕಾರಿನ ಬೆಂಗಳೂರು ಆನ್‌ರೋಡ್‌ ದರ ಎಷ್ಟು? ಇದರ ವಿಶೇಷಗಳೇನು? ಎಂಜಿನ್‌ ಹೇಗಿದೆ, ಪವರ್‌ ಎಷ್ಟಿದೆ? ಇತ್ಯಾದಿ ವಿವರ ಇಲ್ಲಿದೆ.
ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ವಿವರ
ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಕಾರಿನ ವಿವರ

ಬೆಂಗಳೂರು: ಕನ್ನಡ ರಾಪರ್‌, ಬಿಗ್‌ಬಾಸ್‌ ಕನ್ನಡದ ಮಾಜಿ ಸ್ಪರ್ಧಿ, ನಿವೇದಿತಾ ಗೌಡರ ಮಾಜಿ ಹಸ್ಬೆಂಡ್‌, ಸಿನಿಮಾ ನಟ ಚಂದನ್‌ ಶೆಟ್ಟಿ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಬಹುತೇಕರಿಗೆ ಇದು ಟೊಯೊಟಾ ಕಾರು ಎಂದು ಲೋಗೊ ನೋಡಿ ಗೊತ್ತಾಗಿದೆ. ಲೆಜೆಂಡ್‌ ಎಂಬ ಟೈಟಲ್‌ ನೋಡಿ ಇದು ಟೊಯೊಟಾ ಲೆಜೆಂಡ್‌ ಎಂದುಕೊಂಡಿದ್ದಾರೆ. ಆದರೆ, ಈ ಕಾರಿನ ಹೆಸರು ಟೊಯೊಟಾ ಲೆಜೆಂಡ್‌ ಎಂದಲ್ಲ. ಇದು ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ (ಎಟಿ). ಟೊಯೊಟಾ ಕಂಪನಿಯ ಈ ಬೊಂಬಾಟ್‌ ಕಾರನ್ನು ನಟ ಚಂದನ್‌ ಶೆಟ್ಟಿ ಪುಟಾಣಿ ಆನೆ (ಮರಿಯಾನೆ) ಎಂದು ಕರೆದಿದ್ದಾರೆ. ಈ ಪುಟಾಣಿ ಆನೆಗೆ ಫ್ಯಾನ್ಸಿ ನಂಬರ್‌ ದೊರಕಿದೆ.

ಚಂದನ್‌ ಶೆಟ್ಟಿ ಈ ಕಾರಿನ ಜತೆಗೆ ನಿಂತ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಈ ಕಾರಿನ ನಂಬರ್‌ಪ್ಲೇಟ್‌ನಲ್ಲಿರುವ ಫ್ಯಾನ್ಸಿ ನಂಬರ್‌ ಎಲ್ಲರ ಗಮನ ಸೆಳೆದಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಈ ಫ್ಯಾನ್ಸಿ ನಂಬರ್‌ KA04NC1414 ಅನ್ನು ಬೆನ್ನೆತ್ತಿ ಹೋದಾಗ ಈ ಲೆಜೆಂಡರಿ ಕಾರಿನ ಕುರಿತು ಹೆಚ್ಚಿನ ವಿವರ ದೊರಕಿದೆ. ಈ ಕಾರನ್ನು ಯಶವಂತಪುರದ ರೈಲ್ವೆ ಸ್ಟೇಷನ್‌ ರಸ್ತೆಯಲ್ಲಿರುವ ಆರ್‌ಟಿಒದಲ್ಲಿ ನೋಂದಣಿ ಮಾಡಲಾಗಿದೆ. ಕಾರಿನ ಮಾಲಿಕರ ಹೆಸರು C*AN*AN S P. ಅಂದರೆ ಚಂದನ್‌ ಎಸ್‌ಪಿ. ಕಾರು ಕಂಪನಿಯ ಹೆಸರು ಟೊಯೊಟಾ. ಕಾರಿನ ಹೆಸರು FORTUNER SIGMA 4 LEGENDER (AT). ಚಂದನ್‌ ಶೆಟ್ಟಿ ಈ ಕಾರಿನ ಮೊದಲ ಮಾಲೀಕರಾಗಿದ್ದಾರೆ. ಯಾಕೆಂದರೆ ಇದು ಅವರು ಖರೀದಿಸಿದ ಹೊಸ ಕಾರು.

ಚಂದನ್‌ ಶೆಟ್ಟಿ ಖರೀದಿಸಿದ ಕಾರಿನ ದರವೆಷ್ಟು?

ರಾಪರ್‌ ಚಂದನ್‌ ಶೆಟ್ಟಿ ಖರೀದಿಸಿದ ಹೊಸ ಕಾರು ಎಷ್ಟಿರಬಹುದು ಎಂದು ಅಂದಾಜಿಸೋಣ. ಈ ಲೆಜೆಂಡ್‌ ಕಾರು 4x2 ವೀಲ್‌ ಡ್ರೈವ್‌ ಮತ್ತು 4x4 ವೀಲ್‌ ಡ್ರೈವ್‌ ಆಯ್ಕೆಯಲ್ಲಿ ದೊರಕುತ್ತದೆ. ನೀವೆಲ್ಲಾದರೂ 4x2 ವೀಲ್‌ ಡ್ರೈವ್‌ ಫಾರ್ಚುನರ್‌ ಖರೀದಿಸುವಾದರೆ ದರ ಈ ಮುಂದಿನಂತೆ ಇದೆ. ಕಾರಿನ ಎಕ್ಸ್‌ ಶೋರೂಂ ದರ 43,66,000 ರೂಪಾಯಿ. ಆರ್‌ಟಿಒ ಮತ್ತು ಇತರೆ ಖರ್ಚು ಸುಮಾರು 9,15,987 ರೂಪಾಯಿ. ವಿಮೆ ದರ ಸುಮಾರು 1,97,587 ರೂಪಾಯಿ. ಈ ಅಂದಾಜಿನಲ್ಲಿ ಹೇಳುವುದಾದರೆ ಈ ಕಾರಿನ ಆನ್‌ರೋಡ್‌ ದರ 54.79 ಲಕ್ಷ ರೂಪಾಯಿ ಆಗುತ್ತದೆ. ಇದು 4x2 ಫಾರ್ಚ್ಯುನರ್‌ ದರ. ಆದರೆ, ಚಂದನ್‌ ಶೆಟ್ಟಿ ಖರೀದಿಸಿರುವುದು 4x4 ಫಾರ್ಚ್ಯುನರ್‌ ಕಾರು.

ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಆಟೋಮ್ಯಾಟಿಕ್‌ ಫೋರ್‌ ವೀಲ್‌ ಡ್ರೈವ್‌ ಕಾರು ಚಂದನ್‌ ಶೆಟ್ಟಿ ಖರೀದಿಸಿದ್ದಾರೆ. ಇದರ ಬೆಂಗಳೂರು ಎಕ್ಸ್‌ ಶೋರೂಂ ದರ 47,64,000 ರೂಪಾಯಿ. ಆರ್‌ಟಿಒ ಮತ್ತು ಇತರೆ ಖರ್ಚು 9,99,487 ರೂಪಾಯಿ. ವಿಮೆ 2,12,935 ರೂಪಾಯಿ ಎಂದುಕೊಂಡರೆ ಈ ಕಾರಿನ ಬೆಂಗಳೂರು ಆನ್‌ರೋಡ್‌ ದರ 59,76,422 ರೂಪಾಯಿ ಆಗುತ್ತದೆ. ಇದು ಒಂದು ಅಂದಾಜು ದರ. ಚಂದನ್‌ ಶೆಟ್ಟಿ ಖರೀದಿಸಿರುವ ಕಾರಿನ ದರದಲ್ಲಿ ಇನ್ನೂ ಸ್ವಲ್ಪ ವ್ಯತ್ಯಾಸ ಇರಬಹುದು. ಇದೇ ಸಮಯದಲ್ಲಿ ಚಂದನ್‌ ಶೆಟ್ಟಿ ತನ್ನ ಕಾರಿಗೆ ಸುಂದರವಾದ ಫ್ಯಾನ್ಸಿ ನಂಬರ್‌ ಆಯ್ಕೆ ಮಾಡಿಕೊಂಡಿದ್ದಾರೆ. ಬೆಂಗಳೂರು ಆರ್‌ಟಿಒದಲ್ಲಿ ಈ ಫ್ಯಾನ್ಸಿ ನಂಬರ್‌ಗೆ ಎಷ್ಟು ಲಕ್ಷ ರೂಪಾಯಿ ನೀಡಿದ್ದಾರೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಒಟ್ಟಾರೆ, ಈ ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ (ಎಟಿ) ಎಂಬ ಪುಟಾಣಿ ಆನೆಗೆ ಚಂದನ್‌ ಶೆಟ್ಟಿ 60 ಲಕ್ಷ ರೂಪಾಯಿಗಿಂತಲೂ ತುಸು ಹೆಚ್ಚು ಖರ್ಚು ಮಾಡಿದ್ದಾರೆ ಎನ್ನುವುದು ಪಕ್ಕಾ ಆಗಿದೆ.

ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾ ಲೆಜೆಂಡರ್‌- ಎಂಜಿನ್‌ ಮತ್ತು ಪವರ್‌

ಈ ಕಾರು ಪ್ಲಾಟಿನಂ ವೈಟ್‌ ಪರ್ಲ್‌ (ಬ್ಲ್ಯಾಕ್‌ ರೂಫ್)‌ ಬಣ್ಣದಲ್ಲಿ ಮಾತ್ರ ದೊರಕುತ್ತದೆ. ಇದೇ ಬಣ್ಣದ ಕಾರನ್ನು ಚಂದನ್‌ ಶೆಟ್ಟಿ ಖರೀದಿಸಿದ್ದಾರೆ. ಇದು 2755 cc ಎಂಜಿನ್‌ ಹೊಂದಿದ್ದು, 3000-3400 ಆವರ್ತನಕ್ಕೆ 201.15 ಬಿಎಚ್‌ಪಿ ನೀಡುತ್ತದೆ. 1600-280 ಆವರ್ತನಕ್ಕೆ 500 ಎನ್‌ಎಂ ಟಾರ್ಕ್‌ ಪವರ್‌ ಒದಗಿಸುತ್ತದೆ. ಎಂಜಿ ಗ್ಲೊಸ್ಟರ್‌ ಡೆಸಾರ್ಟ್‌ ಸ್ಟ್ರೋಮ್‌, ಬಿಎಂಡಬ್ಲ್ಯು ಎಕ್ಸ್‌1 ಎಂ ಸ್ಪೋರ್ಟ್‌ ಮುಂತಾದ ಕಾರುಗಳು ಟೊಯೊಟಾ ಫಾರ್ಚ್ಯುನರ್‌ ಸಿಗ್ಮಾಗೆ ಪ್ರತಿಸ್ಪರ್ಧಿಗಳು.

ಫಾರ್ಚ್ಯುನರ್‌ ಲೆಜೆಂಡರ್‌ ಫೀಚರ್ಸ್‌

ಬಿಗ್‌ಬಾಸ್‌ ಕನ್ನಡ ಸೀಸನ್‌ 5 ವಿನ್ನರ್‌ ಚಂದನ್‌ ಶೆಟ್ಟಿ ಖರೀದಿಸಿದ ಫಾರ್ಚ್ಯುನರ್‌ ಸಿಗ್ಮಾ 4 ಲೆಜೆಂಡರ್‌ ಏಳು ಸೀಟಿನ ಡೀಸೆಲ್‌ ಎಂಜಿನ್‌ ಕಾರಾಗಿದೆ. ಬಹುಕಾರ್ಯ ಫೀಚರ್‌ ಹೊಂದಿರುವ ಸ್ಟಿಯರಿಂಗ್‌ ವೀಲ್‌, ಎಬಿಎಸ್‌, ಅಲಾಯ್‌ ವೀಲ್‌, ಪವರ್‌ ವಿಂಡೋಸ್‌ ರಿಯರ್‌ ಮತ್ತು ಫ್ರಂಟ್‌, ಡಿಜಿಟಲ್‌ ಓಡೋ ಮೀಟರ್‌, ಲಗ್ಷುರಿ ಫೀಲ್‌ ನೀಡುವ ಅಪ್‌ಹೋಲೆಸ್ಟ್ರಿ, ಡಿಜಿಟಲ್‌ ಕ್ಲಸ್ಟರ್‌ ಇತ್ಯಾದಿಗಳಿವೆ. ಗಂಟೆಗೆ ಗರಿಷ್ಠ 190 ಕಿ.ಮೀ. ವೇಗದಲ್ಲಿ ಸಾಗಬಹುದು. ಸುರಕ್ಷತೆಗೆ ಎಬಿಎಸ್‌, ಬ್ರೇಕ್‌ ಅಸಿಸ್ಟ್‌, ಸೆಂಟ್ರಲ್‌ ಲಾಕಿಂಗ್‌, ಚೈಲ್ಡ್‌ ಸೇಫ್ಟಿ ಲಾಕ್ಸ್‌, ಆಂಟಿ ಥೆಫ್ಟ್‌ ಅಲಾರ್ಮ್‌, ಏಳು ಏರ್‌ಬ್ಯಾಗ್‌ಗಳು, ಡೇ ಆಂಡ್‌ ನೈಟ್‌ ರಿಯರ್‌ ವ್ಯೂ ಮಿರರ್‌, ಇಬಿಡಿ, ಸೀಟ್‌ ಬೆಲ್ಟ್‌ ವಾರ್ನಿಂಗ್‌, ಟ್ರಾಕ್ಷನ್‌ ಕಂಟ್ರೋಲ್‌, ಎಂಜಿನ್‌ ಎಮೊಬಿಲೈಜರ್‌, ರಿಯರ್‌ ಕ್ಯಾಮೆರಾ, ಸ್ಪೀಡ್‌ ಸೆನ್ಸಿಂಗ್‌ ಆಟೋ ಲಾಕ್‌... ಹೀಗೆ ಅವಶ್ಯವಿರುವ ಎಲ್ಲಾ ಫೀಚರ್‌ಗಳನ್ನು ಈ ಕಾರು ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ