logo
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಅಯ್ಯೋ ಅತೃಪ್ತ ಆತ್ಮವೇ.. ಚಂದ್ರಯಾನದೊಂದಿಗೆ ಮಲದಗುಂಡಿ ತಳಕು ಹಾಕಿದ ನಟ ಚೇತನ್‌ ಅಹಿಂಸಾಗೆ ನೆಟ್ಟಿಗರಿಂದ ಕ್ಲಾಸ್‌

Chetan Ahimsa: ಅಯ್ಯೋ ಅತೃಪ್ತ ಆತ್ಮವೇ.. ಚಂದ್ರಯಾನದೊಂದಿಗೆ ಮಲದಗುಂಡಿ ತಳಕು ಹಾಕಿದ ನಟ ಚೇತನ್‌ ಅಹಿಂಸಾಗೆ ನೆಟ್ಟಿಗರಿಂದ ಕ್ಲಾಸ್‌

Aug 24, 2023 09:58 AM IST

Chetan Ahimsa: ಅಯ್ಯೋ ಅತೃಪ್ತ ಆತ್ಮವೇ.. ಚಂದ್ರಯಾನದೊಂದಿಗೆ ಮಲದಗುಂಡಿ ತಳಕು ಹಾಕಿದ ನಟ ಚೇತನ್‌ ಅಹಿಂಸಾಗೆ ನೆಟ್ಟಿಗರಿಂದ ಕ್ಲಾಸ್‌

    • ಚಂದ್ರನ ಅಂಗಳದಲ್ಲಿ ಭಾರತ ತನ್ನ ಲ್ಯಾಂಡರ್‌ ಇಳಿಸುವ ಮೂಲಕ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಗೊಳಿಸಿದೆ. ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಇದೇ ಚಂದ್ರಯಾನದ ಬಗ್ಗೆ ಪರ ವಿರೋಧ ಚರ್ಚೆಗಳೂ ನಡೆಯುತ್ತಿವೆ. ನಟ ಚೇತನ್‌ ಅಹಿಂಸಾ ಹಂಚಿಕೊಂಡ ಪೋಸ್ಟ್‌ಗೆ ನೆಟ್ಟಿಗರು ಮುಗಿಬಿದ್ದು ಟೀಕೆ ಮಾಡುತ್ತಿದ್ದಾರೆ. 
Chetan Ahimsa: ಅಯ್ಯೋ ಅತೃಪ್ತ ಆತ್ಮವೇ.. ಚಂದ್ರಯಾನದೊಂದಿಗೆ ಮಲದಗುಂಡಿ ತಳಕು ಹಾಕಿದ ನಟ ಚೇತನ್‌ ಅಹಿಂಸಾಗೆ ನೆಟ್ಟಿಗರಿಂದ ಕ್ಲಾಸ್‌
Chetan Ahimsa: ಅಯ್ಯೋ ಅತೃಪ್ತ ಆತ್ಮವೇ.. ಚಂದ್ರಯಾನದೊಂದಿಗೆ ಮಲದಗುಂಡಿ ತಳಕು ಹಾಕಿದ ನಟ ಚೇತನ್‌ ಅಹಿಂಸಾಗೆ ನೆಟ್ಟಿಗರಿಂದ ಕ್ಲಾಸ್‌

Chetan Ahimsa: ಭಾರತದ ರಾಕೆಟ್‌ ಚಂದ್ರನ ಅಂಗಳ ತಲುಪಿದೆ. ಇಡೀ ದೇಶವೇ ಗರ್ವದಿಂದ ಹೆಮ್ಮೆ ಪಡುತ್ತಿದೆ. ಭಾರತದ ಚಂದ್ರಯಾನ 3 ಮಿಷನ್‌ ಯಶಸ್ವಿಯಾಗಿದ್ದು, ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದಿದೆ. ಭಾರತದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ಇಡೀ ಭಾರತ ಈ ಸಾಧನೆಯ ಶಕ್ತಿ ಇಸ್ರೋಗೆ ಅಭಿನಂದನೆ ಸಲ್ಲಿಸುತ್ತಿದೆ. ಚಂದ್ರಯಾನದ ಬಗ್ಗೆ ಟೀಕೆ ಮಾಡುತ್ತಲೇ ಬಂದಿದ್ದ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಸಹ ಟ್ವಿಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ನಟ ಚೇತನ್‌ ಅಹಿಂಸಾ, ದೇಶದ ವಾಸ್ತವವನ್ನು ತೆರೆದಿಡುವ ಪೋಸ್ಟ್‌ ಹಂಚಿಕೊಂಡು ಚಂದ್ರಯಾನವನ್ನು ಲೇವಡಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗೌತಮ್‌ಗೆ ಜೀವನ್‌ ಕಥೆ ಗೊತ್ತಿತ್ತಂತೆ, ಮಲ್ಲಿ ವಿಷಯದಲ್ಲಿ ಒಳ್ಳೆಯವನಾದ ಜೈದೇವ್‌, ಸ್ಟಾರ್ಟಪ್‌ ಆರಂಭಿಸ್ತಾನಂತೆ ಪಾರ್ಥ, ಅಮೃತಧಾರೆ ಕಥೆ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ಚಂದ್ರನ ದಕ್ಷಿಣ ಧ್ರುವಕ್ಕೆ ಇದೇ ಮೊದಲ ಬಾರಿಗೆ ಭಾರತವು ಗಗನನೌಕೆಯನ್ನು ಇಳಿಸಿರುವುದು ವಿಶೇಷ. ಇಂತಹ ಸಾಧನೆ ಮಾಡಿರುವ ಮೊದಲ ದೇಶವೆಂಬ ಹೆಮ್ಮೆಗೂ ಭಾರತ ಪಾತ್ರವಾಗಿದೆ. ಇತ್ತೀಚೆಗೆ ಭಾರತದ ನಂತರ ರಾಕೆಟ್‌ ಲಾಂಚ್‌ ಮಾಡಿ, ಭಾರತಕ್ಕಿಂತಲೂ ಮೊದಲೇ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಪ್ರಯತ್ನವನ್ನು ರಷ್ಯಾ ಮಾಡಿತ್ತು. ಆದರೆ, ರಷ್ಯಾದ ಲೂನಾ 25 ಗಗನನೌಕೆ ಯಶಸ್ವಿಯಾಗಿರಲಿಲ್ಲ. ಆದರೆ, ಭಾರತ ಈ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ. ಭಾರತದ ಈ ಮಹಾತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳುತ್ತಿದ್ದಂತೆ, ದೇಶದೆಲ್ಲೆಡೆ ವಂದೇ ಮಾತರಂ ಘೋಷಣೆ ಮೊಳಗುತ್ತಿವೆ.

ಚಂದ್ರಯಾನದ ಬಗ್ಗೆ ಚೇತನ್‌ ಲೇವಡಿ

ಸೋಷಿಯಲ್‌ ಮೀಡಿಯಾದಲ್ಲಿ ಸದಾ ತಮ್ಮ ಹೇಳಿಕೆಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ ಚೇತನ್‌ ಅಹಿಂಸಾ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಒಡಿಶಾ ರೈಲು ದುರಂತ, ಸೌಜನ್ಯ ಪ್ರಕರಣ.. ಹೀಗೆ ಏನೇ ಆದರೂ ಅದಕ್ಕೊಂದು ಟೀಕೆ ವ್ಯಕ್ತಪಡಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿರುತ್ತಾರೆ. ಇದೀಗ ಇಡೀ ದೇಶ ಚಂದ್ರಯಾನವನ್ನು ಅದರ ಯಶಸ್ಸನ್ನು ಆಚರಿಸುತ್ತಿದ್ದರೆ, ಚೇತನ್‌ ಅಹಿಂಸಾ ಮಾತ್ರ "ವಾಸ್ತವ" ಎಂದು ಬರೆದುಕೊಂಡು ಎರಡು ಫೋಟೋಗಳನ್ನು ಸೋಷಿಯಲ್‌ ಮೀಡಿಯಾ ಪುಟಕ್ಕಿಳಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಚಂದ್ರಯಾನ 3 ಮಿಷನ್‌ನ ರಾಕೆಟ್‌ ಫೋಟೋ ಮತ್ತು ಮಲ ಹೊರುವ ಪದ್ಧತಿಯ ಮತ್ತೊಂದು ಮುಖವನ್ನು ಕೊಲಾಜ್‌ ಮಾಡಿ, "ವಾಸ್ತವ" ಎಂಬ ಕ್ಯಾಪ್ಶನ್‌ ನೀಡಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಇನ್ನೂ ಮುಂದುವರಿಯುತ್ತಿರುವ ಮಲ ಹೊರುವ ಪದ್ಧತಿಯನ್ನು ಮೊದಲು ತೊಲಗಿಸಿ, ಅದರಿಂದ ಒಂದು ಸಮುದಾಯಕ್ಕೆ ಮುಕ್ತಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಚೇತನ್‌ ಲೇವಡಿ ಮಾಡಿದ್ದಾರೆ.

ನೆಟ್ಟಿಗರಿಂದ ಮೆಚ್ಚುಗೆ ಜತೆಗೆ ಟೀಕೆ

ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಂತೆ, ಕೆಲವರು ಚೇತನ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಕೆಲವರು ಇದೇ ನಮ್ಮ ದೇಶದ ಕರಾಳ ವಾಸ್ತವ ಎಂದೂ ಕಾಮೆಂಟ್‌ ಹಂಚಿಕೊಂಡಿದ್ದಾರೆ. ಚೇತನ್‌ ಹಂಚಿಕೊಂಡ ಫೇಸ್‌ಬುಕ್‌ ಪೋಸ್ಟ್‌ ಬಗ್ಗೆ ನೆಟ್ಟಿಗರ ಕೆಲವು ಕಾಮೆಂಟ್ಸ್‌ ಹೀಗಿವೆ.

  • ಅಯ್ಯೋ ಅತೃಪ್ತಾ ಆತ್ಮವೇ ಒಂದು ಕೆಲಸ ಮಾಡು ನೀನು ಸಿನಿಮಾ ರಂಗ ಬಿಡು ಆ ಸಿನಿಮಾದಲ್ಲಿ ಈ ಹುಡುಗನ ಹೀರೋ ಮಾಡು ನೀನು ಮೋರಿಯಲ್ಲಿ ಇಳಿದು ಈ ಕೆಲಸ ಮಾಡು ಅಲ್ಲಿಗೆ ಸಮಾನತೆ ಬಂತಲ್ಲೋ, ಅಯ್ಯೋ ಅತೃಪ್ತಾತ್ಮವೇ ನಿಂಗ್ ಯಾವಾಗ ಆತ್ಮತೃಪ್ತಿದ್ಯೋ
  • ನಿನ್ನಂತಹ ಸಾಮಾಜಿಕ ಜಾಲತಾಣದ ಶೂರರು ಇರುವುದರಿಂದಲೆ ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು..ಚಂದ್ರಯಾನ ದೇಶದ ಹೆಮ್ಮೆ ಆನೇಕ ಸಂದಿಗ್ಧ ಪರಿಸ್ಥಿತಿಯನ್ನು ಹೊಂದಿದರು ಇಡೀ ವಿಶ್ವವೇ ನಮ್ಮ ರಾಷ್ಟ್ರವನ್ನ ಆಶ್ಚರ್ಯ ದಿಂದ ನೋಡುತ್ತಿದೆ ..ಒಂದಕ್ಕೊಂದು ಸಂಬಂಧವಿಲ್ಲದ ಹೋಲಿಕೆ ನಿನ್ನ ಮನಸ್ಥಿತಿಗೆ ಹಿಡಿದ ಕೈಗನ್ನಡಿ
  • ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನಮನಗಳು..
  • ನಿಜ,
  • ಚಂದ್ರಯಾನ ಸಕ್ಸಸ್ ಆಗಿದ್ದು ನೋಡಿ ಕೆಲವರಿಗೆ ಯಾವ ಲೆವೆಲ್ಗೆ ಉರ್ದಿದೆ ಅಂದರೆ, ತಣ್ಣಗೆ ಮಾಡ್ಕೊಳೋಕೆ ಎಲ್ಲೆಲ್ಲಿ ಹೋಗಿ ಕೂರ್ತಿದಾರೆ
  • ನಮ್ ದೇಶದ್ ನಾವ್ ಸರಿ ಮಾಡ್ಕೊತಿವಿ ಮೊದ್ಲು ನಿನು ಭಾರತ ಬಿಟ್ಟು ತೊಲಗ
  • ಅಲ್ಲ ಸ್ವಾಮಿ, ನೂರಾರು ಕೋಟಿ ಖರ್ಚು ಮಾಡಿ ಫಿಲ್ಮ್ ತೆಗೀತಾರೆ, ರಾ ರಾ ಅಂತ ಕುಣಿತಾರೆ ಅದೇ ದುಡ್ಡಲ್ಲೂ ಬಡವರ ಉದ್ದಾರ ಮಾಡಬಹುದು. ಚಂದ್ರಯಾನ 3 #Chandrayan3Mission ಭಾರತದ ಕೀರ್ತಿ ಪತಾಕೆಯನ್ನು ವಿಶ್ವ ಮಟ್ಟದಲ್ಲಿ ಅತ್ಯುತ್ತಮ ಸ್ಥಾನಕ್ಕೆ ಏರಿಸಿದೆ. ಇದು ಪ್ರತೀ ಭಾರತೀಯನ ಹೆಮ್ಮೆಯ ವಿಷಯ. ಸಾಧ್ಯವಾದರೆ ಲೆಕ್ಕವಿಲ್ಲದೆ ಸಂಭಾವನೆ ಪಡೆಯುವ ಚಲನಚಿತ್ರ ನಟರಿಂದ ಬಡವರ ಉದ್ದಾರ ಮಾಡ್ಲಿ
  • ಈ ಎಡಬಿಡಂಗಿಗಳೆಲ್ಲರೂ ಒಂದೇನ ಅಂತ ದೇಶದ ದೇಶದ ಪ್ರತಿಯೊಬ್ಬ ದೇಶಭಕ್ತ ಚಂದ್ರಯಾನ 3 ಯಶಸ್ಸನ್ನ ಹಬ್ಬದರೀತಿ ಆಚರಿಸ್ತಿದ್ರೆ ನಿನ್ನಂತಹ ಕ್ರಾಸ್ಬೀಡ್ ಬೇವರ್ಸಿ ಗಳು ಪ್ರತಿಯೊಂದರಲ್ಲೂ ಕಲ್ಲುಹುಡ್ಕ್ತೀರಲ್ಲ ನಾಚಿಕೆ ಹಾಗೋದಿಲ್ವ ದೇಶ ಪ್ರತಿಯೊಂದಲ್ಲು ಪ್ರಗತಿ ಸಾಧಿಸಬೇಕು ಅದು ವಿಜ್ಞಾನ ಕ್ಷೇತ್ರದಲ್ಲಿ ಆಗಿರಲಿ ಬಡತನದಲ್ಲಿ ಆಗಿರಲಿ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಆಗಿರಲಿ ಸಂಶೋಧನೆ ಅಗತ್ಯ ದೇಶದ ಯಶಸ್ಸನ್ನ ನಿನ್ನ ಯಶಸ್ಸು ಅಂದ್ಕೊ ಮೊಸರಲ್ಲಿ ಕಲ್ಲು ಹುಡ್ಕೋ ಬೇವರ್ಸಿ ಆಗಬೇಡ
  • ಚಂದ್ರಯಾನ-೩ ಯಶಸ್ವಿಯಾಗಲು ಶ್ರಮಿಸಿದಂತಹ ಎಲ್ಲರಿಗೂ ಅಭಿನಂದನೆಗಳು ಈ ಯಶಸ್ವಿಯಿಂದ ಭಾರತದ ವೈಜ್ಞಾನಿಕ ಘನತೆ ಹೆಚ್ಚಾಗಿದೆ ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆಗ ಮಾತ್ರ ದೇಶದ ಬದಲಾವಣೆ ಸಾಧ್ಯವಾಗುತ್ತದೆ ವೈಜ್ಞಾನಿಕ ಚಿಂತನೆಗಳು ಮತ್ತು ವಿಜ್ಞಾನದ ಆಲೋಚನೆ ಮತ್ತು ನಿರಂತರವಾದ ವೈಜ್ಞಾನಿಕ ಪ್ರಯೋಗಗಳಿಂದ ಇದು ಸಾಧ್ಯವಾಗಿದೆ ಇದು ದೇವರಿಂದ ಸಾಧ್ಯವಾಗಿರುವುದಲ್ಲ ಇದು ಮಾನವನ ವೈಜ್ಞಾನಿಕ ಚಿಂತನೆಯಿಂದ ಸಾಧ್ಯವಾಗಿದೆ ಎನ್ನುವುದು ಸತ್ಯ ಇದು ಮಾಯ ಮಂತ್ರ ಮತ್ತು ಮೂಢನಂಬಿಕೆಗಳಿಂದ ಸಾಧ್ಯವಾಗಿರುವುದಲ್ಲ ಇದು ಮಾನವನ ವೈಜ್ಞಾನಿಕ ಪ್ರಯೋಗಗಳಿಂದಲೇ ಸಾಧ್ಯವಾಗಿರುವುದು ಆದ್ದರಿಂದ ಜನರು ವೈಜ್ಞಾನಿಕವಾಗಿ ಯೋಚಿಸಬೇಕು ಇದೇ ರೀತಿಯ ತಂತ್ರಜ್ಞಾನಗಳನ್ನು ಬಳಸಿ ಪ್ರತಿ ವರ್ಷ ನೂರಾರು ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮ್ಯಾನ್ ಹೋಲ್ಗಳ ಸ್ವಚ್ಛತೆಗೂ ಯಂತ್ರಗಳನ್ನು ಕಂಡುಹಿಡಿಯಿರಿ ಈ ವೃತ್ತಿಯಲ್ಲಿ ತೊಡಗಿರುವ ಸಮುದಾಯಗಳಿಗೆ ಘನತೆಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿ ಆಗ ವಿಜ್ಞಾನದ ಘನತೆ ಹೆಚ್ಚಾಗುತ್ತದೆ

ಮನರಂಜನೆ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸಂಬಂಧಿತ ಲೇಖನ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು