logo
ಕನ್ನಡ ಸುದ್ದಿ  /  ಮನರಂಜನೆ  /  Prashanth Sambargi: ಕೇವಲ ಭಜರಂಗಿ ಸಿನಿಮಾ ಮಾಡಿದರೆ ಸಾಲದು!; ಶಿವಣ್ಣನ ಮುಂದೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳ ಸವಾಲು

Prashanth Sambargi: ಕೇವಲ ಭಜರಂಗಿ ಸಿನಿಮಾ ಮಾಡಿದರೆ ಸಾಲದು!; ಶಿವಣ್ಣನ ಮುಂದೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳ ಸವಾಲು

May 07, 2023 11:51 AM IST

ಕೇವಲ ಭಜರಂಗಿ ಸಿನಿಮಾ ಮಾಡಿದರೆ ಸಾಲದು!; ಶಿವಣ್ಣನ ಮುಂದೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳ ಸವಾಲು

    • ಹೇಳಿಕೆಗಳ ಮೂಲಕವೇ ವಿವಾದ ಮೈಮೇಲೆ ಎಳೆದುಕೊಳ್ಳುವ ಪ್ರಶಾಂತ್‌ ಸಂಬರ್ಗಿ, ಇದೀಗ ಶಿವರಾಜ್‌ಕುಮಾರ್‌ ಬಗ್ಗೆಯೂ ಮಾತನಾಡಿ, ಅವರ ಮುಂದೆ 10 ಪ್ರಶ್ನೆಗಳ ಸವಾಲನ್ನು ಇಟ್ಟಿದ್ದಾರೆ.
ಕೇವಲ ಭಜರಂಗಿ ಸಿನಿಮಾ ಮಾಡಿದರೆ ಸಾಲದು!; ಶಿವಣ್ಣನ ಮುಂದೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳ ಸವಾಲು
ಕೇವಲ ಭಜರಂಗಿ ಸಿನಿಮಾ ಮಾಡಿದರೆ ಸಾಲದು!; ಶಿವಣ್ಣನ ಮುಂದೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳ ಸವಾಲು

Prashanth Sambargi: ರಾಜ್ಯದಲ್ಲೀಗ ವಿಧಾನಸಭಾ ಚುನಾವಣಾ (Karnataka Assembly Election) ಪ್ರಚಾರದ ಕಾವು ಜೋರಾಗಿದೆ. ಈ ನಡುವೆ ಸಿನಿಮಾ ಮಂದಿಯೂ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಇತ್ತೀಚೆಗಷ್ಟೇ ನಟ ಶಿವರಾಜ್‌ಕುಮಾರ್‌ (Shiva Rajkumar) ಸಹ ಕಾಂಗ್ರೆಸ್‌ (Congress) ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಹೀಗೆ ಕಾಂಗ್ರೆಸ್‌ ಪರ ಪ್ರಚಾರಕ್ಕಿಳಿಯುತ್ತಿದ್ದಂತೆ, ಸದಾ ತಮ್ಮ ವಿವಾದಾತ್ಮಕ ಹೇಳಿಕೆ ಮೂಲಕವೇ ಮುನ್ನೆಲೆಗೆ ಬರುವ ಪ್ರಶಾಂತ್‌ ಸಂಬರ್ಗಿ, ಶಿವಣ್ಣನ ಬಗ್ಗೆಯೂ ಟೀಕೆ ಮಾಡಿದ್ದರು. ಈಗ ಮತ್ತೆ ಶಿವಣ್ಣನ ಮುಂದೆ ಹತ್ತು ಪ್ರಶ್ನೆಗಳನ್ನಿಟ್ಟಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲಯಾಳಂನ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

ಶಕುಂತಲಾದೇವಿ ಕೈಗೂ ಸಿಗ್ತು ಪೆನ್‌ಡ್ರೈವ್‌; ಪ್ರಜ್ವಲ್‌ ರೇವಣ್ಣ ವಿದ್ಯಮಾನದ ಸಮಯದಲ್ಲಿ ಅಲರ್ಟ್‌ ಆದ್ರು ಸೀರಿಯಲ್‌ ಡೈರೆಕ್ಟರ್‌

ಫೇಸ್‌ಬುಕ್‌ನಲ್ಲಿ ಸುದೀರ್ಘ 10 ಪ್ರಶ್ನೆಗಳನ್ನು ಪೋಸ್ಟ್‌ ಮಾಡಿರುವ ಸಂಬರ್ಗಿ, ಭಜರಂಗಿ ಹೆಸರಿನ ಸಿನಿಮಾದಲ್ಲಿ ನಟಿಸಿ ಬಜರಂಗದಳ ನಿಷೇಧದದ ಬಗ್ಗೆ ನಿಮ್ಮ ನಿಲುವೇನು?, ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಯ ಚಿತ್ರದಲ್ಲಿ ನಟಿಸುತಿದ್ದೀರಾ.. ಇದು ಸರಿನಾ? ಹೀಗೆ ರಾಜಕೀಯ ಮಿಶ್ರಿತ ಪ್ರಶ್ನೆಗಳ ಮೂಲಕ ಸವಾಲೆಸಿದ್ದಾರೆ. ಆ 10 ಪ್ರಶ್ನೆಗಳು ಹೀಗಿವೆ.

ಶಿವಣ್ಣನಿಗೆ ಪ್ರಶಾಂತ್‌ ಸಂಬರ್ಗಿಯ 10 ಪ್ರಶ್ನೆಗಳು

  • 1.ನೀವೇ ಹಿಂದುವಾಗಿ ಭಜರಂಗಿ ಹೆಸರಿನಲ್ಲಿ ನಟಿಸಿ ಕಾಂಗ್ರೆಸ್ ನವರ ಬಜರಂಗದಳದ ನಿಷೇಧದ ಬಗ್ಗೆ ತಮ್ಮ ನಿಲುವು ಏನು?
  • 2. ಒಂದು ಉತ್ತಮ ಮತ್ತು ಸತ್ಯ ವಾದ ಚಿತ್ರವಾದ The ಕೇರಳ Story ಚಿತ್ರವನ್ನು ನಿಮ್ಮ ಕಾಂಗ್ರೆಸ್ ನಿಷೇಧಿಸುವುದಕ್ಕೆ ಮುಂದಾಗಿದೆ ನೀವು ಕನ್ನಡದ ಮೇರು ನಟನಾಗಿ ಮತ್ತು ನಿರ್ಮಾಪನಾಗಿ ನಿಮ್ಮ ನಿಲುವೇನು?
  • 3.ನೀವು ಚಿತ್ರರಂಗದಿಂದ ಬಂದವರು, ಬೆಂಗಳೂರಿನಲ್ಲಿ The Kashmir Files ಚಿತ್ರ ಪ್ರದರ್ಶಿಸಿದಾಗ ಕಾಂಗ್ರೆಸ್ ಅದಕ್ಕೆ ವಿರೋಧ ಪಡಿಸಿತ್ತು ಆಗ ಏಕೆ ನಿಮ್ಮ ದಿವ್ಯ ಮೌನ?
  • 4. ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಯ ಚಿತ್ರದಲ್ಲಿ ನಟಿಸುತಿದ್ದೀರಾ.. ಇದು ಸರಿನಾ?
  • 5. ಡಾ ರಾಜಕುಮಾರ್ ನಮ್ಮ ಆರಾಧ್ಯ ದೈವ ಮತ್ತು ರಾಜಕೀಯದಿಂದ ದೂರವಾಗಿದ್ದರು. ಗೋಕಾಕ್ ಚಳವಳಿ ಮತ್ತು ಅವರ ಕನ್ನಡ ಪರ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರ, ಅವರ ಮಗನಾಗಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು?
  • 6. 2020ರಲ್ಲಿ ಸ್ಯಾಂಡಲ್‌ವುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು?
  • 7. ಪಿಎಫ್‌ಐ ಮತ್ತು ಜಿಹಾದಿ ಜನರಿಂದ ಆರ್‌ಎಸ್‌ಎಸ್ ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ನಿಮ್ಮ ನಿಲುವು ಏನು .?
  • 8. ನಿಮ್ಮ ಎಲ್ಲಾ ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ ಪಾತ್ರ ಮಾಡುವ ತಾವು ಲವ್ ಜಿಹಾದ್ ಮೇಲೆ ನಿಮ್ಮ ನಿಲುವೇನು?
  • 9. ಡಿಕೆ ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
  • 10. ಮುಸ್ಲಿಂ ಸಮುದಾಯದ ಓಲೈಕೆಯೇ ಕಾಂಗ್ರೆಸ್ ಮಂತ್ರವಾಗಿದೆ ಇದರ ಬಗ್ಗೆ ತಮ್ಮ ಅಭಿಪ್ರಾಯ? ಹಿಂದೂಗಳು ನಿಮ್ಮ ಚಿತ್ರವನ್ನು ನೋಡಬಾರದಾ.?

ಸಂಬರ್ಗಿ ಮೊದಲ ಪೋಸ್ಟ್‌ ಏನಾಗಿತ್ತು?

ಕಳೆದ ಎರಡು ದಿನಗಳ ಹಿಂದಷ್ಟೇ, "ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೇ ಇಲ್ಲ. ಆದರೆ, ಪೇಮೆಂಟ್ ತುಂಬಾನೇ ಮುಖ್ಯ. ಒಪ್ಪಿಕೊಂಡಿದ್ದ ಸಿನಿಮಾ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ, ಅವರು ಕೇರ್ ಮಾಡಲ್ಲ. ಮತ್ತೆ ಪೇಮೆಂಟ್ ತಗೊಂಡು ಇನ್ನೊಂದು ಚಿತ್ರಕ್ಕೆ ಸೈನ್‌ ಮಾಡಿಬಿಡುತ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಅಭ್ಯರ್ಥಿ ಗೆದ್ರೆ ಏನು ಸೋತ್ರೆ ಏನು ಎಲ್ಲಾ ಒಂದೇ. ಏನೋ ಹೇಳ್ತಾರಲ್ಲ ಗೆದ್ದರೆ ಬೆಟ್ಟ. ಇಲ್ಲ ಅಂದ್ರೆ.. ಬಂತಾ ಪ್ಯಾಕೆಟ್.. ಸರಿ ಆಲ್ ರೈಟ್ ಮುಂದೆ ಹೋಗೋಣ" ಎಂದು ಫೇಸ್‌ಬುಕ್‌ನಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದರು.

ಹುಬ್ಬಳ್ಳಿಯಲ್ಲಿ ಶಿವಣ್ಣನ ಪ್ರತಿಕ್ರಿಯೆ

ಹುಬ್ಬಳ್ಳಿ: ʼನಾನು ಹಣ ಪಡೆದು ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಹೃದಯವಂತಿಕೆಯಿಂದ ಬಂದಿದ್ದೇನೆ. ನಾನಿಲ್ಲಿ ಬಂದಿರುವುದು ಒಬ್ಬ ಮನುಷ್ಯನಾಗಿ, ವ್ಯಾಪಾರಕ್ಕಾಗಿ ಅಲ್ಲ. ಪ್ರೀತಿ, ವಿಶ್ವಾಸ ನಂಬಿಕೆಯಿಂದ ಬಂದಿದ್ದೇನೆ ಹೊರತು, ಇಲ್ಲಿ ಯಾರನ್ನೂ ಟೀಕೆ ಮಾಡುವ ಸಲುವಾಗಿ ಬಂದಿಲ್ಲʼ ಎಂದಿರುವ ನಟ ಶಿವರಾಜ್‌ಕುಮಾರ್‌ ಪ್ರಶಾಂತ್‌ ಸಂಬರ್ಗಿ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ʼಹಣಕ್ಕಾಗಿ ನಾವ್ಯಾಕೆ ಇಲ್ಲಿಗೆ ಬರಬೇಕು, ಅಲ್ಲ ನಮ್ಮ ಬಳಿ ಹಣ ಇಲ್ವಾʼ ಎಂದು ಪ್ರಶ್ನಿಸಿರುವ ಶಿವಣ್ಣ, ಸಂಬರ್ಗಿ ಈ ರೀತಿ ಹೇಳಿರುವುದು ಸರಿಯಲ್ಲʼ ಎಂದು ಕಿಡಿಕಾರಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು