logo
ಕನ್ನಡ ಸುದ್ದಿ  /  ಮನರಂಜನೆ  /  Prajwal Devaraj: ಜಾತರೆ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಲು ಹೊರಟ ಪ್ರಜ್ವಲ್‌ ದೇವರಾಜ್

Prajwal Devaraj: ಜಾತರೆ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಲು ಹೊರಟ ಪ್ರಜ್ವಲ್‌ ದೇವರಾಜ್

HT Kannada Desk HT Kannada

Jun 21, 2023 10:35 PM IST

google News

ಜಾತರೆ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಲು ಹೊರಟ ಪ್ರಜ್ವಲ್‌ ದೇವರಾಜ್

    • ನಟ ಪ್ರಜ್ವಲ್‌ ದೇವರಾಜ್‌ ಇದೀಗ ಪ್ಯಾನ್‌ ಇಂಡಿಯಾ ಪರಿಕಲ್ಪನೆಯ ಸಿನಿಮಾಕ್ಕೆ ಹೀರೋ ಆಗಿದ್ದಾರೆ. ಈ ಚಿತ್ರಕ್ಕೆ ಕನ್ನಡದಲ್ಲಿ ಜಾತರೆ ಎಂದು ಹೆಸರಿಡಲಾಗಿದೆ. ಮುಂದಿನ ಆಗಸ್ಟ್‌ನಲ್ಲಿ ಸಿನಿಮಾ ಶೂಟಿಂಗ್‌ ಆರಂಭವಾಗಲಿದ್ದು, ಇದೀಗ ಶೀರ್ಷಿಕೆ ಬಹಿರಂಗವಾಗಿದೆ. 
ಜಾತರೆ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಲು ಹೊರಟ ಪ್ರಜ್ವಲ್‌ ದೇವರಾಜ್
ಜಾತರೆ ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಹೀರೋ ಆಗಲು ಹೊರಟ ಪ್ರಜ್ವಲ್‌ ದೇವರಾಜ್

Prajwal Devaraj: ಸ್ಯಾಂಡಲ್‌ವುಡ್‌ ನಟ ಪ್ರಜ್ವಲ್‌ ದೇವರಾಜ್‌ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಇವರ ವೀರಂ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಮಾಫಿಯಾ ಸಿನಿಮಾ ಸಹ ಶೂಟಿಂಗ್‌ ಹಂತದಲ್ಲಿದ್ದು, ಗಣ ಚಿತ್ರದ ಶೂಟಿಂಗ್‌ನಲ್ಲಿಯೂ ಪ್ರಜ್ವಲ್‌ ದೇವರಾಜ್‌ ಭಾಗವಹಿಸಿದ್ದಾರೆ.

ಒಂದೇ ರೀತಿಯ ಸಿನಿಮಾಗಳಿಗೆ ಫಿಕ್ಸ್‌ ಆಗದ ಪ್ರಜ್ವಲ್‌, ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುತ್ತಲೇ ಬಂದಿದ್ದಾರೆ. ಇದೀಗ ಸಿನಿಮಾ ಕೆರಿಯರ್‌ನಲ್ಲಿ ಮಾಡದ ಸಾಹಸಕ್ಕೆ ಅವರು ಕೈ ಹಾಕಿದ್ದಾರೆ. ಅಂದರೆ, ಪ್ಯಾನ್‌ ಇಂಡಿಯಾ ಸಿನಿಮಾ ಮೂಲಕ ಅವರ ಆಗಮನವಾಗುತ್ತಿದೆ. ಇತ್ತೀಚೆಗಷ್ಟೇ ಆ ಸಿನಿಮಾದ ಟೈಟಲ್‌ ಲಾಂಚ್‌ ಕಾರ್ಯಕ್ರಮ ನೆರವೇರಿದೆ.

ಜಾತರೆ ಹೆಸರಿನ ಸಿನಿಮಾ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಇರುವ ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ತೆಲುಗಿನಲ್ಲಿ ಹಲವು ಯಶಸ್ವಿ ಸಿನಿಮಾ ನಿರ್ದೇಶಿಸುರುವ ಉದಯ ನಂದನವನಂ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೈದರಾಬಾದ್‌ ಮೂಲದ ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್‌ಟೈನ್‌ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಸಹಕಾರ ನಗರದ ನಿರ್ಮಾಪಕರ ಕಛೇರಿಯಲ್ಲಿ ನಡೆಯಿತು. ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಿ, 2024ರ ಸಂಕ್ರಾಂತಿ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ಭೀಮ್ಸ್ ಸೆಸಿರೋಲಿಯೋ ಅವರ ಸಂಗೀತ, ಸಾಯಿಶ್ರೀರಾಂ ಅವರ ಛಾಯಾಗ್ರಹಣ, ಬಿ. ವಾಸುದೇವರೆಡ್ಡಿ ಅವರ ಕಥೆ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಅಲ್ಲದೆ ಚಿತ್ರದ ನಾಯಕಿ, ಉಳಿದ ಪಾತ್ರವರ್ಗದ ಹುಡುಕಾಟವೂ ನಡೆದಿದೆ.

ಮನರಂಜನೆ ವಿಭಾಗದ ಇನ್ನಷ್ಟು ಸುದ್ದಿ ಓದಿ

Kanguva: 300 ಕೋಟಿ ಬಜೆಟ್‌ನ ಸಿನಿಮಾದಲ್ಲಿ ಕೆಜಿಎಫ್‌ ಆಂಡ್ರಿವ್ಸ್‌; ಕಂಗುವ ಚಿತ್ರದಲ್ಲಿ ಅಬ್ಬರಿಸಲಿದ್ದಾರೆ ಅವಿನಾಶ್

Suriya New Movie Kanguva: ಸೂರ್ಯ (Suriya) ಅಭಿನಯದ ‘ಸೂರ್ಯ 42’ ಚಿತ್ರ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಘೋಷಣೆಯಾಗಿತ್ತು. ಘೋಷಣೆ ಬಳಿಕ ಸಾಕಷ್ಟು ಕುತೂಹಲಕ್ಕೆ ಕಾರಣವಾದ ಈ ಸಿನಿಮಾ 3ಡಿಯಲ್ಲಿ ಸಿದ್ಧವಾಗಲಿದೆ ಎಂದಾಗಲೇ ಅಭಿಮಾನಿ ವಲಯದಲ್ಲಿ ಕೌತುಕ ಸೃಷ್ಟಿಸಿತ್ತು. 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿಚಾರವೂ ಸದ್ದು ಮಾಡಿತ್ತು. ಆದರೆ, ಈ ಸಿನಿಮಾ ಶೀರ್ಷಿಕೆ ಏನು ಎಂಬ ವಿಚಾರ ಮಾತ್ರ ಹೊರಬಿದ್ದಿರಲಿಲ್ಲ. ಇತ್ತೀಚೆಗಷ್ಟೇ ಆ ಕುತೂಹಲ ತಣಿದಿತ್ತು. ಚಿತ್ರಕ್ಕೆ ‘ಕಂಗುವ’ (Kanguva) ಎಂದು ಶೀರ್ಷಿಕೆ ಅಂತಿಮವಾಗಿತ್ತು. ಪೂರ್ಣ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ