logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kaatera Actress: ಅಂತಾರಾಷ್ಟ್ರೀಯ ಯೋಗ ದಿನದಂದು ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಯೋಗಾಸನ ಹೀಗಿತ್ತು ನೋಡಿ - ಚಿತ್ರಗಳು

Kaatera Actress: ಅಂತಾರಾಷ್ಟ್ರೀಯ ಯೋಗ ದಿನದಂದು ಮಾಲಾಶ್ರೀ ಪುತ್ರಿ ಆರಾಧನಾ ರಾಮ್‌ ಯೋಗಾಸನ ಹೀಗಿತ್ತು ನೋಡಿ - ಚಿತ್ರಗಳು

Jun 21, 2024 04:37 PM IST

International Yoga Day: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆರಾಧನಾ ರಾಮ್‌ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಯೋಗಾಸನ ಪ್ರದರ್ಶಿಸಿದ್ದಾರೆ. ಈ ಮೂಲಕ ತನ್ನ ಆಕರ್ಷಕ ಮೈಕಟ್ಟಿನ ಗುಟ್ಟು ಯೋಗ ಎಂದು ಸಾಬೀತುಪಡಿಸಿದ್ದಾರೆ.

  • International Yoga Day: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆ ಕಾಟೇರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಆರಾಧನಾ ರಾಮ್‌ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಯೋಗಾಸನ ಪ್ರದರ್ಶಿಸಿದ್ದಾರೆ. ಈ ಮೂಲಕ ತನ್ನ ಆಕರ್ಷಕ ಮೈಕಟ್ಟಿನ ಗುಟ್ಟು ಯೋಗ ಎಂದು ಸಾಬೀತುಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ 'ಕಾಟೇರ' ಸಿನಿಮಾ ನಟಿ ಆರಾಧನಾ ರಾಮ್ ಯೋಗಾಭ್ಯಾಸದಲ್ಲಿ ಭಾಗಿಯಾಗಿದ್ದರು. ಬೆಂಗಳೂರಿನ ಇಂದಿರಾ ನಗರದ ಕ್ಲಬ್‌ನಲ್ಲಿ ಅಥಾಯೋಗ್ ಲಿವಿಂಗ್ ಆಯೋಜಿಸಿದ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆರಾಧನಾ ಎಲ್ಲರ ಜೊತೆ ಯೋಗ ಮಾಡಿದ್ದಾರೆ.
(1 / 8)

ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಮಾಲಾಶ್ರಿ ಮತ್ತು ಕೋಟಿ ನಿರ್ಮಾಪಕರೆಂದೇ ಖ್ಯಾತಿ ಪಡೆದ ರಾಮು ಅವರ ಮುದ್ದಿನ ಮಗಳು ಈ ಆರಾಧನಾ ರಾಮ್‌. 
(2 / 8)

ಆರಾಧನಾ ರಾಮ್‌ ಅವರ  ಮೊದಲ ಹೆಸರು ಅನನ್ಯ ರಾಮು ಎಂದಿತ್ತು. ಬಳಿಕ ರಾಧನಾ ರಾಮ್‌ ಎಂದು ಬದಲಾಯಿಸಿಕೊಂಡಿದ್ದರು. ಯಾಕೋ ರಾಧನಾ ಹೆಸರೂ ಇಷ್ಟವಾಗದೆ ಆರಾಧನಾ ರಾಮ್‌ ಹೆಸರಿನಲ್ಲಿ ಕಾಟೇರ ಸಿನೆಮಾಕ್ಕೆ ಎಂಟ್ರಿ ನೀಡಿದ್ದರು.
(3 / 8)

ಆರಾಧನಾ ರಾಮ್‌ಗೆ ಹದಿಮೂರು ವರ್ಷವಾಗಿದ್ದಾಗಲೇ ಸಿನಿಮಾರಂಗದ ಕುರಿತು ಆಸಕ್ತಿ ಇತ್ತು. ಮಗಳ ಸಿನಿ ಪ್ರೀತಿಗೆ ಹೆತ್ತವರು ನಿರೇರೆದಿದ್ದಾರೆ. ಮುಂಬೈನಲ್ಲಿ ಎರಡು ವರ್ಷ ನಟನಾ ತರಬೇತಿ ಪಡೆದು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ ಆರಾಧನಾ ರಾಮ್‌.  
(4 / 8)

ದರ್ಶನ್‌ ಮತ್ತು ರಾಕ್‌ಲೈನ್‌ ಜತೆ ಸಿನಿಮಾ ಮಾಡುವ ಅವಕಾಶ ದೊರಕಿದಾಗ ಆರಾಧನಾ ರಾಮ್‌ಗೆ ಶಾಕ್‌ ಆಗಿತ್ತು. ಈ ಸುದ್ದಿ ಕೇಳಿದಂದು ರಾತ್ರಿ ನಿದ್ದೆಯೇ ಬಂದಿರಲಿಲ್ಲ. ಈ ಸಿನಿಮಾದಲ್ಲಿ ನಟಿಸಲು ಸರಿಯಾದ ತರಬೇತಿ ಪಡೆದು ಬಂದಿದ್ದರು. 
(5 / 8)

ಸದ್ಯ ಆರಾಧನಾ ರಾಮ್‌ ಯೋಗಾ ಫೋಟೋಗಳು ವೈರಲ್‌ ಆಗಿವೆ. ಇವರ ಮುಂದಿನ ಸಿನಿಮಾ ಯಾವುದು ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಕಾಟೇರ ಸಿನಿಮಾ ಸ್ಯಾಂಡಲ್‌ವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆ ಮಾಡಿತ್ತು. ಈ ಸಿನಿಮಾ ಸದ್ಯ ಝೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. 
(6 / 8)

ಪ್ರತಿವರ್ಷ ಜೂನ್‌ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಭಾರತ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿ ಯೋಗ ದಿನಾಚರಣೆ ರೂಢಿಯಲ್ಲಿದೆ. ಉತ್ತರ ಗೋಳಾರ್ಧದಲ್ಲಿ ಬರುವ ವರ್ಷದ ಸುದೀರ್ಘ ದಿನವನ್ನು ಅಂತರರಾಷ್ಟ್ರೀಯ ಯೋಗ ದಿನ ಎಂದು ಆಚರಿಸಲಾಗುತ್ತದೆ. 
(7 / 8)

ʼನಮಗಾಗಿ ಹಾಗೂ ಸಮಾಜಕ್ಕಾಗಿ ಯೋಗʼ ಎನ್ನುವುದು ಈ ವರ್ಷ ಥೀಮ್‌ ಆಗಿದೆ. ಯೋಗವು ವೈಯಕ್ತಿಕ ಆರೋಗ್ಯ ಮಾತ್ರವಲ್ಲದೇ, ಸಾಮಾಜಿಕ ಯೋಗಕ್ಷೇಮಕ್ಕೂ ಕೊಡುಗೆ ನೀಡುತ್ತದೆ.
(8 / 8)

    ಹಂಚಿಕೊಳ್ಳಲು ಲೇಖನಗಳು