logo
ಕನ್ನಡ ಸುದ್ದಿ  /  ಮನರಂಜನೆ  /  Rupali Sood: ಸ್ಯಾಂಡಲ್‌ವುಡ್‌ಗೆ ಬಂದ್ಲು ಶಿಮ್ಲಾ ಸುಂದರಿ; ವೆಂಕ್ಯಾ ಚಿತ್ರದಲಿ ನಟಿಸ್ತಾರಂತೆ ರೂಪಾಲಿ ಸೂದ್

Rupali Sood: ಸ್ಯಾಂಡಲ್‌ವುಡ್‌ಗೆ ಬಂದ್ಲು ಶಿಮ್ಲಾ ಸುಂದರಿ; ವೆಂಕ್ಯಾ ಚಿತ್ರದಲಿ ನಟಿಸ್ತಾರಂತೆ ರೂಪಾಲಿ ಸೂದ್

Praveen Chandra B HT Kannada

Apr 01, 2024 06:07 PM IST

google News

ವೆಂಕ್ಯಾ ಸಿನಿಮಾದಲ್ಲಿ ರೂಪಾಲಿ ಸೂದ್‌ ನಟನೆ

    • ಸಾಗರ್‌ ಪುರಾಣಿಕ ಹೊಸ ಸಿನಿಮಾ ವೆಂಕ್ಯಾದಲ್ಲಿ ನಟಿಸಲು ಶಿಮ್ಲಾದಿಂದ ಸುಂದರಿಯೊಬ್ಬಳು ಆಗಮಿಸಿದ್ದಾರೆ. ರೂಪಾಲಿ ಸೂದ್ ಅವರು ವೆಂಕ್ಯಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.
ವೆಂಕ್ಯಾ ಸಿನಿಮಾದಲ್ಲಿ ರೂಪಾಲಿ ಸೂದ್‌ ನಟನೆ
ವೆಂಕ್ಯಾ ಸಿನಿಮಾದಲ್ಲಿ ರೂಪಾಲಿ ಸೂದ್‌ ನಟನೆ

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಅವರ ಹೊಸ ಸಿನಿಮಾ ವೆಂಕ್ಯಾ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಬಾರಿ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ವೆಂಕ್ಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಯುವ ನಟಿಯರೊಬ್ಬರ ಆಗಮನವಾಗಿದೆ. ಶಿಮ್ಲಾ ಸುಂದರಿ ರೂಪಾಲಿ ಸೂದ್ ಸಾಗರ್ ಪುರಾಣಿಕ್ ಚಿತ್ರದಲ್ಲಿ ನಟಿಸ್ತಿದ್ದು, ಈ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.

ಮೂಲತಃ ಶಿಮ್ಲಾದವರಾದ ರೂಪಾಲಿ ಕಾಲೇಜು ದಿನಗಳಲ್ಲಿದ್ದಾಗಲೇ ಮಾಡೆಲಿಂಗ್ ಅಖಾಡಕ್ಕೆ ಇಳಿದಿದ್ದರು. ರೂಪಾಲಿ ಅವರು ಮಾಡೆಲಿಂಗ್ ಜೊತೆ ಜೊತೆಯಲ್ಲಿ ಹಲವು ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಹಾರ್ಡಿ ಸಂಧು ಅವರ ಸೂಪರ್ ಹಿಟ್ ಹಾಡು 'ಹಾರ್ನ್ ಬ್ಲೋ'ನಲ್ಲಿ ರೂಪಾಲಿ ಕೂಡ ಡ್ಯಾನ್ಸ್‌ ಮಾಡಿದ್ದಾರೆ. ಕನ್ನಡದ ವೆಂಕ್ಯಾ ಸಿನಿಮಾಕ್ಕಾಗಿ ಚಿತ್ರತಂಡ ಇದೀಗ ಇವರನ್ನು ಕರುನಾಡಿಗೆ ಕರೆತಂದಿದೆ.

ರೂಪಾಲಿ ಈಗಾಗಲೇ ವೆಂಕ್ಯಾ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇವರಿಗೆ ಹಿಮಾಚಲದ ಪಹಾಡಿ ಹುಡುಗಿಯ ಪಾತ್ರ ನೀಡಲಾಗಿದೆ. ಮಾಧ್ಯಮಗಳ ಜತೆ ಈಗಾಗಲೇ ರೂಪಾಲಿ ಶೂಟಿಂಗ್‌ ಅನುಭವ ಹಂಚಿಕೊಂಡಿದ್ದಾರೆ. "ಈ ಸಿನಿಮಾದ ಹಲವು ಸೀನ್‌ಗಳು ಶೂಟಿಂಗ್‌ನಲ್ಲಿ ಭಾಗಿಯಾಗಿದ್ದೇನೆ. ಇತ್ತೀಚೆಗೆ ಮನಾಲಿಯ ಮುಂದೆ ಕೈಲಾಂಗ್ನಲ್ಲಿ, ಪರ್ವತಗಳ ನಡುವೆ ಸುಂದರವಾದ ಸ್ಥಳದಲ್ಲಿ ಸಿನಿಮಾದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿದ್ದೇವೆ. ನನ್ನ ಸಿನಿಮಾ ವೃತ್ತಿಜೀವನಕ್ಕೆ ಇದು ಉತ್ತಮ ಆರಂಭʼ ಎಂದು ಅವರು ಹೇಳಿದ್ದಾರೆ.

ಡೊಳ್ಳು ಸಿನಿಮಾ ನಿರ್ಮಾಣ ಮಾಡಿದ್ದ ಪವನ್ ಒಡೆಯರ್ ವೆಂಕ್ಯಾನಿಗೂ ಸಾಥ್ ಕೊಟ್ಟಿದ್ದಾರೆ. ಒಡೆಯರ್ ಫಿಲ್ಮ್ಸ್ ನಡಿ ತಯಾರಾಗ್ತಿರುವ ಈ ಚಿತ್ರಕ್ಕೆ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಕೂಡ ಹಣ ಹಾಕಿದ್ದಾರೆ. ಉತ್ತರ ಕರ್ನಾಟಕದ ಕಥೆಯನ್ನು ವೆಂಕ್ಯಾ ಹೊಂದಿದೆ. ಈ ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶ್ರೀನಿಧಿ ಡಿಎಸ್ ಬರೆದಿದ್ದಾರೆ, ಪ್ರಣವ್ ಮುಲೆ ಛಾಯಾಗ್ರಹಣವಿದೆ. ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.

ಮೆಜೆಸ್ಟಿಕ್-2 ಸಿನಿಮಾಕ್ಕೆ ಚಾಲನೆ, ಮರಿದಾಸನ ತಾಯಿಯಾಗಿ ಹಿರಿಯನಟಿ ಶೃತಿ

ಬೆಂಗಳೂರು: ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್. ಈ ಮೆಜೆಸ್ಟಿಕ್ ಬಗ್ಗೆ ಒಂದು ಇತಿಹಾಸವನ್ನೇ ಬರೆಯಬಹುದು. ಮೆಜೆಸ್ಟಿಕ್‌ನಲ್ಲಿ ಹಗಲಲ್ಲಿ ನಡೆಯುವ ಚಟುವಟಿಕೆಗಳದ್ದು ಒಂದು ಕಥೆ. ಇದೇ ರೀತಿ ರಾತ್ರಿ ನಡೆಯುವ ಚಟುವಟಿಕೆಗಳದ್ದು ಮತ್ತೊಂದು ಕಥೆಯಾಗುತ್ತದೆ.  ಇದೇ ಮೆಜೆಸ್ಟಿಕ್ ಬಗ್ಗೆ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಹಳೆಯ ಮೆಜೆಸ್ಟಿಕ್ ನಲ್ಲಿ ಆ ಕಾಲದ ಕಥೆ ಇತ್ತು. ಆ ಕಾಲದ ರೌಡಿಸಂ ಹೇಗೆ ನಡೆಯುತ್ತಿತ್ತೆಂದು ಹೇಳಲಾಗಿತ್ತು. ಹೊಸ ಮೆಜೆಸ್ಟಿಕ್ ಈಗಿನ ಕಾಲದ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತವೆ, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತದೆ ಎಂದು ನಿರ್ದೇಶಕ ರಾಮು ಹೇಳಲು ಹೊರಟಿದ್ದಾರೆ.

ಆಗಿನ ಮೆಜೆಸ್ಟಿಕ್‌ಗೆ ರಾಮು ಅವರೇ ಕಥೆ ಬರೆದಿದ್ದರು. ಈಗ ಮೆಜೆಸ್ಟಿಕ್ 2 ಸಿನಿಮಾವನ್ನು ಅವರೇ ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬೆಳಿಗ್ಗೆ ಬುಲ್‌ಟೆಂಪಲ್ ರಸ್ತೆಯ ರಾಘವೇಂದ್ರ ಮಠದ ರಾಯರ ಸನ್ನಿಧಿಯಲ್ಲಿ ನಡೆದಿದೆ. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಟಿ ಶೃತಿ ಕ್ಯಾಮೆರಾ ಚಾಲನೆ ನೀಡಿದರು. ಇದೇ ಸಮಯದಲ್ಲಿ ನಿರ್ಮಾಪಕ ಆನಂದಪ್ಪ ಅವರ ಶ್ರೀಮತಿ ನಿರ್ಮಲಾ ಅವರು ಕ್ಲಾಪ್ ಮಾಡಿದರು, ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ