logo
ಕನ್ನಡ ಸುದ್ದಿ  /  ಮನರಂಜನೆ  /  ರವಿಕೆ ಪ್ರಸಂಗ ಸಿನಿಮಾ ಫೆ 16ರಂದು ಬಿಡುಗಡೆ; 7 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳಲ್ಲಿ ಚಿತ್ರದ ಪ್ರಚಾರ

ರವಿಕೆ ಪ್ರಸಂಗ ಸಿನಿಮಾ ಫೆ 16ರಂದು ಬಿಡುಗಡೆ; 7 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳಲ್ಲಿ ಚಿತ್ರದ ಪ್ರಚಾರ

Praveen Chandra B HT Kannada

Feb 06, 2024 11:31 AM IST

google News

ರವಿಕೆ ಪ್ರಸಂಗ ಸಿನಿಮಾ ಫೆ 16ರಂದು ಬಿಡುಗಡೆ

    • ರವಿಕೆ ಪ್ರಸಂಗ ಎಂಬ ಕನ್ನಡ ಚಲನಚಿತ್ರವು ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇತ್ತೀಚೆಗೆ ರವಿಕೆ ಪ್ರಸಂಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯದ್ಯಾಂತ 7ಸಾವಿರಕ್ಕೂ ಹೆಚ್ಚಿನ ಆಟೋಗಳಲ್ಲಿ ಚಿತ್ರದ ಪ್ರಚಾರ ನಡೆಸಲಾಗುತ್ತಿದೆ.
ರವಿಕೆ ಪ್ರಸಂಗ ಸಿನಿಮಾ ಫೆ 16ರಂದು ಬಿಡುಗಡೆ
ರವಿಕೆ ಪ್ರಸಂಗ ಸಿನಿಮಾ ಫೆ 16ರಂದು ಬಿಡುಗಡೆ

ಬೆಂಗಳೂರು: ವಿಭಿನ್ನ ಕಥಾಹಂದರ ಹೊಂದಿರುವ "ರವಿಕೆ ಪ್ರಸಂಗ" ಚಿತ್ರ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟ್‌ ಕನಕಪುರ ರಸ್ತೆಯ ಫೋರಮ್ ಮಾಲ್‌ನಲ್ಲಿ ನಡೆದಿದೆ. ಸಾವಿರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಜನರೆಲ್ಲರೂ ರವಿಕೆ ಪ್ರಸಂಗ ಚಿತ್ರದ ಪೋಸ್ಟರ್ ಹಿಡಿದು ಶುಭಕೋರಿದರು. ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು.

ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿಯಾದ ಗೀತಾಭಾರತಿ ಭಟ್, ಪದ್ಮಜಾರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಾಕಾರರಾದ ರಘು ಉಪಸ್ಥಿತರಿದ್ದರು. ಬಹಳ‌ಮುಖ್ಯವಾಗಿ ಗೀತಾಭಾರತಿ ಭಟ್ ಅವರು ಅಲ್ಲಿದ್ದ ನೂರಾರು ಜನರೊಂದಿಗೆ ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು.

ಕರ್ನಾಟಕದ ಬೆಸ್ಟ್ ಟೈಲರ್

ಬಹಳ ವಿಶೇಷವಾಗಿ ಸ್ಟೇಜ್ ಮೇಲೆ "ಕರ್ನಾಟಕದ ಬೆಸ್ಟ್ ಟೈಲರ್" ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌ ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ, ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನಿಮಾ ಟಿಕೆಟ್ ನೀಡಲಾಗುತ್ತದೆ.

ಆಟೋ ರಿಕ್ಷಾಗಳಲ್ಲಿ ಚಿತ್ರದ ಪ್ರಚಾರ

ಬಹಳ ಮುಖ್ಯವಾಗಿ ರಾಜ್ಯದ್ಯಾಂತ 7 ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್ ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ ಗೀತಾಭಾರತಿಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು. ಸಿನಿಮಾ ಕುರಿತು ಹಲವು ಗಣ್ಯರು ಈ ಸಂದರ್ಭದಲ್ಲಿ ಮಾತನಾಡಿದರು. ಜೊತೆಗೆ ಎಲ್ಲರನ್ನೂ ಗೌರವಿಸಲಾಯಿತು.

ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದೆ. ಚಿತ್ರವೂ ವಿಶೇಷ ಕಥಾಹಂದರ ಹೊಂದಿದ್ದು, ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೇ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು "ರವಿಕೆ ಪ್ರಸಂಗ" ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಿದೆ.

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಾಳೆಯಿಂದ ಚಿತ್ರ ತಂಡ ಪ್ರೆಸ್ ಮೀಟ್ ಮಾಡಿ ಭರ್ಜರಿ ಪ್ರಚಾರ ಮಾಡಲಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಚಿತ್ರದ ಮೇಲಿರಲಿ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು ಹಾಗೂ ಇಡೀ ಚಿತ್ರತಂಡ ಕೋರಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ