logo
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಸಪ್ತ ಸಾಗರದಾಚೆ ಎಲ್ಲೋ; ಮನೆ ಮಂದಿಯೊಂದಿಗೆ ರಕ್ಷಿತ್‌ ಶೆಟ್ಟಿ ರುಕ್ಮಿಣಿ ವಸಂತ್‌ ಪ್ರೇಮಕಾವ್ಯ ನೋಡಿ

ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಸಪ್ತ ಸಾಗರದಾಚೆ ಎಲ್ಲೋ; ಮನೆ ಮಂದಿಯೊಂದಿಗೆ ರಕ್ಷಿತ್‌ ಶೆಟ್ಟಿ ರುಕ್ಮಿಣಿ ವಸಂತ್‌ ಪ್ರೇಮಕಾವ್ಯ ನೋಡಿ

HT Kannada Desk HT Kannada

Sep 29, 2023 09:15 AM IST

google News

ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗ್ತಿದೆ 'ಸಪ್ತ ಸಾಗರದಾಚೆ ಎಲ್ಲೋ'

  • ಸೈಡ್‌ ಬಿ ರಿಲೀಸ್‌ ಆದ ನಂತರವಷ್ಟೇ ಎರಡೂ ಸಿನಿಮಾಗಳು ಒಟ್ಟಿಗೆ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಬಹುದು ಎನ್ನಲಾಗಿತ್ತು. ಆದರೆ ಇದೀಗ ನಿನ್ನೆ ರಾತ್ರಿಯಿಂದಲೇ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ.

ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗ್ತಿದೆ  'ಸಪ್ತ ಸಾಗರದಾಚೆ ಎಲ್ಲೋ'
ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗ್ತಿದೆ 'ಸಪ್ತ ಸಾಗರದಾಚೆ ಎಲ್ಲೋ' (PC: Paramvah Studios)

ರಕ್ಷಿತ್‌ ಶೆಟ್ಟಿ ನಿರ್ಮಿಸಿ ನಾಯಕನಾಗಿ ನಟಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಮೋಡಿ ಮಾಡಿದೆ. ತೆಲುಗು ಮಂದಿ ಕೂಡಾ ಮನು ಪ್ರಿಯಾ ಲವ್‌ ಸ್ಟೋರಿಗೆ ಫಿದಾ ಆಗಿದ್ದಾರೆ. ಸಿನಿಮಾ, ಸಪ್ತ ಸಾಗರಲು ದಾಟಿ ಹೆಸರಿನಲ್ಲಿ ತೆಲುಗು ಭಾಷೆಗೆ ಡಬ್‌ ಆಗಿದೆ. ಸೈಡ್‌ ಎ ನೋಡಿದ ಜನರು ಎರಡನೇ ಭಾಗಕ್ಕಾಗಿ ಕಾಯುತ್ತಿದ್ಧಾರೆ. ಈ ನಡುವೆ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ.

ತೆಲುಗು ಮಂದಿ ಕೂಡಾ ಮೆಚ್ಚಿದ ಸಿನಿಮಾ

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ಪರಮ್ವಃ ಸ್ಟುಡಿಯೋಸ್‌ ಬ್ಯಾನರ್‌ ಅಡಿ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಹೇಮಂತ್‌ ರಾವ್‌ ಹಾಗೂ ಗುಂಡು ಶೆಟ್ಟಿ ಕಥೆ ಬರೆದಿದ್ದು ಹೇಮಂತ್‌ ರಾವ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಚರಣ್‌ ರಾಜ್‌ ಸಂಗೀತ ನೀಡಿದ್ದು ಕೆವಿಎನ್‌ ಪ್ರೊಡಕ್ಷನ್ಸ್‌ ಹಂಚಿಕೆ ಮಾಡಿದೆ. ಸೆಪ್ಟೆಂಬರ್‌ 1 ರಂದು ತೆರೆ ಕಂಡ ಸಿನಿಮಾ ಇದುವರೆಗೂ 35 ಕೋಟಿ ರೂಪಾಯಿ ಲಾಭ ಮಾಡಿದೆ. ಅಕ್ಟೋಬರ್‌ 27ಕ್ಕೆ ಸೈಡ್‌ ಬಿ ರಿಲೀಸ್‌ ಆಗುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ರಾಷ್ಟ್ರಪ್ರಶಸ್ತಿ ವಿಜೇತ ಚಾರ್ಲಿ 777 ಸಿನಿಮಾವನ್ನೂ ತೆಲುಗು ಮಂದಿ ಬಹಳ ಇಷ್ಟಪಟ್ಟಿದ್ದರು. ಸಪ್ತ ಸಾಗರಲು ದಾಟಿ ಚಿತ್ರ ಕೂಡಾ ತೆಲುಗು ಸಿನಿಪ್ರೇಕ್ಷಕರಿಗೆ ಇಷ್ಟವಾಗಿದ್ದು ಸೈಡ್‌ ಬಿಗಾಗಿ ಎದುರು ನೋಡುತ್ತಿದ್ಧಾರೆ.

ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಒಟಿಟಿಗೆ ಯಾವಾಗ ರಿಲೀಸ್‌ ಆಗಬಹುದು ಎಂಬ ಕುತೂಹಲ ಸಿನಿಪ್ರಿಯರಿಗೆ ಕಾಡಿತ್ತು ಆದರೆ ಸೈಡ್‌ ಬಿ ರಿಲೀಸ್‌ ಆದ ನಂತರವಷ್ಟೇ ಎರಡೂ ಸಿನಿಮಾಗಳು ಒಟ್ಟಿಗೆ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಬಹುದು ಎನ್ನಲಾಗಿತ್ತು. ಆದರೆ ಇದೀಗ ನಿನ್ನೆ ರಾತ್ರಿಯಿಂದಲೇ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಒಟಿಟಿಯಲ್ಲಿ ಲಭ್ಯವಿದೆ.

ಕರ್ನಾಟಕ ಬಂದ್‌ಗೆ ಗಿಫ್ಟ್‌

ಸೆಪ್ಟೆಂಬರ್‌ 29 ರಂದು ಕಾವೇರಿ ಪ್ರತಿಭಟನೆ ಸಂಬಂಧ ವಾಟಾಳ್‌ ನಾಗರಾಜ್‌ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇಂದು ಸಿನಿರಂಗದ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಶೂಟಿಂಗ್‌ ಬಂದ್‌ ಮಾಡಿ ಚಿತ್ರರಂಗ ಕೂಡಾ ಬಂದ್‌ಗೆ ಬೆಂಬಲ ನೀಡುತ್ತಿದೆ. ಯಾವುದೇ ಸಿನಿಮಾಗಳು ಕೂಡಾ ರಿಲೀಸ್‌ ಆಗುತ್ತಿಲ್ಲ. ಬಂದ್‌ ಕಾರಣ ಮನೆಯಲ್ಲಿ ಉಳಿಯುವವರಿಗೆ ಅಮೆಜಾನ್‌ ಪ್ರೈಂ ಒಳ್ಳೆ ಗಿಫ್ಟ್‌ ನೀಡಿದೆ. ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರು ಮನೆ ಮಂದಿಯೊಂದಿಗೆ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಎಂಜಾಯ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ