logo
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ; ದೊಡ್ಡಮ್ಮನ ಮುಗಿಸಲು ಜೈದೇವ್‌ ಸ್ಕೆಚ್‌

Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ; ದೊಡ್ಡಮ್ಮನ ಮುಗಿಸಲು ಜೈದೇವ್‌ ಸ್ಕೆಚ್‌

Praveen Chandra B HT Kannada

Dec 04, 2024 04:41 PM IST

google News

Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ

    • Amruthadhaare serial today episode: ಗೌತಮ್‌ ಮನೆ ಮುಂದೆ ಭಾಗ್ಯಮ್ಮ ಬಂದಿದ್ದಾರೆ. ಅಮ್ಮನ ನೋಡಿ ಗೌತಮ್‌ ಭಾವುಕರಾಗಿದ್ದಾರೆ. ಯಾಕೆ ನನ್ನ ಮರೆತು ಎಲ್ಲಿ ಹೋಗಿದ್ದೆ ಅಮ್ಮ ಎಂದು ಕೇಳುತ್ತಾನೆ. ನಿನ್ನ ಮರೆತರೆ ತಾನೇ ನೆನಪಿಸಿಕೊಳ್ಳೋದು ಎನ್ನುತ್ತಾರೆ ಭಾಗ್ಯಮ್ಮ. ಏನಿದು ಕನಸೋ ನನಸೋ?
Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ
Amruthadhaare: ಮನೆ ಬಾಗಿಲಲ್ಲಿ ಭಾಗ್ಯಮ್ಮ, ಅಮ್ಮನ ಕಂಡು ಗೌತಮ್‌ ದಿವಾನ್‌ ಭಾವುಕ

Amruthadhaare serial today episode: ಗೌತಮ್‌ ಮುಂದೆ ಶಕುಂತಲಾದೇವಿ "ಹೆತ್ತ ತಾಯಿಗೆ ಇರುವ ಸ್ಥಾನ ಬೇರೆಯದ್ದು. ನೀನು ನನಗೆ ನಿನ್ನ ಹೃದಯದಲ್ಲಿ ಸ್ಥಾನ ನೀಡಿದೆಯಲ್ವ ಅಷ್ಟು ಸಾಕು" ಎಂದು ಹೇಳುತ್ತಾರೆ. "ನಿನ್ನ ತಾಯಿ ಮತ್ತು ತಂಗಿ ಬಗ್ಗೆ ಏನಾದರೂ ಮಾಹಿತಿ ಸಿಕ್ಕರೆ ನನಗೆ ಹೇಳು. ನನಗೆ ಏನಾದರೂ ಮಾಹಿತಿ ಸಿಕ್ಕರೆ ನಿನಗೆ ಹೇಳುತ್ತೇನೆ" ಎಂದು ಶಕುಂತಲಾ ಹೇಳುತ್ತಾರೆ. ಈ ಮೂಲಕ ಗೌತಮ್‌ ಮುಂದೆ ಒಳ್ಳೆಯವಳ ರೀತಿ ನಾಟಕ ಮಾಡುತ್ತಾರೆ ಶಕುಂತಲಾ. "ಸೆಂಟಿಮೆಂಟ್‌ ಎನ್ನುವುದು ಎಲ್ಲಾ ಕಾಲಕ್ಕೂ ವರ್ಕ್‌ ಆಗುತ್ತದೆ. ಟ್ರೆಂಡ್‌ ಎಷ್ಟೇ ಚೇಂಜ್‌ ಆಗಿದ್ದರೂ ಸೆಂಟಿಮೆಂಟ್‌ ಹಾಗೆಯೇ ಇರುತ್ತದೆ. ಇನ್ನು ಅವರನ್ನು ಹುಡುಕಿ ಮುಗಿಸೋದೊಂದೇ ದಾರಿ" ಎಂದು ಶಕುಂತಲಾದೇವಿ ಸ್ವಗತವೂ ಇರುತ್ತದೆ.

ಗೌತಮ್‌ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. "ನಾನು ಹೇಳದೆ ಇದ್ದರೂ ನನ್ನ ಅಮ್ಮನ ಬಗ್ಗೆ ಶಕುಂತಲಾದೇವಿ ಅವರಿಗೆ ಗೊತ್ತಾಗಿದೆ" ಎಂದು ಹೇಳುತ್ತಾರೆ. "ನಮಗೆ ಗೊತ್ತಿಲ್ಲದೆ ಇಷ್ಟೆಲ್ಲ ಆಗಿದೆಯ" ಎಂದು ಭೂಮಿಕಾ ಹೇಳುತ್ತಾರೆ. "ಅವರನ್ನು ತಪ್ಪಾಗಿ ತಿಳಿದುಕೊಂಡೆ" ಎಂದು ಗೌತಮ್‌ ಬೇಜಾರು ಮಾಡುತ್ತಾರೆ.

ಆನಂದ್‌ ಮನೆಗೆ ಗೌತಮ್‌ ಬಂದಿದ್ದಾರೆ. ಭೂಮಿಕಾ ಕೂಡ ಬಂದಿದ್ದಾರೆ. ಆನಂದ್‌ ಇವರಿಬ್ಬರನ್ನೂ ಪ್ರತ್ಯೇಕವಾಗಿ ಆಹ್ವಾನಿಸಿದ್ದಾರೆ. ಮಕ್ಕಳು ಮೇಲೆ ಮನೆಯಲ್ಲಿಲ್ಲ. ಇಬ್ಬರ ಜತೆ ಕಾಲ ಕಳೆಯೋಣ ಎಂದು ಇಬ್ಬರನ್ನು ಕರೆದೆ. ಎಂದಿನಂತೆ ಒಬ್ಬರನೊಬ್ಬರನ್ನು ಗೋಳು ಹೊಯ್ದುಕೊಳ್ಳುತ್ತಾರೆ. ಇದಾದ ಬಳಿಕ ಇವರ ಪಾರ್ಟಿ ಆರಂಭವಾಗುತ್ತದೆ.

ಜೈದೇವ್‌ ಜತೆ ಶಕುಂತಲಾ ಮಾತನಾಡುತ್ತಿದ್ದಾರೆ. ನಿನ್ನ ಪ್ಲ್ಯಾನ್‌ ವರ್ಕ್‌ ಆಯ್ತು ಎನ್ನುತ್ತಾರೆ. "ಏನಾದರೂ ಮಿಸ್ಸಿಂಗ್‌ ಲಿಂಕ್‌ ಇದೆಯಾ ಎಂದು ಯೋಚನೆ ಮಾಡ್ತಾ ಇದ್ದೇನೆ. ಬಿಗ್‌ಬ್ರದರ್‌ ಒರಿಜಿನಲ್‌ ಅಮ್ಮ, ನನ್ನ ದೊಡ್ಡಮ್ಮನ ಕುರಿತು ಯೋಚನೆ ಮಾಡುತ್ತಿದ್ದೇನೆ" ಎಂದು ಹೇಳುತ್ತೇನೆ. "ಅವಳನ್ನು ದೊಡ್ಡಮ್ಮ ಅನ್ನಬೇಡ" ಎನ್ನುತ್ತಾರೆ ಶಕುಂತಲಾ. "ನೀನು ತೋರಿಸಿದ ದಾರಿಯಲ್ಲಿ ಸಾಗುವವನು ನಾನು" ಎಂದು ಹೇಳುತ್ತಾನೆ. "ಆರ್‌ಆರ್‌ ನಗರದಲ್ಲಿ ಅವಳ ಮಗಳು ಕರೆದುಕೊಂಡು ಹೋಗಿದ್ದಾಳೆ. ಅವಳು ಆ ಸರಹದ್ದಿನಲ್ಲೇ ಇರುತ್ತಾಳೆ. ಹೆಚ್ಚೇಂದರೆ ಉತ್ತರಹಳ್ಳಿ, ನಗರಬಾವಿಗೆ ಹೋಗಬಹುದು" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಅವಳು ಎಲ್ಲಿ ಸಿಗ್ತಾಳೆ ಎಂದು ಹುಡುಕುವ ಬದಲು, ಎಲ್ಲಿ ಇರ್ತಾಳೆ ಎಂದು ಹುಡುಕೋದು ಒಳ್ಳೆಯದು" ಎಂದು ಐಡಿಯಾ ನೀಡುತ್ತಾನೆ. "ರೌಡಿಗಳ ರೀತಿ ಇರುವವರನ್ನು ಹುಡುಕಲು ಬಿಟ್ಟಿಲ್ಲ. ನೋಡಲು ಡೀಸೆಂಟ್‌ ಆಗಿರುವವರು, ಸೇಲ್ಸ್‌ ಮ್ಯಾನ್‌ ರೀತಿ ಇರುವವರು, ಎಜುಕೇಟೆಡ್‌ ರೀತಿ ಇರುವವರನ್ನು ಈ ಕೆಲಸಕ್ಕೆ ಬಿಟ್ಟಿದ್ದೇನೆ. ಅವರು ರೋಡ್‌ ಮಾತ್ರವಲ್ಲ ಪ್ರತಿಯೊಂದು ಗಲ್ಲಿಗಲ್ಲಿಯನ್ನೂ, ಪ್ರತಿಯೊಂದು ಮನೆಯನ್ನೂ ಹುಡುಕುತ್ತಾರೆ" ಎಂದು ಜೈದೇವ್‌ ಹೇಳುತ್ತಾನೆ.

ಗೌತಮ್‌ಗೆ ಬಿದ್ದ ಸುಂದರ ಕನಸು

ಗೌತಮ್‌ ಫೋನ್‌ನಲ್ಲಿ ಮಾತನಾಡುತ್ತಾ ಇದ್ದಾರೆ. ಆಗ ಸೆಕ್ಯುರಿಟಿ ಬರುತ್ತಾನೆ. "ಮನೆಯೊಳಗೆ ಯಾರೋ ಹೆಂಗಸು ಬಂದಿದ್ದಾರೆ" ಎನ್ನುತ್ತಾನೆ. ಗೌತಮ್‌ ನೋಡುವಾಗ ಅಲ್ಲಿ ಆತನ ಅಮ್ಮ ಇರುತ್ತಾರೆ. ಗೌತಮ್‌ ಭಾವುಕನಾಗುತ್ತಾನೆ. ಅಮ್ಮ ಗುಂಡೂ ಎಂದು ಕರೆಯುತ್ತಾರೆ. ಇವರು ಅಮ್ಮಾ ಎಂದೂ ಕರೆಯುತ್ತಾರೆ. ಹಿನ್ನೆಲೆಯಲ್ಲಿ ಅಮ್ಮನ ಪ್ರೀತಿಯ ಹಾಡು ಕೇಳಿ ಬರುತ್ತದೆ. ಇಷ್ಟು ವರ್ಷ ಎಲ್ಲಿ ಹೋಗಿದ್ದೆ ಅಮ್ಮ ಎಂದಾಗ ನೆನಪಾಗಲು ನಿನ್ನ ಮರೆತರೆ ತಾನೇ ಎಂದು ಅಮ್ಮ ಹೇಳುತ್ತಾರೆ. ತಿರುಗಿ ನೋಡಿದಾಗ ಅಮ್ಮ ಅಲ್ಲಿ ಇರುವುದಿಲ್ಲ. ಇದು ಗೌತಮ್‌ಗೆ ಬಿದ್ದ ಕನಸು. ಸೀರಿಯಲ್‌ ಮುಂದುವರೆಯುತ್ತದೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಡಿಸೆಂಬರ್‌ 4, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ