logo
ಕನ್ನಡ ಸುದ್ದಿ  /  ಮನರಂಜನೆ  /  Yash Birthday: ಸ್ಯಾಂಡಲ್‌ವುಡ್‌ ಮಾಸ್ಟರ್‌ಪೀಸ್‌ ಬಿಎಂಟಿಸಿ ಚಾಲಕನ ಪುತ್ರ ಯಶ್‌ ಯಶೋಗಾಥೆ, ರಾಕಿಬಾಯ್‌ ಕುರಿತಾದ 10 ವಿಷಯಗಳು

Yash Birthday: ಸ್ಯಾಂಡಲ್‌ವುಡ್‌ ಮಾಸ್ಟರ್‌ಪೀಸ್‌ ಬಿಎಂಟಿಸಿ ಚಾಲಕನ ಪುತ್ರ ಯಶ್‌ ಯಶೋಗಾಥೆ, ರಾಕಿಬಾಯ್‌ ಕುರಿತಾದ 10 ವಿಷಯಗಳು

Praveen Chandra B HT Kannada

Jan 08, 2024 08:51 AM IST

google News

Yash Birthday: ಸ್ಯಾಂಡಲ್‌ವುಡ್‌ ಮಾಸ್ಟರ್‌ಪೀಸ್‌ ಬಿಎಂಟಿಸಿ ಚಾಲಕನ ಪುತ್ರ ಯಶ್‌ ಯಶೋಗಾಥೆ

    • Yash Birthday: ಕೆಜಿಎಫ್‌ ಸಿನಿಮಾದ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ರಾಕಿಬಾಯ್‌ ಆಗಿರುವ ಸ್ಯಾಂಡಲ್‌ವುಡ್‌ ನಟ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಯಶ್‌ ಬದುಕಿನ ಪ್ರಮುಖ ವಿವರ ಇಲ್ಲಿದೆ.
Yash Birthday: ಸ್ಯಾಂಡಲ್‌ವುಡ್‌ ಮಾಸ್ಟರ್‌ಪೀಸ್‌ ಬಿಎಂಟಿಸಿ ಚಾಲಕನ ಪುತ್ರ ಯಶ್‌ ಯಶೋಗಾಥೆ
Yash Birthday: ಸ್ಯಾಂಡಲ್‌ವುಡ್‌ ಮಾಸ್ಟರ್‌ಪೀಸ್‌ ಬಿಎಂಟಿಸಿ ಚಾಲಕನ ಪುತ್ರ ಯಶ್‌ ಯಶೋಗಾಥೆ

ಯಶ್‌ ಎಂಬ ಕನ್ನಡದ ಎರಡಕ್ಷರ, ಇಂಗ್ಲಿಷ್‌ನ ನಾಲ್ಕು ಅಕ್ಷರ ಇಂದು ಭಾರತದ ಸಿನಿಪ್ರೇಮಿಗಳ ಬಾಯಲ್ಲಿ ನಳಿದಾಡುತ್ತಿದೆ. ಯಶ್‌ ಎಂಬ ಹೆಸರು ಕೇಳಿದರೆ ಕೆಜಿಎಫ್‌ ಎನ್ನುತ್ತಾರೆ, ಟಾಕ್ಸಿಕ್‌ ಅನ್ನುತ್ತಾರೆ. ರಾಕಿ ಬಾಯ್‌ ಅನ್ನುತ್ತಾರೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿಯೂ ಈ ಹೆಸರು ಫೇಮಸ್ಸು. ಕೆಜಿಎಫ್‌ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಜನಪ್ರಿಯತೆ ಪಡೆದ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ, ಈ ಸಂಭ್ರಮದ ಸಮಯದಲ್ಲೂ ಅಭಿಮಾನಿಗಳನ್ನು ಖುದ್ದಾಗಿ ಭೇಟಿಯಾಗಲು ಸಾಧ್ಯವಾಗದ ಅನಿವಾರ್ಯತೆ ಅವರದ್ದು. ಸತತ ಪರಿಶ್ರಮ, ಕೆಲಸದ ಮೇಲೆ ಡೆಡಿಕೇಷನ್‌ ಯಶ್‌ ಯಶಸ್ಸಿನ ಪ್ರಮುಖ ಗುಟ್ಟು ಎಂದರೆ ತಪ್ಪಾಗದು.

ರಾಕಿಬಾಯ್‌ ಯಶ್‌ ಕುರಿತಾದ 10 ವಿಷಯಗಳು

1.ಹಾಸನ ಜಿಲ್ಲೆಯ ಭುವನಹಳ್ಳಿಯಲ್ಲಿ ಜನಿಸಿದ ಯಶ್‌ ಜನ್ಮದಿನಾಂಕ- ಜನವರಿ 8, 1986. ಬಾಲ್ಯದ ಹೆಸರು ನವೀನ್‌ ಕುಮಾರ್‌ ಗೌಡ. ಯಶವಂತ್‌ ಎಂಬ ಹೆಸರೂ ಇವರಿಗಿದೆ. ಚಿತ್ರರಂಗಕ್ಕೆ ಬಂದಾಗ ಇವರು ನವೀನ್‌ ಹೆಸರಿನ ಬದಲು ಯಶ್‌ ಹೆಸರಲ್ಲಿ ಗುರುತಿಸಿಕೊಂಡರು.

2. ಯಶ್‌ ತಂದೆ ಬಿಎಂಟಿಸಿ ಬಸ್‌ ಡ್ರೈವರ್‌ ಆಗಿದ್ದರು. ಇದೇ ಕಾರಣಕ್ಕೆ ತಾನು ಸಾರಿಗೆ ನೌಕರನ ಮಗ ಎಂದು ಸಾರಿಗೆ ನೌಕರರ ಸಮಸ್ಯೆಗಳಿಗೆ ಈ ಹಿಂದೆ ಧ್ವನಿ ಎತ್ತಿದ್ದರು. ಯಶ್‌ ತಂದೆಯ ಹೆಸರು ಅರುಣ್‌ ಕುಮಾರ್‌. ತಾಯಿ ಹೆಸರು ಪುಷ್ಪ. ಪತ್ನಿ ಹೆಸರು: ರಾಧಿಕಾ ಪಂಡಿತ್‌. ಯಶ್‌ಗೆ ಐರಾ ಮತ್ತು ಅಥರ್ವ್‌ ಎಂಬ ಇಬ್ಬರು ಮಕ್ಕಳಿದ್ದಾರೆ. ಯಶ್‌ ಸಹೋದರಿ ಹೆಸರು ನಂದಿನಿ.

3. ಮೈಸೂರಿನ ಮಹಾಜನ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ. ಇವರು ಕುಟುಂಬದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಾರಣಕ್ಕೆ ಶಿಕ್ಷಣ ಸ್ಥಗಿತಗೊಳಿಸಿ ನವೀನ್‌ ಪ್ರಾವಿಜನ್‌ ಸ್ಟೋರ್‌ ತೆರೆದರು. ಪಿಯುಸಿಗೆ ಶಿಕ್ಷಣಕ್ಕೆ ಗುಡ್‌ಬೈ ಹೇಳಿದರು.

4.ಬಾಲ್ಯದಿಂದಲೂ ಯಶ್‌ಗೆ ನಟನೆಯಲ್ಲಿ ಆಸಕ್ತಿ ಇತ್ತು. ಇವರಿಗೆ ನಟ ಉಪೇಂದ್ರ ಇಷ್ಟ. ಇವರೇ ಸ್ಪೂರ್ತಿ ಎಂದು ಆಗಾಗ ಹೇಳುತ್ತಾರೆ. ಬಿವಿ ಕಾರಂತರ ಬೆನಕ ನಾಟಕ ತಂಡದಲ್ಲಿ ಹಲವು ನಾಟಕದಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. ಇವರಿಗೆ ನಂದಗೋಕುಲ ಸೀರಿಯಲ್‌ನಲ್ಲಿ ನಟಿಸುವ ಅವಕಾಶ ದೊರಕುತ್ತದೆ. ಇದಾದ ಬಳಿಕ ಪ್ರೀತಿ ಇಲ್ಲದ ಮೇಲೆ ಎಂಬ ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಧಾರಾವಾಹಿ ಕಲಾವಿದನಾಗಿದ್ದಾಗಲೇ ಇವರಿಗೆ ನಟಿ ರಾಧಿಕಾ ಪಂಡಿತ್‌ ಪರಿಚಯ.

5. ಸ್ಯಾಂಡಲ್‌ವುಡ್‌ನಲ್ಲಿ ಇವರ ಮೊದಲ ಸಿನಿಮಾ ಜಂಬದ ಹುಡುಗಿ. ಬಳಿಕ ಮೊಗ್ಗಿನ ಮನಸ್ಸಿನಲ್ಲಿ ನಾಯಕ ನಟನಾದರು. ಈ ಸಿನಿಮಾ ಇವರಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿ ತಂದುಕೊಟ್ಟಿತ್ತು. ಆಗಲೂ ಇವರ ಜತೆ ನಾಯಕಿಯಾಗಿ ರಾಧಿಕಾ ಪಂಡಿತ್‌ ಇದ್ದರು. ಯಶ್‌ಗೆ ಟಾಕ್ಸಿಕ್‌ 19ನೇ ಸಿನಿಮಾ. ಕೆಜಿಎಫ್‌ಗಿಂತ ಮೊದಲು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವುಗಳಲ್ಲಿ ಕಿರಾತಕ, ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ ಭರ್ಜರಿ ಯಶಸ್ಸು ಗಳಿಸಿದ ಸಿನಿಮಾಗಳು. ಕೆಜಿಎಫ್‌ ಚಿತ್ರಕ್ಕಾಗಿ ಹಲವು ವರ್ಷ ಡೆಡಿಕೇಷನ್‌ನಿಂದ ಕೆಲಸ ಮಾಡಿದರು. ಪ್ರಯತ್ನಕ್ಕೆ ತಕ್ಕ ಫಲ ಎಂಬಂತೆ ಈ ಸಿನಿಮಾ ಭರ್ಜರಿ ಯಶಸ್ಸು ಕಂಡು ಇವರನ್ನು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಪರಿವರ್ತಿಸಿತ್ತು. ಅದಾದ ಬಳಿಕ ನಡೆದದ್ದು ಇತಿಹಾಸ.

6. ಸೀರಿಯಲ್‌, ಸಿನಿ ಪ್ರಯಾಣದಲ್ಲಿ ಜತೆಗಿದ್ದ ರಾಧಿಕಾ ಪಂಡಿತ್‌ರನ್ನು ಇವರು ವಿವಾಹವಾದರು. ಇವರು ಗೋವಾದಲ್ಲಿ 2016ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಡಿಸೆಂಬರ್‌ 6, 2016ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ವಿವಾಹದ ಬಳಿಕ ರಾಧಿಕಾ ಪಂಡಿತ್‌ ನಟನೆಯಿಂದ ದೂರ ಉಳಿದರು.

7. ಯಶ್‌ ಅವರು ಹಲವು ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕವೂ ಜನರಿಗೆ ಹತ್ತಿರವಾಗಿದ್ದಾರೆ. ಯಶೋಮಾರ್ಗ ಮೂಲಕ ಇವರು ಹಲವು ಸೋಷಿಯಲ್‌ ವರ್ಕ್‌ ಮಾಡಿದ್ದಾರೆ.

8. ಯಶ್‌ ಅವರು ಸ್ಯಾಂಡಲ್‌ವುಡ್‌ನ ದುಬಾರಿ ನಟರೂ ಹೌದು. ಕೆಜಿಎಫ್‌ ಮೂಲಕ ಖ್ಯಾತಿ ಪಡೆದ ರಾಕಿಂಗ್‌ ಸ್ಟಾರ್‌ ಯಶ್‌ ಕೂಡ ದಕ್ಷಿಣ ಭಾರತದ ಶ್ರೀಮಂತ ನಟರ ಸಾಲಿಗೆ ಸೇರಿದ್ದಾರೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಕೆಜಿಎಫ್‌ನಲ್ಲಿ ನಟಿಸಲು ಸುಮಾರು 30 ಕೋಟಿ ರೂಪಾಯಿ ತೆಗೆದುಕೊಂಡಿದ್ದರು. ಕೆಜಿಎಫ್‌ 2ಗೆ ಇವರು 50 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆದಿದ್ದರು. ತೆಲುಗು ಸಿನಿಮಾವೊಂದಕ್ಕೆ ಯಶ್‌ಗೆ 100 ಕೋಟಿ ರೂಪಾಯಿ ಸಂಭಾವನೆ ನೀಡಲು ನಿರ್ದೇಶಕರು ಮುಂದೆ ಬಂದಿದ್ದರು.

9. ಯಶ್‌ ಅವರಿಗೆ ಹತ್ತು ಹಲವು ಪ್ರಶಸ್ತಿಗಳು ದೊರಕಿವೆ. 2009ರಿಂದ 2019ರವರೆಗೆ ಹಲವು ಫಿಲ್ಮ್‌ಫೇರ್‌ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹಲವು ಬಾರಿ ಸೌತ್‌ ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ಪಡೆದಿದ್ದಾರೆ. ಇವರು ಅತ್ಯಧಿಕ "ಅತ್ಯುತ್ತಮ ನಟ" ಪ್ರಶಸ್ತಿ ಪಡೆದಿದ್ದಾರೆ. ಸ್ಟೈಲ್‌ ಐಕಾನ್‌ ಆಫ್‌ ಸೌತ್‌ ಇಂಡಿಯಾ, ಬೆಸ್ಟ್‌ ಸಪೋರ್ಟಿಂಗ್‌ ಆಕ್ಟರ್‌ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಇದಲ್ಲದೆ ಬೆಸ್ಟ್‌ ಮೇಲ್‌ ಪ್ಲೇಬ್ಯಾಕ್‌ ಸಿಂಗರ್‌ ಪ್ರಶಸ್ತಿಯನ್ನೂ ಪಡೆದಿದ್ದಾರೆ.

10. ಯಶ್‌ ಅವರ ಮುಂದಿನ ಸಿನಿಮಾ ಟಾಕ್ಸಿಕ್‌. ಈ ಕುರಿತು 2013ರ ಡಿಸೆಂಬರ್‌ನಲ್ಲಿ ಘೋಷಣೆ ಮಾಡಿದ್ದರು. ಟಾಕ್ಸಿಕ್‌ ಸಿನಿಮಾ ಇಂಗ್ಲಿಷ್‌, ಕನ್ನಡ, ತೆಲುಗು, ಮಲಯಾಳಂ, ಹಿಂದಿ, ತಮಿಳು ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಗೀತು ಮೋಹನ್‌ ದಾಸ್‌ ನಿರ್ದಶನದ ಟಾಕ್ಸಿಕ್‌ ಸಿನಿಮಾದ ಕುರಿತು ಯಶ್‌ ಹುಟ್ಟುಹಬ್ಬದ ಸಂದರ್ಭದಲ್ಲಿ ಏನಾದರೂ ಅಪ್‌ಡೇಟ್‌ ದೊರಕಬಹುದೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಇಂದು ಯಶ್‌ ಹುಟ್ಟುಹಬ್ಬದ ಶುಭಾಶಯಗಳ ಪ್ರವಾಹವೇ ಕಾಣಿಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ