2024 Kia Carnival: ವಿಮಾನದಿಂದ ಇಳಿದ ಹೊಸ ಕಿಯಾ ಕಾರ್ನಿವಲ್‌, ಕಿಯಾ ಕಾರು ಅಭಿಮಾನಿಗಳಿಗೆ ಸಿಹಿಸುದ್ದಿ, ಸದ್ಯದಲ್ಲೇ ಭಾರತದಲ್ಲಿ ಲಾಂಚ್‌-automobile news 2024 kia carnival arrives in india spotted at delhi airport ahead of launch engine design interior d ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  2024 Kia Carnival: ವಿಮಾನದಿಂದ ಇಳಿದ ಹೊಸ ಕಿಯಾ ಕಾರ್ನಿವಲ್‌, ಕಿಯಾ ಕಾರು ಅಭಿಮಾನಿಗಳಿಗೆ ಸಿಹಿಸುದ್ದಿ, ಸದ್ಯದಲ್ಲೇ ಭಾರತದಲ್ಲಿ ಲಾಂಚ್‌

2024 Kia Carnival: ವಿಮಾನದಿಂದ ಇಳಿದ ಹೊಸ ಕಿಯಾ ಕಾರ್ನಿವಲ್‌, ಕಿಯಾ ಕಾರು ಅಭಿಮಾನಿಗಳಿಗೆ ಸಿಹಿಸುದ್ದಿ, ಸದ್ಯದಲ್ಲೇ ಭಾರತದಲ್ಲಿ ಲಾಂಚ್‌

2024 Kia Carnival: ಕಿಯಾ ಕಂಪನಿಯು ಮುಂದಿನ ತಲೆಮಾರಿನ ಕಾರ್ನಿವಲ್‌ ಎಂಪಿವಿಯನ್ನು ಭಾರತದಲ್ಲಿ ಅಕ್ಟೋಬರ್‌ 3ರಂದು ಬಿಡುಗಡೆ ಮಾಡಲಿದೆ. ಕಳೆದ ವರ್ಷ ದೆಹಲಿ ವಾಹನ ಪ್ರದರ್ಶನದಲ್ಲಿ ಈ ಕಾರನ್ನು ( new Carnival MPV) ಪ್ರದರ್ಶಿಸಲಾಗಿತ್ತು. ನೂತನ ಎಂಪಿವಿ ಪೆಟ್ರೋಲ್‌, ಡೀಸೆಲ್‌ ಮತ್ತು ಹೈಬ್ರಿಡ್‌ ಆಯ್ಕೆಗಳಲ್ಲಿ ದೊರಕುವ ಸೂಚನೆಯಿದೆ.

ಅಕ್ಟೋಬರ್‌ 3ರಂದು ಭಾರತದಲ್ಲಿ ಹೊಸ ಕಿಯಾ ಕಾರ್ನಿವಲ್‌ ಎಂಪಿವಿ ಬಿಡುಗಡೆಯಾಗಲಿದೆ  (Image courtesy: Facebook/Vipul Singh)
ಅಕ್ಟೋಬರ್‌ 3ರಂದು ಭಾರತದಲ್ಲಿ ಹೊಸ ಕಿಯಾ ಕಾರ್ನಿವಲ್‌ ಎಂಪಿವಿ ಬಿಡುಗಡೆಯಾಗಲಿದೆ (Image courtesy: Facebook/Vipul Singh)

ಬೆಂಗಳೂರು: ಕಿಯಾ ಕಾರು ಕಂಪನಿಯು ಭಾರತಕ್ಕೆ ಮುಂದಿನ ತಲೆಮಾರಿನ ಹೊಸ ಕಾರ್ನಿವಲ್‌ ಎಂಪಿವಿಯನ್ನು ಪರಿಚಯಿಸಲು ಸಿದ್ಧವಾಗಿದೆ. ಕೊರಿಯನ್‌ ಕಾರು ಕಂಪನಿಯು ಇದೇ ಅಕ್ಟೋಬರ್‌ 3ರಂದು ನೂತನ ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಹೊಸ ಕಾರು ಬಿಡುಗಡೆಗೆ ಮುನ್ನವೇ ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದೆ. ಹೊಸ ಕಿಯಾ ಕಾರಿನ ಸ್ಪೈ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ವಾಹನ ಪ್ರಿಯರು ಹಂಚಿಕೊಂಡಿದ್ದಾರೆ. ಈ ಬಿಳಿಬಣ್ಣದ ಕಾರನ್ನು ವಿಮಾನದ ಕಾರ್ಗೊ ಪ್ರದೇಶದಲ್ಲಿ ಇಳಿಸುತ್ತಿರುವ ದೃಶ್ಯ ಕಾಣಿಸಿದೆ. ಈ ಹಿಂದಿನ ತಲೆಮಾರಿನ ಕಾರ್ನಿವಲ್‌ ಕಾರಿನ ಮಾರಾಟವನ್ನು ಕಳೆದ ವರ್ಷ ಭಾರತದಲ್ಲಿ ಸ್ಥಗಿತಗೊಳಿಸಲಾಗಿತ್ತು. ಭಾರತದ ಹೊಸ ಹೊಗೆ ನೀತಿಗೆ ತಕ್ಕಂತೆ ಆ ಕಾರು ಇರಲಿಲ್ಲ. ಇದೀಗ ತನ್ನ ತಂತ್ರಜ್ಞಾವವನ್ನು ಅಪ್‌ಗ್ರೇಡ್‌ ಮಾಡಿಕೊಂಡು ಹೊಸ ಕಾರ್ನಿವಲ್‌ ಆಗಮಿಸಿದೆ.

ಭಾರತದಲ್ಲಿ ಕಿಯಾ ಕಾರ್ನಿವಲ್‌ ಜೋಡಣೆ

ಭಾರತಕ್ಕೆ ಹೊಸ ಕಿಯಾ ಕಾರ್ನಿವಲ್‌ ಕಾರು ಸಿಕೆಡಿ ಮಾದರಿಯಲ್ಲಿ ಬರಲಿದೆ. ಅಂದರೆ, ಕಾರಿನ ಎಲ್ಲಾ ಬಿಡಿಭಾಗಗಳನ್ನು ಕೊರಿಯಾದಿಂದ ಆಮದು ಮಾಡಲಾಗುತ್ತದೆ. ಭಾರತದಲ್ಲಿ ಈ ಬಿಡಿಭಾಗಗಳನ್ನ ಜೋಡಿಸಿ ಕಾರ್ನಿವಲ್‌ ರೂಪಕೊಟ್ಟು ಮಾರಾಟ ಮಾಡಲಾಗುತ್ತದೆ. ಈ ಕಾರನ್ನು ಸಂಪೂರ್ಣವಾಗಿ ಕೊರಿಯಾದಲ್ಲೇ ನಿರ್ಮಿಸಿ ಆಮದು ಮಾಡಿಕೊಳ್ಳುವ ನಿರೀಕ್ಷೆ ಇತ್ತು. ಆದರೆ, ಸಿಕೆಡಿ ಹಾದಿ ಮೂಲಕ ಭಾರತದಲ್ಲಿ ಮಾರಾಟ ಮಾಡಲು ಕಂಪನಿ ಉದ್ದೇಶಿಸಿದೆ. ಈಗಾಗಲೇ ಕಿಯಾ ಕಂಪನಿಯು ಜಾಗತಿಕ ಮಾರುಕಟ್ಟೆಯಲ್ಲಿ ನಾಲ್ಕನೇ ತಲೆಮಾರಿನ ಕಿಯಾ ಕಾರ್ನಿವಲ್‌ ಎಂಪಿವಿಯನ್ನು ಮಾರಾಟ ಮಾಡುತ್ತಿದೆ. ಈ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಕೆಎ4 ಎಂಬ ಹೆಸರಲ್ಲಿ ಪ್ರದರ್ಶಿಸಲಾಗಿತ್ತು.

ಹೇಗಿದೆ ನೂತನ ಕಿಯಾ ಕಾರ್ನಿವಲ್‌?

ಸದ್ಯ ವಿಮಾನ ನಿಲ್ದಾಣದಲ್ಲಿ ತೆಗೆದ ಫೋಟೋವನ್ನು ಗಮನಿಸಿದರೆ ಕಾರ್ನಿವಲ್‌ ಕಾರು ಇನ್ನಷ್ಟು ಬೋಲ್ಡ್‌ ಆಗಿದೆ. ಹೊಸ ಗ್ರಿಲ್‌ಗಳು, ಹೊಸ ವರ್ಟಿಕಲ್‌ ಎಲ್‌ಇಡಿ ಹೆಡ್‌ಲೈಟ್‌ಗಳು ಕಾಣಿಸಿವೆ. ಇದರೊಂದಿಗೆ ಎಲ್‌ ಆಕಾರದ ಎಲ್‌ಇಡಿ ಡಿಆರ್‌ಎಲ್‌ ಲೈಟ್‌ಗಳು ಮುಂಭಾಗದಲ್ಲಿ ಕಾಣಿಸಿವೆ. ಇದೇ ಸಂದರ್ಭದಲ್ಲಿ ಬಂಪರ್‌ ಮತ್ತು ಏರ್‌ ಇಂಟೆಕ್‌ನಲ್ಲೂ ಬದಲಾವಣೆ ಗುರುತಿಸಬಹುದು. ವೈರಲ್‌ ಆದ ನೂತನ ಕಾರಿನ ವಿಡಿಯೋದಲ್ಲಿ ಹೊಸ ಅಲಾಯ್‌ ವೀಲ್‌ಗಳು ಕಾಣಿಸಿವೆ. ಸುಮಾರು 19 ಇಂಚಿನ ಅಲಾಯ್‌ ವೀಲ್‌ಗಳು ಇರುವ ನಿರೀಕ್ಷೆಯಿದೆ.

ಕಿಯಾ ಕಾರ್ನಿವಲ್‌ ಇಂಟೀರಿಯರ್‌

ಕಿಯಾ ಕಂಪನಿಯು 2024ರ ಕಾರ್ನಿವಲ್‌ ಎಂಪಿಯ ಇಂಟೀರಿಯರ್‌ ಅನ್ನೂ ಅಪ್‌ಡೇಟ್‌ ಮಾಡಿದೆ. ಇದಕ್ಕೆ ಸಾಕಷ್ಟು ಹೊಸ ಫೀಚರ್‌ಗಳನ್ನು ಅಳವಡಿಸಿದೆ. ಭಾರತದಲ್ಲಿ ಹೊಸ ಕಾರ್ನಿವಲ್‌ ಎರಡು ಹೆಚ್ಚುವರಿ ಸೀಟ್‌ ಆಯ್ಕೆಗಳಲ್ಲೂ ದೊರಕುವ ಸೂಚನೆ ಇದೆ. ಅಂದರೆ, ಏಳು ಸೀಟು ಮತ್ತು ಒಂಬತ್ತು ಸೀಟ್‌ ಕಾನ್ಫಿಗರೇಷನ್‌ನಲ್ಲಿ ಆಗಮಿಸುವ ನಿರೀಕ್ಷೆಯಿದೆ. ಇದೇ ರೀತಿ ಕಾರಿನೊಳಗೆ ಎರಡು ಸ್ಕ್ರೀನ್‌ ಸೆಟಪ್‌ ಇರಲಿದೆ. 12.3 ಇಂಚಿನ ಟಚ್‌ಸ್ಕ್ರೀನ್‌ ಮನರಂಜನೆ ಮತ್ತು ಇನ್ನೊಂದು ಹೊಸ ಡಿಜಿಟಲ್‌ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ ಇರುವ ಸೂಚನೆಯಿದೆ. ವೈರ್‌ಲೆಸ್‌ ಆಂಡ್ರಾಯ್ಡ್‌ ಆಟೋ ಮತ್ತು ಆಪಲ್‌ ಕಾರ್‌ ಪ್ಲೇ, ವೈರ್‌ಲೆಸ್‌ ಚಾರ್ಜರ್‌, ಆಟೋಮ್ಯಾಟಿಕ್‌ ಕ್ಲೈಮೆಟ್‌ ಕಂಟ್ರೊಲ್‌, 360 ಡಿಗ್ರಿ ಕ್ಯಾಮೆರಾ, ಹೆಡ್‌ಅಪ್‌ ಡಿಸ್‌ಪ್ಲೆ, ಎಡಿಎಎಸ್‌ ಟೆಕ್ನಾಲಜಿ, ಹಿಂಬದಿಯಲ್ಲೂ ಮನರಂಜನೆ ಸ್ಕ್ರೀನ್‌ಗಳು.. ಸೇರಿದಂತೆ ಹಲವು ಫೀಚರ್‌ಗಳು ಇರುವ ಸೂಚನೆ ಇದೆ.

ಕಿಯಾ ಕಾರ್ನಿವಲ್‌ ಎಂಜಿನ್‌ ಮತ್ತು ಪವರ್‌

ಭಾರತದಲ್ಲಿ ಮೂರು ಎಂಜಿನ್‌ ಆಯ್ಕೆಗಳಲ್ಲಿ ನೂತನ ಕಾರನ್ನು ಪರಿಚಯಿಸುವ ನಿರೀಕ್ಷೆಯಿದೆ. ಗ್ಲೋಬಲ್‌ ಕಿಯಾ ಕಾರ್ನಿವಲ್‌ 3.5 ಲೀಟರ್‌ನ ಪೆಟ್ರೋಲ್‌, 1.6 ಲೀಟರ್‌ ಪೆಟ್ರೋಲ್‌ ಹೈಬ್ರಿಡ್‌, ಮತ್ತು 2.2 ಲೀಟರ್‌ನ ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ. ಭಾರತಕ್ಕೂ ಈ ಮೂರು ಆಯ್ಕೆಯಲ್ಲಿ ಆಗಮಿಸುವ ಸೂಚನೆಯಿದೆ. ಪೆಟ್ರೋಲ್‌ ಎಂಜಿನ್‌ಗೆ 8 ಹಂತದ ಆಟೋಮ್ಯಾಟಿಕ್‌ ಗಿಯರ್‌ಬಾಕ್ಸ್‌ ಇರಲಿದೆ. ಇದು 287 ಬಿಎಚ್‌ಪಿ ಪವರ್‌ ಮತ್ತು 352 ಎನ್‌ಎಂ ಪೀಕ್‌ ಟಾರ್ಕ್‌ ಒದಗಿಸಲಿದೆ. ಹೈಬ್ರಿಡ್‌ ಆವೃತ್ತಿಯಲ್ಲಿ 54 ಕಿಲೋವ್ಯಾಟ್‌ನ ಬ್ಯಾಟರಿ ಇರಲಿದೆ. ಭಾರತಕ್ಕೆ ಡೀಸೆಲ್‌ ಎಂಜಿನ್‌ ಕಾರನ್ನೂ ಕಿಯಾ ಕಂಪನಿಯು ಪರಿಚಯಿಸುವ ಸೂಚನೆಯಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.