ಅಮೃತಧಾರೆ ಧಾರಾವಾಹಿ: ತಾಯಿ ತಂಗಿ ಹುಡುಕಲು ಗೌತಮ್‌ಗೆ ಐಜಿ ನೆರವು, ಜೈದೇವ್‌ ಗ್ಯಾಂಗ್‌ನಿಂದಲೂ ಹುಡುಕಾಟ, ಮಲ್ಲಿಗೆ ಅನುಮಾನ ಶುರು
ಕನ್ನಡ ಸುದ್ದಿ  /  ಜೀವನಶೈಲಿ  /  ಅಮೃತಧಾರೆ ಧಾರಾವಾಹಿ: ತಾಯಿ ತಂಗಿ ಹುಡುಕಲು ಗೌತಮ್‌ಗೆ ಐಜಿ ನೆರವು, ಜೈದೇವ್‌ ಗ್ಯಾಂಗ್‌ನಿಂದಲೂ ಹುಡುಕಾಟ, ಮಲ್ಲಿಗೆ ಅನುಮಾನ ಶುರು

ಅಮೃತಧಾರೆ ಧಾರಾವಾಹಿ: ತಾಯಿ ತಂಗಿ ಹುಡುಕಲು ಗೌತಮ್‌ಗೆ ಐಜಿ ನೆರವು, ಜೈದೇವ್‌ ಗ್ಯಾಂಗ್‌ನಿಂದಲೂ ಹುಡುಕಾಟ, ಮಲ್ಲಿಗೆ ಅನುಮಾನ ಶುರು

ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ ತನ್ನ ತಾಯಿ ಮತ್ತು ತಂಗಿಯ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಇವರಿಬ್ಬರನ್ನು ಮುಗಿಸಲು ಶಕುಂತಲಾ ಗ್ಯಾಂಗ್‌ಗೆ ಜೈದೇವ್‌ ಕೂಡ ಎಂಟ್ರಿ ನೀಡಿದ್ದಾನೆ. ಇನ್‌ಸ್ಪೆಕ್ಟರ್‌ ಜನರಲ್‌ ಕೂಡ ಸಹಾಯಕ್ಕೆ ಬಂದಿದ್ದಾರೆ.

ಅಮೃತಧಾರೆ ಧಾರಾವಾಹಿ: ತಾಯಿ ತಂಗಿ ಹುಡುಕಲು ಗೌತಮ್‌ಗೆ ಐಜಿ ನೆರವು, ಮಲ್ಲಿಗೆ ಅನುಮಾನ ಶುರು
ಅಮೃತಧಾರೆ ಧಾರಾವಾಹಿ: ತಾಯಿ ತಂಗಿ ಹುಡುಕಲು ಗೌತಮ್‌ಗೆ ಐಜಿ ನೆರವು, ಮಲ್ಲಿಗೆ ಅನುಮಾನ ಶುರು

ಅಮೃತಧಾರೆ ಧಾರಾವಾಹಿಯಲ್ಲಿ ಒಂದು ಕಡೆ ಗೌತಮ್‌ ತನ್ನ ತಾಯಿ ಮತ್ತು ತಂಗಿಯ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೊಂದೆಡೆ ಇವರಿಬ್ಬರನ್ನು ಮುಗಿಸಲು ಶಕುಂತಲಾ ಗ್ಯಾಂಗ್‌ಗೆ ಜೈದೇವ್‌ ಕೂಡ ಎಂಟ್ರಿ ನೀಡಿದ್ದಾನೆ. ಇದರ ನಡುವೆ ಮಲ್ಲಿಗೆ ಜೈದೇವ್‌ ಬಗ್ಗೆ ಮತ್ತೆ ಅನುಮಾನ ಶುರುವಾಗಿದೆ. ಜೈದೇವ್‌ ಚಮಕ್‌ಚಲ್ಲೋ ದಿಯಾ ಜತೆ ಫೋನ್‌ನಲ್ಲಿ ಮಾತನಾಡುವುದನ್ನು ಮಲ್ಲಿ ಕೇಳಿಸಿಕೊಂಡಿದ್ದಾಳೆ. ಇದರ ಕುರಿತು ಜೈದೇವ್‌ ಬಳಿ ವಿಚಾರಿಸಿದ್ದಾಳೆ. "ಎಷ್ಟು ಬೇಡ ಅಂದರೂ ಅವಳು ಕಾಲ್‌ ಮಾಡುತ್ತಿದ್ದಾಳೆ. ಅವಳಿಗೆ ಬುದ್ದಿ ಹೇಳಲು ರಿಸೀವ್‌ ಮಾಡಿದ್ದೇನೆ" ಎಂದು ಸಬೂಬು ಹೇಳುತ್ತಾನೆ. ಆದರೆ, ಮಲ್ಲಿ ಮನಸ್ಸಲ್ಲಿ ಅನುಮಾನ ಕಾಡುತ್ತದೆ.

ಇನ್ನೊಂದೆಡೆ ಗೌತಮ್‌ಗೆ ಡಿಟೆಕ್ಟಿವ್‌ ತಾಯಿ ಮತ್ತು ತಂಗಿಯ ಕುರಿತು ಸಾಕಷ್ಟು ಮಾಹಿತಿ ನೀಡುತ್ತಾರೆ. ತಮ್ಮ ಊರಿನಿಂದ ಹೊರಟಾಗ ಅಮ್ಮ ಮತ್ತು ತಂಗಿ ಇದ್ದ ಬಸ್‌ ಅಪಘಾತಗೊಂಡಿರುತ್ತದೆ. ಅವರಿಬ್ಬರು ಬದುಕಿರುತ್ತಾರೆ. ಅವರಿಬ್ಬರು ಒಂದು ಆಶ್ರಮದಲ್ಲಿದ್ದರು. ಆಶ್ರಮದಿಂದ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈಗ ಬೆಂಗಳೂರಲ್ಲಿಯೇ ಇದ್ದಾರೆ. ಎಲ್ಲಿ ಇದ್ದಾರೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂಬ ವಿವರ ನೀಡುತ್ತಾರೆ ಡಿಟೆಕ್ಟಿವ್‌.

ಈ ರೀತಿ ಡಿಟೆಕ್ಟಿವ್‌ ಜತೆ ಗೌತಮ್‌ ಮಾತನಾಡಿರುವ ವಿಡಿಯೋ ಜೈದೇವ್‌ಗೆ ದೊರಕಿದೆ. ಈಗ ಮೂರು ಜನರು ಈ ವಿಚಾರದ ಕುರಿತು ಮಾತನಾಡುತ್ತಿದ್ದಾರೆ. ಶಕುಂತಲಾ ಗ್ಯಾಂಗ್‌ ಜತೆಗೆ ಜೈದೇವ್‌ ಕೂಡ ಸೇರಿಕೊಂಡಿದ್ದಾನೆ. "ಅವರು ಲೀಡ್‌ ಹುಡುಕಿಕೊಂಡು ತುಮಕೂರು ತನಕ ಹೋಗಿದ್ದಾರೆ. ನಾವು ನೆಲಮಂಗಲ ದಾಟಿಲ್ಲ. ನಾವು ಆಕ್ಸಿಡೆಂಟ್‌ ಮಾಡಿಸಿದ್ದೇವೆ ಅಲ್ವಾ. ಅದನ್ನೂ ಕಂಡುಹಿಡಿದಿದ್ದಾರೆ. ಅವಳು ಎಲ್ಲಿದ್ದಳು, ಏನು ಮಾಡುತ್ತಿದ್ದಳು ಪಿನ್‌ಟು ಪಿನ್‌ ಮಾಹಿತಿ ಕಲೆಕ್ಟ್‌ ಮಾಡಿದ್ದಾರೆ. ಅವರಿಗಿಂತ ಸ್ಪೀಡ್‌ ಆಗಿ ನಾವು ಭಾಗ್ಯಾ ಮತ್ತು ಸುಧಾಳನ್ನು ಕಂಡುಹಿಡಿಯಬೇಕು" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ.

"ಭಯಪಡಬೇಡಿ, ಈ ರೇಸ್‌ನಲ್ಲಿ ಅವರಿಗಿಂತ ಮೊದಲು ನಾವೇ ಮುಂದೆ ಹೋಗುತ್ತೇವೆ. ನಮಗೆ ಸಿಕ್ಕಿರುವ ಮಾಹಿತಿಯನ್ನು ಫಿಲ್ಟರ್‌ ಮಾಡಿ ಮೂರು ವರ್ಷದ ಹಿಂದೆ ಬಂದವರನ್ನು ಹುಡುಕಿದರೆ ಆಯ್ತು" ಎಂದು ಜೈದೇವ್‌ ಹೇಳುತ್ತಾನೆ. ಈ ಮೂಲಕ ಅವರಿಬ್ಬರಿಗೆ ಇವನೇ ಭರವಸೆಯ ಬೆಳಕಾಗುತ್ತಾನೆ. ಅವರು ಯಾರೇ ಆಗಲಿ ಅವರ ಬುಡಸಹಿತ ಕಿತ್ತು ಹಾಕ್ತಿನಿ ಎಂದು ಅಬ್ಬರಿಸುತ್ತಾನೆ.

ಭೂಮಿಕಾ ಮತ್ತು ಗೌತಮ್‌ ಮಾತನಾಡುತ್ತಾರೆ. "ಅವರಿಬ್ಬರು ಸಿಕ್ಕೇ ಸಿಗುತ್ತಾರೆ" ಎಂದು ಭೂಮಿಕಾ ಹೇಳುತ್ತಾರೆ. "ಅವರು ಅನುಭವಿಸಿದ ಕಷ್ಟ ನೆನಪಿಸಿಕೊಂಡರೆ ಬೇಸರವಾಗುತ್ತದೆ. ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದವರೂ ಹೇಗಿದ್ದಾರೋ, ಒಂದು ಕ್ಷಣದಲ್ಲಿ ಅವರ ಭವಿಷ್ಯ ಬದಲಾಗಿದೆ" ಎಂದು ಗೌತಮ್‌ ಹೇಳುತ್ತಾರೆ. ಒಟ್ಟಾರೆ, ಒಂದಿಷ್ಟು ಬೇಸರದ ಮಾತುಗಳನ್ನು ಆಡುತ್ತಾರೆ. "ಈಗ ನನ್ನ ತಂಗಿ ದಿನಗೂಲಿ ಮಾಡಿಕೊಂಡು ಅಮ್ಮನ ಸಾಕುತ್ತಾರಂತೆ. ಈಗ ನಾನು ಒಂದೊಂದು ತುತ್ತು ತಿನ್ನುವಾಗ ಅವರ ನೆನಪು ಬರುತ್ತದೆ. ನಿದ್ದೆ ಮಾಡಲಾಗುತ್ತಿಲ್ಲ" ಎಂದು ಗೌತಮ್‌ ಹೇಳುತ್ತಾರೆ. "ಈಗ ಆಗಿ ಹೋಗಿರುವುದರ ಬಗ್ಗೆ ಯೋಚನೆ ಮಾಡಬೇಡಿ. ಸಮಯ ನಿಮ್ಮ ಜತೆ ಕಣ್ಣ ಮುಚ್ಚಾಳೆ ಆಡುತ್ತಿದೆ. ಯಾವ ದೇವರನ್ನು ನಿಮ್ಮನ್ನು ದೂರ ಮಾಡಿದ್ದಾರೋ ಅವರು ಸಿಕ್ಕಿಯೇ ಸಿಗುತ್ತಾರೆ" ಎಂದು ಭೂಮಿಕಾ ಹೇಳಿದ್ದಾರೆ. "ನೀವು ಸೋಷಿಯಲ್‌ ಮೀಡಿಯಾ ಬಳಸಬೇಕಿತ್ತು. ಈಗಲೂ ನೀವು ನಿಮ್ಮ ಸ್ನೇಹಿತ ಐಜಿ ಹೆಲ್ಪ್‌ ಕೇಳಬಹುದಲ್ವ" ಎಂದು ಭೂಮಿಕಾ ಹೇಳುತ್ತಾರೆ. ಇದು ಗೌತಮ್‌ಗೆ ಹೌದು ಎನಿಸುತ್ತದೆ.

ಗೌತಮ್‌ ಮನೆಯಲ್ಲಿ ಕುಳಿತುಕೊಂಡಿದ್ದಾನೆ. ಆನಂದ್‌ "ಐಜಿ"ಯನ್ನು ಕರೆದುಕೊಂಡು ಬರುತ್ತಾನೆ. "ನಾನು ಈಗ ಇರೋದು ಹೆತ್ತ ತಾಯಿಯ ಜತೆ ಅಲ್ಲ" ಎಂದು ತನ್ನ ಕಥೆ ಹೇಳುತ್ತಾನೆ. "ಇಷ್ಟು ವರ್ಷ ನನಗೆ ಅವರು ಬದುಕಿದ್ದಾರೋ ಗೊತ್ತಿರಲಿಲ್ಲ. ಈಗ ಅವರು ಬದುಕಿದ್ದಾರೆ ಎಂದು ಗೊತ್ತಾಗಿದೆ" ಎಂದು ಹೇಳುತ್ತಾನೆ. "ಖಂಡಿತಾ ಸಹಾಯ ಮಾಡುವೆ. ಈ ವಿಚಾರ ಮೊದಲೇ ಹೇಳಬೇಕಿತ್ತು" ಎಂದು ಐಜಿ ಹೇಳುತ್ತಾರೆ. "ನನಗೆ ಗೊತ್ತಿರೋ ರಿಟೈರ್ಡ್ ಆಫೀಸರ್‌ ಇದ್ದಾರೆ. ಅವರು ಇದಕ್ಕೆ ಸೂಕ್ತ" ಎಂದು ಐಜಿ ಹೇಳುತ್ತಾರೆ.

ಧಾರಾವಾಹಿ ಹೆಸರು: ಅಮೃತಧಾರೆ.

ಎಪಿಸೋಡ್‌: ಡಿಸೆಂಬರ್‌ 2, 2024

ಯಾವ ಚಾನೆಲ್‌: ಜೀ ಕನ್ನಡ

ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner