logo
ಕನ್ನಡ ಸುದ್ದಿ  /  ಮನರಂಜನೆ  /  ಧಿಕ್ಕಾರವಿರಲಿ ನಿಮಗೆ.. ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರುತ್ತಿದ್ದಂತೆ, ಪ್ರಧಾನಿ ಮೋದಿಗೆ ಕೌಂಟರ್‌ ಕೊಟ್ಟ ನಟ ಕಿಶೋರ್‌

ಧಿಕ್ಕಾರವಿರಲಿ ನಿಮಗೆ.. ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರುತ್ತಿದ್ದಂತೆ, ಪ್ರಧಾನಿ ಮೋದಿಗೆ ಕೌಂಟರ್‌ ಕೊಟ್ಟ ನಟ ಕಿಶೋರ್‌

Aug 07, 2024 11:35 AM IST

google News

ಧಿಕ್ಕಾರವಿರಲಿ ನಿಮಗೆ.. ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರುತ್ತಿದ್ದಂತೆ, ಪ್ರಧಾನಿ ಮೋದಿಗೆ ಕೌಂಟರ್‌ ಕೊಟ್ಟ ನಟ ಕಿಶೋರ್‌

    • ಒಲಿಂಪಿಕ್ಸ್​ ಇತಿಹಾಸದಲ್ಲೇ ಫೈನಲ್‌ ಪ್ರವೇಶಿಸಿದ ಮೊದಲ ಭಾರತದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದಾರೆ. ವಿನೀಶ್‌ ಈ ಸಾಧನೆ ಮಾಡುತ್ತಿದ್ದಂತೆ ಬಹುಭಾಷಾ ನಟ ಕಿಶೋರ್‌, ಮೋದಿ ವಿರುದ್ಧ ಗರಂ ಆಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಗೆಲುವನ್ನು ಸಂಭ್ರಮಿಸುವ ನೈತಿಕ ಹಕ್ಕು ನಮಗಿಲ್ಲ ಎಂದಿದ್ದಾರೆ.
ಧಿಕ್ಕಾರವಿರಲಿ ನಿಮಗೆ.. ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರುತ್ತಿದ್ದಂತೆ, ಪ್ರಧಾನಿ ಮೋದಿಗೆ ಕೌಂಟರ್‌ ಕೊಟ್ಟ ನಟ ಕಿಶೋರ್‌
ಧಿಕ್ಕಾರವಿರಲಿ ನಿಮಗೆ.. ಕುಸ್ತಿಯಲ್ಲಿ ವಿನೇಶ್‌ ಫೋಗಟ್‌ ಫೈನಲ್‌ಗೇರುತ್ತಿದ್ದಂತೆ, ಪ್ರಧಾನಿ ಮೋದಿಗೆ ಕೌಂಟರ್‌ ಕೊಟ್ಟ ನಟ ಕಿಶೋರ್‌

Paris Olympics 2024: ನೂರಾರು ಅವಮಾನಗಳನ್ನು ದಾಟಿ, ಕೊನೆಗೂ ಪದಕದ ಆಸೆಯನ್ನು ಜೀವಂತವಾಗಿಸಿ, ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ ಕುಸ್ತಿ ಪಟು ವಿನೇಶ್ ಫೋಗಟ್.‌ ಈ ವರೆಗೂ ಯಾವೊಬ್ಬ ಭಾರತೀಯ ಮಹಿಳಾ ಕುಸ್ತಿಪಟು ಒಲಿಂಪಿಕ್ಸ್‌ ಇತಿಹಾಸದಲ್ಲಿ ಕುಸ್ತಿಯಲ್ಲಿ ಫೈನಲ್‌ ತಲುಪಿದ ಉದಾಹರಣೆ ಇಲ್ಲ. ಇದೀಗ ಆ ಸಾಧನೆ ಮಾಡಿದ್ದಾರೆ ವಿನೀಶ್‌ ಫೋಗಟ್.‌ ವಿನೇಶ್ ಅವರ ಈ ಸಾಧನೆಗೆ ಇಡೀ ಭಾರತವೇ ಸಂಭ್ರಮಿಸುತ್ತಿದೆ. ಇದೀಗ ಇದೇ ವಿನೇಶ್ ಒಲಿಪಿಂಕ್ಸ್‌ನಲ್ಲಿ ಪದಕ ಗೆಲ್ಲುವುದು ಖಚಿತವಾಗುತ್ತಿದ್ದಂತೆ, ನಟ ಕಿಶೋರ್‌ ಹೆಮ್ಮೆ ಪಡುವ ನೈತಿಕ ಹಕ್ಕು ನಮಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

ಆಗಸ್ಟ್​ 6ರ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಕೂಬಾದ ಯುಸ್ನಿಲಿಸ್ ಗುಜ್ಮಾನ್ ಅವರನ್ನು 5- 0 ಅಂತರದಿಂದ ಸೋಲಿಸಿದ ವಿನೇಶ್, ಫೈನಲ್‌ಗೇರಿದರು. ಕ್ವಾರ್ಟರ್​​ ಫೈನಲ್​​​ನಲ್ಲಿ ಹಾಲಿ ಚಾಂಪಿಯನ್​ ಜಪಾನ್​ನ ಯುಯಿ ಸುಸಾಕಿಯನ್ನು ಸೋಲಿಸಿದ್ದರು. ಇದೀಗ ಒಲಿಂಪಿಕ್ಸ್​ ಇತಿಹಾಸದಲ್ಲೇ ಫೈನಲ್‌ ಪ್ರವೇಶಿಸಿದ ಮೊದಲ ಭಾರತದ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ವಿನೇಶ್ ಪಾತ್ರರಾಗಿದ್ದಾರೆ. ಇಂದು (ಆಗಸ್ಟ್​ 7ರ) ರಾತ್ರಿ 11.30ಕ್ಕೆ ಅಮೆರಿಕದ ಆಟಗಾರ್ತಿ ಸಾರಾ ಹಿಲ್ಡೆಬ್ರಾಂಡ್ ಜತೆಗೆ ಫೈನಲ್ ಕದನ ಏರ್ಪಡಲಿದ್ದು, ಚಿನ್ನ ಅಥವಾ ಬೆಳ್ಳಿ ಪದಕ ಖಚಿತವಾಗಿದೆ.

ಅವಮಾನದ ಬಳಿಕ ಸಾಧನೆ..

ಈ ಹಿಂದೆ ವಿನೇಶ್ ಫೋಗಟ್‌, ಕುಸ್ತಿ ಫೆಡರೇಷನನ್‌ನ ಅಧ್ಯಕ್ಷ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಬ್ರಿಜ್‌ ಭೂಷಣ ಸಿಂಗ್‌ ವಿರುದ್ಧ ತೊಡೆ ತಟ್ಟಿದ್ದರು. ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ದೆಹಲಿಯ ಜಂತರ್‌ ಮಂಥರ್‌ನಲ್ಲಿ ವಿನೇಶ್ ಫೋಗಾಟ್‌, ಬಜರಂಗ ಪುನಿಯಾ, ಸಾ‍ಕ್ಷಿ ಮಲಿಕ್ ಸೇರಿ ಹಲವು ಕುಸ್ತಿ ಪಟುಗಳ ಸಮ್ಮುಖದಲ್ಲಿ ಉಗ್ರ ಹೋರಾಟವನ್ನೂ ಹಮ್ಮಿಕೊಳ್ಳಲಾಗಿತ್ತು. ಲೈಂಗಿಕ ಕಿರುಕುಳ ನೀಡಿದ ಆರೋಪಿ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರನ್ನು ಅಧಿಕಾರದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದರು. ಆದರೆ, ಕೇಂದ್ರ ಸರ್ಕಾರ ಮಾತ್ರ ಪ್ರತಿಭಟನೆ ಕಡೆ ತಿರುಗಿಯೋ ನೋಡಿರಲಿಲ್ಲ.

ಸಂಭ್ರಮಿಸುವ ನೈತಿಕ ಹಕ್ಕು ಇಲ್ಲ..

ಇದೀಗ ಇಷ್ಟೆಲ್ಲ ಅವಮಾನಗಳ ನಡುವೆಯೇ ಒಲಿಂಪಿಕ್ಸ್‌ನಲ್ಲಿ ಚಿನ್ನದ ಕನಸು ಕಾಣುತ್ತಿದ್ದಾರೆ ವಿನೀಶ್‌. ಈ ಹಿನ್ನೆಲೆಯಲ್ಲಿ ನಟ ಕಿಶೋರ್‌ ತಮ್ಮದೇ ಶೈಲಿಯಲ್ಲಿ ಪ್ರಧಾನಿ ಮೋದಿಗೆ ನೇರವಾಗಿ ಟಾಂಗ್‌ ಕೊಟ್ಟಿದ್ದಾರೆ. ನಿಮ್ಮ ಈ ಗೆಲುವನ್ನು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು ಎಂದಿದ್ದಾರೆ.

ಕಿಶೋರ್‌ ಪೋಸ್ಟ್‌ ಹೀಗಿದೆ..

"ಇತಿಹಾಸವನ್ನು ಮರೆತವರಿಂದ ಇತಿಹಾಸ ಸೃಷ್ಟಿ ಸಾಧ್ಯವಿಲ್ಲ. - ಡಾ. ಬಿ.ಆರ್. ಅಂಬೇಡ್ಕರ್. ವಿನೇಶ್ ನಿಮಗೆ ಸಲಾಂ. ಇಲ್ಲಿಯ ಅಮಾನವೀಯ ವ್ಯವಸ್ಥೆ ನಿಮ್ಮನ್ನು ದೆಹಲಿಯ ಬೀದಿಗಳಲ್ಲಿ ಎಳೆದಾಡಿದ್ದರಿಂದ ಹಿಡಿದು ಒಲಿಂಪಿಕ್ ಪದಕದವರೆಗೆ, ಅಷ್ಟು ಕಹಿ ಅನುಭವಗಳ ನಂತರವೂ ನೀವು ಮಾಡಿರುವ ಈ ಸಾಧನೆ ಅಭೂತಪೂರ್ವ. ಆದರೆ ಇಂದು ಸಂಭ್ರಮಿಸುವ ಅಥವಾ ಹೆಮ್ಮೆ ಪಡುವ ನೈತಿಕ ಹಕ್ಕನ್ನು ನಾವು ಭಾರತೀಯರು ಕಳೆದುಕೊಂಡಿದ್ದೇವೆ. ನಾವು ನಿಮ್ಮೊಂದಿಗೆ ನಿಲ್ಲುವ ಅಗತ್ಯವಿದ್ದಾಗ ನಿಮ್ಮನ್ನು ಸೋಲಿಸಿ ನಿಮಗೆ ಲೈಂಗಿಕ ಕಿರುಕುಳ ಕೊಟ್ಟವರ ಜೊತೆ ನಿಂತಿದ್ದೆವು. ಧಿಕ್ಕಾರವಿರಲಿ ಮೋದಿ, ಬ್ರಿಜ್‌ಭೂಷಣ್, ** ನೆಕ್ಕುವ ಗೋದೀ ಮಾಧ್ಯಮಕ್ಕೆ ಮತ್ತು ಆ ವಿಕೃತ ಮನಸ್ಥಿತಿಯ ಸಮಾಜಕ್ಕೆ" ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ